belagavi news :
ಬೆಳಗಾವಿ: ಇತ್ತೀಚೆಗಷ್ಟೇ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಬೆಳಗಾವಿ ಜಿಲ್ಲೆಯ ಮರ್ಯಾದಾ ಹತ್ಯೆ ಪ್ರಕರಣ ಇದೀಗ ಮತ್ತೊಂದು ದುರಂತಕೆ ಕಾರಣವಾಗಿದೆ. ಪ್ರೇಯಸಿಯನ್ನು ಹಾಕಿಯ ಮನೆಯವರ ಬಾರ್ಬರವಾಗಿ ಕೊಲೆ ಮಾಡಿದ ಘಟನೆಯಿಂದ ತೀವ್ರ ಮನನೊಂದಿದ್ದ ಪ್ರಿಯಕರನೊಬ್ಬ, ಆಕೆಯ ಹುಟ್ಟು ಹಬ್ಬದ ದಿನವೇ ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆ Nadigudaketar village ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಕೃಷ್ಣ ಸಹದೇವ ಪಾಟೀಲ್ (30) ಎಂದು ಗುರುತಿಸಲಾಗಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕ ವ್ಯಾಪ್ತಿಯ ನದಿಗುಡಕೇತರ ಗ್ರಾಮದ ಕೃಷ್ಟಾ ಪಾಟೀಲ್ ಹಾಗೂ ಅದೇ ಊರಿನ ಸತ್ಯವ್ವಾ ಹೆಳವಿ ಪರಸ್ಪರ ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದೆ. ಆದರೆ ಇವರ ಪ್ರೀತಿಗೆ ಸತ್ಯವ್ವಾ ಕುಟುಂಬಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿ, 4 ವರ್ಷಗಳ ಹಿಂದೆ ಆಕೆಯನ್ನು ರಾಯಬಾಗ ಮೂಲಕ ಯುವಕನೊಂದಿಗೆ ಬಲವಂತವಾಗಿ ಮದುವೆ ಮಾಡಿ ಕೊಟ್ಟಿದ್ದರು. ಮದುವೆಯಾದರೂ ಪ್ರಿಯಕರನ ಮೇಲಿನ ಪ್ರೀತಿ ಮರೆಯದ ಸತ್ಯವ್ವಾ, ಗಂಡನ ಮನೆ ಬಿಟ್ಟು ಕಳೆದ ಏಪ್ರಿಲ್ 5 ರಂದು ಕೃಷ್ಣಾನೊಂದಿಗೆ ಮನೆ ಬಿಟ್ಟು ಬಂದಿದ್ದಳು. ಬಳಿಕ ಇಬ್ಬರು ಸವದತ್ತಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ಈ ನಡುವೆ ಯಮಕನ ಮರಡಿ ಮತ್ತು ರಾಯಬಾಗ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ನಾಪತ್ತೆ ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣದ ಹಿನ್ನೆಲೆಯಲ್ಲೇ ನಡೆದ ಬೆಳವಣಿಗೆ ಇದೀಗ ಮತ್ತೊಂದು ದುರಂತಕ್ಕೆ ಕಾರಣವಾಗಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಇಬ್ಬರು ಸುಳಿವು ಪಡೆದ ಸತ್ಯವ್ವಾಳ ಕುಟುಂಬಸ್ಥರು ಏಪ್ರಿಲ್ 10 ರಂದು ಇಬ್ಬರನ್ನು ಪತ್ತೆ ಹಚ್ಚಿ ವಾಪಸ್ ಕರೆ ತಂದಿದ್ದರು. ಬಳಿಕ ಕೃಷ್ಣಾನನ್ನು ಬಿಟ್ಟು ಬಿಡುವಂತೆ ಸತ್ಯವ್ವಾಳಿಗೆ ತೀವ್ರ ಒತ್ತಡ ಹೇರಲಾಗಿತ್ತು. ಆದರೆ ಆಕೆ ಗಂಡನೊಂದಿಗೆ ಸಂಸಾರ ಮಾಡಲು ನಿರಾಕರಿಸಿದ್ದಳು. ಇದರಿಂದ ಕೋಪಗೊಂಡ ಕುಟುಂಬಸ್ಥರು ಆಕೆಯನ್ನು ಮಹಾರಾಷ್ಟ್ರದ ಮಿರರ್ ಜಿಲ್ಲೆಯ ಅರಗ ಗ್ರಾಮದಲ್ಲಿರುವ ಸಂಬಂಧಿಕರ ಮನೆಗೆ ಕರೆದೊಯ್ದಿದ್ದರು.
ಅಲ್ಲಿಯೂ ಆಕೆ ತನ್ನ ನಿರ್ಧಾರವನ್ನು ಬದಲಾಯಿಸದ ಕಾರಣ, ಏಪ್ರಿಲ್ 13ರಂದು ತಾಯಿಯ ಮುಂದೆಯೇ ಮರ್ಯಾದೆಗೆ ಅಂಜಿ ಸತ್ಯವ್ವಾಳನ್ನು ಆಕೆಯ ಚಿಕ್ಕಪ್ಪ ಹಾಗೂ ಸಹೋದರ ಸೇರಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಬಳಿಕ ಘಟನೆಯಲ್ಲಿ ಮುಚ್ಚಿ ಹಾಕಲು "ಹೃದಯಾಘಾತದಿಂದ ಮೃತಪಟ್ಟಿದ್ದಾಳೆ" ಎಂದು ಸುಳ್ಳು ಕಥೆ ಕಟ್ಟಿ ಶ್ರವವನ್ನು ಸುಟ್ಟು ಸಾಕ್ಷ್ಯ ನಾಶಪಡಿಸಿರುವುದು ತನಿಕೆಯಲ್ಲಿ ಬೆಳಕಿಗೆ ಬಂದಿದೆ.
ಈ ಪ್ರಕರಣದ ಕುರಿತು ಅನುಮಾನಗೊಂಡ ಪ್ರಿಯಕರ ಕೃಷ್ಣಾ ಸಹದೇವ ಪಾಟೀಲ್ ಅವರು ಯಮಕರಮರಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿ ಮರ್ಯಾದೆ ಪ್ರಕರಣವನ್ನು ಬೇಧಿಸಿದ್ದಾರೆ. ಕೊಲೆ ಪ್ರಕರಣದಲ್ಲಿ ಸತ್ಯವ್ವಾಳ ಚಿಕ್ಕಪ್ಪ ಹಾಗೂ ಸಹೋದರ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದರಿಂದ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಮಹಾರಾಷ್ಟ್ರ ಪೊಲೀಸರಿಗೆ ಹಸ್ತಂತರಿಸಲಾಗಿದೆ ಈ ಘಟನೆ ಬೆಳಗಾವಿ ಜಿಲ್ಲೆಯಾದ್ಯಂತ ಆಘಾತ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರೇಯಸಿಯ ನೆನಪಲ್ಲಿ ಪ್ರಾಣಬಿಟ್ಟ ಪ್ರಿಯಕರ:
ಪ್ರೇಯಸಿಯ ಭೀಕರ ಕೊಲೆಯಿಂದ ತೀವ್ರ ಮನನೊಂದಿದ್ದ ಕೃಷ್ಣಾ ಸಹದೇವ್ ಪಾಟೀಲ್ (30) ಅವರು, ಆಕೆಯ ನೆನಪಿನಲ್ಲಿ ಜೀವನದ ಅಂತ್ಯಕ್ಕೆ ಶರಣಾದ ಹೃದಯವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ Nadigudaketar village ಗ್ರಾಮದಲ್ಲಿ ನಡೆದಿದೆ.
ಮಾಹಿತಿಯಂತೆ, ಎರಡು ತಿಂಗಳ ಹಿಂದೆ ನಡೆದ ದುರ್ಘಟನೆಯ ಬಳಿಕ ತೀವ್ರ ಮಾನಸಿಕ ನೋವಿನಲ್ಲಿ ಇದ್ದ ಕೃಷ್ಣಾ ಸತ್ಯವ್ವಾಳ ಹುಟ್ಟು ಹಬ್ಬದ ದಿನವಾದ ಜೂನ್ 4, 2026 ರಂದು ತನ್ನ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಘಟನಾ ಸ್ಥಳಕ್ಕೆ ಯಮಕರಮರಡಿ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡ ಮುಂದಿನ ತನಿಖೆ ಆರಂಭಿಸಿದ್ದಾರೆ.
ಒಂದು ಪ್ರೇಮ ಸಂಬಂಧ ಮರ್ಯಾದೆಯ ಹೆಸರಿನಲ್ಲಿ ನಡೆದ ಹಿಂಸಾತ್ಮಕ ಘಟನೆಗಳು ಅಂತಿಮವಾಗಿ ಎರಡು ಜೀವಗಳನ್ನು ಕಸಿದುಕೊಂಡಿದ್ದು ಇಡೀ ಗ್ರಾಮದಲ್ಲಿ ನೀರವ ಶೋಕದ ವಾತಾವರಣ ಆವರಿಸಿದೆ.
Also Read:
ಹ್ಯಾಪಿ ಬರ್ತಡೆ ರಕ್ಷಿತ್ ಶೆಟ್ಟಿ:ಪರಂವಃ ವಿಶ್ ವೈರಲ್, ಮುಂದಿನ ಚಿತ್ರದ ಬಗ್ಗೆ ಫ್ಯಾನ್ಸ್ ಪ್ರಶ್ನೆ