<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ಸೋನಮ್ ವಾಂಗ್ ಚುಕ್ ಆರೋಗ್ಯದ ಬಗ್ಗೆ ಪತ್ನಿ ಗೀತಾಂಜಲಿ ಆತಂಕ ; ಚಿಕಿತ್ಸೆ ಕುರಿತು ಮಹತ್ವದ ಹೇಳಿಕೆ

ಸೋನಮ್ ವಾಂಗ್ ಚುಕ್ ಆರೋಗ್ಯದ ಬಗ್ಗೆ ಪತ್ನಿ ಗೀತಾಂಜಲಿ ಆತಂಕ ; ಚಿಕಿತ್ಸೆ ಕುರಿತು ಮಹತ್ವದ ಹೇಳಿಕೆ
Summary: Sonam Wangchuk's wife Geetanjali has made an important statement about her health and has requested that no treatment be given without her consent.

Belagavi News :

ಹೋರಾಟಗಾರ ಸೋನಮ್ ವಾಂಗ್ ಚುಕ್ ಅವರನ್ನು ಜಂತರ್ ಮಂತರ್ ಪ್ರತಿಭಟನಾ ಸ್ಥಳದಿಂದ ಶನಿವಾರ ಬೆಳಗ್ಗೆ ಸಪ್ದರ್ ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಈ ವೇಳೆ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ವೈದ್ಯರಿಗೆ ಮಹತ್ವದ ಮನವಿ ಮಾಡಿದ್ದಾರೆ.

ಸೋನಮ್ ವಾಂಗ್ ಚುಕ್ ಅವರ ಆರೋಗ್ಯದ ಕುರಿತು ಪ್ರತಿಕ್ರಿಯಿಸಿರುವ ಗೀತಾಂಜಲಿ , ಕಳೆದ 20 ದಿನಗಳಿಂದ ಅವರ ಆರೋಗ್ಯವನ್ನು ಮೇಲ್ವಿಚಾರಣೆ ಮಾಡುತ್ತಿರುವ ವೈದ್ಯರ ಅನುಮತಿ ಇಲ್ಲದೆ ಯಾವುದೇ ಔಷದ ಅಥವಾ ಇತರ ಚಿಕಿತ್ಸೆಯನ್ನು ನೀಡಬಾರದು ಎಂದು ಹೇಳಿದ್ದಾರೆ.

ಬಾಯಿ ಮೂಲಕವಾಗಲಿ ಅಥವಾ ರಕ್ತನಾಳಗಳ ಮೂಲಕವಾಗಲಿ ಯಾವುದೇ ಚಿಕಿತ್ಸೆ ನೀಡುವ ಮೊದಲು ತಮ್ಮ ಅನುಮತಿ, ಕುಟುಂಬದ ಅನುಮತಿ ಹಾಗೂ ಈಗಾಗಲೇ ಅವರ ಆರೋಗ್ಯ ಗಮನಿಸುತ್ತಿರುವ ವೈದ್ಯರ ಸಲಹೆ ಪಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸೋನಮ್ ವಾಂಗ್ ಚುಕ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ಅವರ ಆರೋಗ್ಯ ಸ್ಥಿತಿ ಹಾಗೂ ವೈದ್ಯಕೀಯ ನಿರ್ವಹಣೆ ಕುರಿತು ಕುಟುಂಬದವರು ಎಚ್ಚರಿಕೆ ವಹಿಸುತ್ತಿದ್ದಾರೆ. ಈ ನಡುವೆ ಗೀತಾಂಜಲಿ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಸೋನಮ್ ವಾಂಗ್ ಚುಕ್ ಆರೋಗ್ಯ ವಿಚಾರ - ಪತ್ನಿ ಗೀತಾಂಜಲಿ ಅಸಮಾಧಾನ, ಸಮ್ಮತಿ ಇಲ್ಲದೆ ಚಿಕಿತ್ಸೆ ಬೇಡ ಎಂದು ಎಚ್ಚರಿಕೆ :

ಹೋರಾಟಗಾರ ಹಾಗೂ ಹವಾಮಾನ ಕಾರ್ಯಕರ್ತ ಸೋನಮ್ ವಾಂಗ್ ಚುಕ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಅನುಮತಿ ಇಲ್ಲದೆ ಯಾವುದೇ ಚಿಕಿತ್ಸೆ ಆರಂಭಿಸಬಾರದು ಎಂದು ಅವರು ವೈದ್ಯರಿಗೆ ಮನವಿ ಮಾಡಿದ್ದಾರೆ.

ಶುಕ್ರವಾರ ಸೋನಮ್ ವಾಂಗ್ ಚುಕ್ ಅವರ ಆರೋಗ್ಯ ಸಾಮಾನ್ಯವಾಗಿತ್ತು ಎಂದು ಹೇಳಿರುವ ಗೀತಾಂಜಲಿ ಅವರು ಆಸ್ಪತ್ರೆಗೆ ಸ್ಥಳಾಂತರಿಸುವ ಅಗತ್ಯವಿಲ್ಲ ಎಂದು ಪ್ರಶ್ನಿಸಿದ್ದಾರೆ. "ನನ್ನ ಅನುಮತಿ ಮತ್ತು ನನ್ನ ವೈದ್ಯರ ಒಪ್ಪಿಗೆ ಇಲ್ಲದೆ ಯಾವುದೇ ಚಿಕಿತ್ಸೆ ನೀಡಬಾರದು" ಎಂದು ಅವರು ತಿಳಿಸಿದ್ದಾರೆ.

ತಮ್ಮ ಅನುಮತಿ ಇಲ್ಲದೆ ವೈದ್ಯಕೀಯ ಕ್ರಮ ಕೈಗೊಂಡರೆ ಅದಕ್ಕೆ ಸಂಬಂಧಿಸಿದ ಎಲ್ಲರನ್ನೂ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಗೀತಾಂಜಲಿ ಎಚ್ಚರಿಸಿದ್ದಾರೆ. ಈ ಕುರಿತು ಅವರು ಐಟಿಐ ಜೊತೆ ಮಾತನಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದೆ ವೇಳೆ, ಸೋನಮ್ ವಾಂಗ್ ಚುಕ್ ಅವರ ಆರೋಗ್ಯ ಸ್ಥಿತಿ ಕುರಿತು ವೈದ್ಯರು ಮಾಹಿತಿ ನೀಡಿದ್ದು, ಅವರು ಪ್ರಜ್ಞಾವಂತರಾಗಿದ್ದು, ಅವರ ವೈಟಲ್ ಪ್ಯಾರಾಮೀಟರ್ ಗಳು ಸ್ಥಿರವಾಗಿವೆ ಎಂದು ತಿಳಿಸಿದ್ದಾರೆ. ಸದ್ಯ ಅವರನ್ನು ತುರ್ತು ವಾರ್ಡ್ನಲ್ಲಿ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಇರಿಸಲಾಗಿದೆ.

ದೆಹಲಿ ಪೊಲೀಸರು, ಸೋನಮ್ ವಾಂಗ್ ಚುಕ್ ಅವರನ್ನು ಅಗತ್ಯ ವೈದ್ಯಕೀಯ ಆರೈಕೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು,ಈ ಕ್ರಮವನ್ನು ದೆಹಲಿ ಹೈಕೋರ್ಟ್ ಆದೇಶ ಮತ್ತು ತಜ್ಞ ವೈದ್ಯರ ಸಲಹೆಯ ಮೇರೆಗೆ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಲಡಾಕ್ ಮೊದಲ ಇಂಜಿನಿಯರ್, ಶಿಕ್ಷಣ ಸುಧಾರಕ ಹಾಗೂ ಹವಾಮಾನ ಕಾರ್ಯಕರ್ತರಾಗಿರುವ ಸೋನಮ್ ವಾಂಗ್ ಚುಕ್ ಪರೀಕ್ಷಾ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರ ರಾಜೀನಾಮೆಗೆ ಒತ್ತಾಯಿಸಿ ಜಂತರ್ ಮಂತರ್ ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ತಮ್ಮ ಬೇಡಿಕೆಗಳಿಗಾಗಿ ಜುಲೈ 22ರಂದು ಸಂಸತ್ತಿಗೆ ಮೆರವಣಿಗೆ ನಡೆಸುವುದಾಗಿ ಅವರು ಮತ್ತು ಬೆಂಬಲಿಗರು ಘೋಷಿಸಿದ್ದರು.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online