<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ಸತ್ಯನಿಷ್ಠೆ ಮೆರೆದ ಪೌರ ಕಾರ್ಮಿಕರು

ಸತ್ಯನಿಷ್ಠೆ ಮೆರೆದ ಪೌರ ಕಾರ್ಮಿಕರು
Summary: ರಸ್ತೆಯಲ್ಲಿ ಸಿಕ್ಕ ಚಿನ್ನಾಭರಣದ ಚೀಲವನ್ನು ಅದರ ಯಜಮಾನರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಪೌರಕಾರ್ಮಿಕರಿಗೆ ₹ನಾಲ್ಕು ಲಕ್ಷ ಮೌಲ್ಯದ ಚೆಕ್ ವಿತರಿಸಿ ಗೌರವಿಸಲಾಯಿತು.
Belagavi news:
ಪೌರಕಾರ್ಮಿಕರು ರಸ್ತೆಯಲ್ಲಿ ಸಿಕ್ಕ ಚಿನ್ನಾಭರಣದ ಚೀಲವನ್ನು ಹಿಂದಿರುಗಿಸಿರುವುದು ಸತ್ಯನಿಷ್ಠೆ ಮತ್ತು ಮಾನವೀಯತೆ ಸಮಾಜದಲ್ಲಿ ಮೆಚ್ಚುಗೆಗೆ ಪಾತ್ರವಾಗಿದ್ದು ಎಲ್ಲರಿಗೂ ಮಾದರಿಯಾಗಿದೆ.

ಚಿಕ್ಕ ಅಮೂಲ್ಯ ಚಿನ್ನಾಭರಣವನ್ನು ಪಾರ್ಥವಿಲ್ಲದೆ ಯಜಮಾನರಿಗೆ ಹಿಂದಿರುಗಿಸಿರುವ ಈ ಘಟನೆ ಸಾರ್ವಜನಿಕರಲ್ಲಿ ಪ್ರಶಂಸೆಗೆ ಕಾರಣವಾಗಿದೆ. ಪೌರಕಾರ್ಮಿಕನ ಪ್ರಾಮಾಣಿಕತೆಯನ್ನು ಗುರುತಿಸಿ ಗೌರವ ಸಲ್ಲಿಸಿರುವುದು ಉತ್ತಮ ಸಂದೇಶ ನೀಡಿದಂತಾಗಿದೆ.

ಪೌರಕಾರ್ಮಿಕನ ಪ್ರಾಮಾಣಿಕತೆಯನ್ನು ಗುರುತಿಸಿ,ಅವರ ಮಗನ ಚಿಕಿತ್ಸೆಗೆ ಅಗತ್ಯವಿದ್ದ ₹ನಾಲ್ಕು ಲಕ್ಷ ನೆರವು ನೀಡುವ ಮೂಲ ಸಮಾಜ ಮೆಚ್ಚುಗೆ ವ್ಯಕ್ತಪಡಿಸಿದೆ.ರಸ್ತೆಯಲ್ಲಿ ಸಿಕ್ಕ ಅಮೂಲ್ಯ ಚಿನ್ನಾಭರಣವನ್ನು ಅದರ ಯಜಮಾನರಿಗೆ ಹಿಂದಿರುಗಿಸಿ ಸತ್ಯನಿಷ್ಠೆ ಮೆರೆದ ಈ ಪೌರಕಾರ್ಮಿಕನ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ.

ಕಾರ್ಮಿಕನ ಕುಟುಂಬ ಸಂಕಷ್ಟವನ್ನು ಗಮನಿಸಿ ಮಗನ ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡಿರುವುದು ಮಾನವೀಯತೆ ಮತ್ತು ಸಹಾನುಭೂತಿಯ ಉದಾಹರಣೆಯಾಗಿದೆ. ಪ್ರಾಮಾಣಿಕತೆಗೆ ಸಿಕ್ಕ ಈ ಗೌರವ ಸಮಾಜದಲ್ಲಿ ಒಳ್ಳೆಯ ಸಂದೇಶ ನೀಡಿದ್ದು,ತಟ್ಟೆ ನಿಷ್ಠೆ ಮಹತ್ವವನ್ನು ಮತ್ತೊಮ್ಮೆ ಸಾರಿದ್ದಾರೆ.

ರಸ್ತೆಯಲ್ಲಿ ಬಿದ್ದು ಸಿಕ್ಕಿದ್ದ 20 ಪವನ್ ಚಿನ್ನಾಭರಣ ಹಾಗೂ ಒಂದು ಕೆಜಿ ಬೆಳ್ಳಿಯ ವಸ್ತುಗಳಿದ್ದ ಚೀಲವನ್ನುಹಿಂದಿರುಗಿಸಿದ ಪೌರಕಾರ್ಮಿಕನ ಪ್ರಾಮಾಣಿಕತೆ ಮೆಚ್ಚುಗೆಯನ್ನು ಪಡೆದಿದೆ. ತಮಿಳುನಾಡಿನ ತಿರುವರೂರು ಕ್ಷೇತ್ರದ ಶಾಸಕ ಪೂಂಡಿ ಕಲೈವಾಣನ್ ಅವರು ಪೌರಕಾರ್ಮಿಕನಿಗೆ ₹ ನಾಲ್ಕು ಲಕ್ಷ ರೂಪಾಯಿ ಚೆಕ್ ವಿತರಿಸಿ ಗೌರವಿಸಿದ್ದಾರೆ. ಪೌರಕಾರ್ಮಿಕನ ಮಗನ ವೈದ್ಯಕೀಯ ಚಿಕಿತ್ಸೆಗೆ ಅಗತ್ಯವಿದ್ದ ನೆರವನ್ನು ನೀಡುವ ಮೂಲಕ ಅವರ ಸತ್ಯನಿಷ್ಠೆಯನ್ನು ಶ್ಲಾಘಿಸಲಾಗಿದೆ.

ಚಂಗಲ್ ಪಟ್ಟು ಜಿಲ್ಲೆಯ ಗುದ್ವಾಂಚೇರಿಯ ಕುಪ್ಪು ಸಾಮಿ ನಾಯ್ಕರ್ ರಾಧಾಕೃಷ್ಣನ್ ಅವರು ಸಂಬಂಧಿಕರ ಮನೆಯ ಸಮಾರಂಭದಲ್ಲಿ ಭಾಗವಹಿಸಲು ಕುಟುಂಬದೊಂದಿಗೆ ತಿರುವರೂರಿಗೆ ತೆರಳಿದ್ದರು.

ಕಾರ್ಯಕ್ರಮಗಳೆಲ್ಲವೂ ಮುಗಿದ ಬಳಿಕ ಕುಟುಂಬ ಆಟೋರಿಕ್ಷಾ ದಲ್ಲಿ ತಿರುವರೂರು ಹೊಸ ಬಸ್ ನಿಲ್ದಾಣದತ್ತ ಪ್ರಯಾಣಿಸುತ್ತಿದ್ದ ವೇಳೆ ಆಟೋರಿಕ್ಷಾ ದ ಹಿಂದಿನ ಸೀಟಿನಲ್ಲಿ ಇಟ್ಟಿದ್ದ ಚುನಾವರಣದ ಚೀಲ ಆಕಸ್ಮಿಕವಾಗಿ ರಸ್ತೆಗೆ ಬಿದ್ದಿತ್ತು.ಆಟೋದಲ್ಲಿ ಇದ್ದವರಿಗೆ ಈ ವಿಷಯ ಬಹಳ ಹೊತ್ತಿನ ನಂತರ ತಿಳಿದು ಬಂದಿತು.

ಈ ವೇಳೆ ತಿರುವರೂರು ಪುರಸಭೆಯಲ್ಲಿ ಕೆಲಸ ಮಾಡುತ್ತಿದ್ದ ಪೌರಕಾರ್ಮಿಕ ದುರೈ ಅವರಿಗೆ ಕೆಲಸದ ವೇಳೆಯಲ್ಲಿ ಈ ಚೀಲ ಸಿಕ್ಕಿತು.ತೀರದಲ್ಲಿದ್ದ ವಸ್ತುಗಳನ್ನು ಪರಿಶೀಲಿಸಿದಾಗ ಅವು ಬೆಲೆ ಬಾಳುವ ಚಿನ್ನಾಭರಣಗಳು ಮತ್ತು ಬೆಳ್ಳಿಯ ವಸ್ತುಗಳೆಂಬುದು ತಿಳಿದು ಬಂದಿತು.ತಕ್ಷಣವೇ ದುರೈ ಅವರು ಶೀಲವನ್ನು ತಿರುವರೂರು ಪಟ್ಟಣ ಪೊಲೀಸ್ ಠಾಣೆಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಹೀಗೆ ರಸ್ತೆಯಲ್ಲಿ ಸಿಕ್ಕ ಅಮೂಲ್ಯ ಚಿನ್ನಾಭರಣವನ್ನು ಹಿಂತಿರುಗಿಸಿದ ಪೌರಕಾರ್ಮಿಕರೈ ಅವರ ಪ್ರಾಮಾಣಿಕತೆ ಮತ್ತೊಮ್ಮೆ ಮೆಚ್ಚುಗೆ ಪಾತ್ರವಾಗಿದೆ.ಪೊಲೀಸರು ಆಭರಣಗಳ ಮಾಲೀಕರನ್ನು ಮತ್ತೆ ಪತ್ತೆ ಹಚ್ಚಿ ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳನ್ನು ಪರಿಶೀಲಿಸಿ ರಾಧಾಕೃಷ್ಣನ್ ಅವರ ಕುಟುಂಬಕ್ಕೆ ಸುರಕ್ಷಿತವಾಗಿ ಹಿಂದಿರುಗಿಸಿದ್ದರು.ದೊರೈ ಅವರ ಸತ್ಯನಿಷ್ಠೆಯನ್ನು ಮೆಚ್ಚಿದ ಪಟ್ಟಣ ಪೊಲೀಸರು ಶಾಲು ಹಾಗೂ ಹೊಸ ಬಟ್ಟೆ ನೀಡಿ ಸನ್ಮಾನಿಸಿದರು.

ಹೀಗೆ ಇದೆ ವೇಳೆ ದುರೈ ಅವರು ಪೊಲೀಸ್ ಅಧಿಕಾರಿಗಳೊಂದಿಗೆ ತಮ್ಮ ವೈಯಕ್ತಿಕ ಸಂಕಷ್ಟವನ್ನು ಹಂಚಿಕೊಂಡಿದ್ದರು.ಮೂರು ವರ್ಷಗಳ ಹಿಂದೆ ಜ್ಞಾನಗ್ರಹದಲ್ಲಿ ಜಾರಿ ಬಿದ್ದಿದ್ದ ತಮ್ಮ 34 ವರ್ಷದ ಮಗನ ಬೆನ್ನು ಹುರಿಗೆ ಗಂಭೀರ ಗಾಯವಾಗಿದ್ದು,ಅಂದಿನಿಂದ ಹಾಸಿಗೆ ಹಿಡಿದಿದ್ದಾನೆ ಎಂದು ತಿಳಿದಿದ್ದಾರೆ.

ಹಲವು ಕಡೆಗಳಿಂದ ಸಾಲ ಮಾಡಿ ಚಿಕಿತ್ಸೆ ನೀಡಿದರು ಮಗನ ಆರೋಗ್ಯ ಸುಧಾರಿಸಿಲ್ಲ.ವೈದ್ಯರು ಬೆನ್ನು ಮೂಳೆಯ ಶಸ್ತ್ರಚಿಕಿತ್ಸೆಗೆ ಸಲಹೆ ನೀಡಿದ್ದು,ಸುಮಾರು ನಾಲ್ಕು ಲಕ್ಷ ವೆಚ್ಚವಾಗುತ್ತದೆ ಎಂದು ತಿಳಿಸಿದರು.

ಇದಾದ ನಂತರ ದುರೈ ಅವರ ಪ್ರಾಮಾಣಿಕತೆ ಹಾಗೂ ಕುಟುಂಬದ ಸಂಕಷ್ಟವನ್ನು ಗಮನಿಸಿದ ಅಧಿಕಾರಿಗಳು ಈ ವಿಷಯವನ್ನು ತಿರುವರೂರು ಕಲೆಕ್ಟರ್ ನಲ್ಲಿ ನಡೆದ ಸಾರ್ವಜನಿಕ ಕುಂದು ಕೊರತೆ ಪರಿಹಾರ ಸಭೆಯಲ್ಲಿ ಪ್ರಸ್ತಾಪಿಸಿದರು.ಸಭೆಯಲ್ಲಿ ಜಿಲ್ಲಾಧಿಕಾರಿ ಮೋಹನ್ ಚಂದ್ರನ್ ಹಾಗೂ ಶಾಸಕ ಪೂಂಡಿ ಕಲೈವಾಣನ್ ಅವರು ದುರೈ ಅವರನ್ನು ಶಾಲು ಹೊಂದಿಸಿ ಸನ್ಮಾನಿಸಿದರು.

ಹಾಗೆ ಈ ಸಂದರ್ಭದಲ್ಲಿ ಶಾಸಕ ಪೂಂಡಿ ಕಲೈವಾಣನ್ ತಮ್ಮ ವೈಯಕ್ತಿಕ ನಿಧಿಯಿಂದ ದುರೈ ಅವರ ಮಗನ ಶಸ್ತ್ರಚಿಕಿತ್ಸೆ ವೆಚ್ಚ ಬರಿಸಲು ನಾಲ್ಕು ಲಕ್ಷ ರೂಪಾಯಿ ಚೆಕ್ ಹಸ್ತಾಂತರಿಸಿದರು.ಅಗತ್ಯವಿದ್ದರೆ ಮುಂದೆಯೂ ಹೆಚ್ಚಿನ ಸಹಾಯ ನೀಡುವುದಾಗಿ ಭರವಸೆಯನ್ನು ನೀಡಿದರು.

ದುರೈಯವರ ಪ್ರಾಮಾಣಿಕತೆ ಮತ್ತು ಮಾನವೀಯತೆಗೆ ಸಿಕ್ಕ ಈ ಗೌರವ ಸಮಾಜದಲ್ಲಿ ಸತ್ಯ ನಿಷ್ಠೆ ಮಹತ್ವವನ್ನು ಮತ್ತೊಮ್ಮೆ ಸಾರಿದೆ ಎಂದು ಹೇಳಲಾಗುತ್ತದೆ.


ಇನ್ನಷ್ಟು ಓದಿರಿ:
ಮಂಗಳವಾರ ಪಂಚಾಂಗ ರಾಶಿ ಭವಿಷ್ಯ: ಇಂದು ನಿಮ್ಮ ದಿನ ಹೇಗಿರಲಿದೆ? 12 ರಾಶಿಗಳ ಸಂಪೂರ್ಣ ಭವಿಷ್ಯ
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online