Belagavi News:
ರೈಲ್ವೆ ಉದ್ಯೋಗದ ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗೆ ರೈಲ್ವೆ ನೇಮಕಾತಿ ಮಂಡಳಿ ಸಿಹಿ ಸುದ್ದಿ ನೀಡಿದೆ. ದೇಶದ ವಿವಿಧ ರೈಲ್ವೆ ವಲಯಗಳಲ್ಲಿ ಖಾಲಿ ಇರುವ ಒಟ್ಟು 6,565 ತಂತ್ರಜ್ಞಾನ ಹುದ್ದೆಗಳ ಬರ್ತಿಗಾಗಿ ಬೃಹತ್ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಲು ಮಂಡಳಿ ಸಜ್ಜಾಗಿದೆ. ಈ ನೇಮಕಾತಿಗೆ ಸಂಬಂಧಿಸಿದ ಸಂಪೂರ್ಣ ಅಧಿಸೂಚನೆ ಜೂನ್ 30, 2026ರಂದು ಪ್ರಕಟವಾಗಲಿದೆ.
ಜೂನ್ 30 ರಿಂದ ಆನ್ಲೈನ್ ಅರ್ಜಿ ಆರಂಭ :
RRB ತಂತ್ರಜ್ಞಾನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜೂನ್ 30 ರಿಂದ ಆರಂಭವಾಗಲಿದ್ದು, ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜುಲೈ 29, 2026 ಕೊನೆಯ ದಿನಾಂಕವಾಗಿದೆ.
ಯಾರು ಅರ್ಜಿ ಸಲ್ಲಿಸಬಹುದು ? :
ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ಕೆಳಗಿನ ವಿದ್ಯಾರ್ಹತೆ ಹೊಂದಿರಬೇಕು :
1. SSLC / 10ನೇ ತರಗತಿ ಉತ್ತೀರ್ಣ
2. ITI ಪೂರೈಸಿರಬೇಕು
3. ಅಥವಾ B.Sc ಪದವಿ
4. ಅಥವಾ ಸಂಬಂಧಿತ ವಿಷಯದಲ್ಲಿ ಡಿಪ್ಲೋಮಾ
ಅಧಿಕೃತ ಅಧಿಸೂಚನೆಯಲ್ಲಿ ಹುದ್ದೆವಾರು ವಿದ್ಯಾರ್ಹತೆ ಮತ್ತು ವಯೋಮಿತಿಯ ಸಂಪೂರ್ಣ ವಿವರ ಪ್ರಕಟವಾಗಲಿದೆ.
ದೇಶಾದ್ಯಂತ ರೈಲ್ವೆ ವಲಯಗಳಲ್ಲಿ ನೇಮಕಾತಿ :
ಈ ನೇಮಕಾತಿ ಅಭಿಯಾನದ ಮೂಲಕ ದೇಶದ ವಿವಿಧ ವಲಯಗಳಲ್ಲಿ ಖಾಲಿ ಇರುವ ತಂತ್ರಜ್ಞ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ತಾಂತ್ರಿಕ ಅರ್ಹತೆ ಹೊಂದಿರುವ ಯುವಕರಿಗೆ ಇದು ಉತ್ತಮ ಅವಕಾಶ.
ಆಯ್ಕೆ ಪ್ರಕ್ರಿಯೆ ಹೇಗಿರಲಿದೆ ? :
ಸಾಮಾನ್ಯವಾಗಿ RRB ನೇಮಕಾತಿಯಲ್ಲಿ ಅಭ್ಯರ್ಥಿಗಳನ್ನು ಕೆಳಗಿನ ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.
1. ಕಂಪ್ಯೂಟರ್ ಆಧಾರಿತ ಪರೀಕ್ಷೆ
2. ದಾಖಲೆ ಪರಿಶೀಲನೆ
3. ವೈದ್ಯಕೀಯ ಪರೀಕ್ಷೆ
ಆದರೆ ಅಂತಿಮ ಆಯ್ಕೆ ಪ್ರಕ್ರಿಯ ವಿವರಗಳು ಅಧಿಕೃತ ಅಧಿಸೂಚನೆಯಲ್ಲಿ ಸ್ಪಷ್ಟವಾಗಲಿವೆ.
ಪ್ರಮುಖ ದಿನಾಂಕಗಳು :
1. ಅಧಿಸೂಚನೆ ಬಿಡುಗಡೆ : ಜೂನ್ 30, 2026
2. ಅರ್ಜಿ ಆರಂಭ : ಜೂನ್ 30, 2026
3. ಅರ್ಜಿ ಸಲ್ಲಿಸಲು ಕೊನೆಯ ದಿನ : ಜುಲೈ 29, 2026
ಅಭ್ಯರ್ಥಿಗಳಿಗೆ ಸಲಹೆ :
ರೈಲ್ವೆ ಕ್ಷೇತ್ರದಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ಬಯಸುವ ಅಭ್ಯರ್ಥಿಗಳು ಈ ಅವಕಾಶವನ್ನು ತಪ್ಪಿಸಿಕೊಳ್ಳಬಾರದು. ಅಧಿಕೃತ ಅಧಿಸೂಚನೆ ಪ್ರಕಟವಾದ ಬಳಿಕ ಅರ್ಹತಾ ಮಾನದಂಡಗಳು, ವಯೋಮಿತಿ, ಅಜ್ಜಿ ಸುಲ್ತಾನ್ ಹಾಗೂ ಪರೀಕ್ಷಾ ವಿವರಗಳನ್ನು ಪರಿಶೀಲಿಸಿ ಅರ್ಜಿ ಸಲ್ಲಿಸುವುದು ಸೂಕ್ತ.
RRB technician recruitment 2026 ದೇಶದಾದ್ಯಂತ ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ದೊಡ್ಡ ಅವಕಾಶವಾಗಿದ್ದು, ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಅರ್ಜಿ ಪ್ರಕ್ರಿಯೆಗೆ ತಯಾರಿ ನಡೆಸಬಹುದು.
ರೈಲ್ವೆ ಉದ್ಯೋಗಕ್ಕಾಗಿ ಲಕ್ಷಾಂತರ ಅಭ್ಯರ್ಥಿಗಳಿಗೆ ರೈಲ್ವೆ ನೇಮಕಾತಿ ಮಂಡಳಿ ಸುವರ್ಣ ಅವಕಾಶ ನೀಡಿದೆ. ದೇಶದ ವಿವಿಧ ರೈಲ್ವೆಗಳಲ್ಲಿ ಖಾಲಿ ಒಟ್ಟು 6565 ತಂತ್ರಜ್ಞ ಹುದ್ದೆಗಳ ಬರ್ತಿಗಾಗಿ ಬೃಹತ್ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಲಾಗುತ್ತಿದೆ. ಈ ಸಂಬಂಧದ ಅಧಿಕೃತ ಅಧಿಸೂಚನೆ ಜೂನ್ 30ರಂದು ಪ್ರಕಟವಾಗಲಿದ್ದು, ಅದೇ ದಿನದಿಂದ ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಲಿದೆ.
ಜೂನ್ 30 ರಿಂದ ಆನ್ಲೈನ್ ಅರ್ಜಿ ಸಲ್ಲಿಕೆ ಅವಕಾಶ :
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಅಭಿಯಾನದ ಅಡಿಯಲ್ಲಿ ಒಟ್ಟು 6565 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ತಂತ್ರಜ್ಞ ಗ್ರೇಡ್ 1 ಸಿಗ್ನಲ್ - 323 ಹುದ್ದೆಗಳು. ತಂತ್ರಜ್ಞ ಗ್ರೇಡ್ 3 - 6242 ಹುದ್ದೆಗಳು ಎಂದು ವಿಭಾಗವಾರು ನೇಮಕಾತಿ ನಡೆಯಲಿದೆ.
ವಯೋಮಿತಿಯ ವಿವರವನ್ನು ನೋಡುವುದಾದರೆ ನೇಮಕಾತಿ ನಿಯಮಾವಳಿಗಳ ಪ್ರಕಾರ ತಂತ್ರಜ್ಞ ಗ್ರೇಡ್ 1 ಸಿಗ್ನಲ್ ಕನಿಷ್ಠ ವಯಸ್ಸು - 18 ವರ್ಷ, ಗರಿಷ್ಠ ವಯಸ್ಸು - 33 ವರ್ಷ
ತಂತ್ರಜ್ಞ ಗ್ರೇಡ್ 3 : ಕನಿಷ್ಠ ವಯಸ್ಸು - 18 ವರ್ಷ ಮತ್ತು ಗರಿಷ್ಠ ವಯಸ್ಸು - 30 ವರ್ಷ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಸರ್ಕಾರದ ನಿರ್ಮಾಣ ಸಾರ ವಯೋಮಿತಿ ತಡಿಲಿಕೆ ಲಭ್ಯವಿರುತ್ತದೆ.
ಆಕರ್ಷಕ ವೇತನ ಸರಣಿ:
ಆಯ್ಕೆಯಾದ ಅಭ್ಯರ್ಥಿಗಳಿಗೆ ರೈಲ್ವೆ ಇಲಾಖೆಯ ವೇತನ ನಿಯಮಗಳ ಪ್ರಕಾರ ಉತ್ತಮ ಸಂಬಳ ನೀಡಲಾಗುತ್ತದೆ.
technician grade 1 signal : ತಿಂಗಳಿಗೆ ರೂ. 29,200 ಆರಂಭಿಕ ಮೂಲವೇತನ
technician grade 3: ತಿಂಗಳಿಗೆ ರೂ . 19,900 ಆರಂಭಿಕ ಮೂಲವೇತನ
ಇದರ ಜೊತೆಗೆ ವಿವಿಧ ಭತ್ಯೆಗಳು ಹಾಗೂ ಸೌಲಭ್ಯಗಳು ಲಭ್ಯವಾಗಲಿದೆ.
ದೇಶದ ಪ್ರಮುಖ ರೈಲ್ವೆ ವಲಯಗಳಲ್ಲಿ ನೇಮಕಾತಿ:
ಈ ನೇಮಕಾತಿ ದೇಶದ ವಿವಿಧ ರೈಲ್ವೆ ವಲಯಗಳಲ್ಲಿ ನಡೆಯಲಿದ್ದು, ಬೆಂಗಳೂರು, ಅಹಮದಾಬಾದ್, ಅಜ್ಮೀರ್, ಭೋಪಾಲ್, ಭುವನೇಶ್ವರ, ಬಿಲಾಸ್ಪುರ್, ಚಂಡೀಗಢ, ಚೆನ್ನೈ, ಗೋರಖ್ಪುರ, ಗುವಾಹಟಿ, ಜಮ್ಮು ಮತ್ತು ಶ್ರೀನಗರ, ಕೋಲ್ಕತ್ತಾ, ಮಾಲ್ಡಾ, ಮುಂಬೈ, ಮುಜಫರ್ಪುರ್, ಪಾಟ್ನಾ, ಪ್ರಯಾಗ್ರಾಜ್, ರಾಂಚಿ, ಸಿಕಂದರಾಬಾದ್, ಸಿಲಿಗುರಿ ಹಾಗೂ ತಿರುವನಂತಪುರಂ ಸೇರಿದಂತೆ ದೇಶದ ಪ್ರಮುಖ ರೈಲ್ವೆ ವಲಯಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
Also Read:
ಯಶ್ ಅಭಿಮಾನಿಗಳಿಗೆ ಗುಡ್ ನ್ಯೂಸ್ : 'ಟಾಕ್ಸಿಕ್’ ರಿಲೀಸ್ ಡೇಟ್ ಘೋಷಿಸಿದ ಯಶ್