balagavi news:
ನವದೆಹಲಿ, ಮೇ 20: ವಿಶ್ವ ರಾಜಕೀಯದ ಕೇಂದ್ರಬಿಂದುವಾಗಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಮತ್ತೊಂದು ಮಹತ್ವದ ಭೇಟಿ ಶೀಘ್ರದಲ್ಲೇ ನಡೆಯಲಿದ್ದು, ಜಾಗತಿಕ ಮಟ್ಟದಲ್ಲಿ ಭಾರೀ ಕುತೂಹಲ ಮೂಡಿಸಿದೆ. ವಿಶೇಷವೆಂದರೆ, ಈ ಐತಿಹಾಸಿಕ ಸಭೆ ಭಾರತದಲ್ಲೂ ಅಲ್ಲ, ಅಮೆರಿಕದಲ್ಲೂ ಅಲ್ಲ, ಬದಲಿಗೆ ಯುರೋಪಿನ ಶಕ್ತಿಶಾಲಿ ರಾಷ್ಟ್ರವಾದ ಫ್ರಾನ್ಸ್ ಈ ಮಹತ್ವದ ಭೇಟಿಗೆ ಆತಿಥ್ಯ ವಹಿಸಲಿದೆ.
ಮುಂದಿನ ತಿಂಗಳು ಜೂನ್ ನಲ್ಲಿ ನಡೆಯಲಿರುವ G7 Summit ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಟ್ರಂಪ್ ಮುಖಾಮುಖಿ ಮಾತುಕತೆ ನಡೆಸಲಿದ್ದಾರೆ. ಫ್ರಾನ್ಸ್ ಆಯೋಜಿಸಿರುವ ಈ ಶೃಂಗಸಭೆಯಲ್ಲಿ ಜಾಗತಿಕ ಆರ್ಥಿಕತೆ, ಭದ್ರತೆ, ವ್ಯಾಪಾರ, ತಂತ್ರಜ್ಞಾನ ಹಾಗೂ ಜಿಯೋಪಾಲಿಟಿಕ್ಸ್ ಗೆ ಸಂಬಂಧಿಸಿದ ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.
ಭಾರತ - ಅಮೆರಿಕ ಸಂಬಂಧಗಳು ಹೊಸ ಹಂತ ತಲುಪುತ್ತಿರುವ ಸಂದರ್ಭದಲ್ಲಿ ಮೋದಿ - ಟ್ರಂಪ್ ಭೇಟಿ ಅಂತಾರಾಷ್ಟ್ರೀಯ ರಾಜಕೀಯದಲ್ಲಿ ವಿಶೇಷ ಗಮನ ಸೆಳೆದಿದೆ. ಉಭಯ ನಾಯಕರ ಸಭೆಯಲ್ಲಿ ಇಂಡೋ- ಪೆಸಿಫಿಕ್ ಭದ್ರತೆ, ರಕ್ಷಣಾ ಸಹಕಾರ, ಹೂಡಿಕೆ ಹಾಗೂ ಜಾಗತಿಕ ಸಂಘರ್ಷಗಳ ಕುರಿತು ಚರ್ಚೆ ನಡೆಯುವ ನಿರೀಕ್ಷೆಯಿದೆ.
ಈ ಭೇಟಿಯುತ್ತ ಈಗ ವಿಶ್ವದ ರಾಜಕೀಯ ವಲಯಗಳ ಕಣ್ಣು ನೆಟ್ಟಿದ್ದು, ಜಿ-7 ಶೃಂಗ ಸಭೆ ಜಾಗತಿಕ ಮಟ್ಟದಲ್ಲಿ ಮಹತ್ವದ ವೇದಿಕೆಯಾಗಲಿದೆ.
ಜಾಗತಿಕ ರಾಜಕೀಯದಲ್ಲಿ ಮತ್ತೆ ಹೈ- ವೋಲ್ವೇಜ್ ಚಟುವಟಿಕೆಗಳು ಆರಂಭವಾಗಿದ್ದು, ವಿಶ್ವದ ಗಮನ ಸೆಳೆಯುವ ಮಹತ್ವದ ಶೃಂಗ ಸಭೆಗೆ ವೇದಿಕೆ ಸಿದ್ಧವಾಗಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಶೀಘ್ರದಲ್ಲೇ ಮಹತ್ವದ ಮುಖಾಮುಖಿ ಸಭೆ ನಡೆಯಲಿದ್ದು ಅಂತರರಾಷ್ಟ್ರೀಯ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಈ ಬಾರಿ ವಿಶೇಷವೆಂದರೆ, ಉಭಯ ನಾಯಕರ ಭೇಟಿ ಭಾರತದಲ್ಲಾಗಲಿ ಅಥವಾ ಅಮೆರಿಕದಲ್ಲಾಗಲಿ ನಡೆಯುತ್ತಿಲ್ಲ. ಬದಲಿಗೆ ಯುರೋಪಿನ ಪ್ರಭಾವಶಾಲಿ ರಾಷ್ಟ್ರವಾದ ಫ್ರಾನ್ಸ್ ಈ ಐತಿಹಾಸಿಕ ಸಭೆಗೆ ಆತಿಥ್ಯ ವಹಿಸಲಿದೆ. ಮುಂದಿನ ತಿಂಗಳು ಜೂನ್ ನಲ್ಲಿ ನಡೆಯಲಿರುವ G7 Summit ಸಂದರ್ಭದಲ್ಲಿ ಮೋದಿ ಮತ್ತು ಟ್ರಂಪ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಜಾಗತಿಕ ಆರ್ಥಿಕತೆ, ಭದ್ರತೆ, ಇಂಡೋ- ಪೆಸಿಫಿಕ್ ತಂತ್ರಜ್ಞಾನ, ರಕ್ಷಣಾ ಸಹಕಾರ ಹಾಗೂ ಜಿಯೋ ಪಾಲಿಟಿಕ್ಸ್ ಗೆ ಸಂಬಂಧಿಸಿದ ಹಲವು ಮಹತ್ವದ ವಿಚಾರಗಳು ಈ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ. ವಿಶೇಷವಾಗಿ ಭಾರತ ಅಮೆರಿಕ ಸಂಬಂಧಗಳು ಹೊಸ ಹಂತ ತಲುಪುತ್ತಿರುವ ಹಿನ್ನೆಲೆ, ಈ ಭೇಟಿಯುತ್ತ ವಿಶ್ವದ ರಾಜಕೀಯ ಹಾಗೂ ರಾಜತಾಂತ್ರಿಕ ವಲಯಗಳು ತೀವ್ರ ಗಮನ ಹರಿಸಿವೆ.
ಮೋದಿ- ಟ್ರಂಪ್ ಭೇಟಿಯು ಕೇವಲ ದ್ವಿಪಕ್ಷಿಯ ಮಾತುಗಳಷ್ಟೇ ಅಲ್ಲ , ಜಾಗತಿಕ ಶಕ್ತಿ ಸಮೀಕರಣಗಳ ಮೇಲು ಪರಿಣಾಮ ಬೀರುವ ಸಾದ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಫ್ರಾನ್ಸ್ ನಡೆಯಲಿರುವ ಈ ಶೃಂಗಸಭೆ ವಿಶ್ವ ರಾಜಕೀಯದ ಪ್ರಮುಖ ಕ್ಷಣವಾಗುವ ನಿರೀಕ್ಷೆ ಇದೆ.
ಈ ವರ್ಷದ G7 Summit ಫ್ರಾನ್ಸ್ ನ ಪ್ರಸಿದ್ಧ ಪ್ರವಾಸಿ ತಾಣವಾದ Evian- les- Bains ನಲ್ಲಿ ಜೂನ್ 15 ರಿಂದ 17ರವರೆಗೆ ಅದ್ದೂರಿಯಾಗಿ ನಡೆಯಲಿದೆ. ಫ್ರೆಂಚ್ ಆಲ್ಪ್ಸ್ ನ ಸುಂದರ ವಾತಾವರಣದಲ್ಲಿ ಆಯೋಜಿಸಲಾಗುತ್ತಿರುವ ಈ ಶೃಂಗ ಸಭೆ ಈಗಾಗಲೇ ಜಾಗತಿಕ ಮಟ್ಟದಲ್ಲಿ ಬಾರಿ ಗಮನ ಸೆಳೆದಿದೆ. ವಿಶೇಷವೆಂದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ 80ನೇ ಹುಟ್ಟುಹಬ್ಬ ಆಚರಿಸಿಕೊಂಡ ಕೇವಲ ಒಂದು ದಿನದ ಬಳಿಕ ಈ ಮಹತ್ವದ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ವರದಿಗಳ ಪ್ರಕಾರ, ಟ್ರಂಪ್ ಅವರು ಶೃಂಗಸಭೆಯಲ್ಲಿ ಮುಖ್ಯವಾಗಿ ಕೃತಕ ಬುದ್ಧಿಮತ್ತೆ (AI), ಜಾಗತಿಕ ವ್ಯಾಪಾರ, ಭಯೋತ್ಪಾದನೆ ವಿರುದ್ಧದ ಹೋರಾಟ ಹಾಗೂ ಅಂತರರಾಷ್ಟ್ರೀಯ ಅಪರಾಧ ನಿಯಂತ್ರಣದಂತಹ ಪ್ರಮುಖ ವಿಚಾರಗಳ ಬಗ್ಗೆ ಗಂಭೀರ ಚರ್ಚೆ ನಡೆಸಲಿದ್ದಾರೆ. ಜಾಗತಿಕ ಆರ್ಥಿಕ ಮತ್ತು ಭದ್ರತಾ ಸವಾಲುಗಳ ನಡುವೆಯೇ ನಡೆಯುತ್ತಿರುವ ಈ ಸಭೆಗೆ ವಿಶ್ವದ ಪ್ರಮುಖ ರಾಷ್ಟ್ರಗಳ ಕಣ್ಣು ನೆಟ್ಟಿವೆ.
ಇದಕ್ಕೂ ಮುನ್ನ, ಫೆಬ್ರವರಿ 17 ರಿಂದ 19, 2026 ರವರೆಗೆ Emmanuel Macron ಭಾರತಕ್ಕೆ ಅಧಿಕೃತ ಭೇಟಿ ನೀಡಿದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಜಿ- 7 ಶೃಂಗ ಸಭೆಯಲ್ಲಿ ಭಾಗವಹಿಸಲು ಆತ್ಮೀಯವಾಗಿ ಆಹ್ವಾನಿಸಿದ್ದರು. ಫ್ರಾನ್ಸ್ ಅಧ್ಯಕ್ಷರ ಈ ಆಹ್ವಾನವನ್ನು ಪ್ರಧಾನಿ ಮೋದಿ ಸ್ವೀಕರಿಸಿದ್ದು, ಅವರ ಫ್ರಾನ್ಸ್ ಪ್ರವಾಸ ಮಾರ್ಚ್ ಆರಂಭದಲ್ಲೇ ದೃಢಪಟ್ಟಿದೆ ಎಂದು ಭಾರತದಲ್ಲಿರುವ Embassy of France in India ಮಾಹಿತಿ ನೀಡಿದೆ.
ಇದರಿಂದ ಜೂನ್ ನಲ್ಲಿ ಪ್ರಧಾನಿ ಮೋದಿ ಫ್ರಾನ್ಸ್ ಪ್ರವಾಸ ಕೈಗೊಳ್ಳುವುದು ಖಚಿತವಾಗಿದ್ದು, ಇದೇ ವೇಳೆ ಮೋದಿ- ಟ್ರಂಪ್ ಮಹತ್ವದ ಭೇಟಿ ಜಾಗತಿಕ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.
ಈ ಬಾರಿ ನಡೆಯಲಿರುವ G7 Summit ನಲ್ಲಿ ಯಾವುದೇ ಔಪಚಾರಿಕ ಅಥವಾ ನೇರ ದ್ವೀಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಲಾಗುವುದಿಲ್ಲ ಎಂದು ಶ್ವೇತ ಭವನದ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಆದರೆ ಭವಿಷ್ಯದಲ್ಲಿ ಮಹತ್ವದ ಜಾಗತಿಕ ಹಾಗೂ ದ್ವಿಪಕ್ಷಿಯ ಒಪ್ಪಂದಗಳಿಗೆ ಬಲವಾದ ಬುನಾದಿ ಹಾಕುವ ಉದ್ದೇಶದಿಂದ ಈ ಶೃಂಗಸಭೆ ಅತ್ಯಂತ ಪ್ರಮುಖ ವೇದಿಕೆ ಆಗಲಿದೆ ಎಂದು ತಿಳಿಸಲಾಗಿದೆ.
ಪ್ರಮುಖ ಜಾಗತಿಕ ರಾಜಕೀಯ ಬೆಳವಣಿಗೆಗಳ ನಡುವೆ ಇರಾನ್ ಬಿಕ್ಕಟ್ಟು ಸೇರಿದಂತೆ ಹಲವು ಅಂತರರಾಷ್ಟ್ರೀಯ ವಿಷಯಗಳು ಸಭೆಯ ಕಾರ್ಯ ಸೂಚಿಯಲ್ಲಿ ಸೇರಬಹುದಾದ ಸಾಧ್ಯತೆ ಇದೆ. ಆದರೆ ಅಮೆರಿಕ ಅಧ್ಯಕ್ಷರು ಡೊನಾಲ್ಡ್ ಟ್ರಂಪ್ ವ್ಯಾಪಾರ, ಆರ್ಥಿಕತೆ ಹಾಗೂ ಜಾಗತಿಕ ಹೂಡಿಕೆಗಳ ವಿಚಾರಗಳಿಗೆ ಹೆಚ್ಚಿನ ಆದ್ಯತೆ ನೀಡುವ ನಿರೀಕ್ಷೆ ಇದೆ.
ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಮತ್ತು ಟ್ರಂಪ್ ಅವರು ಫೆಬ್ರವರಿ 13,2025 ರಂದು White House ನಲ್ಲಿ ಭೇಟಿಯಾಗಿ ಹಲವು ಮಹತ್ವದ ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಸಿದ್ದರು. ಆ ಭೇಟಿಯ ಬಳಿಕ ಎರಡು ದೇಶಗಳ ಸಂಬಂಧ ಮತ್ತಷ್ಟು ಬಲಿಷ್ಠಗೊಂಡಿತ್ತು.
ಈಗ ಜೂನ್ ನಲ್ಲಿ ಫ್ರಾನ್ಸ್ ನಲ್ಲಿ ನಡೆಯಲಿರುವ ಮೋದಿ- ಟ್ರಂಪ್ ಮುಖಾಮುಖಿ ಸಭೆ ಮತ್ತೆ ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಭಾರಿ ಕುತೂಹಲ ಮೂಡುತಿದೆ. ಪ್ರಾನ್ಸ್ ನ ಸುಂದರ ವಾತಾವರಣದಲ್ಲಿ ನಡೆಯಲಿರುವ ಈ ಹೈ - ಪ್ರೊಫೈಲ್ ಭೇಟಿ, ವಿಶ್ವ ರಾಜಕೀಯದಲ್ಲಿ ಹೊಸ ಚರ್ಚೆ ಗಳಿಗೆ ಕಾರಣವಾಗುವ ಸಾಧ್ಯತೆ ಇದೆ.
Also Read:
ಚಿಕ್ಕಮಗಳೂರು ದುರಂತ ಘಟನೆ: ಆಟವಾಡುತ್ತಿದ್ದ ಬಾಲಕಿ ಕುತ್ತಿಗೆಗೆ ಹಗ್ಗ ಸುತ್ತಿಕೊಂಡು ಸಾವು