belagvi news :
🍽️ ನಾನು ಬೆಂಗಳೂರಿನ ಹೋಟೆಲ್ ದರಗಳಲ್ಲಿ ಸದ್ಯಕ್ಕೆ ಏರಿಕೆ ಇಲ್ಲ: ಗ್ರಾಹಕರಿಗೆ ತಾತ್ಕಾಲಿಕ ರಿಲೀಫ್
ಬೆಂಗಳೂರು ಜೂನ್ 2: ವಾಣಿಜ್ಯ ಬಳಕೆಯ ಎಲ್ ಪಿಜಿ (LPG) ಸಿಲಿಂಡರ್ ಬೆಲೆ ಮತ್ತೆ ಏರಿಕೆಯಾಗಿದ್ದರು, ಸಿಲಿಕಾನ್ ಸಿಟಿ ಬೆಂಗಳೂರಿನ ಗ್ರಾಹಕರಿಗೆ ಸದ್ಯಕ್ಕೆ ಅದರಬಿಸಿ ತಟ್ಟುವುದಿಲ್ಲ.
ವಾಣಿಜ್ಯ ಸಿಲಿಂಡರ್ ದರ ಹೆಚ್ಚಳದ ನಡುವೆಯೂ ಸಾರ್ವಜನಿಕ ಹಿತದೃಷ್ಟಿಯಿಂದ ಹೋಟೆಲ್ ಗಳ ಮೆನು ದರಗಳನ್ನು ತಕ್ಷಣ ಪರಿಷ್ಕರಿಸದಿರಲು ಬೆಂಗಳೂರಿನ ಹೋಟೆಲ್ ಮಾಲೀಕರ ಸಂಘ ನಿರ್ಧಾರ ಕೈಗೊಂಡಿದೆ.
ಈ ನಿರ್ಧಾರದಿಂದ ನಗರದಲ್ಲಿನ ಹೋಟೆಲ್ಗಳಲ್ಲಿ ತಿಂಡಿ ಊಟದ ದರಗಳು ಸದ್ಯಕ್ಕೆ ಸ್ಥಿರವಾಗಿಯೇ ಮುಂದುವರೆಯಲಿದ್ದು , ಗ್ರಾಹಕರಿಗೆ ತಾತ್ಕಾಲಿಕ ನೆಮ್ಮದಿ ಸಿಕ್ಕಿದೆ ಎಂದು ತಿಳಿದುಬಂದಿದೆ.
ವಾಣಿಜ್ಯ ಬಳಕೆಯ LPG ಸಿಲಿಂಡರ್ ಬೆಲೆ ಏರಿಕೆಯಾಗಿದ್ದರು ಸಿಲಿಕಾನ್ ಸಿಟಿಯ ಗ್ರಾಹಕರಿಗೆ ಸದ್ಯಕ್ಕೆ ಯಾವುದೇ ಬೆಲೆ ಏರಿಕೆಯ ಬಿಸಿ ತಟ್ಟುವುದಿಲ್ಲ .
ಗ್ರಾಹಕರ ಹಿತದೃಷ್ಟಿಯಿಂದ ಹೋಟೆಲ್ ಗಳ ತಿಂಡಿ ಹಾಗೂ ಊಟದ ಮೆನು ದರಗಳನ್ನು ತಕ್ಷಣ ಪರಿಷ್ಕರಿಸದಿರಲು ಬೆಂಗಳೂರು ಹೋಟೆಲ್ ಮಾಲೀಕರ ಸಂಘ ನಿರ್ಧಾರ ಕೈಗೊಂಡಿದೆ. ಈ ನಿರ್ಧಾರದಿಂದ ನಗರದಲ್ಲಿ ಹೋಟೆಲ್ ದರಗಳು ಸದ್ಯಕ್ಕೆ ಸ್ಥಿರವಾಗಿ ಮುಂದುವರೆಯಲಿವೆ.
ಆದರೆ ಭವಿಷ್ಯದಲ್ಲಿ ದಿನಸಿ ಪದಾರ್ಥಗಳು ಹಾಗೂ ಇತರ ಅಗತ್ಯ ವಸ್ತುಗಳ ಬೆಲೆ ಹೆಚ್ಚಾದರೆ ದರ ಏರಿಕೆ ಅನಿವಾರ್ಯವಾಗಬಹುದು ಎಂದು ಹೋಟೆಲ್ ಮಾಲೀಕರ ಸಂಘ ಸ್ಪಷ್ಟಪಡಿಸಿದೆ. 🍽️
ಮುಖ್ಯಾಂಶಗಳು:
ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಏರಿಕೆಯಾದರು ಹೋಟೆಲ್ ದರ ಹೆಚ್ಚಳವಿಲ್ಲ.
ಗ್ರಾಹಕರಿಗೆ ಹೊರೆಯಾಗದಂತೆ ಹಳೆಯ ದರದಲ್ಲೇ ಮುಂದುವರೆಯಲು ಹೋಟೆಲ್ ಸಂಘದ ತೀರ್ಮಾನ.
ಮುಂದಿನ ದಿನಗಳಲ್ಲಿ ದಿನಸಿ ದರ ಹೆಚ್ಚಾದರೆ ಬೆಲೆ ಏರಿಕೆ ಅನಿವಾರ್ಯ.
🍽️ ಸದ್ಯಕ್ಕೆ ಹೋಟೆಲ್ ದರ ಏರಿಕೆ ಇಲ್ಲ: ಕಾರಣವೇನು?
ಬೆಂಗಳೂರು ಹೋಟೆಲ್ ಗಳ ಸಂಘದ ಪದಾಧಿಕಾರಿಗಳ ಪ್ರಕಾರ, ವಾಣಿಜ್ಯ ಎಲ್ ಪಿಜಿ (LPG) ಸಿಲಿಂಡರ್ ಬೆಲೆ ಏರಿಕೆಯಿಂದ ಹೊಟ್ಟೆಲಿ ಉದ್ಯಮದ ನಿರ್ವಹನ ವೆಚ್ಚ ಹೆಚ್ಚಾಗಿರುವುದು ನಿಜವಾದರೂ ತಕ್ಷಣ ದರ ಏರಿಕೆ ಮಾಡುವ ನಿರ್ಧಾರ ಕೈಗೊಳ್ಳಲಾಗಿಲ್ಲ.
ಪದೇಪದೇ ತಿಂಡಿ ಊಟದ ದರವನ್ನು ಹೆಚ್ಚಿಸಿದರೆ ಗ್ರಾಹಕರು ಹೋಟೆಲ್ ಗಳಿಂದ ದೂರ ಸರಿಯುವ ಸಾಧ್ಯತೆ ಇರುವುದರಿಂದ ಈ ತಾತ್ಕಾಲಿಕ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ಮಧ್ಯಮ ವರ್ಗದ ಜನರಿಗೆ ಮತ್ತಷ್ಟು ಆರ್ಥಿಕ ಹೊರೆ ನೀಡಲು ಹೋಟೆಲ್ ಮಾಲೀಕರು ಇಷ್ಟಪಡುವುದಿಲ್ಲ ಎಂಬುದನ್ನು ಸಂಘ ಸ್ಪಷ್ಟಪಡಿಸಿದೆ.
ಸದ್ಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಲಾಭದ ಪ್ರಮಾಣವನ್ನು ಸ್ವಲ್ಪ ಕಡಿತಗೊಳಿಸುವಂತೆ ಹಳೆಯ ದರದಲ್ಲೇ ಉದ್ಯಮ ಮುಂದುವರೆಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.🍽️
ಹೋಟೆಲ್ ಉದ್ಯಮಿಗಳ ಮುಂದಿನ ನಡೆ:
ಹೋಟೆಲ್ ಮಾಲೀಕರು ಸದ್ಯಕ್ಕೆ ಬೆಲೆ ಏರಿಕೆಯಿಂದ ಗ್ರಾಹಕರನ್ನು ರಕ್ಷಿಸಿದ್ದರೂ, ಸರ್ಕಾರದ ಧೋರಣೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ . ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಮೇಲಿನ ತೆರಿಗೆ ಮತ್ತು ಸತತ ದರ ಏರಿಕೆಯು ಹೋಟೆಲ್ ಉದ್ಯಮವನ್ನು ಸಂಕಷ್ಟಕ್ಕೆ ದೋಡುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ಮುಂದಿನ ದಿನಗಳಲ್ಲಿ ಹಾಲಿನ ದರ ಸರಕಾರಿ ಹಾಗೂ ಇತರ ದಿನಸಿ ಪದಾರ್ಥಗಳ ಬೆಲೆಗಳು ಗಣನೀಯವಾಗಿ ಏರಿಕೆಯಾದರೆ ಅನಿವಾರ್ಯವಾಗಿ ಮೆನು ದರವನ್ನು ಶೇ. 5 ರಿಂದ 10 ರಷ್ಟು ಹೆಚ್ಚಿಸ ಬೇಕಾಗಬಹುದು ಎಂದು ಹೋಟೆಲ್ ಸಂಘಟನೆಗಳು ಮುನ್ಸೂಚನೆ ನೀಡಿವೆ.
ಸದ್ಯಕ್ಕೆ ಮಾತ್ರ ಗ್ರಾಹಕರಿಗೆ ಯಾವುದೇ ದರ ಏರಿಕೆಯ ಬಿಸಿ ತಟ್ಟುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಬೆಂಗಳೂರಿನ ಜನಪ್ರಿಯ ದೋಸೆ, ಇಡ್ಲಿ, ಕಾಫಿ ಹಾಗೂ ಊಟದ ದರಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ತಿಳಿಸಲಾಗಿದೆ.
ಈ ನಿರ್ಧಾರದಿಂದ ನಗರದಲ್ಲಿ ಹೋಟೆಲ್ ಸೇವೆಗಳನ್ನು ಬಳಸುವ ಗ್ರಾಹಕರಿಗೆ ತಾತ್ಕಾಲಿಕ ನೆಮ್ಮದಿ ಸಿಕ್ಕಿದೆ.🍽️
Also Read: