<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ರಿವ್ ಆಫ್ ದಿ ಫೆಸಿಫಿಕ್ ಕಸರತ್ತಿನಲ್ಲಿ ಭಾರತ P -8I ಕಡಲಗಸ್ತು ವಿಮಾನ ಭಾಗವಹಿಸಲಿದೆ

ರಿವ್ ಆಫ್ ದಿ ಫೆಸಿಫಿಕ್ ಕಸರತ್ತಿನಲ್ಲಿ ಭಾರತ P -8I ಕಡಲಗಸ್ತು ವಿಮಾನ ಭಾಗವಹಿಸಲಿದೆ
Summary: This is the 30th Rim of the Pacific naval exercise, organised under the theme 'Partners: Connected and Ready'. The participating nations will focus on strengthening maritime security and defence governance.

belagavai news :

ವಾಷಿಂಗ್ಟನ್ : ಭಾರತೀಯ ನೌಕಾಪಡೆಯ ಅತ್ಯಾಧುನಿಕ P -8I ಕಡಲ ಗತ್ತು ವಿಮಾನವು ಹವಾಯಿಯಲ್ಲಿ ರಿಮ್ ಆಫ್ ದಿ ಪೆಸಿಫಿಕ್ ಕಸರತ್ತಿನಲ್ಲಿ ಭಾಗವಹಿಸಲಾಗಿದೆ. ಯುಎಸ್ ಫೆಸಿಫಿಕ್ ಪ್ಲೀಟ್ ಆಯೋಜಿಸುವ ಈ ಅಭ್ಯಾಸವು ವಿಶ್ವದ ಅತಿ ದೊಡ್ಡ ಬಹು ರಾಷ್ಟ್ರೀಯ ನೌಕಾ ಕಸರಕ್ಕಾಗಿ ಪರಿಗಣಿಸಲಾಗಿದೆ.

ಈ ಕುರಿತು ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಭಾರತೀಯ ನೌಕಾಪಡೆಯ ಭಾಗವಹಿಸುವಿಕೆ ಪರಸ್ಪರ ಕಾರ್ಯ ಸಾಧನೆ, ಕಡಲ ಡೊಮೇನ್ ಜಾಗೃತಿ ಹಾಗೂ ಪಾಲುದಾರ ನೌಕಾಪಡೆಗಳೊಂದಿಗೆ ಸಹಕಾರವನ್ನು ಹೆಚ್ಚಿಸುವ ಮೂಲಕ ಮುಕ್ತ ಮತ್ತು ಅಂತರ್ಗತ ಇಂಡೋ - ಪೆಸಿಫಿಕ್ ಪ್ರದೇಶದತ್ತ ಭಾರತದ ಬದ್ಧತೆಯನ್ನು ಪುನರುಚ್ಚರಿಸುತ್ತದೆ ಎಂದು ತಿಳಿಸಿದೆ.

ಹವಾಯಿಯ ಹೊನೆಲುಲುವಿನಲ್ಲಿ ನಡೆಯಲ್ಲಿರುವ RIMPAC Exercise 2026 ತಾಲಿ ಮಿನಲ್ಲಿ ಭಾಗವಹಿಸಲು ಭಾರತೀಯ ನೌಕಾಪಡೆಯ ಸಿಬ್ಬಂದಿ ಈಗಾಗಲೇ ತಲುಪಿದ್ದು, P- Maritime Patrol Aircraft ಜೊತೆಗೆ ನಿಯೋಜನೆಗೊಂಡಿದ್ದಾರೆ. ಈ ವಿಮಾನವನ್ನು ದೀರ್ಘ ದೂರದ ಕಡಲ ನಿಗಾವಳಿ ಮತ್ತು ಆಂಟಿ- ಸಬ್ ಮೇರಿನ ಯುದ್ಧ ಕಾರ್ಯಾಚರಣೆಗಳಿಗೆ ಬದಲಾಗುತ್ತದೆ.

ಈ ಕಸರತ್ತಿನಲ್ಲಿ ಭಾರತದ ಭಾಗವಹಿಸುವಿಕೆ, ಇಂಡೋ - ಪೆಸಿಫಿಕ್ ಪ್ರದೇಶದಲ್ಲಿ ರಕ್ಷಣಾ ಸಹಕಾರ ಮತ್ತು ಸಮುದ್ರ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಪ್ರಮುಖ ಹೆಜ್ಜೆಯಾಗಿ ಪರಿಗಣಿಸಲಾಗಿದೆ.

ಈ ಬಾರಿ ನಡೆಯುತ್ತಿರುವ 30ನೇ ರಿಪ್ ಆಫ್ ದಿ ಪೆಸಿಫಿಕ್ ಕಸರಕ್ಕಾಗಿದ್ದು,'ಪಾಲುದಾರರು : ಆಯೋಜಿತ ಮತ್ತು ಸಿದ್ದ' ವಾಕ್ಯದಡಿ ನಡೆಯಲಿದೆ. ವ್ಯಾಯಾಮಗಳ ಸರಣಿ 1971ರಲ್ಲಿ ಪ್ರಾರಂಭವಾಯಿತು.

ಜೂನ್ 24 ರಿಂದ ಜುಲೈ 31ರವರೆಗೆ ಹವಾಯಿಯನ್ ದ್ವೀಪಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯಲಿರುವ ರಿಪ್ ಆಫ್ ದಿ ಪೆಸಿಫಿಕ್ ಕಸರತ್ತಿನಲ್ಲಿ 30 ರಾಷ್ಟ್ರಗಳು ಭಾಗವಹಿಸುತ್ತಿವೆ. ಈ ಅಭ್ಯಾಸದಲ್ಲಿ 30ಕ್ಕೂ ಹೆಚ್ಚು ಮೇಲ್ಮೈ ಯುದ್ಧ ಹಡಗುಗಳು, 5 ಜಲಾಂತರ್ಗಾಮಿ ನೌಕೆಗಳು, 15 ರಾಷ್ಟ್ರೀಯ ಭೂ ಪಡೆಗಳು, 26 ಕ್ಕೂ ಹೆಚ್ಚು ವಿಮಾನಗಳು ಹಾಗೂ ಸುಮಾರು 30,000 ಸಿಬ್ಬಂದಿ ಪಾಲ್ಗೊಳ್ಳಲಿದ್ದಾರೆ.

ವಿಶ್ವದ ಅತಿ ದೊಡ್ಡ ಬಹು ರಾಷ್ಟ್ರೀಯ ನೌಕಾ ಅಭ್ಯಾಸಗಳಲ್ಲಿ ಒಂದಾದ RIMPAC Exercise ಸಮುದ್ರ ಮಾರ್ಗಗಳ ಸುರಕ್ಷತೆ ಹಾಗೂ ಜಾಗತಿಕ ಸಾಗರಗಳ ಭದ್ರತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಈ ಅಭ್ಯಾಸವು ಭಾಗವಹಿಸುವ ರಾಷ್ಟ್ರಗಳ ನಡುವೆ ಸಹಕಾರ

ಸಂಬಂಧಗಳನ್ನು ಬೆಳೆಸುವ ಮತ್ತು ಅವುಗಳನ್ನು ಬಲಪಡಿಸುವ ವಿಶಿಷ್ಟ ತರಬೇತಿ ಅವಕಾಶವನ್ನು ಒದಗಿಸುತ್ತದೆ.

ಸಂಕೀರ್ಣ ಹಾಗೂ ವಾಸ್ತವಿಕ ಸನ್ನಿವೇಶಗಳಲ್ಲಿ ತರಬೇತಿ ನೀಡುವ ಮೂಲಕ, ಭಾಗವಹಿಸುವ ರಾಷ್ಟ್ರಗಳು ತಮ್ಮ ಸನ್ನದ್ಧತೆಯನ್ನು ಸುಧಾರಿಸುವುದರ ಜೊತೆಗೆ ಯುದ್ಧ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲಿವೆ. ಅಗತ್ಯವಿರುವ ಸಮುದ್ರದಲ್ಲಿ ಮತ್ತು ಸ್ಥಳದಲ್ಲಿ ಪರಸ್ಪರ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಬೇಕಾದ ಪರಸ್ಪರ ಕಾರ್ಯಸಾದ್ಯತೆಯನ್ನು ಬಲಪಡಿಸಲಾಗುತ್ತದೆ ಎಂದು ಆಯೋಜಿತ ಕಾರ್ಯಗಳ RIMPAC 2026 ಕಮಾಂಡರ್ ಜಬ್ಲಾನ್ ಅವರು ಯುಎಸ್ ನೌಕಾಪಡೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಅಭ್ಯಾಸವು ಜಾಗತಿಕ ಸಮುದ್ರ ಭದ್ರತೆ ಮತ್ತು ರಕ್ಷಣಾ ಕಾರವನ್ನು ಮತ್ತಷ್ಟು ಗಟ್ಟಿಗೊಳಿಸುವತ್ತ ಮಹತ್ವದ ಹೆಜ್ಜೆಯಾಗಿದೆ.

ಹಿಂದಿನ ವರ್ಷಗಳಲ್ಲಿ ನಡೆದ ಯಶಸ್ವಿ ನೌಕಾ ಕಸರತ್ತುಗಳ ಅನುಭವದ ಆಧಾರದ ಮೇಲೆ ಈ ಬಾರಿ ರಿಮ್ ಆಫ್ ದಿ ಪೆಸಿಫಿಕ್ ನೌಕ ವ್ಯಾಯಾಮವನ್ನು ಇನ್ನಷ್ಟು ಸುಧಾರಿತವಾಗಿ ಹಾಗೂ ಸಮನ್ವಹಿತ ರೀತಿಯಲ್ಲಿ ಆಯೋಜಿಸಲಾಗಿದೆ ಎಂದು ಯುಎಸ್ ನೌಕಾಪಡೆ ತಿಳಿಸಿದೆ.

ಈ ಮಹತ್ವದ ಸಮುದ್ರ ಅಭ್ಯಾಸವು ಉಭಯಚರ ಕಾರ್ಯಾಚರಣೆಗಳು, ಬಂದೂಕು ಮತ್ತು ಕ್ಷಿಪಣಿ ವ್ಯಾಯಾಮಗಳು, ಜಲಾಂತರ್ಗಾಮಿ ವಿರೋಧಿ ಯುದ್ಧ, ವಾಯು ರಕ್ಷಣಾ ಕಾರ್ಯಾಚರಣೆಗಳು ಸೇರಿದಂತೆ ವ್ಯಾಪಕ ತರಬೇತಿ ಕಾರ್ಯಕ್ರಮಗಳನ್ನು ಕೈಗೊಂಡಿದೆ. ಜೊತೆಗೆ ಮಿಲಿಟರಿ ಔಷಧ, ಮಾನವೀಯ ನೆರವು ಮತ್ತು ವಿಪತ್ತು ಪ್ರತಿಕ್ರಿಯೆ ಕಾರ್ಯಾಚರಣೆಗಳಿಗೂ ಈ ಅಭ್ಯಾಸದಲ್ಲಿ ಪ್ರಮುಖ ಸ್ಥಾನ ನೀಡಲಾಗಿದೆ.

ಇದಲ್ಲದೆ ಕಡಲ್ಗಳ್ಳತನ ನಿಗ್ರಹ ಕಾರ್ಯಾಚರಣೆಗಳು, ಗಣಿ ಪ್ರತಿಕ್ರಮಗಳು, ಸ್ಪೋಟಕ ಶಸ್ತ್ರಾಸ್ತ್ರ ವಿಲೇವಾರಿ ಹಾಗೂ ಡ್ರೈವಿಂಗ್ ಮತ್ತು ರಕ್ಷಣಾ ಕಾರ್ಯಾಚರಣೆಗಳಂತ ವಿಶೇಷ ತರಬೇತಿಗಳನ್ನು ಒಳಗೊಂಡಿದೆ ಎಂದು ಯುಎಸ್ ನೌಕಾಪಡೆಯ ಪ್ರಕಟಣೆ ತಿಳಿಸಿದೆ.

ಈ ತರಬೇತಿ ಮೂಲಕ ಭಾಗವಹಿಸುವ ರಾಷ್ಟ್ರಗಳು ತಮ್ಮ ಕಾರ್ಯಾಚರಣೆ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಜೊತೆಗೆ ಜಾಗತಿಕ ಸಮುದ್ರ ಭದ್ರತೆ ಮತ್ತು ತುರ್ತು ಪ್ರತಿಕ್ರಿಯೆ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಜೊತೆಗೆ ಜಾಗತಿಕ ಸಮುದ್ರ ಭದ್ರತೆ ಮತ್ತು ತುರ್ತು ಪ್ರತಿಕ್ರಿಯೆ ಮಧ್ಯವನ್ನು ಮತ್ತಷ್ಟು ಬಲಪಡಿಸಿಸುತ್ತಿವೆ.

ಹಿಂದಿನ ವರ್ಷಗಳಲ್ಲಿ ನಡೆದು ಯಶಸ್ವಿ ನೌಕಸರತ್ತುಗಳ ಅನುಭವದ ಆಧಾರದ ಮೇಲೆ ಈ ಬಾರಿ ದಿ ಪೆಸಿಫಿಕ್ ನೌಕ ವ್ಯಾಯಾಮವನ್ನು ಮತ್ತಷ್ಟು ಸುಧಾರಿತ ಹಾಗೂ ಸಮನ್ವಹಿತ ರೀತಿಯಲ್ಲಿ ಆಯೋಜಿಸಲಾಗಿದೆ ಎಂದು ಯುಎಸ್ ನೌಕಾಪಡೆ ತಿಳಿಸಿದೆ .

ಈ ಬೃಹತ್ ಸಮುದ್ರ ಅಭ್ಯಾಸದಲ್ಲಿ ಉಭಯಚರ ಕಾರ್ಯಾಚರಣೆಗಳು, ಬಂದೂಕು ಮತ್ತು ಕ್ಷಿಪಣಿ ವ್ಯಾಯಾಮಗಳು, ಜಲಾಂತರ್ಗಾಮಿ ವಿರೋಧಿ ಯುದ್ಧ, ವಾಯು ರಕ್ಷಣಾ ಕಾರ್ಯಾಚರಣೆಗಳು ಸೇರಿದಂತೆ ವಿವಿಧ ತರಬೇತಿ ಚಟುವಟಿಕೆಗಳು ಒಳಗೊಂಡಿವೆ. ಜೊತೆಗೆ ಮಿಲಿಟರಿ ಔಷಧ, ಮಾನವೀಯ ನೆರವು ಮತ್ತು ವಿಪತ್ತು ಪ್ರತಿಕ್ರಿಯೆ ಕಾರ್ಯಾಚರಣೆಗಳಿಗೆ ವಿಶೇಷ ಒತ್ತು ನೀಡಲಾಗಿದೆ.

ಇದರ ಜೊತೆಗೆ ಕಡಲ್ಗಳ್ಳತನ ನಿಗ್ರಹ ಕಾರ್ಯಾಚರಣೆಗಳು, ಗಣಿ ಪ್ರತಿಕ್ರಮಗಳು, ಸ್ಪೋಟಕ ಶಸ್ತ್ರಾಸ್ತ್ರ ವಿಲೇವಾರಿ ಹಾಗೂ ಡೈವಿಂಗ್ ಮತ್ತು ರಕ್ಷಣಾ ಕಾರ್ಯಾಚರಣೆಗಳಿಂದ ಸಂಕೀರ್ಣ ತರಬೇತಿಗಳನ್ನು ಈ ವ್ಯಾಯಾಮದಲ್ಲಿ ಸೇರಿಸಲಾಗಿದೆ ಎಂದು ಯುಎಸ್ ನೌಕಾಪಡೆಯ ಪ್ರಕಟಣೆ ತಿಳಿಸಿದೆ.

ಈ ತರಬೇತಿಗಳ ಮೂಲಕ ಭಾಗವಹಿಸುವ ನೌಕಾಪಡೆಗಳು ತಮ್ಮ ಕಾರ್ಯಾಚರಣೆ ಸಿದ್ಧತೆ, ಪರಸ್ಪರ ಕಾರ್ಯ ಸಾಧ್ಯತೆ ಹಾಗೂ ಜಾಗತಿಕ ಸಮುದ್ರ ಭದ್ರತಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಿಕೊಳ್ಳಲಿವೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online