<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Trending

ಯುರೋಪ್ ನಿಂದ ಮಹತ್ವದ ನಿರ್ಧಾರ: ಇರಾನ್ ನಿರ್ಬಂಧ ಸಡಿಲಿಕೆಗೆ ಒಪ್ಪಿಗೆ, ಅಣ್ವಸ್ತ್ರ ನಿಯಂತ್ರಣ ಕಡ್ಡಾಯ

ಯುರೋಪ್ ನಿಂದ ಮಹತ್ವದ ನಿರ್ಧಾರ: ಇರಾನ್ ನಿರ್ಬಂಧ ಸಡಿಲಿಕೆಗೆ ಒಪ್ಪಿಗೆ, ಅಣ್ವಸ್ತ್ರ ನಿಯಂತ್ರಣ ಕಡ್ಡಾಯ
Summary: The information that the UK, Germany, France and Italy have agreed to gradually lift economic and diplomatic sanctions on Iran has attracted international attention. It is understood that this decision will proceed based on specific conditions.

Belagavi News:

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಯುದ್ಧ ಅಂತ್ಯಗೊಳಿಸುವ ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದವನ್ನು ಯುನೈಟೆಡ್ ಕಿಂಗ್ ಡಮ್, ಫ್ರಾನ್ಸ್, ಜರ್ಮನಿ ಮತ್ತು ಇಟಲಿ ದೇಶಗಳು ಸ್ವಾಗತಿಸಿವೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಇರಾನ್ ಮೇಲಿನ ನಿರ್ಬಂಧಗಳನ್ನು ಹಂತ ಹಂತವಾಗಿ ತೆರವುಗೊಳಿಸಲು ಸಿದ್ಧತೆ ನಡೆಯುತ್ತಿದೆ ಎಂದು ಈ ಯುರೋಪಿಯನ್ ರಾಷ್ಟ್ರಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

ಅಮೆರಿಕ ಮತ್ತು ಇರಾನ್ ನಡುವಿನ ಒಪ್ಪಂದವನ್ನು ಸ್ವಾಗತಿಸಿರುವ ಈ ದೇಶಗಳು, ಮಾತುಕತೆ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸಿದ ಇರಾನ್, ಅಮೆರಿಕ, ಪಾಕಿಸ್ತಾನ, ಕತಾರ್ ಸೇರದಂತೆ ಇತರ ದೇಶಗಳಿಗೆ ಅಭಿನಂದನೆ ಸಲ್ಲಿಸಿವೆ: ಈ ಒಪ್ಪಂದವು ಪ್ರಾದೇಶಿಕ ಶಾಂತಿಯ ಹೊಸ ದಾರಿ ತೆರೆದಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶಾಂತಿ ಒಪ್ಪಂದವನ್ನು ದೃಢಪಡಿಸಿದ್ದು, ಇರಾನ್ ಬಂದರುಗಳ ಮೇಲಿನ ಅಮೆರಿಕದ ನೌಕಾ ದಿಗ್ಬಂಧನವನ್ನು ಅಂತ್ಯಗೊಳಿಸುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ಇರಾನ್ ಸರ್ಕಾರವು ಒಪ್ಪಂದವನ್ನು ಅಧಿಕೃತವಾಗಿ ದೃಢಪಡಿಸಿದೆ.

Sponsored

ಪಾಕಿಸ್ತಾನದ ಹೇಳಿಕೆಯ ಪ್ರಕಾರ, ಜೂನ್ 19ರಂದು ಸ್ವಿಟ್ಜರ್ ಲ್ಯಾಂಡ್ ನಲ್ಲಿ ಅಧಿಕೃತ ಸಹಿ ಹಾಕಿದ ಬಳಿಕ ಮಾತ್ರ ಒಪ್ಪಂದದ ಅನುಷ್ಠಾನ ಆರಂಭವಾಗಲಿದೆ. ಮುಂದಿನ 60 ದಿನಗಳಲ್ಲಿ ಇರಾನ್ ನ ಪರಮಾಣು ಕಾರ್ಯಕ್ರಮಗಳ ಕುರಿತು ಪ್ರಮುಖ ಮಾತುಕತೆಗಳು ನಡೆಯುವ ನಿರೀಕ್ಷೆಯಿದ್ದು, ಈ ಒಪ್ಪಂದವು ಮಧ್ಯಪ್ರಾಚ್ಯದ ರಾಜಕೀಯ ಸಮೀಕರಣಗಳಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಬಹುದು.

ಈ ನಡುವೆ ಯುಕೆ, ಜರ್ಮನಿ, ಫ್ರಾನ್ಸ್ ಮತ್ತು ಇಟಲಿ ದೇಶಗಳು ಇರಾನ್ ಮೇಲಿನ ಆರ್ಥಿಕ ಹಾಗೂ ರಾಜತಾಂತ್ರಿಕ ನಿರ್ಬಂಧಗಳನ್ನು ಹಂತ ಹಂತವಾಗಿ ತೆಗೆದು ಹಾಕುವುದಾಗಿ ಘೋಷಿಸಿವೆ. ಜೊತೆಗೆ ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಬಾರದು ಎಂಬ ತಮ್ಮ ನಿಲುವನ್ನು ಈ ದೇಶವನ್ನು ಪುನರುಚ್ಚರಿಸಿವೆ.

ಯುರೋಪ್ ರಾಷ್ಟ್ರಗಳ ಜಂಟಿ ಹೇಳಿಕೆಯ ಪ್ರಕಾರ, ಇರಾನ್ ತನ್ನ ಪರಮಾಣು ಕಾರ್ಯಕ್ರಮಗಳಲ್ಲಿ ಕೈಗೊಂಡಿರುವ ಸ್ಪಷ್ಟ ಹಾಗೂ ಪರಿಶೀಲನೀಯ ಕ್ರಮಗಳಿಗೆ ಪ್ರತಿಕ್ರಿಯೆಯಾಗಿ ನಿರ್ಬಂಧ ಸಡಿಲಿಕೆ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತಿದೆ. ಈ ಕ್ರಮವು ಮುಂದಿನ ರಾಜ ತಾಂತ್ರಿಕ ಸಂವಾದಗಳಿಗೆ ದಾರಿ ಮಾಡಿ ಕೊಡಲಿದೆ ಎಂದು ಅವರ ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ಹಾರ್ಮುಜ್ ಜಲಸಂಧಿಯ ಮುಕ್ತ ಪ್ರವೇಶ ಅತ್ಯಂತ ಅಗತ್ಯವಾಗಿದ್ದು, ಜಾಗತಿಕ ಇಂಧನ ಸಾಗಣೆ ಮತ್ತು ವ್ಯಾಪಾರಕ್ಕೆ ಇದು ಪ್ರಮುಖ ಮಾರ್ಗವೆಂದು ಯುರೋಪ್ ದೇಶಗಳು ಒತ್ತಿಹೇಳಿವೆ. ಜೊತೆಗೆ ಲೆಬನಾನ್ ನ ಸ್ಥಿರತೆ, ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಹಾಗೂ ಕದನ ವಿರಾಮಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಈ ದೇಶಗಳು ಸ್ಪಷ್ಟಪಡಿಸಿವೆ.

Sponsored

Also Read:

ತಮಿಳುನಾಡು ಸಿಎಂ ವಿಜಯ್ ವಿಚ್ಛೇದನ ಪ್ರಕರಣದಲ್ಲಿ ತಾತ್ಕಾಲಿಕ ವಿರಾಮ : ಕೋರ್ಟ್ ಆದೇಶ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online