beaagvi news :
ಫಿಫಾ ವರ್ಲ್ಡ್ ಕಪ್ 2026ರಲ್ಲಿ ಇತಿಹಾಸ ನಿರ್ಮಿಸಿದ ಗೋಲ್ ಕೀಪರ್!
ಕ್ಯಾನ್ಸಾಸ್ ಸಿಟಿಯ ಆ್ಯರೋಹೆಡ್ ಸ್ಟೇಡಿಯಂನಲ್ಲಿ ನಡೆದ ಫಿಫಾ ವಿಶ್ವಕಪ್ ಪಂದ್ಯದಲ್ಲಿ ಹಿಂದೆಂದೂ ಕಾಣದ ಅದ್ಭುತ ಕ್ಷಣಕ್ಕೆ ಸಾಕ್ಷಿ ಆಯಿತು. ಕುರಾಸಾವೋ ದ್ವೀಪ ರಾಷ್ಟ್ರದ ಗೋಲ್ ಕೀಪರ್ Eloy Room ಅವರು ತಮ್ಮ ಪ್ರದರ್ಶನದಿಂದ ಇಡೀ ಫುಟ್ಬಾಲ್ ಜಗತ್ತನ್ನೇ ಬೆರಗುಗೊಳಿಸಿದ್ದಾರೆ.
ಈಕ್ವಾಡಾರ್ ವಿರುದ್ಧ ನಡೆದ ಪಂದ್ಯದಲ್ಲಿ 90 ನಿಮಿಷಗಳ ಅವಧಿಯಲ್ಲಿ ಬರೋಬ್ಬರಿ 15 ಗೋಲು ಪ್ರಯತ್ನಗಳನ್ನು ತಡೆದು ನಿಲ್ಲಿಸಿದ ರೂಮ್, ಒಂದೇ ಪಂದ್ಯದಲ್ಲಿ ಅತ್ಯಧಿಕ ಸೇವ್ ಗಳನ್ನು ಮಾಡಿದ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಅವರ ಅದ್ಭುತ ರಿಪ್ಲೇಕ್ಸ್, ಸಮಯೋಚಿತಗಳು ಮತ್ತು ಅಚಲವಾದ ಗೋಲ್ ಲೈನ್ ರಕ್ಷಣೆಯಿಂದ ಎದುರಾಳಿ ತಂಡಕ್ಕೆ ಗೋಲು ಸಿಡಿಸುವ ಅವಕಾಶವೇ ಸಿಗಲಿಲ್ಲ.
ಈ ವಿಶಿಷ್ಟ ಸಾಧನೆಯ ಮೂಲಕ ಫಿಫಾ ವರ್ಲ್ಡ್ ಕಪ್ 2026 ಮತ್ತೊಂದು ಇತಿಹಾಸದ ಕ್ಷಣಕ್ಕೆ ಸಾಕ್ಷಿಯಾಗಿದೆ. ಪುಟ್ಬಾಲ್ ಅಭಿಮಾನಿಗಳು ಈ ಪ್ರದರ್ಶನವನ್ನು "ಜೀವಂತ ದಂತ ಕಥೆ" ಎಂದು ಹೊಗಳುತ್ತಿದ್ದಾರೆ.
ಮೊದಲ ಪಂದ್ಯದಲ್ಲಿ ಜರ್ಮನಿ ವಿರುದ್ಧ ಅನುಭವಿಸಿದ ಹೀನಾಯ ಸೋಲಿನಿಂದ ಕಂಗೆಟ್ಟಿದ್ದ ಕುರಾಸಾವೊ ತಂಡ ಈ ಪಂದ್ಯದಲ್ಲಿ ಗೆಲ್ಲುವ ವಿಶ್ವಾಸದೊಂದಿಗೆ ಕಣಕ್ಕಿಳಿದಿತ್ತು.ಆದರೆ ಈಕ್ವಾಡಾರ್ ತಂಡದ ಮುನ್ನಡೆ ಆಟಗಾರರನ್ನು ಕಟ್ಟಿ ಹಾಕುವುದೇ ಕುರಸಾವೊ ಡಿಫೆಂಡರ್ ಗಳ ಮುಂದಿನ ದೊಡ್ಡ ಸವಾಲು.
ಫಿಫಾ ವರ್ಲ್ಡ್ ಕಪ್ 2026ರಲ್ಲಿ ರಕ್ಷಣೆಯ ಅದ್ಭುತ ಪ್ರದರ್ಶನ!
ಕ್ಯಾನ್ಸಾಸ್ ಸಿಟಿಯ ಆ್ಯರೋಹೆಡ್ ಸ್ಟೇಡಿಯಂನಲ್ಲಿ ನಡೆದ ಫಿಫಾ ವರ್ಲ್ಡ್ ಕಪ್ 2018 ಪಂದ್ಯದಲ್ಲಿ ಈಕ್ವೆಡಾರ್ ತಂಡ ಬ್ಯಾಕ್ ಟು ಬ್ಯಾಕ್ ದಾಳಿಗಳ ಮೂಲಕ ಕುರಾಸಾವೊ ರಕ್ಷಣಾ ಕೋಟೆಯನ್ನು ಭೇದಿಸಲು ತೀವ್ರ ಪ್ರಯತ್ನ ನಡೆಸಿತು. ಆದರೆ 37 ವರ್ಷದ ಅನುಭವಿ ಗೋಲ್ ಕೀಪರ್ Eloy Room ಅವರ ಅದ್ಭುತ ಸೇವ್ ಗಳ ಮುಂದೆ ಎಲ್ಲ ಪ್ರಯತ್ನಗಳು ವಿಫಲವಾದವು.
ಅನೇಕ ಬಾರಿ ಗೋಲು ಹೊಡೆಯುವ ಅವಕಾಶ ಪಡೆದರೂ ಈಕ್ವೆಡಾರ್ ತಂಡಕ್ಕೆ ಒಂದೇ ಒಂದು ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ತೀವ್ರ ಪೈಪೋಟಿಯ ಈ ಪಂದ್ಯ 0-0 ಡ್ರಾ ಆಗಿ ಅಂತ್ಯಗೊಂಡಿತು.
ಈ ಡ್ರಾ ಮೂಲಕ ಕುರಾಸಾವೊ ತಂಡವು ಫಿಫಾ ವಿಶ್ವಕಪ್ ಇತಿಹಾಸದಲ್ಲಿ ತನ್ನ ಮೊದಲ ಅಂಕವನ್ನು ಪಡೆದುಕೊಂಡಿದೆ ಎಂಬುದು ವಿಶೇಷ ಸಾಧನೆ. ಮೊದಲ ಪಂದ್ಯದಲ್ಲಿ ಐವರಿ ಕೋಸ್ಟ್ ವಿರುದ್ಧ ಸೋತಿದ್ದ ಈಕ್ವೆಡಾರ್ ಇದೀಗ ಒಂದು ಅಂಕದೊಂದಿಗೆ ಗ್ರೂಪ್ ಇ ಪಾಯಿಂಟ್ಸ್ ಟೇಬಲ್ ನಲ್ಲಿ ಮೂರನೇ ಸ್ಥಾನದಲ್ಲೇ ಉಳಿದಿದೆ.
ಈ ಪಂದ್ಯದಲ್ಲಿ ರಕ್ಷಣಾ ಗೋಡೆ ಆಗಿ ನಿಂತ ಎಲೋಯ್ ರೂಮ್ ಅವರ ಪ್ರದರ್ಶನಕ್ಕೆ ಕ್ರೀಡಾ ಲೋಕದಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಎಲೋಯ್ ರೂಮ್ ವಿಶ್ವ ದಾಖಲೆ-ಫಿಫಾ ವರ್ಲ್ಡ್ ಕಪ್ 2026ರಲ್ಲಿ ಇತಿಹಾಸ ನಿರ್ಮಾಣ!
ಫಿಫಾ ವರ್ಲ್ಡ್ ಕಪ್ 2026ರಲ್ಲಿ ಕುರಾಸಾವೊ ತಂಡದ ಗೋಲ್ ಕೀಪರ್ Eloy Room ಅವರು ಅದ್ಭುತ ಪ್ರದರ್ಶನ ನೀಡಿ ಹೊಸ ವಿಶ್ವ ದಾಖಲೆಯನ್ನು ಸ್ಥಾಪಿಸಿದ್ದಾರೆ.
ಈಕ್ವೆಡಾರ್ ತಂಡವು ಪಂದ್ಯದಲ್ಲಿ ಒಟ್ಟು 28 ಬಾರಿ ಗೋಲ್ ಪೋಸ್ಟ್ ಗೆ ಶಾರ್ಟ್ ಪ್ರಯತ್ನಿಸಿದರು,ಅದರಲ್ಲಿ 15 ನಿಖರವಾದ ಆನ್ - ಟಾರ್ಗೆಟ್ ಶಾರ್ಟ್ ಗಳನ್ನು ಎಲೋಯ್ ರೂಮ್ ತಮ್ಮ ಅದ್ಭುತ ರಿಪ್ಲೆಕ್ಸ್ ಮೂಲಕ ತಡೆದು ನಿಲ್ಲಿಸಿದರು. ಗೋಲ್ ಮುಂದೆ ಅಚಲ ಗೋಡೆಯಂತೆ ನಿಂತ ಅವರ ಪ್ರದರ್ಶನ ಕ್ರೀಡಾ ಜಗತ್ತನ್ನೇ ಬೆರಗುಗೊಳಿಸಿದೆ.
ಈ ಮೂಲಕ, 90 ನಿಮಿಷಗಳ ನಿಗದಿತ ಅವಧಿಯ ಪಂದ್ಯ ಒಂದರಲ್ಲಿ ಅತಿ ಹೆಚ್ಚು ಸೇವ್ ಮಾಡಿದ ಹೊಸ ವಿಶ್ವ ದಾಖಲೆ ಈಗ ಎಲೋಯ್ ರೂಮ್ ಹೆಸರಿನಲ್ಲಿ ದಾಖಲಾಗಿದೆ.ಇದಕ್ಕೂ ಮುನ್ನ ಈ ದಾಖಲೆ ರಮೋನ್ ಕ್ವಿರೋಗಾ ಅವರ ಹೆಸರಿನಲ್ಲಿತ್ತು.
ಅವರ ಈ ಸಾಧನೆಯಿಂದ ಕುರಾಸಾವೊ ಗೋಲ್ ಕೀಪರ್ ಇತಿಹಾಸ ಪುಟಗಳಲ್ಲಿ ಹೊಸ ಅಧ್ಯಾಯ ಬರೆಯಲಾಗಿದೆ ಎಂಬುವುದರಲ್ಲಿ ಯಾವುದೇ ಸಂಶಯವಿಲ್ಲ.
ಹಳೆಯ ದಾಖಲೆ:
1978 ರಲ್ಲಿ ಪೆರು ತಂಡದ ಗೋಲ್ ಕೀಪರ್ Ramón Quiroga ಅವರು ನೆದರ್ಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ 13 ಸೇವೆಗಳನ್ನು ಮಾಡಿ, 90 ನಿಮಿಷಗಳ ಅವಧಿಯಲ್ಲಿ ಅತ್ಯಧಿಕ ಸೇವ್ ಮಾಡಿದ ದಾಖಲೆ ತಮ್ಮದಾಗಿಸಿಕೊಂಡರು.
ಹೊಸ ಇತಿಹಾಸ:
ಈಕ್ವೆಡಾರ್ ವಿರುದ್ಧದ ಪಂದ್ಯದಲ್ಲಿ ಎಲೋಯ್ ರೂಮ್ 15 ಆನ್ ಟಾರ್ಗೆಟ್ ಶಾಟ್ ಗಳನ್ನು ತಡೆದು, 90 ನಿಮಿಷಗಳ ಅವಧಿಯಲ್ಲಿ ಅತ್ಯಧಿಕ ಸೇವ್ ಮಾಡಿದ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಒಟ್ಟಾರೆ ವಿಶ್ವ ದಾಖಲೆ:
ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಅತ್ಯಧಿಕ ಸೇವ್ ಮಾಡಿದ ದಾಖಲೆ ಅಮೆರಿಕಾದ TIM Howard ಹೆಸರಿನಲ್ಲಿದೆ. ಅವರು 2014ರ ವಿಶ್ವಕಪ್ ನಲ್ಲಿ ಬೆಲ್ಜಿಯಂ ವಿರುದ್ಧದ ಪಂದ್ಯದಲ್ಲಿ 16 ಸೇವ್ ಗಳನ್ನು ಮಾಡಿದ್ದರು. ಆದರೆ ಅದು 120 ನಿಮಿಷಗಳ ಅವಧಿಯಲ್ಲಿ ಎಂಬುದು ಗಮನಾರ್ಹ.
ಈ ಎಲ್ಲಾ ದಾಖಲೆಗಳ ನಡುವೆ ಎಲೋಯ್ ರೂಮ್ ಅವರ ಸಾಧನೆ ಈಗ "90 ನಿಮಿಷಗಳ ಶುದ್ಧ ಆಟದ ಹೊಸ ವಿಶ್ವ ದಾಖಲೆ" ಎಂದು ಕ್ರೀಡಾ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
0 ನಿಮಿಷಗಳಲ್ಲಿ 15 ಸೇವ್ ಗಳು - ಫುಟ್ಬಾಲ್ ಜಗತ್ತನ್ನು ನಿಬ್ಬೆರಗಾಗಿಸಿದ ಎಲೋಯ್ ರೂಮ್!
ಫಿಫಾ ವರ್ಲ್ಡ್ ಕಪ್ 2026ರಲ್ಲಿ ಕುರಾಸಾವೊ ತಂಡದ ಗೋಲ್ ಕೀಪರ್ Eloy Room ಅವರು ನಿಗದಿತ 90 ನಿಮಿಷಗಳ ಅವಧಿಯಲ್ಲಿ ಬರೋಬ್ಬರಿ 15 ಅದ್ಬುತ ಸೇವ್ ಗಳನ್ನು ಮಾಡಿ ಇಡಿ ಫುಟ್ಬಾಲ್ ಜಗತ್ತನ್ನೇ ನಿಬ್ಬೆರಗಾಗಿಸಿದ್ದಾರೆ.
ಈಕ್ವೆಡಾರ್ ತಂಡದ ನಿರಂತರ ದಾಳಿಗಳ ನಡುವೆಯೂ ಗೋಲ್ ಮುಂದೆ ಅಚಲ ಗೋಡೆಯಂತೆ ನಿಂತ ರೂಮ್ ಅವರ ಪ್ರದರ್ಶನ, ಪಂದ್ಯವನ್ನು 0-0 ಡ್ರಾ ಆಗುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿತು. ಅವರ ಈ ಅಪೂರ್ವ ಸಾಧನೆ ಇದೀಗ ಕ್ರೀಡಾ ವಲಯದಲ್ಲಿ ಬಾರಿ ಚರ್ಚೆಗೆ ಕಾರಣವಾಗಿದೆ.
Also Read:
ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಬಿಡದಿ ಟೌನ್ ಶಿಪ್ ವಿರೋಧ ಪಾದಯಾತ್ರೆ ಆರಂಭ