<?= $pageTitle ?>
Logo
ಮುಖಪುಟ ಓದುವುದು ಕೇಳು
Sports

ಅಕ್ಷರ್ ಪಟೇಲ್ ಗೆ 12 ಲಕ್ಷ ರೂ. ದಂಡ ವಿಧಿಸಿದ ಐಪಿಎಲ್ 2026 ಆಡಳಿತ

ಅಕ್ಷರ್ ಪಟೇಲ್ ಗೆ 12 ಲಕ್ಷ ರೂ. ದಂಡ ವಿಧಿಸಿದ ಐಪಿಎಲ್ 2026 ಆಡಳಿತ
Summary: Axar Patel has been fined Rs 12 lakh in IPL. What could be the reason? Let's see if this happened due to violation of rules.

Belagavi News:

ಐಪಿಎಲ್ 2026ರಲ್ಲಿ ನಿಯಮಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ಅಕ್ಷರ ಪಟೇಲ್ ಅವರಿಗೆ ದಂಡ ವಿಧಿಸಲಾಗಿದೆ. ಐಪಿಎಲ್ ನಿಯಮದ ಪ್ರಕಾರ, ಪ್ರತಿ ತಂಡವು 20 ಓವರ್ ಗಳನ್ನು ಒಂದು ಗಂಟೆ 30 ನಿಮಿಷದೊಳಗೆ ಪೂರ್ಣಗೊಳಿಸಬೇಕಾಗಿದೆ. ಇದನ್ನು ಮೀರಿ ಹೆಚ್ಚು ಸಮಯ ತೆಗೆದುಕೊಂಡರೆ ಬೌಂಡರಿ ಲೈನ್ ನಿಂದ ಒಬ್ಬ ಫೀಲ್ಡರ್ ನ್ನು ಕಡಿತ ಮಾಡಲಾಗುತ್ತದೆ ಹಾಗೂ ತಂಡದ ನಾಯಕನಿಗೆ ದಂಡ ವಿಧಿಸಲಾಗುತ್ತದೆ.

ಧರ್ಮಶಾಲಾದ ಹಿಮಾಚಲ್ ಪ್ರದೇಶ್ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ ಜಯಸಾಧಿಸಿದೆ. ಆದರೆ ತಂಡದ ಗೆಲುವಿನ ನಡುವೆಯೇ ನಿಧಾನ ಓವರ್ ದರ ಕಾರಣದಿಂದ ನಾಯಕ ಅಕ್ಷರ್ ಪಟೇಲ್ ಗೆ ಐಪಿಎಲ್ ಆಡಳಿತ ಮಂಡಳಿ 12 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಪಂದ್ಯದಲ್ಲಿ ತಂಡದ ಪ್ರದರ್ಶನ ಉತ್ತಮವಾಗಿದ್ದರೂ, ಸಮಯ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಈ ಶಿಸ್ತು ಕ್ರಮ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಐಪಿಎಲ್ ಆಡಳಿತ ಮಂಡಳಿ ನಿಯಮ ಪಾಲನೆಗೆ ಕಟ್ಟುನಿಟ್ಟಿನ ನಿಲುವು ಮುಂದುವರಿಸುತ್ತಿರುವುದು ಈ ಘಟನೆ ಮೂಲಕ ಮತ್ತೊಮ್ಮೆ ಸ್ಪಷ್ಟವಾಗಿದೆ.

ಐಪಿಎಲ್ 2026ರಲ್ಲಿ ಅಕ್ಷರ ಪಟೇಲ್ ಅವರಿಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ ನಲ್ಲಿ ನಡೆದ ಡೆಲಿಕಪ್ತಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಪಂದ್ಯದಲ್ಲಿ ನಿಧಾನ ಓವರ್ ದರ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ.

ಐಪಿಎಲ್ ನೀತಿ ಸಂಹಿತೆಯ ಪ್ರಕಾರ, ಪ್ರತಿ ತಂಡವು ನಿಗದಿತ ಸಮಯದೊಳಗೆ 20 ಓವರ್ ಗಳನ್ನು ಪೂರ್ಣಗೊಳಿಸಬೇಕು. ಆದರೆ ಈ ಪಂದ್ಯದಲ್ಲಿ ತಂಡವು ನಿಗದಿತ ಸಮಯ ಮೀರಿಸಿದ್ದರಿಂದ ಶಿಸ್ತು ಕ್ರಮ ಜಾರಿಗೆ ಬಂದಿದೆ.

ಇದು ಈ ಸೀಸನ್ ನಲ್ಲಿ ಡೆಲಿಕ್ಯಾಪ್ಟರ್ ತಂಡದ ಮೊದಲ ಓವರ್-ರೇಟ್ ಅಪರಾಧವಾಗಿರುವುದರಿಂದ ಕೇವಲ ನಾಯಕ ಅಕ್ಷರ್ ಪಟೇಲ್ ಗೆ ಮಾತ್ರ ದಂಡ ವಿಧಿಸಲಾಗಿದೆ. ನಿಯಮಾನುಸಾರ, ಮೊದಲ ತಪ್ಪಿಗೆ ನಾಯಕನಿಗೆ ದಂಡ ವಿಧಿಸಲಾಗುತ್ತದೆ, ಮುಂದಿನ ಉಲ್ಲಂಘನೆಗಳಲ್ಲಿ ಹೆಚ್ಚುವರಿ ಶಿಸ್ತು ಕ್ರಮಗಳು ಜಾರಿಯಾಗಬಹುದು.

ಪಂದ್ಯದಲ್ಲಿ ತಂಡ ಭರ್ಜರಿ ಜಯಸಾಧಿಸಿದ್ದರು, ಈ ತಂಡದ ಘಟನೆ ಐಪಿಎಲ್ 2026 ಸೀಸನ್ ನಲ್ಲಿ ನಿಯಮ ಪಾಲನೆಯ ಮಹತ್ವವನ್ನು ಮತ್ತೊಮ್ಮೆ ಹೈಲೆಟ್ ಮಾಡಿದೆ.

ಐಪಿಎಲ್ 2026ರಲ್ಲಿ ನಿಧಾನ ಓವರ್ ರೇಟ್ ನಿಯಮಗಳು ಮತ್ತೊಮ್ಮೆ ಚರ್ಚೆಗೆ ಬಂದಿವೆ. ಐಪಿಎಲ್ ನಿಯಮದ ಪ್ರಕಾರ, ಪ್ರತಿ ತಂಡವು 20 ಓವರ್ ಗಳನ್ನು ಒಂದು ಗಂಟೆ 30 ನಿಮಿಷದೊಳಗೆ ಪೂರ್ಣಗೊಳಿಸಬೇಕು. ನಿಗದಿತ ಸಮಯ ಮೀರಿದರೆ ಬೌಂಡರಿ ಲೈನ್ ನಿಂದ ಒಬ್ಬ ಫಿಲ್ಡರ್ ನ್ನು ಕಡಿತ ಮಾಡುವ ಶಿಸ್ತು ಕ್ರಮ ಜಾರಿಯಾಗುತ್ತದೆ.

ಈ ನಿಯಮ ಉಲ್ಲಂಘನೆ ಯಾದರೆ ಮೊದಲ ಬಾರಿ ತಂಡದ ನಾಯಕನಿಗೆ 12 ಲಕ್ಷ ರುಪಾಯಿ ದಂಡ ವಿಧಿಸಲಾಗುತ್ತದೆ. ಇದು ಸೀಸನ್ ನ ಮೊದಲ ತಪ್ಪಾಗಿದ್ದರೆ ಕೇವಲ ನಾಯಕನಿಗೆ ಮಾತ್ರ ದಂಡ ಅನ್ವಯವಾಗುತ್ತದೆ.

ಅದೇ ತಪ್ಪನ್ನು ಎರಡನೇ ಬಾರಿ ಪುನರಾವರ್ತಿಸಿದರೆ ನಾಯಕನಿಗೆ 24 ಲಕ್ಷ ದಂಡ ವಿಧಿಸಲಾಗುತ್ತದೆ. ಜೊತೆಗೆ ಪ್ಲೇಯಿಂಗ್ ಇಲೆವೆನ್ ನ ಎಲ್ಲಾ ಆಟಗಾರರಿಗೆ 6 ಲಕ್ಷ ರೂಪಾಯಿ ಅಥವಾ ಅವರ ಪಂದ್ಯದ ಶುಲ್ಕದ 25% ದಂಡ ವಿಧಿಸಲಾಗುತ್ತದೆ.

ಮೂರನೇ ಬಾರಿ ದಂಡದ ಪ್ರಮಾಣ ಮತ್ತಷ್ಟು ಹೆಚ್ಚಾಗುತ್ತದೆ. ನಾಯಕನಿಗೆ 30 ಲಕ್ಷ ಹಾಗೂ ಡಿಮೆರಿಟ್ ನೀಡಲಾಗುತ್ತದೆ. ಜೊತೆಗೆ ಪ್ಲೇಯಿಂಗ್ ಇಲೆವೆನ್ ನ 10 ಆಟಗಾರರಿಗೆ 12 ಲಕ್ಷ ರೂಪಾಯಿ ಅಥವಾ ಅವರ ಪಂದ್ಯದ ಶುಲ್ಕದ 50% ದಂಡ ವಿಧಿಸುವ ನಿಯಮ ಜಾರಿಯಲ್ಲಿದೆ.

ಐಪಿಎಲ್ ನಿಯಮದ ಪ್ರಕಾರ, ನಾಯಕನ ಖಾತೆಯಲ್ಲಿ ಡಿಮೆರಿಟ್ ಪಾಯಿಂಟ್ ಗಳು ನಿರ್ದಿಷ್ಟ ಮಿತಿಯನ್ನು(ಮೂರು ವರ್ಷಗಳಲ್ಲಿ ನಾಲ್ಕು ಪಾಯಿಂಟ್ ಗಳು) ಮೀರಿದರೆ, ಮಾತ್ರ ಪಂದ್ಯ ನಿಷೇಧ ವಿಧಿಸಲಾಗುತ್ತದೆ. ಅಂದರೆ ಅತ್ಯಂತ ಗಂಭೀರ ಅಥವಾ ಪದೇ ಪದೇ ತಪ್ಪು ಮಾಡಿದ ಸಂದರ್ಭಗಳಲ್ಲಿ ಮಾತ್ರ ನಾಯಕನಿಗೆ ಒಂದು ಪಂದ್ಯದಿಂದ ನಿಷೇಧ ಹೇರಲಾಗುತ್ತದೆ.

ನಿಯಮಗಳು ಪಂದ್ಯ ವೇಗವನ್ನು ಹೆಚ್ಚಿಸಲು ಮತ್ತು ಆಟದ ಶಿಸ್ತು ಕಾಪಾಡಲು ಐಪಿಎಲ್ ಆಡಳಿತ ಮಂಡಳಿಯಿಂದ ಕಟ್ಟು ನಿಟ್ಟಾಗಿ ಜಾರಿಗೆ ತರಲಾಗುತ್ತದೆ.

Also Read:

ನಾಯಕತ್ವ ಬದಲಾವಣೆ ಚರ್ಚೆಗೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online