belagavi news :
ಮಂಗಳೂರು ಬೀಕರ ದುರಂತ : ನಾಗೋರಿಯಲ್ಲಿ ಮನೆ ಮೇಲೆ ಮಣ್ಣು ಕುಸಿತ, ಇಬ್ಬರು ಮಕ್ಕಳು ಸೇರಿ ಮೂವರು ದುರ್ಮರಣ.
ಮಂಗಳೂರು ನಗರದ ಕಂಕನವಾಡಿ ಪೊಲೀಸ್ ಠಾಣೆಯ ಹಿಂಭಾಗದ ನಾಗೋರಿಯಲ್ಲಿ ಭೀಕರ ಮಣ್ಣು ಕುಸಿತ ಸಂಭವಿಸಿ ಹಂಚಿನ ಮನೆಯೊಂದು ಸಂಪೂರ್ಣ ಮಣ್ಣಿನಡಿ ಸಿಲುಕಿದ ಪರಿಣಾಮ ಇಬ್ಬರು ಪುಟ್ಟ ಮಕ್ಕಳು ಸೇರಿ ಮೂವರು ಮೃತಪಟ್ಟಿರುವ ಧಾರಣ ಘಟನೆ ನಡೆದಿದೆ.
ಮನೆಯೊಳಗಿದ್ದ 6 ಮಂದಿಯಲ್ಲಿ ಮೂವರನ್ನು ರಕ್ಷಣಾ ಸಿಬ್ಬಂದಿ ಸುರಕ್ಷಿತವಾಗಿ ಹೊರ ತೆಗೆದರೆ, ಇನ್ನು ಮೂವರು ಮಣ್ಣಿ ನಡಿ ಸಿಲುಕಿ ಮೃತಪಟ್ಟಿದ್ದಾರೆ. ಮೃತರನ್ನು ಅನಾಮಿಕ ಚೌರಾಸಿಯ (7), ತನು (3), ಹಾಗೂ ಶಾಂತ ಎಂದು ಗುರುತಿಸಲಾಗಿದೆ.
ಗಾಯಗೊಂಡ ಅಲ್ಕಾ,ಅನುಷಾ ಮತ್ತು ಬಾಲಕೃಷ್ಣ ಅವರನ್ನು ರಕ್ಷಿಸಿ, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಮತ್ತು ಗಾಯಾಳುಗಳು ಮೂಲತಃ ಬಿಹಾರ ರಾಜ್ಯದವರಾಗಿದ್ದು, ಕಳೆದ ಸುಮಾರು 20 ವರ್ಷಗಳಿಂದ ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣೆಯ ಹಿಂಭಾಗದ ನಾಗೋರಿ ಪ್ರದೇಶದಲ್ಲಿ ವಾಸಿಸುತ್ತಿದ್ದರು.
ಈ ದುರಂತ ಸ್ಥಳೀಯರಲ್ಲಿ ಆತಂಕ ಮತ್ತು ದುಃಖವನ್ನು ಉಂಟುಮಾಡಿದ್ದು, ರಕ್ಷಣಾ ಕಾರ್ಯಾಚರಣೆ ತ್ವರಿತವಾಗಿ ನಡೆಸಲಾಯಿತು. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಗುಡ್ಡ ಕುಸಿತು ಕ್ಷಣಾರ್ಧದಲ್ಲಿ ಮನೆ ಮಣ್ಣಿ ನಡಿ; ನಾಗೋರಿಯಲ್ಲಿ ಮೂವರ ಜೀವಬಲಿ, ಮೂವರು ಪಾರು.
ಮಂಗಳೂರಿನ ನಾಗೋರಿ ಪ್ರದೇಶದಲ್ಲಿ ಸಂಭವಿಸಿದ ಭೀಕರ ಮಣ್ಣು ಕುಸಿತ ಕೆಲವೇ ಕ್ಷಣಗಳಲ್ಲಿ ಒಂದು ಹಂಚಿನ ಮನೆಯನ್ನು ಸಂಪೂರ್ಣವಾಗಿ ಮಣ್ಣಿನಲ್ಲಿ ಕೂತು ಹಾಕಿದೆ. ಮನೆಯ ಪಕ್ಕದಲ್ಲಿದ್ದ ಗುಡ್ಡ ಏಕಾಏಕಿ ಕುಸಿದು ಬಿದ್ದ ಪರಿಣಾಮ ಮನೆಯು ಸಂಪೂರ್ಣ ಜಖಂಗೊಂಡಿದ್ದು, ಒಳಗಿದ್ದ ಕುಟುಂಬಗಳು ದುರಂತಕ್ಕೆ ಸಿಲುಕಿವೆ.
ಮನೆಯ ವಿವಿಧ ಕೊಠಡಿಗಳಲ್ಲಿ ಬಾಡಿಗೆ ಆಧಾರದಲ್ಲಿ ವಾಸಿಸುತ್ತಿದ್ದ ಬೇರೆ ಬೇರೆ ಕುಟುಂಬಗಳ ಆರು ಮಂದಿ ಮಣ್ಣಿನ ವಿಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದರು. ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಅವಿರತ ರಕ್ಷಣಾ ಕಾರ್ಯಚರಣೆ ನಡೆಸಿದರು.
ರಕ್ಷಣಾ ಕಾರ್ಯಾಚರಣೆಯಲ್ಲಿ ಒಬ್ಬ ಪುರುಷ ಹಾಗೂ ಇಬ್ಬರು ಬಾಲಕಿಯರನ್ನು ಗಾಯ ಗಳೊಂದಿಗೆ ಸುರಕ್ಷಿತವಾಗಿ ಹೊರ ತೆಗೆದು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ತೀವ್ರ ಪ್ರಮಾಣದಲ್ಲಿ ಮಣ್ಣು ಮುಚ್ಚಿದ ಕಾರಣ ಇಬ್ಬರೂ ಪುಟ್ಟ ಮಕ್ಕಳು ಹಾಗೂ ಒಬ್ಬ ಮಹಿಳೆ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಸತತ ಪ್ರಯತ್ನದ ಬಳಿಕ ಮೃತ ದೇಹಗಳನ್ನು ಅವಶೇಷಗಳೆಂದ ಹೊರ ತೆಗೆಯಲಾಗಿದೆ.
ಈ ದುರಂತ ಸ್ಥಳೀಯರಲ್ಲಿ ತೀವ್ರ ಆಘಾತ ಮೂಡಿಸಿದ್ದು, ನಿರಂತರ ಮಳೆಯ ನಡುವಿನ ಭೂಕುಸಿತದ ಅಪಾಯದ ಬಗ್ಗೆ ಮತ್ತೆ ಆತಂಕ ಹೆಚ್ಚಿಸಿದೆ.
ಎನ್.ಡಿ.ಆರ್.ಎಫ್ ಕಾರ್ಯಾಚರಣೆ ಯಶಸ್ವಿ; ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆ, ಸ್ಥಳೀಯರ ಕಣ್ಣೆದುರೇ ನಡೆದ ದುರಂತ
ದುರಂತದ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಂಡವನ್ನು ಸ್ಥಳಕ್ಕೆ ಕರೆಸಿಕೊಳ್ಳಲಾಯಿತು. ಸ್ಥಳೀಯ ಪೊಲೀಸರು,
ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಹಾಗೂ ಎನ್.ಡಿ.ಆರ್.ಎಫ್ ಜಂಟಿಯಾಗಿ ತ್ವರಿತ ಕಾರ್ಯಾಚರಣೆ ನಡೆಸಿದರು. ಮಣ್ಣಿನ ಅಡಿಯಲ್ಲಿ ಸಿಲುಕಿದ್ದ ಎಲ್ಲಾ ಆರು ಮಂದಿಯನ್ನು ಹೊರ ತೆಗೆದ ಬಳಿಕ ರಕ್ಷಣಾ ಕಾರ್ಯಚರಣೆಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ದುರಂತದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು, ಅಗತ್ಯ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು
ಘಟನೆಯ ಬಗ್ಗೆ ಸ್ಥಳೀಯ ನಿವಾಸಿ ಜಗದೀಶ್ ಮಾತನಾಡಿ, "ಇಂದು ಬೆಳಗ್ಗಿನ ಜಾವ ಸುಮಾರು 4:30ರ ವೇಳೆಗೆ ಘಟನೆ ನಡೆದಿದೆ. ಫೋನ್ ಮೂಲಕ ಮಾಹಿತಿ ಬಂದ ತಕ್ಷಣ ಸ್ಥಳಕ್ಕೆ ಧಾವಿಸಿದೆ. ಆಗ ಇನ್ನೂ ಕತ್ತಲು ಇತ್ತು. ಗುಡ್ಡ ಏಕಾಏಕಿ ಕುಸಿದ ಪರಿಣಾಮ ಸುಮಾರು ನಾಲ್ಕು ಮನೆಗಳ ತಡೆಗೋಡೆಗಳು ಕುಸಿದು ಬಿದ್ದಿದ್ದವು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು, ಅಗ್ನಿ ಶಾಮಕದಳ ಹಾಗೂ ಎನ್.ಡಿ.ಆರ್.ಎಫ್ ಸಿಬ್ಬಂದಿ ಸ್ಥಳಕ್ಕೆ ಬಂದು ರಕ್ಷಣಾ ಕಾರ್ಯಾಚರಣೆ ನಡೆಸಿದರು. ಒಟ್ಟು ಆರು ಮಂದಿ ಮಣ್ಣಿನ ಅಡಿಯಲ್ಲಿ ಸಿಲುಕಿದ್ದರು. ಕಳೆದ 15 ವರ್ಷಗಳಿಂದ ನಾವು ಇಲ್ಲಿ ವಾಸಿಸುತ್ತಿದ್ದೇವೆ. ಇದುವರೆಗೆ ಇಂಥ ಘಟನೆ ನಡೆದಿರಲಿಲ್ಲ. ಆದರೆ ಪ್ರಕೃತಿ ವಿಕೋಪದ ಮುಂದೆ ಯಾರಿಂದಲೂ ಏನು ಮಾಡಲು ಸಾಧ್ಯವಿಲ್ಲ," ಎಂದು ದುಃಖ ವ್ಯಕ್ತಪಡಿಸಿದರು.
ಭಾರಿ ಮಳೆ ಹಿನ್ನೆಲೆ ಸಂಭವಿಸಿದ ಈ ದುರಂತ ನಾಗೋರಿ ಪ್ರದೇಶವನ್ನು ಶೋಕದಲ್ಲಿ ಮುಳುಗಿಸಿದ್ದು, ಮಳೆಗಾಲದಲ್ಲಿ ಗುಡ್ಡ ಪ್ರದೇಶಗಳ ಸುರಕ್ಷತೆ ಕುರಿತು ಮತ್ತೆ ಚರ್ಚೆಗಳು ಎಬ್ಬಿಸಿದೆ.