ಪಿಸ್ತಾ ಸೇವನೆ ಮಾಡುವ ಅಭ್ಯಾಸ ನಿಮಗಿದ್ಯಾ ಪ್ರತಿದಿನ ಎಷ್ಟು ತಿನ್ನುವುದು ಒಳ್ಳೆಯದು
ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ಜಾಗರೂಕರಾಗಿರುವುದು ಬಹಳ ಮುಖ್ಯ. ಅದರಲ್ಲಿಯೂ ಸಾಧ್ಯವಾದಷ್ಟು ಆರೋಗ್ಯಕರ ಆಹಾರವನ್ನು ಸೇವಿಸಿ, ಇದು ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಈ ಋತುವಿನಲ್ಲಿ, ಕಡಲೆಕಾಯಿ ಮತ್ತು ಬಾದಾಮಿಯಂತೆಯೇ ಪಿಸ್ತಾಗಳ ಸೇವನೆ ಕೂಡ ಬಹಳ ಪ್ರಯೋಜನಕಾರಿ. ಆದರೆ ಅನೇಕರಿಗೆ ಪಿಸ್ತಾ ಇಷ್ಟವಾಗುವುದಿಲ್ಲ. ಅದರಲ್ಲಿಯೂ ಪಿಸ್ತಾ ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ ಎಂದು ಕೆಲವರು ಭಾವಿಸುತ್ತಾರೆ. ಅದಕ್ಕಾಗಿಯೇ ಪಿಸ್ತಾ ಸೇವನೆಯನ್ನು ಕಡಿಮೆ ಮಾಡುತ್ತಾರೆ. ಆದರೆ ಇದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ದಿನಕ್ಕೆ ಎಷ್ಟು ಪಿಸ್ತಾ ತಿನ್ನಬೇಕು, ಯಾವ ಸಮಯದಲ್ಲಿ ತಿನ್ನಬೇಕು, ಇದು ಯಾರಿಗೆ ಒಳ್ಳೆಯದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ನಿಮಗೂ ತಿಳಿದಿರಬಹುದು ಈ ಸಮಯದಲ್ಲಿ ಆರೋಗ್ಯ ಸಂಬಂಧಿತ ಸಮಸ್ಯೆಗಳು ಹೆಚ್ಚಾಗಿ ಕಂಡುಬರುವುದರಿಂದ ಆದಷ್ಟು ಜಾಗೃತೆ ವಹಿಸಬೇಕಾಗುತ್ತದೆ. ಅದರಲ್ಲಿಯೂ ಆಹಾರದ ಬಗ್ಗೆ ಗಮನ ಹರಿಸುವುದು ಅನಿವಾರ್ಯ. ಅದಕ್ಕಾಗಿಯೇ ಆರೋಗ್ಯ ತಜ್ಞರು ಚಳಿಗಾಲದಲ್ಲಿ ಸಾಧ್ಯವಾದಷ್ಟು ಆರೋಗ್ಯಕರ ಆಹಾರವನ್ನು ಸೇವಿಸಿ ಎಂದು ಹೇಳುತ್ತಾರೆ. ಏಕೆಂದರೆ ಈ ಅಭ್ಯಾಸ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಅದರಲ್ಲಿಯೂ ಈ ಋತುವಿನಲ್ಲಿ, ಕಡಲೆಕಾಯಿ, ಹೆಸರು ಬೇಳೆ ಮತ್ತು ಬಾದಾಮಿ (Almonds) ಅಂತೆಯೇ ಪಿಸ್ತಾಗಳ ಸೇವನೆ ಕೂಡ ಬಹಳ ಪ್ರಯೋಜನಕಾರಿ. ಇವು ಕೂಡ ಆರೋಗ್ಯಕ್ಕೆ ಒಳ್ಳೆಯದು. ಆದರೆ ಅನೇಕರಿಗೆ ಪಿಸ್ತಾ (Pistachios) ಇಷ್ಟವಾಗುವುದಿಲ್ಲ. ಅದರಲ್ಲಿಯೂ ಪಿಸ್ತಾ ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ ಎಂದು ಕೆಲವರು ಭಾವಿಸುತ್ತಾರೆ. ಅದಕ್ಕಾಗಿಯೇ ಪಿಸ್ತಾ ಸೇವನೆಯನ್ನು ಕಡಿಮೆ ಮಾಡುತ್ತಾರೆ. ಆದರೆ ಇದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ದಿನಕ್ಕೆ ಎಷ್ಟು ಪಿಸ್ತಾ ತಿನ್ನಬೇಕು, ಯಾವ ಸಮಯದಲ್ಲಿ ತಿನ್ನಬೇಕು, ಇದು ಯಾರಿಗೆ ಒಳ್ಳೆಯದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಯಾವ ಸಮಯದಲ್ಲಿ ಸೇವನೆ ಮಾಡುವುದು ಒಳ್ಳೆಯದು:
ಸಾಮಾನ್ಯವಾಗಿ ಪಿಸ್ತಾ ಬಾಯಿಯ ರುಚಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಹಾಗಾಗಿ ಕೆಲವೊಮ್ಮೆ ಇದರ ಸೇವನೆ ಮಿತಿ ಮೀರುತ್ತದೆ. ಆದರೆ ಇದನ್ನು ಯಾವಾಗಲೂ ಮಿತವಾಗಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲಿಯೂ ಬೆಳಗ್ಗಿನ ಸಮಯದಲ್ಲಿ ಪಿಸ್ತಾ ತಿನ್ನುವುದು ವಿಶೇಷವಾಗಿ ಒಳ್ಳೆಯದು. ಮಧ್ಯಾಹ್ನ ಅಥವಾ ಸಂಜೆ ತಿನ್ನುವುದಕ್ಕಿಂತ ಬೆಳಿಗ್ಗೆ ಅವುಗಳನ್ನು ತಿನ್ನುವುದರಿಂದ ಪ್ರಯೋಜನ ಹೆಚ್ಚು ಸಿಗುತ್ತದೆ.
ಪಿಸ್ತಾಗಳ ಸೇವನೆಯಿಂದ ಸಿಗುವ ಪ್ರಯೋಜನಗಳು:
ಡ್ರೈ ಫ್ರೂಟ್ಸ್ ಗಳ ಸಾಲಿಗೆ ಸೇರಿದ ಪಿಸ್ತಾ ಕೇವಲ ಪೌಷ್ಟಿಕಾಂಶಗಳನ್ನು ಒಳಗೊಂಡಿರುವುದು ಮಾತ್ರವಲ್ಲದೆ ಅತಿಯಾದ ನಾರಿನ ಅಂಶ ಮತ್ತು ಪ್ರೋಟಿನ್ ಅಂಶಗಳಿಂದಲೂ ಸಮೃದ್ಧವಾಗಿರುತ್ತದೆ. ಇದರ ಸೇವನೆ ಹಸಿವನ್ನು ಕಡಿಮೆ ಮಾಡಿ ಬೇರೆ ಆಹಾರಗಳನ್ನು ಮಿತ ಪ್ರಮಾಣದಲ್ಲಿ ಸೇವಿಸುವಂತೆ ಮಾಡುತ್ತವೆ. ಜೊತೆಗೆ ಒಂದೇ ರೀತಿಯ ಆರೋಗ್ಯಕರ ತೂಕ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಮಾತ್ರವಲ್ಲ, ಪಿಸ್ತಾದಲ್ಲಿ ಮೋನೋ ಅನ್ ಸ್ಯಾಚುರೇಟೆಡ್ ಫ್ಯಾಟಿ ಆಸಿಡ್ ಅಂಶಗಳು ಹೆಚ್ಚಾಗಿ ಕಂಡುಬರುತ್ತದೆ. ಇದು ದೇಹದ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡಿ ದೇಹದ ಉರಿಯೂತದ ಸಮಸ್ಯೆಯನ್ನು ನಿವಾರಣೆ ಮಾಡಲು ಸಹಾಯ ಮಾಡುತ್ತದೆ
ಪಿಸ್ತಾ ಅತಿಯಾದ ಸೇವನೆಯಿಂದ ಉಂಟಾಗುವ ತೊಂದರೆಗಳು?
ಸಾಮಾನ್ಯವಾಗಿ ನಿಯಮಿತವಾಗಿ ಪಿಸ್ತಾ ತಿನ್ನುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಆರೋಗ್ಯ ತಜ್ಞರು ಅವುಗಳನ್ನು ಅತಿಯಾಗಿ ತಿನ್ನಬಾರದು ಎಂದು ಎಚ್ಚರಿಸುತ್ತಾರೆ. ಏಕೆಂದರೆ ಹೆಚ್ಚು ಪಿಸ್ತಾ ಸೇವಿಸುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಅದಕ್ಕಾಗಿಯೇ ಪ್ರತಿದಿನ ಬೆಳಿಗ್ಗೆ ಐದರಿಂದ ಏಳು ಪಿಸ್ತಾ ತಿನ್ನುವುದು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಆದರೆ, ಏಳಕ್ಕಿಂತ ಹೆಚ್ಚು ಪಿಸ್ತಾ ತಿನ್ನುವುದು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ. ದಿನಕ್ಕೆ ಏಳು ಪಿಸ್ತಾಗಳಿಗಿಂತ ಹೆಚ್ಚು ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ. ವಿಶೇಷವಾಗಿ ನಾನಾ ರೀತಿಯ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಪಿಸ್ತಾ ತಿನ್ನುವುದನ್ನು ತಪ್ಪಿಸಬೇಕು.
ಇನ್ನಷ್ಟು ಓದಿರಿ:
IPL 2026: ಕೇವಲ 31 OP ಸ್ಲಾಟ್ಹ ರಾಜಿನಲ್ಲಿ ಎಷ್ಟು ಆಟಗಾರರಿಗೆ ಸಿಗಲಿದೆ ಚಾನ್ಸ್