<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Health

Health tips: ಮರು ಬಿಸಿ ಮಾಡಿದ ಟಿ ಕುಡಿಯುವುದರಿಂದ ಏನು ಸಮಸ್ಯೆ?

Health tips: ಮರು ಬಿಸಿ ಮಾಡಿದ ಟಿ ಕುಡಿಯುವುದರಿಂದ ಏನು ಸಮಸ್ಯೆ?
Summary: Some people have the habit of reheating tea and drinking it again and again after making it once. But according to health experts, this practice can be harmful to health.

belagavi news :

ಕೆಲಸದ ಒತ್ತಡ ಮತ್ತು ಸಮಯ ಉಳಿಸುವ ಉದ್ದೇಶದಿಂದ ಹಲವರು ಒಮ್ಮೆ ಚಹಾವನ್ನು ಮತ್ತೆ ಮತ್ತೆ ಕುದಿಸಿ ಕುಡಿಯುವ ಅಭ್ಯಾಸ ಹೊಂದಿರುತ್ತಾರೆ, ಆದರೆ ಆರೋಗ್ಯ ತಜ್ಞರ ಪ್ರಕಾರ ಈ ಪದ್ಧತಿ ದೇಹಕ್ಕೆ ಹಾನಿಕರವಾಗಬಹುದು. ದೀರ್ಘಕಾಲ ಇಟ್ಟ ನಂತರ ಮರುಬಿಸಿ ಮಾಡುವ ಚಹಾದಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆ ಹೆಚ್ಚುವ ಸಾಧ್ಯತೆ ಇರುತ್ತದೆ. ಜೊತೆಗೆ ಪದೇ ಪದೇ ಕುದಿಸಿರುವುದರಿಂದ ಚಹಾದಲ್ಲಿರುವ ಪೋಷಕಾಂಶಗಳು ಕ್ರಮೇಣ ನಾಶವಾಗುತ್ತವೆ ಎಂದು ಹೇಳಲಾಗುತ್ತಿದೆ. ಇದರಿಂದ ಚಹಾದ ರುಚಿ ಮತ್ತು ಗುಣಮಟ್ಟವು ಕುಸಿಯುತ್ತಿದೆ.

ಇಂಥ ಚಹಾವನ್ನು ನಿರಂತರವಾಗಿ ಸೇವಿಸುವುದು ಕೆಲ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬ ಎಚ್ಚರಿಕೆಯೂ ಇದೆ. ಬೇಸಿಗೆ ಕಾಲದಲ್ಲಿ ಇಂತಹ ಪರಿಣಾಮಗಳು ಇನ್ನಷ್ಟು ಹೆಚ್ಚುವ ಸಾಧ್ಯತೆ ಇರುತ್ತದೆ ಎಂದು ತಜ್ಞರು ಸೂಚಿಸುತ್ತಾರೆ.

ಮತ್ತೆ ಮತ್ತೆ ಬಿಸಿ ಮಾಡಿ ಚಹಾ ಕುಡಿಯುವುದರಿಂದ ಆರೋಗ್ಯದ ಮೇಲೆ ಹಲವು ರೀತಿಯ ಪರಿಣಾಮಗಳು ಉಂಟು ಮಾಡಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ. ಪ್ರಮುಖ ಅಂಶಗಳು ಇಲ್ಲಿವೆ.

Sponsored

ಬ್ಯಾಕ್ಟೀರಿಯಾದ ಬೆಳವಣಿಗೆ:

ಕೊನೆಯ ತಾಪಮಾನದಲ್ಲಿ ಚಹಾವನ್ನು ದೀರ್ಘಕಾಲ ಇಟ್ಟರೆ ಅದರೊಳಗೆ ಬ್ಯಾಕ್ಟೀರಿಯಾ ಗಳು ವೇಗವಾಗಿ ಬೆಳೆಯುವ ಸಾಧ್ಯತೆ ಇರುತ್ತದೆ. ಮರು ಬಿಸಿ ಮಾಡಿದರು ಎಲ್ಲಾ ಹಾನಿಕರ ಅಂಶಗಳು ಸಂಪೂರ್ಣವಾಗಿ ನಾಶವಾಗುವುದಿಲ್ಲ ಎಂದು ಹೇಳಲಾಗುತ್ತಿದೆ.

ಪೋಷಕಾಂಶಗಳ ಸವಕಳಿ:

ಚಹಾದಲ್ಲಿರುವ ಆಂಟಿ ಆಕ್ಸಿಡೆಂಟ್ ಮತ್ತು ಇತರ ಪ್ರಯೋಜನಕಾರ ಸಂಯುಕ್ತಗಳು ಪದೇ ಪದೇ ಕುದಿಸುವುದರಿಂದ ಕಡಿಮೆಯಾಗುತ್ತವೆ. ಫಲವಾಗಿ ಪೋಷಕಾಂಶಗಳಿಗಿಂತ ಕೇವಲ ಪರಿಮಳ ಮಾತ್ರ ಉಳಿಯುತ್ತವೆ.

Sponsored

ರುಚಿ ಮತ್ತು ಸುವಾಸನೆಯ ಕ್ಷೀಣತೆ :

ಮರು ಬಿಸಿ ಮಾಡಿದ ಚಹಾ ತನ್ನ ತಾಜಾತನವನ್ನು ಕಳೆದುಕೊಂಡು ಕಹಿ ಅಥವಾ ಹಳಸಿದ ರುಚಿಯನ್ನು ಪಡೆಯುತ್ತದೆ. ಇದರಿಂದ ಅದರ ಮೂಲ ಗುಣಮಟ್ಟವು ಕುಸಿಯುತ್ತದೆ. ಹೀಗಾಗಿ ತಾಜಾ ಚಹಾವನ್ನು ತಯಾರಿಸಿ ತಕ್ಷಣ ಸೇರಿಸುವುದು ಆರೋಗ್ಯದ ದೃಷ್ಟಿಯಿಂದ ಹೆಚ್ಚು ಸುರಕ್ಷಿತ ಎಂದು ಸಲಹೆ ನೀಡಲಾಗಿದೆ.

ಹೊಟ್ಟೆಯ ಕಾಯಿಲೆ ಅಪಾಯ:

ಇಂಥ ಚಹಾದಲ್ಲಿ ಬ್ಯಾಕ್ಟೀರಿಯಾ ಹಾಗೂ ಶಿಲೀಂದ್ರಗಳ ಬೆಳವಣಿಗೆ ಸಂಭವಿಸಬಹುದು. ಇದರಿಂದ ಜಠರದ ಲೋಳೆಪೊರೆ ಕಿರಿ ಕಿರಿ ಗೊಳ್ಳುವ ಸಾಧ್ಯತೆ ಹೆಚ್ಚಾಗುತ್ತದೆ. ಪರಿಣಾಮವಾಗಿ ಗ್ಯಾಸ್ಟ್ರಿಕ್, ಆಮ್ಲಿಯತೆ, ಹೊಟ್ಟೆ ನೋವು, ಅಜೀರ್ಣ, ಜಠರದರಿತ ಆಮ್ಲದ ಹಿಮ್ಮುಖ ಅರಿವು ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಕೆಲವರಲ್ಲಿ ವಾಕರಿಕೆ ಅಥವಾ ವಾಂತಿಯು ಉಂಟಾಗುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳುತ್ತಾರೆ.

Sponsored

ಯಕೃತ್ತಿನ ಮೇಲೆ ಪರಿಣಾಮ :

ಯಕೃತ್ತು ದುರ್ಬಲ ವಾಗಿರುವವರು, ಕೊಬ್ಬಿನ ಯಕೃತ್ತು ಹೆಪಟೈಟಿಸ್ ನಂತಹ ಸಮಸ್ಯೆಗಳಲ್ಲಿರುವವರು ಇಂತಹ ಹಳೆಯ ಅಥವಾ ಮರುಬಿಸಿ ಮಾಡಿದ ಚಾವನ್ನು ಸೇರಿಸಿದರೆ ತೊಂದರೆ ಹೆಚ್ಚಾಗಬಹುದು. ಈ ಸಂದರ್ಭದಲ್ಲಿ ಅಂಬಲಿಯತೆ ಕೂಡ ಹೆಚ್ಚು ಸಮಸ್ಯೆ ನೀಡಬಹುದು.

ತಜ್ಞರ ಸಲಹೆ:

ತಾಜಾ ಚಹಾವನ್ನು ಮಾತ್ರ ಸೇವಿಸುವುದು, ಉತ್ತಮ ಉತ್ತಮ. ಹಳೆಯ ಚಹವನ್ನು ಮತ್ತೆ ಮತ್ತೆ ಬಿಸಿ ಮಾಡಿ ಕುಡಿಯುವುದು ಮತ್ತು ಅತಿಯಾದ ಟೀ ಸೇವನೆ ಎರಡನ್ನು ತಪ್ಪಿಸುವುದು ಆರೋಗ್ಯದ ದೃಷ್ಟಿಯಿಂದ ಸರಿಯಾದ ಆಯ್ಕೆ ಎಂದು ವೈದ್ಯರು ಸಲಹೆ ನೀಡಿದ್ದಾರೆ.

Sponsored

ಬಿಸಿ ವಾತಾವರಣದಲ್ಲಿ ಹೆಚ್ಚು ಕಾಲ ಬಳಸಿದ ಚಹಾ ಬಹಳ ವೇಗವಾಗಿ ಹಾಳಾಗುವ ಸಾಧ್ಯತೆ ಇರುತ್ತದೆ. ಸಾಮಾನ್ಯವಾಗಿ ಎರಡರಿಂದ ಮೂರು ಗಂಟೆಗಳಿಗಿಂತ ಹೆಚ್ಚು ಕಾಲ ಇಟ್ಟಿರುವ ಚಹಾ ವನ್ನು ಮತ್ತೆ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿಯಾಗಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ. ಇಂಥಾ ದಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇದರಿಂದ ಜಠರ ಸಂಬಂಧಿತ ಸಮಸ್ಯೆಗಳು, ಆಮ್ಲಿಯತೆ ಮತ್ತು ಹೊಟ್ಟೆಗಳ ಅಪಾಯ ಹೆಚ್ಚಾಗಬಹುದು.

ಮುಖ್ಯ ಸೂಚನೆ:

ಈ ವರದಿಯಲ್ಲಿ ನೀಡಿರುವ ಎಲ್ಲಾ ಆರೋಗ್ಯ ಸಂಬಂಧಿತ ಮಾಹಿತಿ ಸಾಮಾನ್ಯ ಜಾಗೃತಿಗಾಗಿ ಮಾತ್ರ. ಇದು ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಯಾವುದೇ ಆಹಾರ ಅಥವಾ ಆರೋಗ್ಯ ಸಂಬಂಧಿತ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೊದಲು ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

Also Read:

Sponsored

ಇಂದಿನಿಂದ 3 ದಿನ ಬೆಳಗಾವಿಯಲ್ಲಿ ಮಾವು ಮೇಳ : ರೈತರಿಂದ ನೇರವಾಗಿ ತಾಜಾ ಮಾವು ಮಾರಾಟ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online