Belagavi News:
ರಾಜ್ಯದ ಸಾರಿಗೆ ಪ್ರಯಾಣಿಕರಿಗೆ ಮತ್ತೊಂದು ಶಾಕ್ ಎದುರಾಗುವ ಸಾಧ್ಯತೆ ಇದೆ. ಡಿಸೈನ್ ದರ ಏರಿಕೆಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಈಶಾನ್ ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ಟಿಕೆಟ್ ದರವನ್ನು ಕನಿಷ್ಟ ಶೇಕಡಾ 25ರಷ್ಟು ಹೆಚ್ಚಿಸಲು ಮುಖ್ಯಮಂತ್ರಿ ಅವರ ಬಳಿ ಮನವಿ ಸಲ್ಲಿಸಿದೆ.
ಜಾಗತಿಕ ಸಂಘರ್ಷಗಳ ಪರಿಣಾಮ ದೇಶದಲ್ಲಿ ಡಿಸೈನ್ ದರ ಪ್ರತಿ ಲೀಟರ್ಗೆ ಸುಮಾರು 8 ರೂಪಾಯಿ ಎಷ್ಟು ಹೆಚ್ಚಳವಾಗಿದ್ದು, ಇದರ ನೇರ ಹೊರೆ ಸಾರಿಗೆ ನಿಗಮಗಳ ಮೇಲೆ ಬಿದ್ದಿದೆ. ಈಗಾಗಲೇ ನಿರ್ವಹಣಾ ವೆಚ್ಚ, ಇಂಧನ ವೆಚ್ಚ ಮತ್ತು ಸಿಬ್ಬಂದಿ ವೆಚ್ಚಗಳು ಹೆಚ್ಚಾಗಿರುವ ಕಾರಣ ನಾಲ್ಕು ಸಾರಿಗೆ ನಿಗಮಗಳು ತೀವ್ರ ಆರ್ಥಿಕ ನಷ್ಟ ಅನುಭವಿಸುತ್ತಿವೆ.
ಕಳೆದ ವರ್ಷ ಜನವರಿಯಲ್ಲಿ ರಾಜ್ಯ ಸರ್ಕಾರ ಬಸ್ ಟಿಕೆಟ್ ದರವನ್ನು ಶೇಕಡಾ 15 ರಷ್ಟು ಹೆಚ್ಚಿಸಿತ್ತು. ಇದೀಗ ಮತ್ತೆ ಶೇಕಡಾ 25ರಷ್ಟು ದರ ಏರಿಕೆ ಪ್ರಸ್ತಾವನೆ ಮುಂದಿಟ್ಟಿರುವುದು ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ದಿನನಿತ್ಯ ಬಸ್ ಪ್ರಯಾಣದ ಮೇಲೆ ಅವಲಂಬಿತರಾಗಿರುವ ವಿದ್ಯಾರ್ಥಿಗಳು, ಕಾರ್ಮಿಕರು ಮತ್ತು ಉದ್ಯೋಗಿಗಳು ಈ ನಿರ್ಧಾರದಿಂದ ಹೆಚ್ಚುವರಿ ಆರ್ಥಿಕ ಹೊರೆ ಎದುರಿಸುವ ಸಾಧ್ಯತೆ ಇದೆ.
ಸಾರಿಗೆ ನಿಗಮಗಳ ಮನವಿಗೆ ಸರ್ಕಾರ ಯಾವ ರೀತಿಯ ಪ್ರತಿಕ್ರಿಯೆ ನೀಡಲಿದೆ ಎಂಬುವುದರ ಬಗ್ಗೆ ಕುತೂಹಲ ಮೂಡಿದ್ದು, ಬಸ್ ಟಿಕೆಟ್ ದರ ಏರಿಕೆಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
KSRTC - BMTC ಬಸ್ ದರ ಏರಿಕೆ ಅನಿವಾರ್ಯ ? 4 ಸಾರಿ ನಿಗಮಗಳಿಗೆ ವರ್ಷಕ್ಕೆ 480 ಕೋಟಿ ರೂ. ನಷ್ಟದ ಭೀತಿ:
ಡಿಸೈನ್ ದರ ನಿರಂತರ ಏರಿಕೆಯಿಂದ ಕರ್ನಾಟಕದ ನಾಲ್ಕು ಸಾರಿಗೆ ನಿಗಮಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. KSRTC, BMTC, NWKRTC, KKRTC ಪ್ರತಿ ತಿಂಗಳು ಸುಮಾರು 40 ಕೋಟಿ ರೂಪಾಯಿಗಳ ಹೆಚ್ಚುವರಿ ನಷ್ಟ ಅನುಭವಿಸುತ್ತಿದ್ದು, ವಾರ್ಷಿಕವಾಗಿ ಈ ನಷ್ಟ 480 ಕೋಟಿ ರೂಪಾಯಿಗೆ ತಲುಪುವ ಆತಂಕ ಎದುರಾಗಿದೆ.
ಈ ಹಿನ್ನೆಲೆ ಬಸ್ ಸೇವೆಗಳನ್ನು ನಿರ್ವಹಿಸುವುದು ಕಷ್ಟಕರವಾಗಿರುವುದರಿಂದ, ಟಿಕೆಟ್ ದರವನ್ನು ಕನಿಷ್ಠ ಶೇ.25ರಷ್ಟು ಹೆಚ್ಚಿಸಲು ನಾಲ್ಕು ನಿಗಮಗಳು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿವೆ. ಡಿಸೈನ್ ದ ರಾ ಏರಿಕೆಯ ಪರಿಣಾಮವನ್ನು ಸರಿದೂಗಿಸಲು ದರ ಏರಿಕೆ ಅನಿವಾರ್ಯವಾಗಿದೆ ಎಂದು ಸಾರಿಗೆ ಅಧಿಕಾರಿಗಳು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಆದರೆ, ಈ ಪ್ರಸ್ತಾವನೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಕಳೆದ ವರ್ಷ ಜನವರಿಯಲ್ಲಿ ಶೇ.15 ರಷ್ಟು ಟಿಕೆಟ್ ದರ ಹೆಚ್ಚಳ ಮಾಡಿದ್ದರೂ, ಇದೀಗ ಮತ್ತೆ ಶೇ. 25 ರಷ್ಟು ದರ ಏರಿಕೆಗೆ ಮುಂದಾಗಿರುವುದಕ್ಕೆ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ದಿನನಿತ್ಯ ಬಸ್ ಪ್ರಯಾಣದ ಮೇಲೆ ಅವಲಂಬಿತರಾಗಿರುವ ಲಕ್ಷಾಂತರ ಜನರಿಗೆ ಇದು ಹೆಚ್ಚುವರಿ ಆರ್ಥಿಕ ಹೊರೆಯಾಗಲಿದೆ ಎನ್ನಲಾಗಿದೆ.
KSRTC - BMTC ಗೆ ಆರ್ಥಿಕ ಸಂಕಷ್ಟದ ಬರೆ - ₹821 ಕೋಟಿ ವೇತನ ಬಾಕಿ, ಶಕ್ತಿ ಯೋಜನೆಯ ಅನುದಾನ ₹ 5,000 ಕೋಟಿ ಬಾಕಿ! :
ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ಗಂಭೀರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿವೆ. ಡಿಸೈನ್ ತರ ಏರಿಕೆಯ ಹೊರೆ ಮಾತ್ರವಲ್ಲದೆ, ನೌಕರರ ವೇತನ ಬಾಕಿ ಹಾಗೂ ಶಕ್ತಿ ಯೋಜನೆಯ ಅನುದಾನ ಬಾಕಿಯೂ ನಿಗಮಗಳ ಮೇಲೆ ಭಾರಿ ಒತ್ತಡ ತಂದಿದೆ.
ಜುಲೈ ತಿಂಗಳಿನಿಂದ ಸಾರಿಗೆ ನೌಕರರಿಗೆ ಶೇ. 12.5 ರಷ್ಟು ವೇತನ ಹೆಚ್ಚಳ ಜಾರಿಯಾಗಲಿದ್ದು, ಇದಕ್ಕಾಗಿ ಹೆಚ್ಚುವರಿ ಹಣಕಾಸಿನ ಅಗತ್ಯವಿದೆ. ಅಲ್ಲದೆ , ನೌಕರರಿಗೆ ನೀಡಬೇಕಿರುವ ಒಟ್ಟು ₹ 1,271 ಕೋಟಿ ವೇತನ ಹಿಂಬಾಕಿಯಲ್ಲಿ ಇದುವರೆಗೆ ಕೇವಲ ₹ 450 ಕೋಟಿ ಮಾತ್ರ ಬಿಡುಗಡೆಯಾಗಿದ್ದು, ಇನ್ನು ₹821 ಕೋಟಿ ಪಾವತಿಸಬೇಕಿದೆ.
ಇದರ ಜೊತೆಗೆ, ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಜಾರಿಗೊಂಡಿರುವ ಶಕ್ತಿ ಯೋಜನೆಯಡಿ ರಾಜ್ಯ ಸರ್ಕಾರದಿಂದ ಸಾರಿಗೆ ನಿಗಮಗಳಿಗೆ ಬಿಡುಗಡೆಯಾಗಬೇಕಿರುವ ಸುಮಾರು ₹5,000 ಕೋಟಿ ಅನುದಾನ ಇನ್ನೂ ಬಾಕಿಯಾಗಿದೆ. ಈ ಕಾರಣದಿಂದ ನಿಗಮಗಳ ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾರಿಗೆ ನಿಗಮಗಳ ಪ್ರಕಾರ, ಡಿಸೈನ್ ದರ ಏರಿಕೆ, ವೇತನ ಪರಿಷ್ಕರಣೆ, ಬಾಕಿ ವೇತನ ಪಾವತಿ ಹಾಗೂ ಶಕ್ತಿ ಯೋಜನೆಯ ಅನುದಾನ ವಿಳಂಬ ಸೇರಿದಂತೆ ಹಲವು ಕಾರಣಗಳಿಂದ ಆದಾಯ - ವೆಚ್ಚದ ಸಮತೋಲನ ಕಾಪಾಡಿಕೊಳ್ಳುವುದು ಕಷ್ಟಕರವಾಗಿದೆ. ಹೀಗಾಗಿ ಬಸ್ ಟಿಕೆಟ್ ದರವನ್ನು ಕನಿಷ್ಠ ಶೇ. 25 ರಷ್ಟು ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಸರ್ಕಾರದ ಮುಂದೆ ಮನವಿ ಮಾಡಲಾಗಿದೆ.
ಬಸ್ ದರ ಏರಿಕೆಗೆ ಸಾರ್ವಜನಿಕರ ವಿರೋಧ - ಶಕ್ತಿ ಯೋಜನೆ ಬದಲಾವಣೆಗೆ ಸಲಹೆ :
ರಾಜ್ಯ ಸರ್ಕಾರ ನಿಗಮಗಳ ಬಸ್ ಟಿಕೆಟ್ ದರವನ್ನು ಶೇ.25 ರಷ್ಟು ಹೆಚ್ಚಿಸಲು ಸರ್ಕಾರದ ಮುಂದೆ ಮನವಿ ಸಲ್ಲಿಸಿರುವ ಬೆನ್ನಲ್ಲೇ ಪ್ರಯಾಣಿಕರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಕಳೆದ ವರ್ಷವೇ ಬಸ್ ದರವನ್ನು ಶೇ.15 ರಷ್ಟು ಹೆಚ್ಚಿಸಲಾಗಿತ್ತು. ಇದೀಗ ಮತ್ತೆ ತರ ಏರಿಕೆಗೆ ಮುಂದಾಗಿರುವುದು ಸಾಮಾನ್ಯ ಜನರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಪ್ರತಿದಿನ ಬಸ್ ಪ್ರಯಾಣವನ್ನು ಅವಲಂಬಿಸಿರುವ ವಿದ್ಯಾರ್ಥಿಗಳು, ಉದ್ಯೋಗಿಗಳು ಕಾರ್ಮಿಕರು ಹಾಗೂ ಮಧ್ಯಮ ವರ್ಗದ ಜನರು ಸರ್ಕಾರದ ಈ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಸಂಕಷ್ಟದಲ್ಲಿದ್ದು, ಮತ್ತೊಮ್ಮೆ ಬಸ್ ದರ ಹೆಚ್ಚಳ ಮಾಡುವುದು ಸರಿಯಾದ ಕ್ರಮವಲ್ಲ ಎಂದು ಪ್ರಯಾಣಿಕರು ಅಭಿಪ್ರಾಯ ಪಟ್ಟಿದ್ದಾರೆ.
ಇದೇ ವೇಳೆ ಕೇವಲ ಪ್ರಯಾಣಿಕರು ಸರ್ಕಾರಕ್ಕೆ ಪರ್ಯಾಯ ಸಲಹೆಯನ್ನು ನೀಡಿದ್ದಾರೆ. ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿರುವ ಶಕ್ತಿ ಯೋಜನೆ ಅಡಿ ಸಂಪೂರ್ಣ ಉಚಿತ ಸೇವೆ ನೀಡುವ ಬದಲು, ಕನಿಷ್ಠ ಅರ್ಧದಷ್ಟು ಟಿಕೆಟ್ ದರವನ್ನು ವಸೂಲಿ ಮಾಡಿದರೆ ಸಾರಿಗೆ ನಿಗಮಗಳ ಆರ್ಥಿಕ ಹೊರೆ ಕಡಿಮೆಯಾಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಾರಿಗೆ ನಿಗಮಗಳ ಪ್ರಕಾರ, ಡಿಸೈನ್ ದರ ಏರಿಕೆ ನೌಕರರ ವೇತನ ಹೆಚ್ಚಳ, ಬಾಕಿ ವೇತನ ಪಾವತಿ ಹಾಗೂ ಶಕ್ತಿ ಯೋಜನೆ ಅನುದಾನ ವಿಳಂಬ ದಿಂದ ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿದೆ. ಟಿಕೆಟ್ ದರ ಹೆಚ್ಚಳ ಅನಿವಾರ್ಯವಾಗಿದೆ ಎಂದು ನಿಗಮಗಳು ವಾದಿಸುತ್ತಿವೆ.
Also Read:
ಜಗನ್ನಾಥ ಮಂದಿರ ಪ್ರವೇಶ ವೇಳೆ ಅನುಮಾನಾಸ್ಪದ ವರ್ತನೆ;ನಕಲಿ ಸೇನಾ ಉಡುಪಿನಲ್ಲಿ ನುಗ್ಗಿದ ವ್ಯಕ್ತಿ ವಶಕ್ಕೆ