ಅಮೆರಿಕ ಸರ್ಕಾರ ಸ್ಥಗಿತದ ಪರಿಣಾಮ: 1,000ಕ್ಕೂ ಹೆಚ್ಚು ವಿಮಾನಗಳ ಹಾರಾಟ ಸ್ಥಗಿತ
ಸರ್ಕಾರ ಸ್ಥಗಿತದ ಪರಿಣಾಮ ವೇತನದಲ್ಲಿ ಉಂಟಾಗಿರುವ ವ್ಯತ್ಯಯದಿಂದ ವಿಮಾನಯಾನ ಸೇವೆಯ ಅನೇಕರು ಕೆಲಸದಿಂದ ಹೊರ ಉಳಿದಿದ್ದಾರೆ.
ವಾಷಿಂಗ್ಟನ್ (ಅಮೆರಿಕ):
ದೇಶದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ವಿಮಾನ ಹಾರಾಟ ಸೇವೆ ಕಡಿತಗೊಳಿಸುವಂತೆ ಫೆಡರಲ್ ಏವಿಯೇಷನ್ ಆಡ್ಮನಿಸ್ಟ್ರೇಟರ್ ಆದೇಶ ನೀಡಿದ್ದು, ಇದರಿಂದಾಗಿ ಮುಂದಿನ ವಾರದಲ್ಲಿ ಮತ್ತಷ್ಟು ವಿಮಾಗಳು ರದ್ದಾಗುವ ಆತಂಕವಿದೆ.
ಕಳೆದ ಒಂದು ತಿಂಗಳಿನಿಂದ ವೇತನ ಪಾವತಿಯಾಗದಿರುವ ಹಿನ್ನೆಲೆಯಲ್ಲಿ ಸಿಬ್ಬಂದಿಗಳು ಸಾಕಷ್ಟು ಒತ್ತಡ ಅನುಭವಿಸುತ್ತಿದ್ದಾರೆ.
ಸರ್ಕಾರದ ಸ್ಥಗಿತದ ಪರಿಣಾಮ ವೇತನದಲ್ಲಿ ವ್ಯತ್ಯಯ ಉಂಟಾಗಿದ್ದು, ಅನೇಕರು ಕೆಲಸದಿಂದ ಹೊರ ಉಳಿದಿದ್ದಾರೆ. ಸಿಬ್ಬಂದಿ ಕೊರತೆಯಿಂದಾಗಿ ಅನೇಕ ವಿಮಾನ ಹಾರಾಟಗಳು ಸ್ಥಗಿತಗೊಂಡಿವೆ.
ವಿಮಾನಗಳ ಸಂಚಾರ ಸ್ಥಗಿತದ ಹಿನ್ನೆಲೆ ಕೆಲ ಪ್ರಯಾಣಿಕರು ಪರ್ಯಾಯ ಯೋಜನೆಗಳನ್ನು ರೂಪಿಸಿಕೊಳ್ಳುತ್ತಿದ್ದು, ಬಾಡಿಗೆ ಕಾರುಗಳನ್ನು ಕಾಯ್ದಿರಿಸಲು ಮುಂದಾಗುತ್ತಿದ್ದಾರೆ. ಶುಕ್ರವಾರ ರದ್ದಾದ ವಿಮಾನಗಳ ಸಂಖ್ಯೆ ದೇಶಾದ್ಯಂತ ವಿಮಾನಗಳ ಹಾರಾಟಕ್ಕೆ ಹೋಲಿಕೆ ಮಾಡಿದರೆ ಸಣ್ಣ ಭಾಗ ಮಾತ್ರವಾಗಿದೆ.
ಅಟ್ಲಾಂಟಾ, ಡಲ್ಲಾಸ್, ಡೆನ್ವರ್ ಮತ್ತು ಷಾರ್ಲೆಟ್, ನಾರ್ತ್ ಕೆರೊಲಿನಾ ಸೇರಿದಂತೆ ಪ್ರಮುಖ ಹಬ್ಗಳಲ್ಲಿ 40 ವಿಮಾನ ನಿಲ್ದಾಣಗಳಲ್ಲಿ ಕೊನೆಯ ಕ್ಷಣದಲ್ಲಿ ವಿಮಾನಗಳ ಹಾರಾಟ ರದ್ದಾಗಿವೆ. ವಿಮಾನಯಾನ ಸಂಸ್ಥೆಗಳು ಈ ವಾರಾಂತ್ಯದಲ್ಲಿ ಸೀಮಿತ ಅಡಚಣೆಗಳನ್ನು ಎದುರಿಸಲಿದ್ದು, ಇದು ಅಂತಾರಾಷ್ಟ್ರೀಯ ವಿಮಾನಗಳ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕ ಸರ್ಕಾರದ ಶಟ್ಡೌನ್ ಆಗಿರುವ ಪರಿಣಾಮ ವಿಮಾನಯಾನ ಹಾರಾಟದ ಮೇಲೆ ಹೆಚ್ಚಿನ ಪರಿಣಾಮ ಬೀರಿದ್ದು, 1,000ಕ್ಕೂ ಹೆಚ್ಚು ವಿಮಾನಗಳ ಹಾರಾಟ ಸ್ಥಗಿತವಾಗಿದೆ. ಈ ನಡುವೆ ಕೆಲವು ವಿಮಾನಯಾನ ಸಂಸ್ಥೆಗಳು ನಿಗದಿಯಂತೆ ಹಾರಾಟ ನಡೆಸಿರುವುದು ಪ್ರಯಾಣಿಕರಿಗೆ ನಿಟ್ಟುಸಿರು ಬಿಡುವಂತೆ ಆಗಿದೆ.
ಈ ವಿಮಾನ ಸ್ಥಗಿತಗೊಳಿಸುವಿಕೆಯು ಕಾರ್ಗೊ ವಿಮಾನಗಳಿಂದ ಹಿಡಿದು ಪ್ರಯಾಣಿಕರ ವಿಮಾನದವರೆಗೆ ಎಲ್ಲದರ ಮೇಲೆ ಪರಿಣಾಮ ಬೀರದೆ. ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣವು ಶುಕ್ರವಾರ 80 ವಿಮಾನ ರದ್ದುಗೊಂಡಿದೆ. ವಿಮಾನ ಪ್ರಯಾಣವು ಅಮೆರಿಕದ ಆರ್ಥಿಕತೆಯಲ್ಲಿ ಪ್ರಮುಖವಾಗಿದ್ದು, ಈ ವಿಮಾನ ಸ್ಥಗಿತ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಇದೆ.
ಏರ್ಲೈನ್ಸ್ಗಳು ಸಣ್ಣ ಪ್ರಾದೇಶಿಕ ಮಾರ್ಗಗಳ ಮೂಲಕ ಹಾರಾಟ ನಡೆಸುವ ವಿಮಾನಗಳ ಪ್ರಯಾಣವನ್ನು ಕಡಿತಗೊಳಿಸಲು ಮುಂದಾಗಿವೆ. ಇದು ವಿಮಾನ ಹಾರಾಟದಲ್ಲಿ ಪ್ರಯಾಣಿಕರ ಸಂಖ್ಯೆಯನ್ನು ಕಡಿಮೆ ಮಾಡಲು ಕಾರಣವಾಗಿದೆ ಎಂದು ವರದಿಯಾಗಿದೆ.
ಶುಕ್ರವಾರ ದೇಶಾದ್ಯಂತ 1,000 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಂಡಿವೆ. ಇದು ಗುರುವಾರ ರದ್ದಾದ ವಿಮಾನ ಸಂಖ್ಯೆಗಿಂತ ಐದು ಪಟ್ಟು ಹೆಚ್ಚಾಗಿದೆ ಎಂದು ಫ್ಲೈಟ್ ಅವೇರ್ ವೆಬ್ಸೈಟ್ ತಿಳಿಸಿದೆ.
ಇನ್ನಷ್ಟು ಓದಿರಿ:
ಒಂದೇ ತಿಂಗಳಲ್ಲಿ 150,000 ಉದ್ಯೋಗಿಗಳ ವಜಾ