<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ಆನೇಕಲ್ ಭೀಕರ ಘಟನೆ: ಕೆರೆಯಂಗಳದಲ್ಲಿ ಮಹಿಳೆಯ ತಲೆಬುರಡೆ, ಮೂಳೆಗಳು ಪತ್ತೆ ಪ್ರಕರಣ!

ಆನೇಕಲ್ ಭೀಕರ ಘಟನೆ: ಕೆರೆಯಂಗಳದಲ್ಲಿ ಮಹಿಳೆಯ ತಲೆಬುರಡೆ, ಮೂಳೆಗಳು ಪತ್ತೆ ಪ್ರಕರಣ!
Summary: A horrific incident has come to light in Anekal. The discovery of a woman's skull and bones in Kereangala has caused panic among the locals. As soon as the matter came to light, the police visited the spot and started investigating. An investigation has been started into the identity of the deceased woman and the cause of death.

Belagavi news:

ಆನೇಕಲ್ ನಲ್ಲಿ ಆತಂಕಕಾರಿ ಪತ್ತೆ: ಮುಗಳೂರು ಕೆರೆಯಲ್ಲಿ ಮನುಷ್ಯನ ತಲೆ ಬುರುಡೆ ಮತ್ತು ಮೂಳೆಗಳು ಪತ್ತೆ.

ಆನೇಕಲ್, ಬೆಂಗಳೂರು: ಸರ್ಜಾಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಮುಗಳೂರು ಕೆರೆಯಲ್ಲಿ ಮನುಷ್ಯನ ತಲೆ ಬುರುಡೆ ಹಾಗೂ ಮೂಳೆಗಳು ಪತ್ತೆಯಾಗಿರುವ ಘಟನೆ ಆತಂಕ ಮೂಡಿಸಿದೆ.

ಶುಕ್ರವಾರ ಕುರಿಗಾಹಿಗಳು ಕೆರೆಯ ಅಂಗಳದಲ್ಲಿ ಕುರಿಗಳನ್ನು ಮೇಯಿಸುತ್ತಿದ್ದ ವೇಳೆ ಈ ಮುಳ್ಳುಗಳು ಗಮನಕ್ಕೆ ಬಂದಿದ್ದು ತಕ್ಷಣವೇ ಅವರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಚಲ್ಲಾಪಿಲ್ಲಿಯಾದ ಪ್ರೀತಿಯಲ್ಲಿ ಮೂಲೆಗಳು ಹಾಗೂ ತಲೆ ಬುರುಡೆ ಬಿದ್ದಿರುವುದು ಕಂಡು ಬಂದಿದೆ . ನಾಯಿಗಳು ಎಳೆದಾಡಿರುವ ಸಾಧ್ಯತೆಯೂ ಇದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಅಡಿಷನಲ್ ಎಸ್ ಪಿ ವೆಂಕಟೇಶ್ ಪ್ರಸನ್ನ ಅವರು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ಆರಂಭಿಸಿದ್ದು, ಮೃತದೇಹದ ಗುರುತು ಹಾಗೂ ಸಾವಿನ ಕಾರಣ ಪತ್ತೆಹಚ್ಚಲು ಮುಂದಾಗಿದ್ದಾರೆ.

ಸ್ಥಳದಲ್ಲಿ ಮಹಿಳೆಯ ಸೀರೆ ಹಾಗೂ ಇತರ ಬಟ್ಟೆಗಳು ಪತ್ತೆಯಾಗಿರುವುದರಿಂದ ಇದು ಮಹಿಳೆಯ ಶವವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಸೋಕೋ (SOCO) ತಂಡ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದು, ಪತ್ತೆಯಾದ ತಲೆ ಬುರುಡೆ ಮತ್ತು ಮೂಳೆಗಳ ವೈಜ್ಞಾನಿಕ ವಿಶ್ಲೇಷಣೆಯಲ್ಲಿ ತೊಡಗಿದೆ ಎಂದು ಪೊಲೀಸ ಮೂಲಗಳು ತಿಳಿಸಿವೆ. ಮೃತರ ಗುರುತು ಪತ್ತೆ ಹಾಗೂ ಸಾವಿನ ನಿಖರ ಕಾರಣ ತಿಳಿಯಲು ಮುಂದಿನ ತನಿಖೆ ಮುಂದುವರಿದಿದೆ.

ಡಿವೈಎಸ್ಪಿ ಗೋಪಾಲ್ ನಾಯಕ್ ಹಾಗೂ ನೂತನ ಸರ್ಜಾಪುರ್ ಪಿ ಐ ಮಹೇಂದ್ರ ಕುಮಾರ್ ಅವರು ತಮ್ಮ ಸಿಬ್ಬಂದಿ ಜೊತೆ ಘಟನೆ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Also Read:

ಭದ್ರತಾ ಪ್ರಕರಣದಲ್ಲಿ ಶಾಕಿಂಗ್ ಟ್ವಿಸ್ಟ್: ಮೋದಿ ಸಾಗುವ ಮಾರ್ಗದಲ್ಲಿ ಸ್ಪೋಟಕ ಪತ್ತೆ, ತನಿಖೆ ವಿವರಗಳು ಬಹಿರಂಗ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online