<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Breaking News

ಹೃದಯಸ್ಪರ್ಶಿ ಕ್ಷಣ: ತನ್ನ ಆರೈಕೆ ಮಾಡಿದ ವ್ಯಕ್ತಿಗೆ ಮುತ್ತು ಕೊಟ್ಟ ಕರು

ಹೃದಯಸ್ಪರ್ಶಿ ಕ್ಷಣ: ತನ್ನ ಆರೈಕೆ ಮಾಡಿದ ವ್ಯಕ್ತಿಗೆ ಮುತ್ತು ಕೊಟ್ಟ ಕರು
Summary: A heartwarming video of a calf lovingly kissing its caretaker has gone viral on social media. This rare human-animal bond has won the hearts of netizens.

belagavi news :

ವೈರಲ್: ಮೂಕ ಪ್ರಾಣಿಗಳು ಗುಣದಲಿ ಮೇಲು ಎನ್ನುವ ಮಾತಿಗೆ ಮತ್ತೊಮ್ಮೆ ಸಾಕ್ಷಿಯಾದ ಹೃದಯಸ್ಪರ್ಶಿ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ. ನೀವು ಅವುಗಳಿಗೆ ಪ್ರೀತಿ, ಕಾಳಜಿ ಮತ್ತು ಆರೈಕೆ ತೋರಿಸಿದರೆ ಅವು ಜೀವನಪರ್ಯಂತ ಅದನ್ನು ಮರೆಯುವುದಿಲ್ಲ ಎಂಬುದನ್ನು ಈ ಘಟನೆ ಸ್ಪಷ್ಟಪಡಿಸಿದೆ.

ಮನೆಯೊಡತಿಗೆ ಪುಟಾಣಿ ಕರುವೊಂದು ಪ್ರೀತಿಯಿಂದ ಮುತ್ತು ನೀಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದ್ದು, ನೆಟ್ಟಿಗರ ಮನೆ ಗೆದ್ದಿದೆ. ಮನುಷ್ಯ ಪ್ರಾಣಿ ನಡುವಿನ ಅಪರೂಪದ ಬಾಂಧವ್ಯವನ್ನು ತೋರಿಸು ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಕರು ತೋರಿಸಿದ ಈ ಸಿಹಿ ಪ್ರತಿಕ್ರಿಯೆ ಪ್ರಾಣಿಗಳಲ್ಲಿರುವ ಪ್ರೀತಿ, ನಂಬಿಕೆ ಮತ್ತು ಬಂಧವನ್ನು ಮತ್ತೊಮ್ಮೆ ನೆನಪಿಸಿದೆ. ಈ ಹೃದಯಸ್ಪರ್ಶಿ ಕ್ಷಣಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ.

Sponsored

ಮನುಷ್ಯನಿಗೆ ಹೋಲಿಸಿದರೆ ಒಳ್ಳೆಯ ಗುಣ, ಮಾನವೀಯತೆ ಮತ್ತು ಸಹಾಯ ಮನೋಭಾವ ಪ್ರಾಣಿಗಳಲ್ಲಿ ಹೆಚ್ಚು ಕಂಡುಬರುತ್ತದೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳು ಸಾಮಾಜಿಕ ಜಾಲತಾಣಗಳಲ್ಲಿ (social media)ಆಗಾಗ್ಗೆ ವೈರಲ್ ಆಗುತ್ತಲೇ ಇರುತ್ತವೆ.

ಇದೀಗ, ಅಂತಹ ಮತ್ತೊಂದು ಹೃದಯಸ್ಪರ್ಶಿ ಘಟನೆ ಗಮನ ಸೆಳೆದಿದೆ. ಮನೆಯೊಡತಿಯೊಂದಿಗೆ ಪುಟಾಣಿ ಕರು (calf) ನಡೆದುಕೊಂಡ ರೀತಿಯನ್ನು ನೋಡಿ ಅನೇಕರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ತನ್ನನ್ನು ಕಾಲ ಜಿ ಮತ್ತು ಆರೈಕೆ ಮಾಡಿದ ಮನೆಯೊಡತಿಗೆ ಕರು ಪ್ರೀತಿಯಿಂದ ಮುತ್ತು ನೀಡಿ ತನ್ನ ಪ್ರೀತಿಯನ್ನು ತೋರಿಸಿದ ದೃಶ್ಯ ಇದೀಗ ವೈರಲ್ ಆಗಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡುತ್ತಿದ್ದಂತೆ, ನೆಟ್ಟಿಗರು ಆ ನಿಷ್ಕಲ್ಮಷ ಪ್ರೀತಿಗೆ ಮನಸೋತು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪ್ರಾಣಿ - ಮನುಷ್ಯ ನಡುವಿನ ಶುದ್ಧ ಬಂಧವನ್ನು ತೋರಿಸುವ ಈ ಕ್ಷಣ ಎಲ್ಲರ ಹೃದಯ ಗೆದ್ದಿದೆ.

Mr. Udburu ಹೆಸರಿನ ಫೇಸ್ಬುಕ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮನೆ ಒಡೆತಿಯು ಕರುವಿನ ಮುಂದೆ ಮುತ್ತು ಕೊಟ್ಟು ಎಂದು ಕೇಳುತ್ತಿರುವುದನ್ನು ಕಾಣಬಹುದು. ತನ್ನನ್ನು ಕಾಳಜಿ ಮಾಡುವ ಜೀವ ಹೀಗೆನ್ನುತ್ತಿದ್ದಂತೆ ಕರು ಮುತ್ತನ್ನು ನೀಡಿ ಪ್ರೀತಿ ತೋರುವುದನ್ನು ನೀವು ನೋಡಬಹುದು.

Sponsored

ಈ ವಿಡಿಯೋ ಈಗಾಗಲೇ ನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಕರನ್ನು ಪಡೆದುಕೊಂಡಿದೆ. ನೀಡಲಾಗಿದೆ ಸಾಮಾಜಿಕ ಜಾಲತಾಣಗಳಲ್ಲಿ ಈ ದೃಶ್ಯಕ್ಕೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಅನೇಕರು ತಮ್ಮ ಭಾವನೆಗಳನ್ನು ಕಾಮೆಂಟ್ ಗಳ ಮೂಲಕ ಹಂಚಿಕೊಂಡಿದ್ದಾರೆ.

ಒಬ್ಬ ಬಳಕೆದಾರರು, "ಯಾರೇ ಆಗಲಿ, ತಾಯಿ ಪ್ರೀತಿ ಒಂದೇ ಶ್ರೇಷ್ಠ " ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, " ಮನುಷ್ಯರಿಗೆ ಪ್ರೀತಿ ಕೊಡೋದಕ್ಕಿಂತ ಮೂಕ ಪ್ರಾಣಿಗಳಿಗೆ ಪ್ರೀತಿ ಕೊಟ್ಟರೆ ಹೆಚ್ಚು ನೆಮ್ಮದಿ ಸಿಗುತ್ತದೆ" ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನೊಬ್ಬ ಬಳಕೆದಾರರು, " ಮಾತು ಬರುವ ಮನುಷ್ಯರಿಗಿಂತ ಮೂಕ ಪ್ರಾಣಿಗಳೇ ಉತ್ತಮ" ಎಂದು ಹೇಳಿದ್ದು, ಈ ಹೃದಯಸ್ಪರ್ಶಿ ವಿಡಿಯೋಗೆ ಸಂಬಂಧಿಸಿದ ಚರ್ಚೆಗಳನ್ನು ಮತ್ತಷ್ಟು ಹೆಚ್ಚಿಸಿದೆ.

Also Read:

Sponsored

ರಕ್ಷಿತ್ ಶೆಟ್ಟಿ ಹೊಸ ಲುಕ್ ಗೆ ಫ್ಯಾನ್ಸ್ ಫಿದಾ: ಬಿಳಿ ಪಂಚೆ - ಶರ್ಟ್ ವಿಶೇಷತೆ ಏನು?

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online