BELAGAVI NEWS :
ಸೆಮಿ ಫೈನಲ್ ನ ಕನಸಿಗೆ ಜೀವ ತುಂಬುವ ಪಂದ್ಯ! ಇಂದು ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ ಮಾಡು-ಇಲ್ಲ-ಮಡಿ ಹೋರಾಟ
ಮಹಿಳಾ ಟಿ20 ವಿಶ್ವಕಪ್ ನ 23ನೇ ಪಂದ್ಯದಲ್ಲಿ ಇಂದು ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಲಿವೆ. ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯ ಭಾರತ ತಂಡಕ್ಕೆ ಅತ್ಯಂತ ಮಹತ್ವದ್ದಾಗಿದೆ. ಸೆಮಿ ಫೈನಲ್ ಪ್ರವೇಶದ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲು ಹರ್ಮನ್ ಪ್ರೀತ್ ಕೌರ್ ನೇತೃತ್ವದ ಟೀಮ್ ಇಂಡಿಯಾ ಯಾವುದೇ ಕಾರಣಕ್ಕೂ ಈ ಪಂದ್ಯದಲ್ಲಿ ಜಯ ಸಾಧಿಸಲೇಬೇಕಿದೆ.
ಭಾರತ ಈಗಾಗಲೇ ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಗೆಲುವು ಹಾಗೂ ಒಂದು ಸೋಲಿನೊಂದಿಗೆ ನಾಲ್ಕು ಅಂಕಗಳನ್ನು ಗಳಿಸಿದೆ. ಆದರೆ ಕಳೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅನುಭವಿಸಿದ ಸೋಲು ತಂಡದ ಸೆಮಿ ಫೈನಲ್ ಹಾದಿಯನ್ನು ಸಂಕೀರ್ಣಗೊಳಿಸಿದೆ. ಇದೀಗ ಬಾಂಗ್ಲಾದೇಶ ಹಾಗೂ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧದ ಉಳಿದಿರುವ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸುವುದು ಭಾರತಕ್ಕೆ ಅನಿವಾರ್ಯವಾಗಿದೆ.
ಇದರ ಜೊತೆಗೆ ಕೇವಲ ಗೆಲುವು ಸಾಕಾಗುವುದಿಲ್ಲ. ಸೆಮಿ ಫೈನಲ್ ಟಿಕೆಟ್ ಪಡೆಯಲು ಭಾರತ ತಂಡವು ದಕ್ಷಿಣ ಆಫ್ರಿಕಾಕ್ಕಿಂತ ಉತ್ತಮ ಇವುಗಳ ರನ್ ರೇಟ್ ಕಾಯ್ದುಕೊಳ್ಳಬೇಕಿದೆ. ಸದ್ಯ ಉತ್ತಮ ರನ್ ರೇಟ್ ನ ನೆರವಿನಿಂದ ಗುಂಪು 'ಎ' ಅಂಕ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದ್ದು, ದಕ್ಷಿಣ ಆಫ್ರಿಕಾ ಮೂರನೇ ಸ್ಥಾನದಲ್ಲಿದೆ.
ಹೀಗಾಗಿ ಇಂದು ನಡೆಯಲಿರುವ ಭಾರತ-ಬಾಂಗ್ಲಾದೇಶ ಪಂದ್ಯ ಕೇವಲ ಒಂದು ಲೀಗ ಪಂದ್ಯವಲ್ಲ, ಭಾರತ ತಂಡದ ವಿಶ್ವಕಪ್ ಭವಿಷ್ಯವನ್ನು ನಿರ್ಧರಿಸುವ ನಿರ್ಣಾಯಕ ಸಮರವಾಗಿದೆ. ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿರುವ ಈ ಹೈ ವೋಲ್ಟೇಜ್ ಕದನದಲ್ಲಿ ಟೀಮ್ ಇಂಡಿಯಾ ಗೆಲುವಿನ ಹಾದಿಗೆ ಮರಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಭಾರತದ ಮೈಲುಗೈ ಮುಂದುವರೆಯುತ್ತಾ? ಬಾಂಗ್ಲಾದೇಶ ವಿರುದ್ಧ ಟೀಮ್ ಇಂಡಿಯಾಗೆ ಬಲವಾದ ದಾಖಲೆ!
ಮಹಿಳಾ ಟಿ20 ಕ್ರಿಕೆಟ್ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮುಖಮುಖಮುಖಿ ದಾಖಲೆಯನ್ನು ಗಮನಿಸಿದರೆ ಟೀಮ್ ಇಂಡಿಯಾ ಸ್ಪಷ್ಟ ಮೈಲುಗೈ ಸಾಧಿಸಿದೆ. ಇದುವರೆಗೆ ಉಭಯ ತಂಡಗಳು 22 ಬಾರಿ ಮುಖಾಮುಖಿಯಾಗಿದ್ದು, ಭಾರತ 20 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಬಾಂಗ್ಲಾದೇಶ ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಗೆಲುವಿನ ಸಿಹಿ ಕಂಡಿದೆ. T-20 ವಿಶ್ವಕಪ್ ಇತಿಹಾಸದಲ್ಲಿಯೂ ಭಾರತವೇ ಪ್ರಾಬಲ್ಯ ಮೆರೆದಿದ್ದು, ನಾಲ್ಕು ಬಾರಿ ಬಾಂಗ್ಲಾದೇಶವನ್ನು ಮಣಿಸಿದೆ. ಬಾಂಗ್ಲಾದೇಶ ತಂಡ ಭಾರತ ವಿರುದ್ಧ ವಿಶ್ವಕಪ್ ನಲ್ಲಿ ಕೇವಲ ಒಂದು ಗೆಲುವು ಮಾತ್ರ ದಾಖಲಿಸಿದೆ.
ಭಾರತದ ಬ್ಯಾಟಿಂಗ್ ವಿಭಾಗದಲ್ಲಿ ಸ್ಮೃತಿ ಮಂಧಾನ ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ. ಈ ಬಾರಿಯ ವಿಶ್ವಕಪ್ ನಲ್ಲಿ ಅವರು ಮೂರು ಪಂದ್ಯಗಳಲ್ಲಿ 159 ರನ್ ಕಲೆಯಾಗಿದ್ದು,154.36 ಸ್ಟ್ರೈಕ್ ರೇಟ್ ನೊಂದಿಗೆ ಅಬ್ಬರಿಸಿದ್ದಾರೆ. ಅವರ ಗರಿಷ್ಠ ವೈಯಕ್ತಿಕ ಸ್ಕೋರ್ 74 ರನ್ ಗಳಾಗಿದ್ದು, ಬಾಂಗ್ಲಾದೇಶ ವಿರುದ್ಧವು ಮತ್ತೊಮ್ಮೆ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಶ್ರೇಯಾಂಕ ಪಾಟೀಲ್ ಭಾರತದ ಪ್ರಮುಖ ಅಸ್ತ್ರ ವಾಗಿದ್ದರು. ಮೂರು ಪಂದ್ಯಗಳಲ್ಲಿ 10 ವಿಕೆಟ್ ಕಬಳಿಸಿರುವ ಅವರು ಕೇವಲ 5.33 ಎಕಾನಮಿ ರನ್ ರೇಟ್ ನೊಂದಿಗೆ ಎದುರಾಳಿಗಳ ಬ್ಯಾಟಿಂಗ್ ಪಡೆಗೆ ಕಂಟಕವಾಗಿದ್ದರು. 19 ರನ್ಗಳಿಗೆ ನಾಲ್ಕು ವಿಕೆಟ್ಗಳ ಅವರ ಅತ್ಯುತ್ತಮ ಪ್ರದರ್ಶನ ಟೂರ್ನಿಯ ಗಮನಾರ್ಹ ಕ್ಷಣಗಳಲ್ಲಿ ಒಂದಾಗಿದೆ. ಆದರೆ ಗಾಯದ ಕಾರಣದಿಂದ ಟೂರ್ನಿಯಿಂದ ಹೊರಬಿದ್ದಿರುವುದು ಭಾರತಕ್ಕೆ ಹಿನ್ನಡೆಯಾಗಿದೆ.
ಇದೀಗ ಬಲಿಷ್ಠ ದಾಖಲೆ, ಮಂಧಾನ ಅವರ ಫಾರ್ಮ್ ಮತ್ತು ಸೆಮಿ ಫೈನಲ್ ನ ಒತ್ತಡದ ನಡುವೆ ನಡೆಯಲಿರುವ ಈ ಪಂದ್ಯದಲ್ಲಿ ಭಾರತ ತನ್ನ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಲು ಕಣಕ್ಕಿಳಿಯುತ್ತಿದೆ.
ಜೆಮಿಮಾ ಮೇಲೆ ಭಾರತದ ಭರವಸೆ...ಬಾಂಗ್ಲಾದೇಶದ ವಾಲು ಎದುರಿಸಲು ಟೀಮ್ ಇಂಡಿಯಾ ಸಜ್ಜು!
ಸ್ಮೃತಿ ಮಂಧಾನ ಬಳಿಕ ಭಾರತದ ಬ್ಯಾಟಿಂಗ್ ವಿಭಾಗದಲ್ಲಿ ಜೆಮೀಮಾ ರೊಡ್ರಿಗಸ್ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆ ಇದೆ. ಈ ವಿಶ್ವ ಕಪ್ ನಲ್ಲಿ ಇದುವರೆಗೆ ಅವರು ಕೇವಲ 32 ರನ್ ಗಳಿಸಿದ್ದರು, ಬಾಂಗ್ಲಾದೇಶದ ಸ್ಪಿನ್ ದಾಳಿಯನ್ನು ಎದುರಿಸುವಲ್ಲಿ ಅವರ ಅನುಭವ ಮತ್ತು ಸಾಮರ್ಥ್ಯ ಭಾರತಕ್ಕೆ ದೊಡ್ಡ ಬಲವಾಗಬಹುದು. 2025 ರಲ್ಲಿ ಜೆಮೀಮಾ ಅದ್ಭುತ ಫಾರ್ಮ್ ಪ್ರದರ್ಶಿಸಿದ್ದು, 40.85ರ ಸರಾಸರಿಯೊಂದಿಗೆ ರನ್ ಕಲೆ ಹಾಕಿದ್ದರು. ಅದರಲ್ಲೂ ಸ್ಪಿನ್ನರ್ ಗಳ ವಿರುದ್ಧ 143.71ರ ಸ್ಟ್ರೈಕ್ ರೇಟ್ ಹೊಂದಿರುವುದು ಅವರನ್ನು ಈ ಪಂದ್ಯದಲ್ಲಿ ಅತ್ಯಂತ ಅಪಾಯಕಾರಿ ಬ್ಯಾಟರ್ ಆಗಿ ಗುರುತಿಸಿದೆ.
ಇನ್ನೊಂದೆಡೆ, ಭಾರತ ತನ್ನ ಆಡುವ ಹನ್ನೊಂದರಲ್ಲಿ ಬದಲಾವಣೆ ಮಾಡುವ ಸಾಧ್ಯತೆಗಳು ಇವೆ. ತಂಡದ ಸಮತೋಲನ ಹೆಚ್ಚಿಸುವ ಉದ್ದೇಶದಿಂದ ಪ್ರೇಮಾ ರಾವತ್ ಬದಲಿಗೆ ಅನುಭವಿ ಸ್ಪಿನ್ನರ್ ರಾಧಾ ಯಾದವ್ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ.
ಬಾಂಗ್ಲಾದೇಶ ತಂಡದ ವಿಚಾರಕ್ಕೆ ಬಂದರೆ, ಜುವಾರಿಯ ಫಿರ್ದೌಸ್ ಬ್ಯಾಟಿಂಗ್ ವಿಭಾಗದಲ್ಲಿ ತಂಡದ ಭರವಸೆಯಾಗಿದ್ದಾರೆ. ಅವರು ಮೂರು ಪಂದ್ಯಗಳಲ್ಲಿ 65 ರನ್ ಗಳಿಸಿದ್ದು, ಎರಡು ಪಂದ್ಯಗಳಲ್ಲಿ ನಾಲ್ಕು ವಿಕೆಟ್ ಪಡೆದು ಉತ್ತಮ ಪ್ರದರ್ಶನ ನೀಡಿದ್ದಾರೆ. 6.25 ಎಕನಾಮಿ ರೇಟ್ ನೊಂದಿಗೆ ಅವರು ಎದುರಾಳಿ, ಬ್ಯಾಟರ್ ಗಳಿಗೆ ಕಠಿಣ ಸವಾಲು ಒಡ್ಡುತ್ತಿದ್ದಾರೆ .
ಒಟ್ಟಾರೆ, ಸೆಮಿ ಫೈನಲ್ ಕನಸನ್ನು ಉಳಿಸಿಕೊಳ್ಳಲು ಕಣಕಿಳ್ಳಿಯುತ್ತಿರುವ ಭಾರತ ಮತ್ತು ಅಚ್ಚರಿ ಫಲಿತಾಂಶದ ನಿರೀಕ್ಷೆಯಲ್ಲಿರುವ ಬಾಂಗ್ಲಾ ನಡುವಿನ ಈ ಕದನ ಅಭಿಮಾನಿಗಳಿಗೆ ರೋಚಕ ಪಂದ್ಯ ಒಂದನ್ನು ನೀಡುವ ಭರವಸೆ ಮೂಡಿಸಿದೆ. ಭಾರತ ತನ್ನ ಬಲಿಷ್ಠ ದಾಖಲೆಯನ್ನು ಮುಂದುವರೆಸುತ್ತದಯೇ ಅಥವಾ ಬಾಂಗ್ಲಾದೇಶ ಅಚ್ಚರಿ ಮೂಡಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮಹತ್ವದ ಮಹಿಳಾ ಟಿ20 ವಿಶ್ವಕಪ್ ಪಂದ್ಯವನ್ನು ಕ್ರಿಕೆಟ್ ಅಭಿಮಾನಿಗಳು ಭಾರತದಲ್ಲಿ ನೇರವಾಗಿ ವೀಕ್ಷಿಸಬಹುದು. ಐಸಿಸಿ ಮಹಿಳಾ ಟಿ20 ವಿಶ್ವಕಪ್ ನ ಎಲ್ಲಾ ಪಂದ್ಯಗಳ ಪ್ರಸಾರ ಹಕ್ಕು ಹೊಂದಿರುವ ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ನಲ್ಲಿ ಪಂದ್ಯವನ್ನು ನೇರ ಪ್ರಸಾರ ಮಾಡಲಾಗುತ್ತದೆ.
ಮೊಬೈಲ್, ಟ್ಯಾಬ್ಲೆಟ್ ಅಥವಾ ಸ್ಮಾರ್ಟ್ ಟಿವಿಯಲ್ಲಿ ಪಂದ್ಯವನ್ನು ವೀಕ್ಷಿಸಲು ಬಯಸುವವರು ಜಿಯೋ ಹಾಟ್ ಸ್ಟಾರ್ ಒಟಿಟಿ ವೇದಿಕೆಯಲ್ಲಿ ಲೈಫ್ ಸ್ಲೀಪಿಂಗ್ ಮೂಲಕ ಪಂದ್ಯವನ್ನು ನೋಡಬಹುದು.
ಭಾರತಕ್ಕೆ ಸೆಮಿ ಫೈನಲ್ ಹಾದಿಯಲ್ಲಿ ನಿರ್ಣಾಯಕವಾಗಿರುವ ಈ ಪಂದ್ಯದಲ್ಲಿ ಪ್ರತಿಯೊಂದು ರನ್ ಮತ್ತು ವಿಕೆಟ್ ಮಹತ್ವ ಪಡೆಯಲಿದ್ದು,ಅಭಿಮಾನಿಗಳಿಗೆ ರೋಚಕ ಕ್ರಿಕೆಟ್ ಕಾದಿದೆ.
Also Read:
ಬೆಳಗಾವಿ ಜೀವನಾಡಿ ರಾಕಸಕೊಪ್ಪ ಡ್ಯಾಂ ಸಂಕಷ್ಟದಲ್ಲಿ: ಡೆಡ್ ಸ್ಟೋರೇಜ್ ಸ್ಥಿತಿ