<?= $pageTitle ?>
Logo
ಮುಖಪುಟ ಓದುವುದು ಕೇಳು
Entertainment

ರಕ್ಷಿತ್ ಶೆಟ್ಟಿ ಹೊಸ ಲುಕ್ ಗೆ ಫ್ಯಾನ್ಸ್ ಫಿದಾ: ಬಿಳಿ ಪಂಚೆ - ಶರ್ಟ್ ವಿಶೇಷತೆ ಏನು?

ರಕ್ಷಿತ್ ಶೆಟ್ಟಿ ಹೊಸ ಲುಕ್ ಗೆ ಫ್ಯಾನ್ಸ್ ಫಿದಾ: ಬಿಳಿ ಪಂಚೆ - ಶರ್ಟ್ ವಿಶೇಷತೆ ಏನು?
Summary: Rakshit Shetty, who appeared in a traditional look wearing a white shirt and panche, has caught the attention of fans. There is a lot of curiosity about what is special about his new avatar.

belagavi news :

ಬೆಂಗಳೂರು: ನಟ ಹಾಗೂ ನಿರ್ದೇಶಕ ರಕ್ಷಿತ್ ಶೆಟ್ಟಿ ಕುರಿತಾಗಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಗಳು ವೈರಲ್ ಆಗಿದ್ದವು. "ರಕ್ಷಿತ್ ಶೆಟ್ಟಿ ಕಾಣೆಯಾಗಿದ್ದಾರೆ, ಹುಡುಕಿ ಕೊಡಿ" ಎಂಬ ರೀತಿಯ ಪೋಸ್ಟ್ಗಳನ್ನು ಕೆಲವರು ಹಂಚಿಕೊಂಡು ಚರ್ಚೆ ಹುಟ್ಟು ಹಾಕಿದ್ದರು.

'ಸಪ್ತ ಸಾಗರದಾಚೆ ಎಲ್ಲೊ' ಸಿನಿಮಾಗಳಿಕ ರಕ್ಷಿತ್ ಶೆಟ್ಟಿ ಬಹುತೇಕ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. "ರಿಚರ್ಡ್ ಆಂಟೊನಿ' ಚಿತ್ರದ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ್ದನ್ನು ಹೊರತುಪಡಿಸಿದ್ದರೆ ಅವರಿಂದ ಯಾವುದೇ ಹೊಸ ಅಪ್ಡೇಟ್ ಸಿಕ್ಕಿರಲಿಲ್ಲ.

ಇದೀಗ, ರಕ್ಷಿತ್ ಶೆಟ್ಟಿ ಹಠಾತ್ತನೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಅವರ ಹೆಸರು ಅಭಿಮಾನಿಗಳ ಗಮನ ಸೆಳೆದಿದೆ. ಬಿಳಿ ಶರ್ಟ್ ಹಾಗೂ ಪಂಚೆ ಧರಿಸಿದ ಸಾಂಪ್ರದಾಯಿಕ ಅವತಾರದಲ್ಲಿ ಅವರು ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳು ವೈರಲ್ ಆಗುತ್ತಿವೆ.

ರಕ್ಷಿತ್ ಶೆಟ್ಟಿಯ ಈ ಸರಳ ಹಾಗೂ ಕ್ಲಾಸಿಕ್ ಲುಕ್ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ್ದು, ಇದು ಹೊಸ ಸಿನಿಮಾ ಸಂಬಂಧಿತ ಲುಕ್ ನಾ ಅಥವಾ ವಿಶೇಷ ಕಾರ್ಯಕ್ರಮಕ್ಕಾಗಿಯೇ ಎಂಬ ಚರ್ಚೆಗಳು ಸಿನಿ ವಲಯದಲ್ಲಿ ಜೋರಾಗಿವೆ.

ರಕ್ಷಿತ್ ಶೆಟ್ಟಿ, 'ಸಪ್ತ ಸಾಗರದಾಚೆ ಎಲ್ಲೊ ' ಸಿನಿಮಾ ಬಳಿಕ ನಟ ರಕ್ಷಿತ್ ಶೆಟ್ಟಿ ಬಹುತೇಕ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ' ರಿಚರ್ಡ್ ಆಂಟೊನಿ ' ಚಿತ್ರದ ಕುರಿತು ನೀಡಿದ ಸಂದರ್ಶನವೊಂದನ್ನು ಹೊರತುಪಡಿಸಿದರೆ ಅವರಿಂದ ಯಾವುದೇ ಹೊಸ ಅಪ್ ಡೇಟ್ ಅಭಿಮಾನಿಗಳಿಗೆ ಸಿಕ್ಕಿರಲಿಲ್ಲ.

ಇದೀಗ ರಕ್ಷಿತ್ ಶೆಟ್ಟಿ ಹಠಾತ್ತನೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಅವರ ಹೊಸ ಲುಕ್ ಸಾಮಾಜಿಕ ಜಾಲ ತಾಣಗಳಲ್ಲಿ ಗಮನ ಸೆಳೆಯುತ್ತಿದೆ. ಬಿಳಿ ಶರ್ಟ್ ಹಾಗೂ ಪಂಚೆ ಧರಿಸಿದ ಸಾಂಪ್ರದಾಯಿಕ ಅವತಾರದಲ್ಲಿ ಕಾಣಿಸಿಕೊಂಡ ರಕ್ಷಿತ್ ಶೆಟ್ಟಿ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದ್ದಾರೆ.

ಸರಳ ಹಾಗೂ ಕ್ಲಾಸಿಕ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ರಕ್ಷಿತ್ ಶೆಟ್ಟಿಯ ಫೋಟೋಗಳನ್ನು ವೈರಲ್ ಆಗುತ್ತಿದ್ದು, ಇದು ಹೊಸ ಸಿನಿಮಾ, ವಿಶೇಷ ಕಾರ್ಯಕ್ರಮ ಅಥವಾ ಬೇರೆ ಯಾವುದೇ ಸಂದರ್ಭಕ್ಕೋ ಎಂಬ ಚರ್ಚೆ ಸಿನಿಪ್ರಿಯರಲ್ಲಿ ಶುರುವಾಗಿದೆ.

ನಟ ರಕ್ಷಿತ್ ಶೆಟ್ಟಿ ಕುಟುಂಬದೊಟ್ಟಿಗೆ ಕಾಣಿಸಿಕೊಂಡಿರುವ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಚಿತ್ರಗಳಲ್ಲಿ ರಕ್ಷಿತ್ ಶೆಟ್ಟಿ ವೈಟ್ ಶರ್ಟ್ ಮತ್ತು ಪಂಚೆ ಧರಿಸಿ ಮದುಮಗನ ಲುಕ್ ನಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಫೋಟೋಗಳನ್ನು ನೋಡಿದ ಹಲವರು " ರಕ್ಷಿತ್ ಶೆಟ್ಟಿ ನಿಶ್ಚಿತಾರ್ಥ ಮಾಡಿಕೊಂಡರೆ?" ಅಥವಾ " ಇದು ಅವರ ಎಂಗೇಜ್ಮೆಂಟ್ ಫೋಟೋಗಳೇ?" ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಇದರ ಹಿಂದಿನ ನಿಜವಾದ ಕಾರಣ ಬೇರೆದ್ದಾಗಿದೆ.

ರಕ್ಷಿತ್ ಶೆಟ್ಟಿ ಸಾಂಪ್ರದಾಯಿಕ ಉಡುಪಿನಲ್ಲಿ ಕಾಣಿಸಿಕೊಂಡಿರುವುದು ಅವರ ಪೋಷಕರ 50ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ, ಈ ವಿಶೇಷ ಸಂದರ್ಭವನ್ನು ಕುಟುಂಬದವರು ಅದ್ದೂರಿಯಾಗಿ ಆಚರಿಸಿದ್ದು, ದೇವಾಲಯದಲ್ಲಿ ವಿಶೇಷ ಪೂಜೆ ಹೋಂ- ಹವನಗಳನ್ನು ನಿರ್ವಹಿಸಲಾಗಿದೆ.

ಕಾರ್ಯಕ್ರಮಕ್ಕೆ ಆಪ್ತ ಬಂಧುಗಳು ಹಾಗೂ ಸ್ನೇಹಿತರನ್ನು ಆಹ್ವಾನಿಸಲಾಗಿದ್ದು, ನಟ ರಕ್ಷಿತ್ ಶೆಟ್ಟಿ ಸಹ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ರಕ್ಷಿತ್ ಶೆಟ್ಟಿ ' ಸಪ್ತ ಸಾಗರದಾಚೆ ಎಲ್ಲೋ' ಸೈಡ್ ಬಿ ಸಿನಿಮಾದ ಬಳಿಕ ಇನ್ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಬಹು ವರ್ಷಗಳಿಂದ ಕತೆ ತಿದ್ದುತಿದ್ದ ' ರಿಚರ್ಟ್ ಆಂಟೊನಿ ' ಸಿನಿಮಾದ ಚಿತ್ರೀಕರಣವನ್ನು ಶೀಘ್ರವೇ ಪ್ರಾರಂಭ ಮಾಡುವುದಾಗಿ ಹೇಳಿದ್ದಾರೆ. ಅದರ ಜೊತೆಗೆ ' ಪುಣ್ಯಕೋಟಿ' ಹಾಗೂ ಇನ್ನೂ ಒಂದು ಸಿನಿಮಾದ ಚಿತ್ರ ಕಥೆಯನ್ನು ಸಹ ರೆಡಿ ಮಾಡಿಕೊಂಡಿರುವುದಾಗಿ ರಕ್ಷಿತ್ ಶೆಟ್ಟಿ ಹೇಳಿದ್ದಾರೆ. ' ರಿಚರ್ಡ್ ಆಂಟೊನಿ ' ಸಿನಿಮಾದ ಚಿತ್ರೀಕರಣವನ್ನು ಸದ್ದಿಲ್ಲದ ಶುರು ಮಾಡಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.

Also Read:

ಪ್ರತಿ ದಿನ ಬೇಯಿಸಿದ ಮೊಟ್ಟೆ ಸೇವನೆ ಆರೋಗ್ಯ ಕರವೇ? ವಾರದ ಮಿತಿಯನ್ನು ಹೇಳಿದ ಆರೋಗ್ಯ ತಜ್ಞರು

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online