<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Entertainment

ಯಶ್ - ರಾಧಿಕಾ ದಂಪತಿಯಿಂದ ಮುಂಬೈನಲ್ಲಿ 24 ಕೋಟಿ ರೂ. ಮೌಲ್ಯದ ಆಸ್ತಿ ಖರೀದಿ

ಯಶ್ - ರಾಧಿಕಾ ದಂಪತಿಯಿಂದ ಮುಂಬೈನಲ್ಲಿ 24 ಕೋಟಿ ರೂ. ಮೌಲ್ಯದ ಆಸ್ತಿ ಖರೀದಿ
Summary: Sandalwood star couple Yash and Radhika Pandit have made huge investments in Mumbai. According to reports, the couple has bought a property worth around Rs 24 crore in Mumbai.

Belagavi News:

ಸ್ಯಾಂಡಲ್ ವುಡ್ ನ ಮುದ್ದಾದ ಸ್ಟಾರ್ ದಂಪತಿ ಯಶ್ ಹಾಗ್ ಮತ್ತು ರಾಧಿಕಾ ಪಂಡಿತ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಕನ್ನಡ ಚಿತ್ರರಂಗದ ಈ ಜನಪ್ರಿಯ ಜೋಡಿ ಗಡಿ ಮೀರಿ ತಮ್ಮ ಅಭಿಮಾನಿ ವಲಯವನ್ನು ವಿಸ್ತರಿಸಿಕೊಂಡಿದ್ದು, ಮುಂಬರುವ ದೊಡ್ಡ ಸಿನಿಮಾಗಳ ನಿರೀಕ್ಷೆ ಕೂಡ ಹೆಚ್ಚಾಗಿದೆ. ಯಶ್ ಸದ್ಯ "ರಾಮಾಯಣ" ಮತ್ತು " ಟಾಕ್ಸಿಕ್" ಸೇರಿದಂತೆ ಬಹು ನಿರೀಕ್ಷಿತ ಚಿತ್ರಗಳ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಇದರ ನಡುವೆಯೇ ಸ್ಟಾರ್ ದಂಪತಿ ತಮ್ಮ ಆಸ್ತಿ ಹುಡುಕಿಯಿಂದ ಗಮನ ಸೆಳೆದಿದ್ದಾರೆ. ಇತ್ತೀಚಿಗೆ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಮಹಾರಾಷ್ಟ್ರದ ಅಲಿಬಾಗ್ ನಲ್ಲಿ ಪ್ರೀಮಿಯಂ ಬೀಚ್ ಫ್ರಂಟ್ ಪ್ಲಾಟ್ ಅನ್ನು ಖರೀದಿಸಿದ್ದಾರೆ ಎಂಬ ಮಾಹಿತಿ ಹೊರ ಬಂದಿದೆ.

ವರದಿಗಳ ಪ್ರಕಾರ, ಈ ಆಸ್ತಿಯ ಮೌಲ್ಯ ಸುಮಾರು 24 ಕೋಟಿ ರೂಪಾಯಿ ಎಂದು ತಿಳಿದುಬಂದಿದ್ದು, ಇದು ದಂಪತಿಯ ವೈಯಕ್ತಿಕ ಆಸ್ತಿ ಹೂಡಿಕೆಯಲ್ಲಿ ಮತ್ತೊಂದು ದೊಡ್ಡ ಹೆಜ್ಜೆಯಾಗಿದೆ. ಈ ಸುದ್ದಿ ಈಗ ಅಭಿಮಾನಿಗಳ ನಡುವೆ ಬಾರಿ ಚರ್ಚೆಗೆ ಕಾರಣವಾಗಿದೆ.

Sponsored

ಮಹಾರಾಷ್ಟ್ರದ ಅಲಿಬಾಗ್ ನಲ್ಲಿ ಸೆಲೆಬ್ರಿಟಿಗಳ ಹೂಡಿಕೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ಪವರ್ ಕಪಲ್ ಯಶ್ ಮತ್ತು ರಾಧಿಕಾ ಪಂಡಿತ್ ಕೂಡ ಈ ಪಟ್ಟಿಗೆ ಸೇರಿದ್ದಾರೆ. ಕಿಹಿಮ್ ಬೀಚ್ ಬಳಿ ಇರುವ ಈ ಹೊಸ ಆಸ್ತಿಯೂ ನೇರ ಬೀಚ್ ಪ್ರವೇಶವನ್ನು ಹೊಂದಿರುವ ಪ್ರೀಮಿಯಂ ಪ್ಲಾಟ್ ಆಗಿದೆ ಎಂದು ತಿಳಿದು ಬಂದಿದೆ.

ಅಲಿಬಾಗ್ ಈಗ ಬಾಲಿವುಡ್ ಹಾಗೂ ಕ್ರೀಡಾಸ್ ಕೇತ್ರದ ತಾರಿಯರ ಮೆಚ್ಚಿನ ಐಷಾರಾಮಿ ಕರಾವಳಿ ತಾಣವಾಗಿ ಹೊರಹೊಮ್ಮಿದೆ ಈಗಾಗಲೇ ಶಾರುಖ್ ಖಾನ್, ದೀಪಿಕಾ ಪಡುಕೋಣೆ, ರಣ್ ವೀರ್ ಸಿಂಗ್, ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಸೇರಿದಂತೆ ಹಲವು ದೊಡ್ಡ ಸೆಲೆಬ್ರಿಟಿಗಳು ಇಲ್ಲಿ ಆಸ್ತಿ ಹೂಡಿಕೆ ಮಾಡಿದ್ದಾರೆ.

ಈಗ ಈ ಪಟ್ಟಿಗೆ ಯಶ್ ಮತ್ತು ರಾಧಿಕಾ ಸೇರಿರುವುದು ಗಮನ ಸೆಳೆಯುತ್ತಿದೆ. ಬೆಳ್ಳಿ ಪರದೆ ಮೇಲೆ ತಮ್ಮ ಪ್ರಾಬಲ್ಯವನ್ನು ಮುಂದುವರಿಸುತ್ತಲೇ, ಬುದ್ಧಿವಂತ ಹೂಡಿಕೆಗಳ ಮೂಲಕವೂ ಈ ಸ್ಟಾರ್ ದಂಪತಿ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ.

ಕೆಜಿಎಫ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ಸಿನಿಮಾ "ಟಾಕ್ಸಿಕ್ : ಎ ಫೇರಿ ಟೇಲ್ ಫಾರ್ ಗ್ರೋನ್ - ಅಪ್ಸ್ " ಮತ್ತೆ ಮುಂದೂಡಲ್ಪಟ್ಟಿದೆ. ಈ ಚಿತ್ರವು ಮೊದಲಿನ ಜೂನ್ 4ರಂದು ಬಿಡುಗಡೆಯಾಗಬೇಕಿತ್ತು. ಆದರೆ ಇದೀಗ ಚಿತ್ರ ಬಿಡುಗಡೆ ದಿನಾಂಕವನ್ನು ಮತ್ತೊಮ್ಮೆ ಮರು ನಿಗದಿಪಡಿಸಲಾಗಿದ್ದು ಹೊಸ ದಿನವನ್ನು ಶೀಘ್ರದಲ್ಲಿ ಘೋಷಿಸಲಾಗುತ್ತದೆ ಎಂದು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ತಿಳಿಸಿದ್ದಾರೆ.

Sponsored

ಗೀತು ಮೋಹನ್ ದಾಸ್ ನಿರ್ದೇಶನ ಈ ಸಿನಿಮಾದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ಸೇರಿದಂತೆ ಅನೇಕ ಪ್ರಮುಖ ನಟಿಯರು ಅಭಿನಯಿಸಿದ್ದಾರೆ.

ಯಶ್ ಅವರ ಈ ಚಿತ್ರದಲ್ಲಿ ನಟನೆಯ ಜೊತೆಗೆ ನಿರ್ಮಾಣ ಹಾಗೂ ಕಥಾ ರೂಪನೆಯಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರವನ್ನು ಬಹು ಭಾಷೆಗಳಲ್ಲಿ ಡಬ್ ಮಾಡಲಾಗುತ್ತಿದೆ.

ಬಿಡುಗಡೆ ಮುಂದೂಡಿಕಿಯಾದರೂ " ಟಾಕ್ಸಿಕ್" ಬಗ್ಗೆ ಅಭಿಮಾನಿಗಳ ನಿರೀಕ್ಷೆ ಮಾತ್ರ ಮತ್ತಷ್ಟು ಹೆಚ್ಚಾಗಿದೆ. ಹೊಸ ದಿನಾಂಕಕ್ಕಾಗಿ ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.

2026ರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ 'ರಾಮಾಯಣ' ಚಿತ್ರದಲ್ಲಿ 'ಕೆಜಿಎಫ್' ಸ್ಟಾರ್ ಯಶ್ 'ರಾವಣ'ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದ ಈ ಭವ್ಯ ಚಿತ್ರವನ್ನು ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋ, ಆಸ್ಕರ್ ಪ್ರಶಸ್ತಿ ವಿಜೇತ್ DNEG ಹಾಗೂ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸುತ್ತಿವೆ.

Sponsored

ಈ ಚಿತ್ರವನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡಲು ಯೋಜನೆ ರೂಪಿಸಲಾಗಿದೆ, ಮೊದಲ ಭಾಗವನ್ನು ಇದೆ ದೀಪಾವಳಿ ಸಮಯದಲ್ಲಿ ಬಿಡುಗಡೆ ಮಾಡಲು ಸಾಧಿಸಿ ಎರಡನೇ ಭಾಗವನ್ನು ಮುಂದಿನ ವರ್ಷದ ದೀಪಾವಳಿ ವೇಳೆಗೆ ಬಿಡುಗಡೆ ಮಾಡುವ ನಿರೀಕ್ಷೆ ಇದೆ.

2027ರಲ್ಲಿ ಬಿಡುಗಡೆಯಾದ "ಕೆಜಿಎಫ್ 2"ಚಿತ್ರವು ವಿಶ್ವಮತ್ತದಲ್ಲಿ ಬಾರಿ ಯಶಸ್ಸು ಕಂಡ ಬಳಿಕ ಯಶ್ ಅವರ ಮುಂದಿನ ಸಿನಿಮಾಗಾಗಿ ಸಿನಿ ಪ್ರಿಯರು ಮತ್ತು ಸಿನಿದಿಗ್ಗಜರು ಇಬ್ಬರು ಕೂಡ ದೊಡ್ಡ ನಿರೀಕ್ಷೆಯಲ್ಲಿದ್ದಾರೆ.

ರಾಮಾಯಣ ಚಿತ್ರದಲ್ಲಿ ಯಶ್ ರಾವಣ ನ ಪಾತ್ರ ಈಗಾಗಲೇ ಅಭಿಮಾನಿಗಳಲ್ಲಿ ಬಾರಿ ಕುತೂಹಲ ಮೂಡಿಸಿದೆ.

Also Read:

Sponsored

CBSE ವಿಜಾತಿಗಳಿಗೆ ಮಹತ್ವದ ಮಾಹಿತಿ: ಹೆಚ್ಚುವರಿ ಪ್ರಶ್ನೆಗಳ ಮಾರ್ಕ್ಸ್ ಕುರಿತು ಹೊಸ ಸ್ಪಷ್ಟನೆ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online