<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Health

ಪ್ರತಿ ದಿನ ಬೇಯಿಸಿದ ಮೊಟ್ಟೆ ಸೇವನೆ ಆರೋಗ್ಯ ಕರವೇ? ವಾರದ ಮಿತಿಯನ್ನು ಹೇಳಿದ ಆರೋಗ್ಯ ತಜ್ಞರು

ಪ್ರತಿ ದಿನ ಬೇಯಿಸಿದ ಮೊಟ್ಟೆ ಸೇವನೆ ಆರೋಗ್ಯ ಕರವೇ? ವಾರದ ಮಿತಿಯನ್ನು ಹೇಳಿದ ಆರೋಗ್ಯ ತಜ್ಞರು
Summary: The answer to the question of whether eating boiled eggs every day is good for health is that experts say that consuming one egg a day as part of a balanced diet is generally safe and nutritious for healthy individuals.

belagavi news :

ಮೊಟ್ಟೆ ಪೋಷಕಾಂಶಗಳ ಸಂಪತ್ತನ್ನು ಒದಗಿಸುವ ಅತ್ಯಂತ ಬಜೆಟ್ ಫ್ರೆಂಡ್ಲಿ ಆಹಾರಗಳಲ್ಲಿ ಒಂದಾಗಿದೆ ಇದನ್ನು ಬೇಯಿಸಿ, ಅರ್ಧ ಬೇಯಿಸಿ ಅಥವಾ ಬೇರೆ ರೀತಿ ಎಲ್ಲಿ ಸೇವಿಸಿದರು ಇದು ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಒಂದು ಸಾಮಾನ್ಯ ಮೊಟ್ಟೆಯಲ್ಲಿ ಸುಮಾರು 5 ಗ್ರಾಂ ಕೊಬ್ಬು, 6-7 ಗ್ರಾಂ ಪ್ರೊಟೀನ್ ಇರುತ್ತದೆ. ಜೊತೆಗೆ ವಿಟಮಿನ್ ಎ, ಬಿ 12, B6,D,E, ಪೊಲೆಟ್ , ಸೆಲನಿಯಮ್ ಹಾಗೂ ರಂಜಕದಂತಹ ಪ್ರಮುಖ ಪೋಷಕಾಂಶಗಳು ಒಳಗೊಂಡಿದೆ.

ಇದಲ್ಲದೆ ಮೊಟ್ಟೆಯಲ್ಲಿ ಕೋಲಿನ, ಲೂಟಿನ್ ಮತ್ತು ಜಿಯಾಕ್ಸಾಂಥಿನ್ ಎಂಬ ಸಂಯುಕ್ತಗಳು ಇದ್ದು, ಕಣ್ಣಿನ ಆರೋಗ್ಯವನ್ನು ಕಾಪಾಡಲು ಸಹಾಯವಾಗಿದೆ. ಈ ಕಾರಣದಿಂದಲೇ ಮೊಟ್ಟೆಯನ್ನು"ಸಂಪೂರ್ಣ ಆಹಾರ"ಎಂದು ಕೂಡ ಕರೆಯಲಾಗುತ್ತದೆ.

ಹೃದಯ ಆರೋಗ್ಯದ ವಿಚಾರದಲ್ಲಿ, ಸದ್ಯರು ಸ್ಯಾಚುರೇಟೆಡ್ ಕಬ್ಬಿನ ಸೇವನೆಯನ್ನು ಕಡಿಮೆ ಮಾಡಿ ಉತ್ತಮ ಕೊಬ್ಬನ್ನು ಹೆಚ್ಚಿಸಲು ಸಲಹೆ ನೀಡುತ್ತಾರೆ. ಈ ಹಿನ್ನೆಲೆಯಲ್ಲಿ ನಿಯಮಿತ ಪ್ರಮಾಣದಲ್ಲಿ ಮೊಟ್ಟೆ ಸೇವನೆ ಮಾಡುವುದರಿಂದ ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಲು ಸಹಾಯವಾಗಬಹುದು ಎಂದು ಕೆಲವು ಅಧ್ಯಯನಗಳು ಸೂಚಿಸುತ್ತವೆ.

Sponsored

ಮೇಯೋ ಕ್ಲಿನಿಕ್ ಸೇರಿದಂತೆ ಹಲವು ಆರೋಗ್ಯ ಸಂಸ್ಥೆಗಳ ಪ್ರಕಾರ, ಹೆಚ್ಚಿನ ಆರೋಗ್ಯವಂತ ವ್ಯಕ್ತಿಗಳು ವಾರಕ್ಕೆ ಸುಮಾರು 7 ಮೊಟ್ಟೆಗಳವರೆಗೆ ಸೇವಿಸಿದರು ಹೃದಯ ಆರೋಗ್ಯದ ಮೇಲೆ ದೊಡ್ಡ ಹಾನಿಕಾರಕ ಪರಿಣಾಮ ಕಾಣುವುದಿಲ್ಲ ಎಂದು ತಿಳಿಸಲಾಗಿದೆ. ಆದರೆ ವಯಕ್ತಿಕ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಮತೋಲನ ಆಹಾರ ಪಾಲಿಸುವುದು ಮುಖ್ಯ.

ಪ್ರೊಟೀನ್ ನ ಸಮೃದ್ಧ ಮೂಲವಾದ ಮೊಟ್ಟೆ ಒಟ್ಟಾರೆ ಆರೋಗ್ಯಕ್ಕೆ ಅತ್ಯಂತ ಮುಖ್ಯವಾದ ಆಹಾರಗಳಲ್ಲಿ ಒಂದಾಗಿದೆ. ಸ್ನಾಯುಗಳ ನಿರ್ಮಾಣ, ಮೂಳೆಗಳ ಬಲವರ್ಧನೆ ಹಾಗೂ ಹಾರ್ಮೋನುಗಳು ಮತ್ತು ಕಿನ್ವಗಳ ಉತ್ಪಾದನೆಯಲ್ಲಿ ಪ್ರೋಟಿನ್ ಪ್ರಮುಖ ಪಾತ್ರ ವಹಿಸುತ್ತದೆ. ಮೊಟ್ಟೆಗಳನ್ನು 'ಸಂಪೂರ್ಣ ಪ್ರೋಟೀನ್'ಮೂಲ ಎಂದು ಕರೆಯಲಾಗುತ್ತದೆ, ಏಕೆಂದರೆ ಇದರಲ್ಲಿ ದೇಹಕ್ಕೆ ಅಗತ್ಯವಾದ ಎಲ್ಲಾ ಅಲೈನೋ ಆಮ್ಲಗಳು ಸಮತೋಲನವಾಗಿ ಲಭ್ಯವಿರುತ್ತವೆ.

ಬಹುಜನರು ಪ್ರೋಟೀನ್ ಕೇವಲ ಮೊಟ್ಟೆಯ ಬಿಳಿ ಭಾಗದಲ್ಲಿ ಇರುತ್ತದೆ ಎಂದು ತಪ್ಪಾಗಿ ನಂಬುತ್ತಾರೆ. ಆದರೆ ಆರೋಗ್ಯ ತಜ್ಞರ ಪ್ರಕಾರ, ಮೊಟ್ಟೆಯ ಒಟ್ಟು ಪ್ರೋಟೀನ್ ನ ಸುಮಾರು ಅರ್ಧ ಭಾಗ ಹಳದಿ ಲೋಳೆಯಿಂದಲೂ ದೊರೆಯುತ್ತದೆ. ಸಂಪೂರ್ಣ ಮೊಟ್ಟೆ ಸೇವನೆ ಹೆಚ್ಚು ಪೌಷ್ಟಿಕ.

ಮೊಟ್ಟೆಗಳಲ್ಲಿ ಪ್ರೋಟೀನ್ ಜೊತೆಗೆ ಮೊನೋ ಅನ್ ಸ್ಯಾಚುರೇಟೆಡ್ ಕೊಬ್ಬಿನ ಆಮ್ಲಗಳು, ವಿಟಮಿನ್ ಡಿ, ವಿಟಮಿನ್ ಬಿ 12, ಬಯೋಟಿನ್, ರಿಬೋ ಪ್ಲಾವಿನ್, ಸೆಲೆನಿಯಮ್ ಹಾಗೂ ಅಯೋಡಿನ್ ಮುಂತಾದ ಪ್ರಮುಖ ಪೋಷಕಾಂಶಗಳು ಸಮೃದ್ಧವಾಗಿವೆ ಎಂದು ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ವಿವರಿಸುತ್ತದೆ.

Sponsored

ಈ ಎಲ್ಲಾ ಕಾರಣಗಳಿಂದ, ಮೊಟ್ಟೆ ಒಂದು ಸಣ್ಣ ಆಹಾರವಾಗಿದ್ದರೂ ದೇಹಕ್ಕೆ ದೊಡ್ಡ ಮಟ್ಟದ ಪೋಷಕಾಂಶಗಳನ್ನು ನೀಡುವ ಶಕ್ತಿಯುತ ಆಹಾರವಾಗಿದೆ.ಮೊಟ್ಟೆಗಳು ವಿಟಮಿನ್ ಲಭ್ಯತೆ ಹೆಚ್ಚಿಸುತ್ತವೆಯೇ?:ಮೊಟ್ಟೆಗಳಲ್ಲಿ ಜೀವಸತ್ವಗಳು ಹಾಗೂ ಕ ಖನಿಜಗಳಲ್ಲಿ ಸಮೃದ್ಧವಾಗಿವೆ.ಇದು ದೇಹಕ್ಕೆ ವ್ಯಾಪಕ ಶ್ರೇಣಿಯ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ.ಹಾರ್ವರ್ಡ್ ಹೆಲ್ತ್ ಪಬ್ಲಿಷಿಂಗ್ ತಿಳಿಸುವ ಪ್ರಕಾರ,ಮೊಟ್ಟೆಗಳಲ್ಲಿ ಲೂಟಿನ್ ಹಾಗೂ ಜಿಯಾಕ್ಸಾಂಥಿನ್ ಇದ್ದು ,ಇದು ಕಣ್ಣಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ,ಜೊತೆಗೆ ಮೆದುಳು ಹಾಗೂ ನರಮಂಡಲದ ಆರೋಗ್ಯವನ್ನು ಬೆಂಬಲಿಸುವ ಕೋಲಿನ್ ಇದೆ ಎಂದು ತಿಳಿಯುತ್ತದೆ.

ಸೆಲೇನಿಯಮ್ :ಸಂತಾನೋತ್ಪತ್ತಿ ಮತ್ತು ಥೈರಾಯ್ಡ್ ಆರೋಗ್ಯಕ್ಕೆ ಅವಶ್ಯವಾಗಿದೆ.

ಕೋಲೀನ :ಚಯಾಪಚಯ ಹಾಗೂ ಜೀವಕೋಶಗಳ ಆರೋಗ್ಯಕ್ಕೆ ಅವಶ್ಯವಾಗಿ ಬೇಕಾಗುತ್ತದೆ.

ರಿಬೋ ಫ್ಲಾವಿನ್:ಜೀವಕೋಶಗಳ ಆರೋಗ್ಯ,ಚಯಾಪಚಯ ಕ್ರಿಯೆಗೆ ದೇಹಕ್ಕೆ ಅಗತ್ಯವಿದೆ.

Sponsored

ವಿಟಮಿನ್ ಬಿ 12:ಆರೋಗ್ಯಕರ ನರಕೋಶಗಳು,ರಕ್ತ ರಚನೆಯನ್ನು ಬೆಂಬಲಿಸುತ್ತದೆ.

ಪ್ಯಾಂಟೊಥೆನಿಕ್ ಆಮ್ಲ: ದೇಹವು ಕೊಬ್ಬನ್ನು ಒಡೆಯುವಲ್ಲಿ ಸಹಾಯಮಾಡುತ್ತದೆ.

ವಿಟಮಿನ್ ಎ:ಅಂಗಾಂಶಗಳು,ಚರ್ಮ,ಕಣ್ಣುಗಳು,ರೋಗನಿರೋಧಕ ವ್ಯವಸ್ಥೆ,ಸಂತಾನೋತ್ಪತ್ತಿ ಆರೋಗ್ಯಕ್ಕೆ ನಿರ್ಣಾಯಕ.

ರಂಜಕ:ಬಲವಾದ ಮೂಳೆಗಳು ಹಾಗೂ ಹಲ್ಲುಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ.

Sponsored

ಪೋಲೇಟ್:ಜೀವಕೋಶಗಳ ಆರೋಗ್ಯ,ಡಿ ಎನ್ ಎ ಸಂಶ್ಲೇಷಣೆ,ಇತರ ಅನುವಂಶಿಕ ವಸ್ತುಗಳ ರಚನೆಗೆ ಅಗತ್ಯ.

ಓದುಗರಿಗೆ ವಿಶೇಷ ಸೂಚನೆ:ಈ ವರದಿಯಲ್ಲಿ ನೀಡಲಾಗಿರುವ ಎಲ್ಲಾ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ.ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆಗಳು,ಅಧ್ಯಯನಗಳು ಹಾಗೂ ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರರ ಸಲಹೆಗಳ ಆಧಾರದ ಮೇಲೆ ಸಂಗ್ರಹಿಸಿ ನೀಡಲಾಗಿದ.ಆದರೆ ಪ್ರತಿಯೊಬ್ಬರ ದೇಹದ ಸ್ಥಿತಿ,ಆರೋಗ್ಯ ಸಮಸ್ಯೆಗಳು ಮತ್ತು ಅಗತ್ಯಗಳು ವಿಭಿನ್ನವಾಗಿರಬಹುದು.ಆದ್ದರಿಂದ ಇಲ್ಲಿ ನೀಡಿರುವ ಯಾವುದೇ ಸಲಹೆ ಅಥವಾ ವಿಧಾನವನ್ನು ಅನುಸರಿಸುವ ಮೊದಲು ಅಥವಾ ಜೀವನಶೈಲಿಯಲ್ಲಿ ಅಳವಡಿಸಿಕೊಳ್ಳುವ ಮೊದಲು ಪರಿಣಿತ ವೈದ್ಯರನ್ನು ಅಥವಾ ಆರೋಗ್ಯ ತಜ್ಞರನ್ನು ಸಂಪರ್ಕಿಸುವುದು ಅತ್ಯಂತ ಅಗತ್ಯ.

ಎಗ್ ಸಲಾಡ್: ಕತ್ತರಿಸಿದ ಮೊಟ್ಟೆಯ ತುಂಡುಗಳನ್ನು ಈರುಳ್ಳಿ,ಕೊತ್ತಂಬರಿ,ಟೊಮೆಟೊ ಮತ್ತು ನಿಂಬೆ ರಸ ಅಥವಾ ಆಲಿವ್ಎಣ್ಣೆಯ ಕೆಮುಕಿಸಿ ಆರೋಗ್ಯಕರ ಸಲಾಡ್ ಅನ್ನು ತಯಾರಿಸಿ ಸೇವಿಸಬಹುದು.

ಬ್ರೆಡ್ ಟೋಸ್ಟ್ ಇಲ್ಲವೇ ಸ್ಯಾಂಡ್ ವಿಚ್:ಬೇಯಿಸಿದ ಮೊಟ್ಟೆ ಚೂರುಗಳನ್ನು ಸುಟ್ಟ ಬ್ರೆಡ್ ಮೇಲೆ ಇರಿಸಿ,ಅವುಗಳ ಮೇಲೆ ಸ್ವಲ್ಪ ಚೀಸ್ ಅಥವಾ ಬೆಣ್ಣೆಯನ್ನು ಹರಡಿ,ಅದನ್ನು ಉಪಹಾರವಾಗಿ ಆನಂದಿಸಿ.

Sponsored

ಬೇಯಿಸಿದ ಮೊಟ್ಟೆಯನ್ನು ನೇರವಾಗಿ ಸೇರಿಸಿ: ಮೊಟ್ಟೆಯನ್ನು ಸಿಪ್ಪೆ ತೆಗೆದು,ಅರ್ಧದಷ್ಟು ಕತ್ತರಿಸಿ,ಅದರ ಮೇಲೆ ಒಂದು ಚಿಟಿಕೆ ಉಪ್ಪು,ಕಾಳು ಮೆಣಸಿನ ಪುಡಿ ಅಥವಾ ಕಾರದಪುಡಿಯನ್ನು ಸಿಂಪಡಿಸಿ ಮತ್ತು ಅದನ್ನು ತಿಂಡಿಯಾಗಿ ಸೇವಿಸಬಹುದು.

ವಿವಿಧ ರೆಸಿಪಿ:ಬೇಯಿಸಿದ ಮೊಟ್ಟೆಗಳಲ್ಲಿ ಛೇದನಗಳನ್ನು ಮಾಡಿ,ಅವುಗಳನ್ನು ಮಸಾಲೆಗಳೊಂದಿಗೆ ಹುರಿಯಿರಿ,ತವಾ ಅಣ್ಣ ಅಥವಾ ರೊಟ್ಟಿಗಳೊಂದಿಗೆ ತಿನ್ನಲು ತಯಾರಿಸಿ.ಜೊತೆಗೆ ವಿವಿಧ ರೆಸಿಪಿಗಳನ್ನು ತಯಾರಿಸಿ ಸೇವನೆ ಮಾಡಬಹುದು.

Also Read:

ಡಿಕೆ ಶಿವಕುಮಾರ್ ಸಿಎಂ ಆಸೆಗೆ ಹೊಸ ಚೈತನ್ಯ ತಂದ ಆರಾಧ್ಯ ಗುರುಗಳ ಭವಿಷ್ಯ

Sponsored
You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online