<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ಅಮರನಾಥ ಯಾತ್ರಿಕರಿಗೆ ಶಾಕ್ : ತಾತ್ಕಾಲಿಕವಾಗಿ ಯಾತ್ರೆ ಸ್ಥಗಿತ, ಪ್ರವೇಶ ಬಂದ್

ಅಮರನಾಥ ಯಾತ್ರಿಕರಿಗೆ ಶಾಕ್ : ತಾತ್ಕಾಲಿಕವಾಗಿ ಯಾತ್ರೆ ಸ್ಥಗಿತ, ಪ್ರವೇಶ ಬಂದ್
Summary: Amarnath Yatra 2026 updates - The Amarnath Yatra has been temporarily suspended due to adverse weather and safety reasons. The Indian authorities have banned entry of devotees until further orders.

Belagavi News :

ಭಾರತ ಹವಾಮಾನ ಇಲಾಖೆ ನೀಡಿರುವ ತೀವ್ರ ಹವಾಮಾನ ವೈಪರೀತ್ಯದ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಪವಿತ್ರ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಯಾತ್ರಾರ್ಥಿಗಳ ಸುರಕ್ಷತೆಯನ್ನು ಪ್ರಮುಖವಾಗಿ ಪರಿಗಣಿಸಿ, ಜುಲೈ 19 ರಿಂದ ಪಹಲ್ಗಾಮ್ ಮತ್ತು ಬಾಲ್ಟಾಲ್ ಎರಡು ಮಾರ್ಗಗಳ ಮೂಲಕ ಪವಿತ್ರ ಅಮರನಾಥ ಗುಹೆಗೆ ತೆರಳುವ ಭಕ್ತರ ಪ್ರವೇಶವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ ಎಂದು ಜಮ್ಮು ಕಾಶ್ಮೀರ ಆಡಳಿತದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು ಕಾಶ್ಮೀರದ ಹಲವು ಭಾಗಗಳಲ್ಲಿ ಭಾರಿ ಮಳೆ, ಮೂಕುಸಿತ ಹಾಗೂ ಹಠಾತ್ ಪ್ರವಾಹ ಸಂಭವಿಸುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ಯಾತ್ರಾ ನಿರ್ವಹಣ ಸಮಿತಿಯ ಪ್ರಕಾರ, ಹವಾಮಾನ ಪರಿಸ್ಥಿತಿಗಳು ಸುಧಾರಿಸಿದ ಬಳಿಕ ಪಹಲ್ಗಾಮ್ ಮತ್ತು ಬಾಲ್ವಾಲ್ ಮಾರ್ಗಗಳ ಸುರಕ್ಷತೆಯನ್ನು ಸಂಪೂರ್ಣವಾಗಿ ಪರಿಶೀಲಿಸಲಾಗುವುದು. ಮಾರ್ಗಗಳು ಸುರಕ್ಷಿತ ವೆಂದು ಖಚಿತವಾದ ನಂತರವೇ ಯಾತ್ರೆಯನ್ನು ಪುನರಾರಂಭಿಸುವ ಕುರಿತು ಅಂತಿಮ ನಿರ್ಧಾರ ಪ್ರಕಟಿಸಲಾಗುತ್ತಿದೆ.

ಆಡಳಿತವೋ ಈಗಾಗಲೇ ಯಾತ್ರಾತ್ರಿಗಳಿಗೆ ಸುರಕ್ಷಿತ ಸ್ಥಳಗಳಲ್ಲಿ ಉಳಿಯುವಂತೆ ಸೂಚಿಸಿದ್ದು, ಅಧಿಕೃತ ಪ್ರಕಟಣೆಗಳನ್ನು ಮಾತ್ರ ಅನುಸರಿಸುವಂತೆ ಮನವಿ ಮಾಡಿದೆ. ಹವಾಮಾನ ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸಲಾಗುತ್ತಿದ್ದು, ಭಕ್ತರ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತಿದೆ.

Amarnath Yatra 2026 - ಬೇಸ್ ಕ್ಯಾಂಪ್ ಗಳಲ್ಲೇ ಉಳಿದ ಯಾತ್ರಿಕರು ; ಭೂಕುಸಿತ ಬೀದಿ ಹಿನ್ನೆಲೆ ಯಾತ್ರೆ ಸ್ಥಗಿತ :

ತೀವ್ರ ಹವಾಮಾನ ವೈಪರಿತ್ಯದ ಎಚ್ಚರಿಕೆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವ ಅಮರನಾಥ ಯಾತ್ರೆಯಲ್ಲಿ, ಈಗಾಗಲೇ ಬೇಸ್ ಕ್ಯಾಂಪ್ ಗಳನ್ನು ತಲುಪಿರುವ ಯಾತ್ರಿಕರು ಅಲ್ಲಿಯೇ ಸುರಕ್ಷಿತವಾಗಿ ಉಳಿಯುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ಅಧಿಕೃತ ಆದೇಶದ ಪ್ರಕಾರ, ಜುಲೈ 19 ರಿಂದ ಬಾಲ್ವಾಲ್ ಬೇಸ್ ಕ್ಯಾಂಪ್ ಮತ್ತು ನುನ್ವಾನ್ - ಚಂದನ್ವರಿ ಬೇಸ್ ಕ್ಯಾಂಪ್ ಗಳಿಗಿಂತ ಅಮರನಾಥ ಗುಹೆತ್ತ ಮುಂದುವರೆಯಲು ಅನುಮತಿ ನೀಡಲಾಗುವುದಿಲ್ಲ. ಭಕ್ತರು ಸ್ಥಳೀಯ ಆಡಳಿತ ನೀಡುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಲಾಗಿದೆ.

ಭಾರಿ ಮಳೆ, ಭೂಕುಸಿತ ಹಾಗೂ ಹಟಾತ್ ಪ್ರವಾಹದ ಅಪಾಯದ ಹಿನ್ನೆಲೆಯಲ್ಲಿ ಯಾತ್ರ ಮಾರ್ಗಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಪರ್ವತ ಪ್ರದೇಶಗಳಲ್ಲಿ ಮಳೆಯಿಂದಾಗಿ ಭೂಕುಸಿತ ಹಾಗೂ ಬಂಡೆಗಳು ಕುಸಿಯುವ ಸಾಧ್ಯತೆ ಹೆಚ್ಚಿರುವುದರಿಂದ, ಭಕ್ತರ ಜೀವ ರಕ್ಷಣೆಗೆ ಆದ್ಯತೆ ನೀಡಲಾಗಿದೆ.

ಆಡಳಿತ ಮಂಡಳಿಯು ಹವಾಮಾನ ಪರಿಸ್ಥಿತಿಗಳನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದು, ಪರಿಸ್ಥಿತಿ ಸುಧಾರಿಸಿದ ಬಳಿಕ ಪಹಲ್ಗಾಮ್ ಮತ್ತು ಬಾಲ್ಟಾಲ್ ಮಾರ್ಗಗಳ ಸುರಕ್ಷತಾ ಪರಿಶೀಲನೆ ನಡೆಸಲಾಗುವುದು. ಮಾರ್ಗಗಳು ಸುರಕ್ಷಿತವೆಂದು ಖಚಿತವಾದ ನಂತರವೇ ಅಮರನಾಥ ಯಾತ್ರೆ ಪುನರಾರಂಭದ ಕುರಿತು ಅಂತಿಮ ನಿರ್ಧಾರ ಪ್ರಕಟಿಸಲಾಗುವುದು.

ಬೇಸ್ ಕ್ಯಾಂಪ್ ಗಳಲ್ಲಿ ಉಳಿದಿರುವ ಯಾತ್ರಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದು, ಅಗತ್ಯ ಸೌಲಭ್ಯಗಳು ಮತ್ತು ಸುರಕ್ಷತಾ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ ಎಂದು ಹೇಳಿದ್ದಾರೆ.

Amarnath Yatra 2026 - ಭಕ್ತರಿಗೆ ಅಧಿಕಾರಿಗಳ ಮನವಿ - ಅಧಿಕೃತ ಸೂಚನೆಗಳನ್ನು ಮಾತ್ರ ಪಾಲಿಸುವಂತೆ ಸೂಚನೆ :

ಅಮರನಾಥ ಯಾತ್ರೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಯಾತ್ರೆಗೆ ತೆರಳಿರುವ ಹಾಗೂ ಈಗಾಗಲೇ ಕಾಶ್ಮೀರ ತಲುಪಿರುವ ಭಕ್ತರಿಗೆ ಜಮ್ಮು ಕಾಶ್ಮೀರ ಆಡಳಿತ ಮತ್ತು ಯಾತ್ರಾ ನಿರ್ವಹಣಾ ಸಮಿತಿ ವಿಶೇಷ ಮನವಿ ಮಾಡಿದೆ.

ಪ್ರಸ್ತುತ ಹವಾಮಾನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಭಕ್ತರು ಯಾವುದೇ ವದಂತಿಗಳಿಗೆ ಕಿವಿಗೊಡದೆ ಕೇವಲ ಅಧಿಕೃತ ಪ್ರಕಟಣೆಗಳು, ಸ್ಥಳೀಯ ಆಡಳಿತ ಹಾಗೂ ಯಾತ್ರಾ ನಿರ್ವಹಣಾ ಸಮಿತಿ ನೀಡುವ ಮಾರ್ಗಸೂಚಿಗಳನ್ನು ಮಾತ್ರ ಅನುಸರಿಸುವಂತೆ ಸೂಚಿಸಲಾಗಿದೆ.

ಭಾರಿ ಮಳೆ, ಭೂಕುಸಿತ ಮತ್ತು ಪ್ರವಾಹ ದಂತಹ ಪ್ರಕೃತಿ ವಿಕೋಪದ ಸಾಧ್ಯತೆ ಹಿನ್ನೆಲೆಯಲ್ಲಿ ಯಾತ್ರಾತ್ರಿಗಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗಿದೆ. ಈ ಕಾರಣದಿಂದಲೇ ತಾತ್ಕಾಲಿಕವಾಗಿ ಯಾತ್ರೆಯನ್ನು ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾತ್ರಾತ್ರಿಗಳು ಆಡಳಿತದೊಂದಿಗೆ ಸಂಪೂರ್ಣ ಸಹಕಾರ ನೀಡಬೇಕು ಮತ್ತು ಸುರಕ್ಷಿತ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮನವಿ ಮಾಡಲಾಗಿದೆ. ಹವಾಮಾನ ಪರಿಸ್ಥಿತಿಗಳು ಸುಧಾರಿಸಿದ ಬಳಿಕ ಮಾರ್ಗಗಳ ಸುರಕ್ಷಿತ ಪರಿಶೀಲನೆ ನಡೆಸಿ ಯಾತ್ರೆ ಪುನರಾರಂಭದ ಕುರಿತು ಅಧಿಕೃತ ಮಾಹಿತಿ ನೀಡಲಾಗುವುದು ಎಂದು ತಿಳಿಸಲಾಗಿದೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online