<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ಚಿಕ್ಕಮಗಳೂರಿನಲ್ಲಿ ಇತಿಹಾಸ ನಿರ್ಮಾಣ : ದಲಿತರಿಗೆ ಆಂಜನೇಯ ಸ್ವಾಮಿ ದೇವಸ್ಥಾನ ಪ್ರವೇಶ

ಚಿಕ್ಕಮಗಳೂರಿನಲ್ಲಿ ಇತಿಹಾಸ ನಿರ್ಮಾಣ : ದಲಿತರಿಗೆ ಆಂಜನೇಯ ಸ್ವಾಮಿ ದೇವಸ್ಥಾನ ಪ್ರವೇಶ
Summary: A historic event in Chikkamagaluru, where Dalits gained entry into the Anjaneya Swamy Temple after a century. Here is the complete information about this momentous moment.

Belagavi News :

ಕಡೂರು ತಾಲೂಕಿನ ನಿಡಘಟ್ಟ ಗ್ರಾಮದಲ್ಲಿ ಹಲವು ತಲೆಮಾರುಗಳ ಬಳಿಕ ಐತಿಹಾಸಿಕ ಘಟನೆ ನಡೆದಿದೆ. ಗ್ರಾಮದ ದಲಿತ ಸಮುದಾಯದವರು ಮೊದಲ ಬಾರಿಗೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಪ್ರವೇಶಿಸಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ.

ಮಂಗಳವಾರ ನಡೆದ ಈ ಘಟನೆ ಶಾಂತಿಯುತವಾಗಿ ನಡೆಯಿತು. ಗ್ರಾಮಸ್ಥರ ಸಹಕಾರದೊಂದಿಗೆ, ಆಡಳಿತ ಹಾಗೂ ಪೊಲೀಸ್ ಇಲಾಖೆಯ ಸಮ್ಮುಖದಲ್ಲಿ ಯಾವುದೇ ಅಡೆತಡೆ ಅಥವಾ ಅಹಿತಕರ ಘಟನೆಗಳಿಲ್ಲದೆ ದೇವಸ್ಥಾನ ಪ್ರವೇಶ ಪ್ರಕ್ರಿಯೆ ಪೂರ್ಣಗೊಂಡಿತು.

ಹಲವು ವರ್ಷಗಳಿಂದ ಕಾಯುತ್ತಿದ್ದ ಈ ಅವಕಾಶ ಇದೀಗ ಸಾಕಾರಗೊಂಡಿದ್ದು, ಗ್ರಾಮದಲ್ಲಿ ಸಮಾನತೆ ಮತ್ತು ಸಾಮಾಜಿಕ ಸೌಹಾರ್ದತೆಗೆ ಇದು ಮಹತ್ವದ ಹೆಜ್ಜೆ ಎಂದು ಸ್ಥಳೀಯರು ಹೇಳಿದ್ದಾರೆ. ದೇವಸ್ಥಾನದ ಪ್ರವೇಶದ ವೇಳೆ ಭಕ್ತರು ದೇವರಿಗೆ ಪೂಜೆ ಸಲ್ಲಿಸಿ ಶಾಂತಿಯುತವಾಗಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.

ಈ ಘಟನೆ ಸ್ಥಳೀಯ ಮಟ್ಟದಲ್ಲಿ ಸಾಮಾಜಿಕ ಬದಲಾವಣೆಯ ಸಂಕೇತವಾಗಿ ಗಮನ ಸೆಳೆಯುತ್ತಿದೆ. ಶತಮಾನಗಳ ನಂತರ ದಲಿತ ಸಮುದಾಯಕ್ಕೆ ದೇವಸ್ಥಾನ ಪ್ರವೇಶ ದೊರೆಯುತ್ತಿರುವುದು ಗ್ರಾಮದಲ್ಲಿ ಇತಿಹಾಸ ನಿರ್ಮಾಣವಾದ ಕ್ಷಣವಾಗಿದೆ.

ನಿಡಘಟ್ಟ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ದಲಿತರ ಐತಿಹಾಸಿಕ ಪ್ರವೇಶ - 100 ವರ್ಷಗಳ ಬಳಿಕ ಒಮ್ಮತದ ನಿರ್ಧಾರ :

ಕಡೂರು ತಾಲೂಕಿನ ನಿಡಘಟ್ಟ ಗ್ರಾಮದಲ್ಲಿ ಸುಮಾರು 100 ವರ್ಷಗಳಿಂದ ಮುಂದುವರಿದಿದ್ದ ಸಾಮಾಜಿಕ ಅಂತರಕ್ಕೆ ಅಂತ್ಯವಾಗಿದೆ. ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ದಲಿತ ಸಮುದಾಯದವರು ಮೊದಲ ಬಾರಿಗೆ ಪ್ರವೇಶಿಸಿ ದೇವರ ದರ್ಶನ ಪಡೆದಿದ್ದಾರೆ.

ನಿಡಘಟ್ಟ ಗ್ರಾಮದಲ್ಲಿ ಸುಮಾರು 2000 ಕ್ಕೂ ಹೆಚ್ಚು ಇತರ ಸಮುದಾಯದ ಕುಟುಂಬಗಳು ಹಾಗೂ ಎಂಬತ್ತಕ್ಕೂ ಹೆಚ್ಚು ದಲಿತ ಕುಟುಂಬಗಳು ವಾಸವಾಗಿವೆ. ಸ್ಥಳೀಯರ ಮಾಹಿತಿ ಪ್ರಕಾರ, ಶತಮಾನದಿಂದಲೂ ದಲಿತ ಸಮುದಾಯದವರು ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಪ್ರವೇಶಿಸಿರಲಿಲ್ಲ.

ಈ ವಿಷಯ ಇತ್ತೀಚೆಗೆ ಮತ್ತು ಚರ್ಚೆಗೆ ಬಂದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸೌಹಾರ್ದಯುತ ವಾತಾವರಣ ನಿರ್ಮಿಸಲು ಹಲವು ಸುತ್ತಿನ ಮಾತು ಕತೆಗಳು ನಡೆದವು. ದಲಿತ ಮುಖಂಡರು, ಇತರ ಸಮುದಾಯದ ಮುಖಂಡರು, ಗ್ರಾಮಸ್ಥರು ಹಾಗೂ ಅಧಿಕಾರಿಗಳು ಪರಸ್ಪರ ಚರ್ಚಿಸಿ ದೇವಸ್ಥಾನ ಪ್ರವೇಶಕ್ಕೆ ಒಮ್ಮತಕ್ಕೆ ಬಂದರು.

ಅದರಂತೆ ತಹಶೀಲ್ದಾರ್, ಪೊಲೀಸ್ ಅಧಿಕಾರಿಗಳು ಹಾಗೂ ಗ್ರಾಮ ಮುಖಂಡರ ಸಮ್ಮುಖದಲ್ಲಿ ದಲಿತ ಸಮುದಾಯದವರು ಶಾಂತಿಯುತವಾಗಿ ದೇವಸ್ಥಾನ ಪ್ರವೇಶಿಸಿ ಪೂಜೆ ಸಲ್ಲಿಸಿದರು.

ಯಾವುದೇ ರೋಹಿತಕರ ಘಟನೆಗಳಿಲ್ಲದೆ ನಡೆದ ಈ ಘಟನೆ ಗ್ರಾಮದಲ್ಲಿ ಸಾಮಾಜಿಕ ಸೌಹಾರ್ದತೆ ಮತ್ತು ಸಹಬಾಳ್ವೆಗೆ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ. ಶತಮಾನಗಳ ನಂತರ ನಡೆದ ಐತಿಹಾಸಿಕ ಕ್ಷಣ ಸ್ಥಳೀಯವಾಗಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಚಿಕ್ಕಮಗಳೂರು ನಿಡಘಟ್ಟ - ದೇವಸ್ಥಾನ ಪ್ರವೇಶದ ಬಳಿಕ ದಲಿತರಿಂದ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ; ಗ್ರಾಮದಲ್ಲಿ ಸಹಬಾಳ್ವೆಯ ದೃಶ್ಯ :

ಕಡೂರು ತಾಲೂಕಿನ ನಿಡಘಟ್ಟ ಗ್ರಾಮದಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ದಲಿತ ಸಮುದಾಯದವರು ಐತಿಹಾಸಿಕ ಪ್ರವೇಶ ಮಾಡಿದ ಬಳಿಕ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು.

ದೇವಸ್ಥಾನ ಪ್ರವೇಶಿಸಿದ ಬಳಿಕ ದಲಿತ ಸಮುದಾಯದ ಮಹಿಳೆಯರು, ಪುರುಷರು ಹಾಗೂ ಮಕ್ಕಳು ಒಟ್ಟಾಗಿ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. ಹಲವು ತಲೆಮಾರುಗಳ ನಂತರ ನಡೆದ ಈ ಧಾರ್ಮಿಕ ಕ್ಷಣ ಗ್ರಾಮದಲ್ಲಿ ಭಾವನಾತ್ಮಕ ವಾತಾವರಣ ನಿರ್ಮಿಸಿತು.

ಈ ಸಂದರ್ಭದಲ್ಲಿ ಇತರ ಸಮುದಾಯದ ಗ್ರಾಮಸ್ಥರು ಭಾಗವಹಿಸಿ ದಲಿತ ಸಮುದಾಯದವರು ಒಂದಿಗೆ ಪರಸ್ಪರ ಶುಭಾಶಯಗಳು ವಿನಿಮಯ ಮಾಡಿಕೊಂಡರು. ಎಲ್ಲರೂ ಒಟ್ಟಾಗಿ ದೇವಸ್ಥಾನದಲ್ಲಿ ಶಾಂತಿಯುತವಾಗಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಸಹ ಬಾಳ್ವೆ ಮತ್ತು ಸೌಹಾರ್ದತೆಯ ಸಂದೇಶ ನೀಡಿತು.

ಯಾವುದೇ ಕಹಿತಕರ ಘಟನೆಗಳಿಲ್ಲದೆ ನಡೆದ ಈ ಕಾರ್ಯಕ್ರಮ ಗ್ರಾಮದಲ್ಲಿ ಸಾಮಾಜಿಕ ಏಕತೆಗೆ ಉದಾಹರಣೆಯಾಗಿ ಗಮನ ಸೆಳೆಯುತ್ತಿದೆ.

ಶತಮಾನಗಳ ಬಳಿಕ ದಲಿತರ ದೇವಸ್ಥಾನ ಪ್ರವೇಶ ಶಾಂತಿಯುತವಾಗಿ ಪೂರ್ಣ ; ಠಾಣಾಧಿಕಾರಿಯಿಂದ ಸ್ಪಷ್ಟನೆ :

ಕಡೂರು ತಾಲೂಕಿನ ನಿಡಘಟ್ಟ ಗ್ರಾಮದಲ್ಲಿ ದಲಿತ ಸಮುದಾಯದವರು ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ಪ್ರವೇಶಿಸಿದ ಐತಿಹಾಸಿಕ ಘಟನೆ ಶಾಂತಿಯುತವಾಗಿ ಹಾಗೂ ಯಾವುದೇ ಅಡೆತಡೆ ಇಲ್ಲದೆ ಪೂರ್ಣಗೊಂಡಿದೆ ಎಂದು ಸಖರಾಯಪಟ್ಟಣ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ.

ಈ ಕುರಿತು ಖಾಸಗಿ ಮಾಧ್ಯಮವೊಂದರಲ್ಲಿ ಮಾತನಾಡಿದ ಠಾಣಾಧಿಕಾರಿ, ಕಳೆದ ನೂರು ವರ್ಷಗಳಿಂದ ಈ ಭಾಗದಲ್ಲಿ ಪ್ರವಾಸಿಸುತ್ತಿರುವ ದಲಿತ ಸಮುದಾಯದವರು ದೇವಸ್ಥಾನ ಪ್ರವೇಶ ಮಾಡಿರಲಿಲ್ಲ ಎಂದು ತಿಳಿಸಿದ್ದಾರೆ. ಆದರೆ ದೇವಸ್ಥಾನ ಪ್ರವೇಶಕ್ಕೆ ಯಾರು ವಿರೋಧ ವ್ಯಕ್ತಪಡಿಸಿಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ದಲಿತ ಸಮುದಾಯದವರು ದೇವಸ್ಥಾನ ಪ್ರವೇಶಿಸುವ ಆಸಕ್ತಿ ವ್ಯಕ್ತಪಡಿಸಿ ತಾಲೂಕು ಕಚೇರಿಗೆ ಮನವಿ ಸಲ್ಲಿಸಿದ್ದರು. ಇದರ ಆಧಾರದ ಮೇಲೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದು, ಕಡೂರು ತಹಸಿಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಯಕ್ರಮದ ವೇಳೆ ನೂರಾರು ದಲಿತರು ಆಂಜನೇಯ ಸ್ವಾಮಿ ದೇವಸ್ಥಾನ ಪ್ರವೇಶಿಸಿ ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮದ ಎಲ್ಲಾ ಸಮುದಾಯದ ಜನರು ಸಹ ಭಾಗವಹಿಸಿ ಸಹಕಾರ ಮತ್ತು ಸಾಥ್ ನೀಡಿದ್ದಾರೆ.

ಇಡೀ ಕಾರ್ಯಕ್ರಮ ಯಾವುದೇ ವಹಿತಕರ ಘಟನೆಗಳಿಲ್ಲದೆ ಶಾಂತಿಯುತವಾಗಿ ನಡೆಯಿದ್ದು, ಗ್ರಾಮದಲ್ಲಿ ಸೌಹಾರ್ದ ಮತ್ತು ಸಾಮಾಜಿಕ ಸಾಮರ್ಥ್ಯಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಹಲೋ ವರ್ಷಗಳಿಂದ ಇದ್ದ ಸಾಮಾಜಿಕ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಬೆಳವಣಿಗೆ ಮಹತ್ವದ ಹೆಜ್ಜೆಯಾಗಿದೆ ಎಂದು ಅಧಿಕಾರಿಗಳು ಹಾಗೂ ಗ್ರಾಮಸ್ಥರು ತಿಳಿಸಿದ್ದಾರೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online