Belagavi News:
ಐಪಿಎಲ್ ರೋಚಕ ಪಂದ್ಯದಲ್ಲಿ Rajasthan Royals ತಂಡ ಭರ್ಜರಿ ಗೆಲುವು ಸಾಧಿಸಿ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ವೈಭವ್ ಸೂರ್ಯವಂಶಿ ಮತ್ತು Dhruv Jurel ಅವರ ಸ್ಪೋಟಕ ಅರ್ಧಶತಕಗಳ ನೆರವಿನಿಂದ ರಾಜಸ್ಥಾನ ರಾಯಲ್ಸ್, Lucknow Super Giants ತಂಡವನ್ನು ಏಳು ವಿಕೆಟ್ ಗಳಿಂದ ಮಣಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೆಂಟ್ಸ್ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 220 ರನ್ ಗಳ ಭಾರಿ ಮೊತ್ತ ಕಲೆ ಹಾಕಿತು. ಆದರೆ ಗುರಿ ಬೆನ್ನತ್ತಿದ ರಾಜಸ್ಥಾನ್ ಬ್ಯಾಟಿಂಗ್ ಗಳು ಆರಂಭದಿಂದಲೇ ಆಕ್ರಮಣಕಾರಿ ಆಟೋ ಪ್ರದರ್ಶಿಸಿದರು.
ವೈಭವ ಸೂರ್ಯವಂಶಿ ಅವರ ಮಿಡಿಲಬ್ಬರದ ಬ್ಯಾಟಿಂಗ್ ಹಾಗೂ ಧ್ರುವ್ ಜುರೆಲ್ ಅವರ ಜವಾಬ್ದಾರಿಯುತ ಇನ್ನಿಂಗ್ಸ್ ನೆರವಿನಿಂದ ರಾಜಸ್ಥಾನವು ಕೆಲವು 19.1ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 225 ರನ್ ಬಾರಿಸಿ 1 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿತು.
ಈ ಜಯದೊಂದಿಗೆ Rajasthan Royals ತಂಡದ ಪ್ಲೇ ಆಫ್ ಆಸೆ ಮತ್ತೆ ಚಿಗುರಿದ್ದು. ಐಪಿಎಲ್ ಪಾಯಿಂಟ್ಸ್ ಟೇಬಲ್ ನಲ್ಲಿ ರೋಚಕ ಪೈಪೋಟಿ ಮುಂದುವರಿದಿದೆ. ಅಭಿಮಾನಿಗಳು ಈ ಪಂದ್ಯವನ್ನು " ಐಪಿಎಲ್ ಥ್ರಿಲ್ಲರ್" ಎಂದು ಕೊಂಡಾಡುತ್ತಿದ್ದಾರೆ.
ಐಪಿಎಲ್ ರೋಚಕ ಪಂದ್ಯದಲ್ಲಿ Rajasthan Royals ತಂಡದ ಯುವ ಬ್ಯಾಟರ್ Vaibhav Suryavanshi ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಮಿಂಚಿ ತಂಡಕ್ಕೆ ಭರ್ಜರಿ ಗೆಲುವು ತಂದು ಕೊಟ್ಟರು. ಲಕ್ನೋ ವಿರುದ್ಧದ ಪಂದ್ಯದಲ್ಲಿ ವೈಭವ್ ಕೇವಲ 38 ಎಸೆತಗಳಲ್ಲಿ 7 ಬೌಂಡರಿ ಹಾಗೂ 10 ಸಿಕ್ಸರ್ ಗಳ ನೆರವಿನಿಂದ 93ರನ್ ಸಿಡಿಸಿ ರಾಜಸ್ಥಾನದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
Dhruv Jurel ಜೊತೆ ಎರಡನೇ ವಿಕೆಟ್ ಗೆ ವೈಭವ್ 105 ರನ್ನಗಳ ಅಮೂಲ್ಯ ಜೊತೆಯಾಟ ನಿರ್ಮಿಸಿದರು. ಜುರೆಲ್ 38 ಎಸೆತಗಳಲ್ಲಿ 3 ಬೌಂಡರಿ ಮತ್ತು 3 ಸಿಕ್ಸರ್ ಸಹಿತ ಅಜೇಯ 53 ರನ್ ಗಳಿಸಿದರು. ಅಂತಿಮ ಹಂತದಲ್ಲಿ Donovan Ferreira 10 ಎಸೆತಗಳಲ್ಲಿ16 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ರಾಜಸ್ಥಾನದ ಪರ yashasvi Jaiswal 43 ರನ್ ಗಡಿಸಿದರೆ, ಲುಹಾನ್ ಡ್ರೀಸ್ ಪ್ರಿಟೋರಿಯಸ್ 7 ರನ್ ಗಳ ಕೂಡುಗೆ ನೀಡಿದರು. ಲಕ್ನೋ ಪರ ಆಕಾಶ ಮತ್ತು ಮೊಹ್ಸಿನ್ ತಲಾ ಒಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ Lucknow Super Giants ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. Michell Marsh 57 ಎಸೆತಗಳಲ್ಲಿ 96 ರನ್ ಸಿಡಿಸಿದರೆ. Josh Inglis 29 ಎಸೆತಗಳಲ್ಲಿ ವೇಗದ 60 ರನ್ನ ಗಡಿಸಿದರು. ನಾಯಕ Rishabh pant 35 ರನ್ ಮತ್ತು Nicholas Pooran 16 ರಾನ್ ಸೇರಿಸಿದರು.
ಆಯುಷ್ ಬದೋನಿ ಹಾಗೂ ಅಬ್ದುಲ್ ಸಮದ್ ಬೃಹತ್ ಮೊತ್ತ ಕಲೆಹಾಕಿತು.
ರಾಜಸ್ಥಾನ್ ಪರ Yash Raj poonia 2 ವಿಕೆಟ್ ಪಡೆದರೆ, jofra Archer ಒಂದು ವಿಕೆಟ್ ಕಿತ್ತರು. ಈ ಗೆಲುವಿನೊಂದಿಗೆ ರಾಜಸ್ಥಾನ್ ತಂಡದ ಪ್ಲೇ ಆಫ್ ಕನಸು ಇನ್ನೂ ಜೀವಂತವಾಗಿದೆ.
ಐಪಿಎಲ್ ರೋಚಕ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ Vaibhav Suryavanshi ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. Rajasthan Royals ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ವೈಭವ್, ಕೇವಲ 38 ಎಸೆತಗಳಲ್ಲಿ 93 ರನ್ ಸಿಡಿಸಿ ಅಭಿಮಾನಿಗಳನ್ನು ರಂಜಿಸಿದರು.
ಈ ಅದ್ಭುತ ಇನ್ನಿಂಗ್ಸ್ ಗಾಗಿ ಅವರಿಗೆ " player of the match " ಪ್ರಶಸ್ತಿ ಲಭಿಸಿದ್ದು. ಜೊತೆಗೆ ಆರೆಂಜ್ ಕ್ಯಾಪ್ ಕೊಡ ಮರಳಿ ಪಡೆದಿದ್ದಾರೆ. ಇದರೊಂದಿಗೆ Heinrich Klaasen ಅವರನ್ನು ಹಿಂದಕ್ಕಿ ಟೂರ್ನಿಯ ಟಾಪ್ ರನ್ ಸ್ಕೋರರ್ ಆಗಿ ಹೊರಹಮ್ಮಿದ್ದಾರೆ.
ವೈಭವ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು. ಕ್ರಿಕೆಟ್ ಅಭಿಮಾನಿಗಳು ಯುವ ಆಟಗಾರನ ಆಟಕ್ಕೆ ಮೆಚ್ಚುಗೆ ವೈಕ್ತಪಡಿಸುತ್ತಿದ್ದಾರೆ. ರಾಜಸ್ಥಾನದ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಲು ವೈಭವ್ ಅವರ ಇನ್ನಿಂಗ್ಸ್ ಪ್ರಮುಖ ಕಾರಣವಾಗಿದೆ.
Also Read:
'ಮೋದಿ- ಅಮಿತ್ ಶಾ ದೇಶದ್ರೋಹಿಗಳು' ಎಂದ ರಾಹುಲ್ ಗಾಂಧಿ: ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ