<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Sports

IND vs AFG: ವಿರಾಟ್ ಬಳಿಕ 3ನೇ ಸ್ಥಾನದಲ್ಲಿ ಯಾರು? ಐಪಿಎಲ್ ಸ್ಟಾರ್ ಗೆ ಚಾನ್ಸ್

IND vs AFG: ವಿರಾಟ್ ಬಳಿಕ 3ನೇ ಸ್ಥಾನದಲ್ಲಿ ಯಾರು? ಐಪಿಎಲ್ ಸ್ಟಾರ್ ಗೆ ಚಾನ್ಸ್
Summary: There is a lot of curiosity about who will bat at number 3 after Virat Kohli in the IND vs AFG one-off Test match. There is a possibility of a chance for the young star who shone in the IPL, and there is a lot of discussion about India's possible playing XI.

Balagavi News:

ಭಾರತೀಯ ಕ್ರಿಕೆಟ್ ತಂಡ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಸಜ್ಜಾಗಿದ್ದು. ಪಂದ್ಯಕ್ಕೂ ಮುನ್ನ ಮುಖ್ಯ ಕೋಚ್ ಗೌತಮ್ ಗಂಭೀರ ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ. ವಿಶ್ವಾ ಟೆಸ್ಟ್ ಚಾಂಪಿಯನ್ ಶಿಪ್ ನ ಭಾಗವಾಗದಿದ್ದರೂ, ಈ ಪಂದ್ಯವು ಟೀಮ ಇಂಡಿಯಾದ ಭವಿಷ್ಯದ ಯೋಜನೆಗಳು ಮತ್ತು ತಂಡದ ಸಂಯೋಜನೆಗೆ ಪ್ರಮುಖವಾಗಲಿದೆ ಎಂದು ಅವರು ಹೇಳಿದ್ದಾರೆ.

ಪಂದ್ಯದ ಪೂರ್ವಭಾವಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಂಭೀರ್, ವಿಕೆಟ್ ಕೀಪರ್-ಬ್ಯಾಟಿಂಗ್ ರಿಷಬ್ ಪಂತ್ ಅವರ ಆಟದ ಶೈಲಿ ಕುರಿತು ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದರು. "ರಿಷಬ್ ಪಂತ್ ತಮ್ಮ ನೈಸರ್ಗಿಕ ಹಾಗೂ ಆಕ್ರಮಣಕಾರಿ ಆಟವನ್ನು ಮುಂದುವರಿಸಬೇಕು. ಅವರು ತಮ್ಮ ಬ್ಯಾಟಿಂಗ್ ಶೈಲಿಯನ್ನು ಬದಲಾಯಿಸಿಕೊಳ್ಳಬೇಕೆಂದು ನಾವು ಬಯಸುವುದಿಲ್ಲ. ಆದರೆ ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ಆಟವನ್ನು ಹೊಂದಿಸಿಕೊಳ್ಳುವುದು ಮುಖ್ಯ. ತಂಡದ ಸಂಪೂರ್ಣ ಬೆಂಬಲ ಅವರಿಗೆ ಇದೆ" ಎಂದು ಹೇಳಿದರು.

ಅಫ್ಘಾನಿಸ್ತಾನ ವಿರುದ್ಧದ ಈ ಟೆಸ್ಟ್ ಪಂದ್ಯವು ಮುಂಬರುವ ಶ್ರೀಲಂಕಾ ಪ್ರವಾಸಕ್ಕೆ ಸಿದ್ಧತೆಯ ಭಾಗವಾಗಿತ್ತು. ಆಗಸ್ಟ್ ನಲ್ಲಿ ನಡೆಯಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ತಂಡದ ಸ್ಪಿನ್ ಬೋಲಿಂಗ್ ಸಂಯೋಜನೆಯನ್ನು ರೂಪಿಸಲು ಸಹಕಾರಿಯಾಗಲಿದೆ ಎಂದು ಗಂಭೀರ್ ತಿಳಿಸಿದ್ದಾರೆ.

Sponsored

ತಂಡದಲ್ಲಿ ನಾಲ್ಕನೇ ಸ್ಪಿನ್ನರ್ ಸ್ಥಾನಕ್ಕಾಗಿ ಪೈಪೋಟಿ ಹೆಚ್ಚಾಗಿದ್ದು, ಎಡಗೈ ಸ್ಪಿನ್ನರ್ ಗಳಾದ ಮಾನವ್ ಸುತಾರ್ ಮತ್ತು ಹರ್ಷ ದುಬೆ ಕುರಿತು ಗಂಭೀರ್ ಮಾತನಾಡಿದರು. "ಇಬ್ಬರು ಒಂದೇ ರೀತಿಯ ಸಾಮರ್ಥ್ಯ ಹೊಂದಿದ್ದರೂ, ಅವರ ಬಾಲಿಂಗ್ ಶೈಲಿಯಲ್ಲಿ ವ್ಯತ್ಯಾಸವಿದೆ. ಈ ಪಂದ್ಯವು ನಾಲ್ಕನೇ ಸ್ಪಿನ್ನರ್ ಯಾರು ಬಂದರನ್ನು ನಿರ್ಧರಿಸಲು ಸಹಾಯ ಮಾಡಲಿದೆ. ಶ್ರೀಲಂಕಾ ಪ್ರವಾಸಕ್ಕೆ ನಾಲ್ವರು ಸ್ಪಿನ್ನರ್ ಗಳ ಅಗತ್ಯವಿರುವುದರಿಂದ ಇದು ನಮಗೆ ಮಹತ್ವದ ಪರೀಕ್ಷೆಯಾಗಿದೆ" ಎಂದು ಹೇಳಿದರು.

ಹೀಗಾಗಿ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯವು ಕೇವಲ ಒಂದು ಪಂದ್ಯವಾಗಿರದೇ. ಟೀಮ್ ಇಂಡಿಯಾದ ಭವಿಷ್ಯದ ಟೆಸ್ಟ್ ಯೋಜನೆಗಳು ಸ್ವಿನ್ ದಾಳಿ ಹಾಗೂ ಯುವ ಆಟಗಾರರ ಸಮರ್ಥ್ಯ ಪರೀಕ್ಷೆಸುವ ವೇದಿಕೆಯಾಗಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಂಭೀರ್, ಸಾಯಿ ಸುದರ್ಶನ್ ಅವರಿಗೆ ಟೆಸ್ಟ್ ಕ್ರಿಕೆಟ್ ನಲ್ಲಿ ಇನ್ನು ಸಾಕಷ್ಟು ಅವಕಾಶ ಸಿಕ್ಕಿಲ್ಲ ಎಂದು ಅಭಿಪ್ರಾಯಪಟ್ಟರು. "ತಾಯಿ ಸುದರ್ಶನ್ ತಮ್ಮ ಹೆಚ್ಚಿನ ಪ್ರಥಮ ದರ್ಜೆ ಹಾಗೂ ಕೌಂಟಿ ಪಂದ್ಯಗಳನ್ನು ಇಂಗ್ಲೆಂಡ್ ನಲ್ಲಿ ಆಡಿದ್ದಾರೆ. ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಅವರಿಗೆ ನ್ಯಾಯಯುತ ಅವಕಾಶ ಸಿಗಬೇಕು. ಕೇವಲ ನಾಲ್ಕು ಅಥವಾ ಐದು ಪಂದ್ಯಗಳ ಆಧಾರದ ಮೇಲೆ ಯಾವುದೇ ಆಟಗಾರನ್ನು ಮೌಲ್ಯಮಾಪನ ಮಾಡಲು ಸಾಧ್ಯವಿಲ್ಲ" ಎಂದು ಹೇಳಿದರು.

ಈ ಹೇಳಿಕೆಯೊಂದಿಗೆ, ದೇವದಾತ್ ಪಡಿಕ್ಕಲ್ ಗಿಂತ ಸಾಯಿ ಸುದರ್ಶನ್ ಗೆ 3ನೇ ಸ್ಥಾನದಲ್ಲಿ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ. ಐಪಿಎಲ್ ಹಾಗೂ ದೇಶೀಯ ಕ್ರಿಕೆಟ್ ನಲ್ಲಿ ಸುದರ್ಶನ್ ಪ್ರದರ್ಶಿಸಿರುವ ಸ್ಥಿರ ಪ್ರದರ್ಶನವು ಅವರ ಆಯ್ಕೆಗೆ ಬಲ ತುಂಬಿದೆ.

Sponsored

ಇದೇ ವೇಳೆ, ಗಂಭೀರ ತಮ್ಮ ದೃಷ್ಟಿ ಕೇವಲ ಅಫ್ಘಾನಿಸ್ತಾನ ಟೆಸ್ಟ್ ಗೆ ಸೀಮಿತವಾಗಿಲ್ಲ ಎಂದು ಸ್ಪಷ್ಟ ಪಡಿಸಿದರು. ಮುಂಬರುವ ನ್ಯೂಜಿಲೆಂಡ್ ಪ್ರವಾಸದ ಕುರಿತು ಮಾತನಾಡಿದ ಅವರು, ಅಲ್ಲಿನ ಪರಿಸ್ಥಿತಿಗಳಿಗೆ ತಕ್ಕಂತೆ ತಂಡವನ್ನು ಸಜ್ಜುಗೊಳಿಸುವುದು ಪ್ರಮುಖ ಗುರಿಯಾಗಿದೆ ಎಂದು ಹೇಳಿದರು.

"ನಾವು ನ್ಯೂಜಿಲ್ಯಾಂಡ್ ಗೆ ತೆರಳಿದಾಗ ಸಂಪೂರ್ಣ ವಿಭಿನ್ನ ರೀತಿಯ ಸವಾಲುಗಳು ಎದುರಾಗುತ್ತವೆ. ಆಸರಣಿಗೆ ಈಗಿ ನಿಂದಲೇ ಸಿದ್ಧತೆ ಆರಂಭಿಸಬೇಕು. ಮುಂಬರುವ ಟೆಸ್ಟ್ ಪಂದ್ಯಗಳಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ತಯಾರಾಗಬೇಕೆಂದು ನಾವು ನಂಬಿದ್ದೇವೆ" ಎಂದು ಗಂಭೀರ್ ಹೇಳಿದರು.

ಭಾರತ್-ಅಫ್ಘಾನಿಸ್ತಾನ ನಡುವಿನ ಏಕೈಕ ಟೆಸ್ಟ್ ಪಂದ್ಯವು ಎಲ್ಲಾ ನ್ ಪೂರದ ಮಹಾರಾಜ ಯದವಂದ್ರ ಸಿಂಗ್ ಅಂತರ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಟೀಮ್ ಇಂಡಿಯಾದ ಭವಿಷ್ಯದ ಯೋಜನೆಗಳು ಹಾಗೂ ಯುವ ಆಟಗಾರರ ಪರೀಕ್ಷೆಗೆ ಮಹತ್ವದ ವೇದಿಕೆಯಾಗಲಿದೆ.

Also Read:

Sponsored

ಯಶ್ - ರಾಧಿಕಾ ದಂಪತಿಯಿಂದ ಮುಂಬೈನಲ್ಲಿ 24 ಕೋಟಿ ರೂ. ಮೌಲ್ಯದ ಆಸ್ತಿ ಖರೀದಿ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online