<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Sports

ಮಹಿಳಾ ಟಿ-20 ವಿಶ್ವಕಪ್ ನಲ್ಲಿ ಭಾರತದ ಅಬ್ಬರ; ನೆದರ್ಲ್ಯಾಂಡ್ ಮಣಿಸಿ, ಆಸ್ಟ್ರೇಲಿಯವನ್ನು ಹಿಂದಿಕ್ಕಿತು!

ಮಹಿಳಾ ಟಿ-20 ವಿಶ್ವಕಪ್ ನಲ್ಲಿ ಭಾರತದ ಅಬ್ಬರ; ನೆದರ್ಲ್ಯಾಂಡ್ ಮಣಿಸಿ, ಆಸ್ಟ್ರೇಲಿಯವನ್ನು ಹಿಂದಿಕ್ಕಿತು!
Summary: Team India put in a brilliant performance in the Women's T20 World Cup, defeating the Netherlands by 95 runs. With this victory, India has taken a significant lead in the points table.

BELAGAVI NEWS :

ಮಹಿಳಾ T -೨೦ ವಿಶ್ವಕಪ್ 2026ರಲ್ಲಿ ಟೀಮ್ ಇಂಡಿಯ ಭರ್ಜರಿ ಪ್ರದರ್ಶನ ಮುಂದುವರಿಸಿದ್ದು, ತನ್ನ ಎರಡನೇ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ 95 ರನ್ ಗಳ ಬಾರಿ ಜಯ ದಾಖಲಿಸಿದೆ. ಲೀಡ್ಸ್ ಹೆಡಿಂಗ್ಲಿ ಮೈದಾನದಲ್ಲಿ ನಡೆದ ಗ್ರೂಪ್ 'ಎ' ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಐದು ವಿಕೆಟ್ ನಷ್ಟಕ್ಕೆ 29 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿತು. ಇದು ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತದ ಅತ್ಯಧಿಕ ತಂಡದ ಮೊತ್ತವಾಗಿದ್ದು, ಹೊಸ ದಾಖಲೆಯನ್ನು ನಿರ್ಮಿಸಿತು.

ಬೃಹತ್ ಗುರಿ ಬೆನ್ನತ್ತಿದ ನೆದರ್ಲ್ಯಾಂಡ್ಸ್ ತಂಡ ಭಾರತೀಯ ಬೌಲರ್ಗಳ ದಾಳಿಗೆ ಕತ್ತರಿಸಿ ಕೇವಲ 114 ರನ್ಗಳಿಗೆ ಆಲೌಟ್ ಆಯ್ತು. ಇದರೊಂದಿಗೆ ಭಾರತ 95 ರನ್ ಗಳ ಅಂತರದ ಅಮೋಘ ಗೆಲುವು ದಾಖಲಿಸಿತು. ಈ ಜಯದಿಂದ ಟೀಮ್ ಇಂಡಿಯಾ ಅಮೂಲ್ಯ ಎರಡು ಅಂಕಗಳನ್ನು ಪಡೆದು ಗ್ರೂಪ್ 'ಎ' ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಸೇರಿದೆ. ಜೊತೆಗೆ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಹಿಂದಿಕ್ಕಿ ತನ್ನ ಸೆಮಿ ಫೈನಲ್ ಅವಕಾಶಗಳನ್ನು ಮತ್ತಷ್ಟು ಬಲಪಡಿಸಿದೆ.

ಟಾಸ್ ಗೆದ್ದ ನೆದರ್ಲ್ಯಾಂಡ್ಸ್ ನಾಯಕಿ ಬಾಬೆಟ್ ಡಿ ಲೀಡೆ ಭಾರತವನ್ನು ಮೊದಲು ಬ್ಯಾಟಿಂಗ್ ಗೆ ಆಹ್ವಾನಿಸಿದರು. ಇದನ್ನು ಸದುಪಯೋಗಿ ಪಡಿಸಿಕೊಂಡ ಟೀಮ್ ಇಂಡಿಯಾ ಆರಂಭದಲ್ಲೇ ಅಕ್ರಮಣಕಾರಿ ಆಟ ಪ್ರದರ್ಶಿಸಿತು. ಆರಂಭಿಕ ಜೊತೆ ಆಟದ ಶೆಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ ನೆದರ್ಲ್ಯಾಂಡ್ಸ್ ಬೌಲರ್ ಗಳನ್ನು ಮನಬಂದಂತೆ ದಂಡಿಸಿ ಮೊದಲ ವಿಕೆಟ್ ಗೆ 70 ಎಸೆತಗಳಲ್ಲಿ 115 ರನ್ ಗಳ ಭರ್ಜರಿ ಜತೆಯಾಟ ಕಟ್ಟಿದರು.

Sponsored

ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಶಿಫಾಲಿ ವರ್ಮ ಕೇವಲ 38 ಎಸೆತಗಳಲ್ಲಿ 55 ರನ್ ಗಳಿಸಿ ತಂಡಕ್ಕೆ ವೇಗದ ಆರಂಭ ಒದಗಿಸಿದರು. ಅವರ ಇನ್ನಿಂಗ್ಸ್ ನಲ್ಲಿ 10 ಆಕರ್ಷಕ ಬಾಂಡರಿಗಳು ಸೇರಿದವು. ಶೆಫಾಲಿ ಔಟಾದ ಬಳಿಕವೂ ಭಾರತದ ರನ್ ವೇಗ ಕಡಿಮೆಯಾಗಲಿಲ್ಲ. ಅನುಭವಿ ಸ್ಮೃತಿ . ಮಂಧಾನ ಹಾಗೂ ಜಮೀಮಾ ರೊಡ್ರಿಗಸ್ ಜವಾಬ್ದಾರಿಯುತ ಆಟದ ಮೂಲಕ ಇನ್ನಿಂಗ್ಸನ್ನು ಮುನ್ನಡೆಸಿದರು.

ಮಂಧಾನ - ಜೆಮಿಮಾ ಜೋಡಿ ಎರಡನೇ ವಿಕೆಟ್ ಗೆ ಕೇವಲ 26 ಎಸೆತಗಳಲ್ಲಿ 47 ರನ್ ಗಳ ಅಮೂಲ್ಯ ಜೊತೆ ಆಟ ನೀಡಿ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ತಿತು. ಅದ್ಭುತ ಲಯದಲ್ಲಿ ಕಾಣಿಸಿಕೊಂಡ ಸ್ಮೃತಿ ಮಂಧಾನ 47 ಎಸೆತಗಳಲ್ಲಿ 74 ರನ್ನುಗಳ ಮಿಂಚಿನ ಇನ್ನಿಂಗ್ಸ್ ಆಡಿದರು. ಅವರ ಬ್ಯಾಟಿನಿಂದ 11 ಬೌಂಡರಿ ಹಾಗೂ ಒಂದು ಭರ್ಜರಿ ಸಿಕ್ಸರ್ ಹೊರಬಂದವು. 16ನೇ ಓವರ್ ನ ಕೊನೆ ಎಸೆತದಲ್ಲಿ ಮಂಧಾನ ವಿಕೆಟ್ ಕಳೆದುಕೊಂಡರು, ಅದಾಗಲೇ ಭಾರತ ಬೃಹತ್ ಮೊತ್ತದ ಭದ್ರ ಅಡಿಪಾಯ ಹಾಕಿತು.

ಸ್ಮೃತಿ ಮಂಧಾನ ಔಟಾದ ಬಳಿಕ ಜಮಿಮಾ ರೋಡ್ರಿಗಸ್ ವೇಗವಾಗಿ ರನ್ ಕಲೆ ಹಾಕಲು ಯತ್ನಿಸಿದರು, 13 ಎಸತೆಗಳಲ್ಲಿ ಎರಡು ಬೌಂಡರಿಗಳ ನೆರವಿನಿಂದ 19 ರನ್ ಗಳಿಸಿ ಫೆವಿಲಿಯನ್ ಸೇರಿದರು. ಮತ್ತೊಂದೆಡೆ ಯಸ್ತಿಕಾ ಭಾಟಿಯಾ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿ ಕೇವಲ ಮೂರು ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಇದರ ಪರಿಣಾಮವಾಗಿ ಭಾರತ 168 ರನ್ ಗಳಾಗುವಷ್ಟರಲ್ಲಿ ನಾಲ್ಕು ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡಿತು.

ಆದರೆ ಮಧ್ಯಮ ಕ್ರಮಾಂಕದಲ್ಲಿ ರಿಚಾ ಘೋಷ್ ಮತ್ತು ನಾಯಕಿ ಹರ್ಮನ್ಪ್ರೀತ್ ಕೌರ್ ತಂಡಕ್ಕೆ ವೇಗ ತುಂಬಿದರು. ಈ ಜೋಡಿ 5ನೇ ವಿಕೆಟ್ 'ಎ' ಕೇವಲ 15 ಎಸೆತಗಳಲ್ಲಿ 31 ರನ್ ಗಳ ಮೌಲ್ಯಯುತ ಜೊತೆಯಾಟ ನೀಡಿ ತಂಡದ ಮೊತ್ತವನ್ನು೨೦೦ ರ ಗಡಿ ದಾಟುವಂತೆ ಮಾಡಿತು. ರಿಚಾ ಘೋಷ 20 ರನ್ಗಳೊಂದಿಗೆ ಅಜಯರಾಗಿ ಉಳಿದರೆ, ಹರ್ಮನ್ಪ್ರೀತ್ ಕೌರ್ 12 ರನ್ ಗಳ ಕೊಡುಗೆ ನೀಡಿದರು.

Sponsored

ಇನ್ನಿಂಗ್ಸ್ ನ ಕೊನೆಯ ಕ್ಷಣದಲ್ಲಿ ದೀಪ್ತಿ ಶರ್ಮಾ ಮತ್ತು ಬ್ಯಾಟ್ ಮೂಲಕ ಮಿಂಚಿದರು. ಕೊನೆಯ ಎರಡು ಎಸೆತಗಳಲ್ಲಿ ಸಿಕ್ಸರ್ ಹಾಗೂ ಬೌಂಡರಿ ಸಿಡಿಸಿ ಭಾರತದ ಮೊತ್ತವನ್ನು ಮತ್ತಷ್ಟು ಹೆಚ್ಚಿಸಿದರು. ದೀಪ್ತಿ 10 ರನ್ಗಳೊಂದಿಗೆ ಅಜಯರಾಗಿ ಉಳಿದರು. ಈ ಸ್ಫೋಟಕ ಅಂತಿಮ ಹಂತದ ಬ್ಯಾಟಿಂಗ್ ನೆರವಿನಿಂದ ಭಾರತ ಐದು ವಿಕೆಟ್ ನಷ್ಟಕ್ಕೆ 209 ರನ್ ಗಳ ಬೃಹತ್ ಮೊತ್ತ ದಾಖಲಿಸಿ ಮಹಿಳಾ T-೨೦ ವಿಶ್ವಕಪ್ ಇತಿಹಾಸದಲ್ಲೇ ತನ್ನ ಅತ್ಯಧಿಕ ಸ್ಕೋರ್ ನಿರ್ಮಿಸಿತು.

ನೆದರ್ಲ್ಯಾಂಡ್ಸ್ ಪರ ಕ್ಯಾರೋಲಿನ್ ಡಿ ಲ್ಯಾಂಗ್ ಉತ್ತಮ ಬೌಲಿಂಗ್ ಪ್ರದರ್ಶಿಸಿ ಎರಡು ವಿಕೆಟ್ ಕಬಳಿಸಿ ಭಾರತದ ಬ್ಯಾಟರ್ ಗಳಿಗೆ ಕೆಲವಷ್ಟು ಸವಾಲು ಒಡ್ಡಿದರು.

Also Read:

ಅಮೆರಿಕ - ಇರಾನ್ ಐತಿಹಾಸಿಕ ಒಪ್ಪಂದ: 14 ಅಂಶಗಳ ಜ್ಞಾಪಕ ಪತ್ರಕ್ಕೆ ಉಭಯ ರಾಷ್ಟ್ರಗಳ ಸಹಿ

Sponsored
You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online