<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Technology

WhatsApp ಬಳಕೆದಾರರಿಗೆ ಗುಡ್ ನ್ಯೂಸ್: ಆನ್ ಲೈನ್ ಸ್ಟೇಟಸ್ ಮತ್ತು ಬ್ಯಾಕ್ ಆಫ್ ಗೆ ಹೊಸ ಫೀಚರ್ಸ್ ಶೀಘ್ರದಲ್ಲೇ

WhatsApp ಬಳಕೆದಾರರಿಗೆ ಗುಡ್ ನ್ಯೂಸ್: ಆನ್ ಲೈನ್ ಸ್ಟೇಟಸ್ ಮತ್ತು ಬ್ಯಾಕ್ ಆಫ್ ಗೆ ಹೊಸ ಫೀಚರ್ಸ್ ಶೀಘ್ರದಲ್ಲೇ
Summary: The world's most popular messaging app, WhatsApp, is set to introduce two new features to its users soon. These new options related to online status control and backup management will further improve the user experience.

BELAGAVI NEWS :

WhatsApp ನಲ್ಲಿ ಹೊಸ ಅಪ್ಡೇಟ್: ಆನ್ಲೈನ್ ಸ್ಟೇಟಸ್ ತಿಳಿಸುವ 'ಗ್ರೀನ್ ಡಾಟಾ' ಫೀಚರ್ ಶೀಘ್ರದಲ್ಲೇ?

ಜನಪ್ರಿಯ ಮೆಸೇಜಿಂಗ್ ವೇದಿಕೆ WhatsApp ತನ್ನ ಬಳಕೆದಾರರ ಅನುಭವವನ್ನು ಮತ್ತಷ್ಟು ಉತ್ತಮಗೊಳಿಸಲು ಎರಡು ಹೊಸ ವೈಶಿಷ್ಟ್ಯಗಳ ಮೇಲೆ ಕೆಲಸ ಮಾಡುತ್ತಿದೆ ಎಂದು ವರದಿಗಳು ತಿಳಿಸಿವೆ. ಅವುಗಳಲ್ಲಿ ಪ್ರಮುಖವಾದದ್ದು, 'ಗ್ರೀನ್ ಡಾಟ್ ' ಆನ್ಲೈನ್ ಇಂಡಿಕೇಟರ್ ಫೀಚರ್ ಆಗಿದೆ.

ಈ ಹೊಸ ವೈಶಿಷ್ಟ್ಯದ ಮೂಲಕ ಬಳಕೆದಾರರು ಯಾವುದೇ ಚಾಟ್ ತೆರೆಯದೇ, ಎದುರಿನ ವ್ಯಕ್ತಿ ಆನ್ಲೈನ್ ನಲ್ಲಿದ್ದಾರೆಯೇ ಎಂಬುದನ್ನು ತಿಳಿದುಕೊಳ್ಳಬಹುದು. ಪ್ರೊಫೈಲ್ ಫೋಟೋ ಪಕ್ಕದಲ್ಲಿ ಕಾಣಿಸಿಕೊಳ್ಳುವ ಹಸಿರು ಚುಕ್ಕೆಯ ಮೂಲಕ ಈ ಮಾಹಿತಿ ಲಭ್ಯವಾಗಲಿದೆ. ಪ್ರಸ್ತುತ ಯಾರಾದರೂ ಆನ್ಲೈನ್ ನಲ್ಲಿದ್ದಾರೆಯೇ ಎಂದು ತಿಳಿಯಲು ಅವರ ಚಾಟ್ ತೆರೆಯಬೇಕಾಗುತ್ತದೆ.

Sponsored

ಈ ಫೀಚರ್ ಈಗಾಗಲೇ Facebook, Instagram ಹಾಗೂ Slack ಸೇರಿದಂತೆ ಹಲವು ಪ್ಲಾಟ್ ಫಾರ್ಮ್ ಗಳಲ್ಲಿ ಲಭ್ಯವಿದ್ದು, WhatsApp ಕೂಡ ಇದೇ ಮಾದರಿಯ ವ್ಯವಸ್ಥೆಯನ್ನು ಪರಿಚಯಿಸಲು ಸಜ್ಜಾಗಿದೆ.

ವರದಿಗಳ ಪ್ರಕಾರ, ಈ ವೈಶಿಷ್ಟ್ಯವನ್ನು ಆಂಡ್ರಾಯ್ಡ್ ಗಾಗಿ WhatsApp ಬೀಟಾ ಆವೃತ್ತಿ 2.26.24.5 ರಲ್ಲಿ ಗುರುತಿಸಲಾಗಿದೆ. ವಿಶೇಷವೆಂದರೆ ಬಳಕೆದಾರರು ತಮ್ಮ ಗೌಪ್ಯತೆ ಕಾಪಾಡಿಕೊಳ್ಳಲು ಬಯಸಿದರೆ ಸೆಟ್ಟಿಂಗ್ ಗಳ ಮೂಲಕ ತಮ್ಮ ಆನ್ಲೈನ್ ಸ್ಥಿತಿಯನ್ನು ಮರೆಮಾಡುವ ಆಯ್ಕೆಯು ಇರಲಿದೆ.

WhatsAppನಲ್ಲಿ ಹೊಸ ಬ್ಯಾಕಪ್ ಮ್ಯಾನೇಜ್ಮೆಂಟ್ ಫೀಚರ್: ಸ್ಟೋರೇಜ್ ನಿಯಂತ್ರಣ ಇನ್ನಷ್ಟು ಸುಲಭ

WhatsApp ಬಳಿಕೆದಾರರಿಗಾಗಿ ಮತ್ತೊಂದು ಉಪಯುಕ್ತ ವೈಶಿಷ್ಟ್ಯವನ್ನು ಅಭಿವೃದ್ಧಿಪಡಿಸುತ್ತಿದೆ. ಹೊಸ ಬ್ಯಾಕಪ್ ಮ್ಯಾನೇಜ್ಮೆಂಟ್ ಸೆಕ್ಷನ್ ಮೂಲಕ ಬಳಕೆದಾರರು ತಮ್ಮ ಹಳೆಯ ಬ್ಯಾಕಪ್ ಗಳನ್ನು ಸುಲಭವಾಗಿ ವೀಕ್ಷಿಸಲು, ಅಳಿಸಲು ಹಾಗೂ ಅಗತ್ಯವಿದ್ದರೆ ಹೊಸ ಪ್ರತಿಗಳನ್ನು ರಚಿಸಲು ಅವಕಾಶ ಪಡೆಯಲಿದ್ದಾರೆ.

Sponsored

ಈ ಫೀಚರ್ ಫೋನ್ ಮತ್ತು Google Drive ಎರಡರಲ್ಲೂ ಸ್ಟೋರೇಜ್ ಸ್ಪೇಸ್ ಅನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ನೆರವಾಗಲಿದೆ. ಹೆಚ್ಚುವರಿ ಸ್ಟೋರೇಜ್ ಬಳಕೆಯನ್ನು ನಿಯಂತ್ರಿಸಲು ಹಾಗೂ ಅನಗತ್ಯ ಬ್ಯಾಕಪ್ ಗಳನ್ನು ತೆಗೆದುಹಾಕಲು ಇದು ಸಹಾಯಕವಾಗುವ ನಿರೀಕ್ಷೆಯಿದೆ.

ವರದಿಗಳ ಪ್ರಕಾರ, ಹೊಸ ಬ್ಯಾಕಪ್ ನಿರ್ವಹಣಾ ಸಾಧನವು Google Drive ಸ್ಟೋರೇಜ್ ನಿಯಂತ್ರಣಕ್ಕಾಗಿ ವಿಶೇಷ ಶಾರ್ಟ್ ಕಟ್ ಗಳನ್ನು ಒದಗಿಸಬಹುದು. ಅಲ್ಲದೆ, ಆಂಡ್ರಾಯ್ಡ್ ಬಳಕೆದಾರರು ತಮ್ಮ ಫೋನನ್ ಸಿಸ್ಟಮ್ ಸೆಟ್ಟಿಂಗ್ ಗಳಿಂದಲೇ ನೇರವಾಗಿ ವಾಟ್ಸಪ್ ಬ್ಯಾಕಪ್ ಸೆಟ್ಟಿಂಗ್ಗಳನ್ನು ಪ್ರವೇಶಿಸುವ ಅವಕಾಶ ದೊರೆಯಬಹುದು.

ಇದೇ ವೇಳೆ Google Drive Services ಕೂಡ ಈ ದಿಕ್ಕಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಭವಿಷ್ಯದ ಅಪ್ ಡೇಟ್ ಗಳಲ್ಲಿ ಆಂಡ್ರಾಯ್ಡ್ ಬಳಕೆದಾರರು ಸಾಧನದ ಸೆಟ್ಟಿಂಗ್ ಗಳಿಂದಲೇ ವಾಟ್ಸಪ್ ಬ್ಯಾಕಪ್ ಗಳನ್ನು ನಿರ್ವಹಿಸುವ ಸೌಲಭ್ಯ ಪಡೆಯುವ ಸಾಧ್ಯತೆ ಇದೆ.

ಪ್ರಸ್ತುತ ' ಗ್ರೀನ್ ಡಾಟ್ ' ಆನ್ಲೈನ್ ಇಂಡಿಕೇಟರ್ ಮತ್ತು ಬ್ಯಾಕಪ್ ಮ್ಯಾನೇಜ್ಮೆಂಟ್ ಸೇರಿದಂತೆ ಎರಡು ವೈಶಿಷ್ಟ್ಯಗಳು ಪರೀಕ್ಷಾ ಹಂತದಲ್ಲಿವೆ. ಆದರೆ ಮುಂದಿನ ಅಪ್ಡೇಟ್ಗಳಲ್ಲಿ ಎಲ್ಲ ಬಳಕೆದಾರರಿಗೂ ಲಭ್ಯವಾಗುವ ನೀರಿಕ್ಷೆ ಇದ್ದು, ಇದರಿಂದ ವಾಟ್ಸಪ್ ನಲ್ಲಿ ಆನ್ಲೈನ್ ಸ್ಥಿತಿ ವೀಕ್ಷಣೆ ಮತ್ತು ಬ್ಯಾಕಪ್ ನಿರ್ವಹಣೆ ಹಿಂದೆಂದಿಗಿಂತಲೂ ಹೆಚ್ಚು ಸುಲಭವಾಗಲಿದೆ.

Sponsored

Also Read:

ಬರ್ತಿದ್ದೀನಿ ಚಿನ್ನ' ಎಂಟ್ರಿ ಘೋಷಣೆ!ದರ್ಶನ್ ನಿಂದ ಅಭಿಮಾನಿಗಳಿಗೆ ಸರ್ಪ್ರೈಸ್

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online