Belagavi News:
ನವದೆಹಲಿ: 12ನೇ ತರಗತಿಯ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿಗಳನ್ನು ಪರಿಶೀಲಿಸಿದ ಬಳಿಕ ವಿದ್ಯಾರ್ಥಿಗಳಿಂದ ಅಂಕಗಳ ಲೆಕ್ಕಾಚಾರದ ಬಗ್ಗೆ ಹಲವು ಪ್ರಶ್ನೆಗಳು ಮತ್ತು ದರುಗಳು ಬಂದ ಹೆನ್ನೆಲೆಯಲ್ಲಿ ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (CBSE) ಸ್ಪಷ್ಟನೆ ನೀಡಿದೆ.
ಮಂಡಳಿ ತಿಳಿಯುತ್ತಿರುವಂತೆ, ಅನೇಕ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಯಲ್ಲಿ ನೀಡಲಾದ ಅಂಕಗಳು ಮತ್ತು ಒಟ್ಟು ಅಂಕಗಳ ನಡುವೆ ವ್ಯತ್ಯಾಸ ಕಂಡು ಬಂದಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ಇದು ಮೌಲ್ಯಮಾಪನದ ದೋಷವಲ್ಲ. ಬದಲಿಗೆ ಮಂಡಳಿಯ ಸ್ಥಾಪಿತ ಮೌಲ್ಯ ಮಾಪನ ನೀತಿಯ ಭಾಗವಾಗಿದೆ ಎಂದು CBSE ಸ್ಪಷ್ಟಪಡಿಸಿದೆ.
ಪರೀಕ್ಷಾ ಪತ್ರಿಕೆಯಲ್ಲಿ ಆತಂಕರಿಕ ಆಯ್ಕೆಗಳಿದ್ದ ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ನಿಗದಿತ ಸಂಖ್ಯೆಯ ಪ್ರಶ್ನೆಗಳಿಗಿಂತ ಹೆಚ್ಚು ಪ್ರಶ್ನೆಗಳಿಗೆ ಉತ್ತರ ನೀಡಿದರೆ, ಮೌಲ್ಯಮಾಪನದ ವೇಳೆ ಅವುಗಳಲ್ಲಿ ಅತ್ಯಧಿಕ ಅಂಕ ಪಡೆದ ಉತ್ತರವನ್ನು ಮಾತ್ರ ಅಂತಿಮ ಅಂಕಗಳಿಗೆ ಸೇರಿಸಲಾಗುತ್ತದೆ ಎಂದು ಮಂಡಳಿ ತಿಳಿಸಿದೆ.
ಕೆಲವು ವಿದ್ಯಾರ್ಥಿಗಳು ಸ್ಕ್ಯಾನ್ ಮಾಡಿದ ಉತ್ತರ ಪತ್ರಿಕೆಗಳನ್ನು ಪರಿಶೀಲಿಸಿದ ನಂತರ, ಪ್ರತಿ ಪ್ರಶ್ನೆಗೆ ನೀಡಿದ ಅಂಕಗಳು ಮತ್ತು ಒಟ್ಟು ಅಂಕಗಳು ಹೊಂದಿಕೆಯಾಗುವುದಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದರು.
ವಿದ್ಯಾರ್ಥಿಗಳು ಒಂದೇ ಪ್ರಶ್ನೆಗೆ ಎರಡು ಆಯ್ಕೆಗಳಿಗೆ ಉತ್ತರಿಸಿದ ಸಂದರ್ಭಗಳಲ್ಲಿ, ಎರಡನ್ನು ಮೌಲ್ಯಮಾಪನ ಮಾಡಲಾಗುತ್ತದೆ. ಆದರೆ ಅಂತಿಮ ಫಲಿತಾಂಶದಲ್ಲಿ ಹೆಚ್ಚಿನ ಅಂಕ ಪಡೆದ ಉತ್ತರವನ್ನು ಮಾತ್ರ ಪರಿಗಣಿಸಲಾಗುತ್ತದೆ. ರಾಜ್ಯದ ಉಳಿದ ಉತ್ತರದ ಅಂಕಗಳನ್ನು ಒಟ್ಟು ಅಂಕಗಳಿಗೆ ಸೇರಿಸಲಾಗುವುದಿಲ್ಲ ಎಂದು CBSE ತಿಳಿದಿದೆ.
ಈ ಸ್ಪಷ್ಟನೆ ಮೂಲಕ ವಿದ್ಯಾರ್ಥಿಗಳಲ್ಲಿ ಉಂಟಾಗಿದ್ದ ಗೊಂದಲ ನಿವಾರಣೆಯಾಗಲಿದೆ ಎಂದು ಶಿಕ್ಷಣ ವಲಯದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಉದಾಹರಣೆಗೆ, ವಿದ್ಯಾರ್ಥಿಯೊಬ್ಬರು 31 (a) ಪ್ರಶ್ನೆಗೆ 3 ಅಂಕಣಗಳು ಹಾಗೂ 31 (b) ಪ್ರಶ್ನೆಗೆ 2 ಅಂಕಣಗಳನ್ನು ಪಡೆದಿದ್ದರೆ, ಒಟ್ಟು ಅಂಕಗಳಿಗೆ ಕೇವಲ 3ಅಂಕಗಳನ್ನು ಮಾತ್ರ ಸೇರಿಸಲಾಗುತ್ತದೆ. ಉಳಿದ 2ಅಂಕಗಳನ್ನು ಅಂತಿಮ ಅಂಕಗಳ ಲೆಕ್ಕಾಚಾರದಲ್ಲಿ ಪರಿಗಣಿಸಲಾಗುವುದಿಲ್ಲ ಎಂದು ಮಂಡಳಿ ವಿವರಿಸಿದೆ.
ಇಂತಹ ಸಂದರ್ಭಗಳಲ್ಲಿ ಒಟ್ಟು ಅಂಕಗಳಿಗೆ ಸೇರಿಸಿದ ಉತ್ತರಗಳ ಪಕ್ಕದಲ್ಲಿ ಸ್ಟಾರ್ (*) ಚಿಹ್ನೆಯನ್ನು ಗುರುತಿಸಲಾಗುತ್ತದೆ. ಜೊತೆಗೆ "ಈ ಅಂಕಗಳನ್ನು ಒಟ್ಟು ಅಂಕಗಳಲ್ಲಿ ಸೇರಿಸಲಾಗಿಲ್ಲ" ಎಂಬ ಅಡಿಟಿಪ್ಪಣಿಯನ್ನೂ ನೀಡಲಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಸ್ಕ್ಯಾನ್ ಮಾಡಿದ ಉತ್ತರ ಪತ್ರಿಕೆಗಳನ್ನು ಪರಿಶೀಲಿಸುವಾಗ ಈ ಗುರುತುಗಳು ಮತ್ತು ಟಿಪ್ಪಣಿಗಳನ್ನು ಗಮನಿಸುವುದು ಅತಂತ್ಯ ಮುಖ್ಯ ಎಂದು CBSE ಸೂಚಿಸಿದೆ.
ಮೌಲ್ಯಮಾಪನದ ವೇಳೆ 'Best Score Policy' ಅಥವಾ 'ಉತ್ತಮ ಅಂಕಗಳ ನೀತಿ' ಅನುಸರಿಸಲಾಗುತ್ತದೆ. ಅಂದರೆ, ಅಂತರಿಕ ಆಯ್ಕೆಯ ಎರಡು ಪ್ರಶ್ನೆಗಳಿಗೆ ಉತ್ತರ ನೀಡಿದ್ದರೆ.ಹೆಚ್ಚು ಅಂಕ ಪಡೆದ ಉತ್ತರವನ್ನು ಮಾತ್ರ ಅಂತಿಮ ಫಲಿತಾಂಶದಲ್ಲಿ ಪರಿಗಣಿಸಲಾಗುತ್ತದೆ.
ವಿದ್ಯಾರ್ಥಿಗಳು ಉತ್ತರ ಪತ್ರಿಕೆಯಲ್ಲಿ ಪ್ರತಿ ಪ್ರಶ್ನೆಗೆ ನೀಡಲಾದ ಅಂಕಗಳನ್ನು ಸೇರಿಸಿ ಒಟ್ಟು ಅಂಕಗಳೊಂದಿಗೆ ಹೋಲಿಕೆ ಮಾಡುವಾಗ ಸ್ಟಾರ್ (*) ಚಿಹ್ನೆ ಮತ್ತು ಅಡಿಟಿಪ್ಪಣಿಗಳನ್ನು ಗಮನಿಸಿದ ಕಾರಣ ಗೊಂದಲ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಅನುಮಾನಗಳಿಗೆ ತೆರೆ ಎಳೆಯಲು ಮತ್ತು ಪಾರದರ್ಶಕತೆ ಕಾಪಾಡಲು ಮಂಡಳಿ ಈ ಸ್ಪಷ್ಟನೆ ನೀಡಿದೆ.
CBSEಯ ಈ ಪ್ರಕಟಣೆ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಲ್ಲಿ ಉಂಟಾಗಿದ್ದ ಅಂಕಗಳ ಲೆಕ್ಕಚಾರ ಕುರಿತ ಗೊಂದಲ ನಿವಾರಣೆಗೆ ಸಹಕಾರಿಯಾಗಲಿದೆ.
ವಿದ್ಯಾರ್ಥಿಗಳು ಸ್ಕ್ಯಾನ್ ಮಾಡಿದ ಉತ್ತರ ಪತ್ರಿಕೆಗಳನ್ನು ಪರಿಶೀಲಿಸಿದ ಬಳಿಕ, ಪ್ರತಿ ಪ್ರಶ್ನೆಗೆ ನೀಡಲಾದ ಅಂಕಗಳು ಮತ್ತು ಅಂತಿಮ ಒಟ್ಟು ಅಂಕಗಳ ನಡುವೆ ವ್ಯತ್ಯಾಸ ಕಂಡುಬರುತ್ತಿದೆ ಎಂದು ಹಲವು ದೂರುಗಳನ್ನು ಸಲ್ಲಿಸಿದ್ದರು. ಆದರೆ ಇದು ತಾಂತ್ರಿಕ ದೋಷದಿಂದ ಉಂಟಾಗಿಲ್ಲ ಎಂದು CBSE ತಿಳಿಸಿದೆ.
ಮಂಡಳಿಯ ಮೌಲ್ಯಮಾಪನ ನೀತಿಯ ಪ್ರಕಾರ, ಆಂತರಿಕ ಆಯ್ಕೆಗಳಿರುವ ಪ್ರಶ್ನೆಗಳಲ್ಲಿ ವಿದ್ಯಾರ್ಥಿಗಳು ನಿಗದಿತ ಸಂಖ್ಯೆಗೆ ಮೀರಿ ಹೆಚ್ಚುವರಿ ಪ್ರಶ್ನೆಗಳಿಗೆ ಉತ್ತರಿಸಿದ್ದರೆ. ಅವುಗಳಲ್ಲಿ ಅತ್ಯಧಿಕ ಅಂಕ ಪಡೆದ ಉತ್ತರವನ್ನು ಮಾತ್ರ ಅಂತಿಮ ಅಂಕಪಟ್ಟಿಯಲ್ಲಿ ಪರಿಗಣಿಸಲಾಗುತ್ತದೆ. ಉರಿದ ಉತ್ತರಗಳಿಗೆ ನೀಡಲಾದ ಅಂಕಗಳನ್ನು ಒಟ್ಟು ಅಂಕಗಳಿಗೆ ಸೇರಿಸಲಾಗುವುದಿಲ್ಲ.
ಈ ರೀತಿಯ ಉತ್ತರಗಳನ್ನು ಗುರುತಿಸಲು ಉತ್ತರ ಪತ್ರಿಕೆಯನ್ನು ಸ್ಟಾರ್ (*) ಚಿಹ್ನೆ ಮತ್ತು ಸಂಬಂಧಿತ ಅಡಿಟಿಪ್ಪಣಿಗಳನ್ನು ಬಳಸಲಾಗುತ್ತದೆ. ವಿದ್ಯಾರ್ಥಿಗಳು ಅಂಕಗಳ ಲೆಕ್ಕಾಚಾರ ಪರಿಶೀಲಿಸುವಾಗ ಈ ಗುರುತುಗಳನ್ನು ಗಮನಿಸದ ಕಾರಣ ಅನಗತ್ಯ ಗೊಂದಲ ಉಂಟಾಗುತ್ತದೆ ಎಂದು ಮಂಡಳಿ ಹೇಳಿದೆ.
ವಿದ್ಯಾರ್ಥಿಗಳು ತಮ್ಮ ಅಂಕಗಳ ಬಗ್ಗೆ ಯಾವುದೇ ಸಂದೇಹ ಹೊಂದಿದ್ದರೆ. ದೂರು ಸಲ್ಲಿಸುವ ಮೊದಲು ಲೆಕ್ಕಾಚಾರ ಹಾಳೆ, ಸ್ಟಾರ್(*) ಚಿಹ್ನೆಗಳು ಹಾಗೂ ಅಡಿ ಟಿಪ್ಪಣಿಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು ಎಂದು CBSE ಮನವಿ ಮಾಡಿದೆ. ಇದರಿಂದ ಅನಗತ್ಯ ದೂರುಗಳು ಮತ್ತು ತಪ್ಪು ಅರ್ಥೈಸುವಿಕೆಗಳನ್ನು ತಪ್ಪಿಸಬಹುದು ಎಂದು ಮಂಡಳಿ ತಿಳಿಸಿದೆ.
ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಲು ಹಾಗೂ ವಿದ್ಯಾರ್ಥಿಗಳ ಗೊಂದಲ ನಿವಾರಿಸಲು ಈ ಸ್ಪಷ್ಟನೆ ನೀಡಲಾಗಿದೆ ಎಂದು CBSE ಹೇಳಿದೆ. ಈ ಮೂಲಕ ಅಂಕಗಳ ಲೆಕ್ಕಾಚಾರ ಕುರಿತು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಮೂಡಿದ್ದ ಅನುಮಾನಗಳಿಗೆ ತೆರೆ ಬಿದ್ದಿದೆ.
Also Read:
ಗ್ರಾಮೀಣ ಆರೋಗ್ಯಕ್ಕೆ ಮಾದರಿ: ದಾವಣಗೆರೆಯ 7 ಗ್ರಾಮಗಳು ತಂಬಾಕು ಮುಕ್ತ ಘೋಷಣೆ