BELAGAVI NEWS :
ಮಹಿಳಾ ಟಿ20 ವಿಶ್ವಕಪ್ ನಲ್ಲಿ ಇತಿಹಾಸ ಸೃಷ್ಟಿಸಿದ ಟೀಮ್ ಇಂಡಿಯಾ;ಪಾಕಿಸ್ತಾನ ವಿರುದ್ಧ ದಾಖಲೆಯ 64 ರನ್ ಗಳ ಭರ್ಜರಿ ಜಯ!
2026ರ ಮಹಿಳಾ ಟಿ20 ವಿಶ್ವಕಪ್ ನಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ತನ್ನ ಅಭಿಯಾನವನ್ನು ಅದ್ಭುತವಾಗಿ ಆರಂಭಿಸಿದ್ದು,ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 64 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ. ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ನಡೆದ ಈ ಹೈ ವೋಲ್ಟೇಜ್ ಪಂದ್ಯದಲ್ಲಿ ಭಾರತ ಸಂಪೂರ್ಣ ಮೈಲುಗೈ ಸಾಧಿಸಿ ಹಲವು ಐತಿಹಾಸಿಕ ದಾಖಲೆಗಳನ್ನು ತನ್ನ ಹೆಸರಿಗೆ ಬರೆದಿದೆ.
ಈ ಗೆಲುವು ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ದಾಖಲಿಸಿದ ಅತಿ ದೊಡ್ಡ ಜಯವಾಗಿದೆ. 64 ರನ್ ಗಳ ಅಂತರದಿಂದ ಗೆದ್ದು ಭಾರತ ಹೊಸ ದಾಖಲೆ ನಿರ್ಮಿಸಿದೆ. ಇದಕ್ಕೂ ಮೊದಲು ಭಾರತ 2024ರಲ್ಲಿ ಶ್ರೀಲಂಕಾ ವಿರುದ್ಧ 82 ರನ್ ಗಳ ಹಾಗೂ 2014ರಲ್ಲಿ ಬಾಂಗ್ಲಾದೇಶ ವಿರುದ್ಧ 79 ರನ್ಗಳ ಜಯ ಸಾಧಿಸಿತ್ತು.
ಅಷ್ಟೇ ಅಲ್ಲ,ಪಾಕಿಸ್ತಾನ ವಿರುದ್ಧದ ಈ ಗೆಲುವು ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತದ ಐದನೇ ಅತಿ ದೊಡ್ಡ ಗೆಲುವು ದಾಖಲಾಗಿದೆ. ಬ್ಯಾಟಿಂಗ್,ಬೌಲಿಂಗ್ ಹಾಗೂ ಫಿಲ್ಲಿಂಗ್ ವಿಭಾಗಗಳಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡಿದ್ದು, ವಿಶ್ವ ಕಪ್ ಅಭಿಯಾನಕೆ ಭರ್ಜರಿ ಚಾಲನೆ ನೀಡಿದೆ.
ಈ ಐತಿಹಾಸಿಕ ಗೆಲುವಿನೊಂದಿಗೆ ಟೀಮ್ ಇಂಡಿಯಾ ಟೂರ್ನಿಯಲ್ಲಿ ತನ್ನ ಪ್ರಾಬಲ್ಯವನ್ನು ಸಾರಿದ್ದು, ಮುಂದಿನ ಪಂದ್ಯಗಳಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಪಾಕಿಸ್ತಾನ ವಿರುದ್ಧದ ಈ ದಾಖಲೆಯ ಜಯ ಭಾರತೀಯ ಅಭಿಮಾನಿಗಳಲ್ಲಿ ಸಂಭ್ರಮದ ಅಲೆ ಎಬ್ಬಿಸಿದೆ.
ದೀಪ್ತಿ ಶರ್ಮಾ 5 ವಿಕೆಟ್ ಗೊಂಚಲು:
ಈ ಪಂದ್ಯದಲ್ಲಿ ಭಾರತದ ಆಲ್ರೌಂಡರ್ ದೀಪ್ತಿ ಶರ್ಮಾ ಮಾರಕ ಬೌಲಿಂಗ್ ಮಾಡಿ ಕೇವಲ 10 ರನ್ ಗಳಿಗೆ ಐದು ವಿಕೆಟ್ಗಳನ್ನು ಕಬಳಿಸಿದರು. ವಿಶ್ವಕಪ್ ಇತಿಹಾಸದಲ್ಲಿ ಐದು ವಿಕೆಟ್ಗಳನ್ನು ಪಡೆದ ಭಾರತದ ಮೂರನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮೊದಲು, 2023ರಲ್ಲಿ ಇಂಗ್ಲೆಂಡ್ ವಿರುದ್ಧ ರೇಣುಕಾ ಠಾಕೂರ್ 15 ರನ್ ಗಳಿಗೆ ಐದು ವಿಕೆಟ್ಗಳನ್ನು ಮತ್ತು 2009ರಲ್ಲಿ ಪಾಕಿಸ್ತಾನ ವಿರುದ್ಧ ಪ್ರಿಯಾಂಕಾ ರಾಯ್ 16 ರನ್ ಗಳಿಗೆ ಐದು ವಿಕೆಟ್ಗಳನ್ನು ಗಮನಿಸಿದರು.
ದೀಪ್ತಿ ಶರ್ಮಾ ಐತಿಹಾಸಿಕ ಸಾಧನೆ;ಮಹಿಳಾ ಟಿ20 ವಿಕೆಟ್ ನ ಅತ್ಯಂತ ಯಶಸ್ವಿ ಬೌಲರ್!
ಪಾಕಿಸ್ತಾನ ವಿರುದ್ಧದ ಮಹತ್ವದ ಪಂದ್ಯದಲ್ಲಿ ಭಾರತದ ಸ್ಟಾರ್ ಆಲ್ ರೌಂಡರ್ ದೀಪ್ತಿ ಶರ್ಮಾ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ ಐದು ವಿಕೆಟ್ ಗೊಂಚಲು ಕಬಳಿಸಿದ ದೀಪ್ತಿ, ಮಹಿಳಾ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಅಪರೂಪದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಈ ಸಾಧನೆಯೊಂದಿಗೆ ದೀಪ್ತಿ ಶರ್ಮಾ 166 ವಿಕೆಟ್ಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿದ್ದು, ಥೈಲ್ಯಾಂಡ್ ನ ತಿಪಾಚಾ ಪುಟ್ಟಾವೊಂಗ್ ಹಾಗೂ ರುವಾಂಡಾದ ಹೆನ್ರಿಯೆಟ್ ಇಶಿಮ್ವೆ ಅವರನ್ನು ಹಿಂದಿಕ್ಕಿದ್ದಾರೆ. ಇದರೊಂದಿಗೆ ಅವರು ಮಹಿಳಾ T -೨೦ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ವಿಶ್ವದ ನಂಬರ್ ಒನ್ ಸ್ಥಾನಕೇರಿದ್ದಾರೆ.
ವಿಶ್ವ ಕಪ್ ನಂತಹ ದೊಡ್ಡ ವೇದಿಕೆಯಲ್ಲಿ ಈ ಸಾಧನೆ ಮಾಡಿರುವುದು ದೀಪ್ತಿ ಅವರ ವೃತ್ತಿ ಜೀವನದ ಮತ್ತೊಂದು ಸುವರ್ಣ ಕ್ಷಣವಾಗಿದೆ. ಅವರ ಸ್ಮಾರಕ ಬೌಲಿಂಗ್ ದಾಳಿಯಿಂದ ಪಾಕಿಸ್ತಾನ್ ಬ್ಯಾಟರಗಳು ರನ್ ಗಳಿಸಲು ಪರದಾಡಿದ್ದು, ಭಾರತದ ಭರ್ಜರಿ ಗೆಲುವಿನಲ್ಲಿ ದೀಪ್ತಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ.
ಭಾರತದ ಐತಿಹಾಸಿಕ ಜಯದ ಜೊತೆಗೆ ದೀಪ್ತಿ ಶರ್ಮಾ ಅವರ ಈ ವಿಶ್ವ ದಾಖಲೆ ಭಾರತ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತಷ್ಟು ಹೆಮ್ಮೆ ತಂದಿದೆ. ಮಹಿಳಾ ಕ್ರಿಕೆಟ್ ನಲ್ಲಿ ಭಾರತದ ಪ್ರಭಾವವನ್ನು ಮತ್ತೊಮ್ಮೆ ಜಗತ್ತಿಗೆ ಸಾರುವಲ್ಲಿ ಈ ಸಾಧನೆ ಮಹತ್ವದ ಮೈಲಿಗಲ್ಲಾಗಿದೆ.
ದೀಪ್ತಿ ಶರ್ಮ ಮತ್ತೊಂದು ದಾಖಲೆ; ಶ್ರೀ ಚರಣಿಯ ಕನಸಿನ ವಿಶ್ವ ಕಪ್ ಪಾದರ್ಪನೆ!
ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಭಾರತದ ಅನುಭವಿ ಸ್ಪಿನ್ನರ್ ದೀಪ್ತಿ ಶರ್ಮಾ ಕೇವಲ ಐದು ವಿಕೆಟ್ ಗೊಂಚಲು ಪಡೆಯುವುದರಲ್ಲಿ ನಿಲ್ಲದೆ, ಮತ್ತೊಂದು ಅಪರೂಪದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಮಹಿಳಾ T -೨೦ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಪೂರ್ಣ ಸದಸ್ಯ ರಾಷ್ಟ್ರಗಳ ಪರ ಒಂದಕ್ಕಿಂತ ಹೆಚ್ಚು ಬಾರಿ ಐದು ವಿಕೆಟ್ ಗೊಂಚಲು ಪಡೆದ ಏಕೈಕ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಈ ಪಂದ್ಯದಲ್ಲಿ ಐದು ವಿಕೆಟ್ ಕಬಳಿಸುವ ಮೂಲಕ ದೀಪ್ತಿ ಶರ್ಮಾ ತಮ್ಮ ವೃತ್ತಿಜೀವನದಲ್ಲಿ ಎರಡನೇ ಬಾರಿ ಈ ಸಾಧನೆ ಮಾಡಿದ್ದಾರೆ. ವೆಸ್ಟ್ ಇಂಡೀಸ್ ನ ಅನಿಸಾ ಮೊಹಮ್ಮದ್ ಮೂರು ಬಾರಿ ಐದು ವಿಕೆಟ್ ಗೊಂಚಲು ಪಡೆದು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ,ದೀಪ್ತಿ ಇದೀಗ ದಕ್ಷಿಣ ಆಫ್ರಿಕಾದ ಶಬ್ನಿಮ್ ಇಸ್ಮಾಯಿಲ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಇದು ಭಾರತೀಯ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ದಾಖಲಾಗಿದೆ.
ಇನ್ನೊಂದೆಡೆ, ಚೊಚ್ಚಲ T -೨೦ ವಿಶ್ವಕಪ್ ಆಡುತ್ತಿರುವ ಯುವ ಪ್ರತಿಭೆ ಶ್ರೀ ಚರಣಿ ತಮ್ಮ ಮೊದಲ ಪಂದ್ಯವನ್ನೇ ಸ್ಮರಣೀಯವಾಗಿಸಿಕೊಂಡಿದ್ದಾರೆ. ಪಾಕಿಸ್ತಾನ್ ವಿರುದ್ಧ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಅವರು ಕೇವಲ 21 ರನ್ ನೀಡಿ ಮೂರು ಪ್ರಮುಖ ವಿಕೆಟ್ಗಳನ್ನು ಕಂಬಳಿಸಿದರು. ಅವರ ಈ ಪ್ರದರ್ಶನ ಪಾಕಿಸ್ತಾನದ ಬ್ಯಾಟಿಂಗ್ ಬೆನ್ನೆಲುಬನ್ನು ಮುರಿಯುವಲ್ಲಿ ನಿರ್ಣಾಯಕ ಪಾತ್ರ ವಹಿಸಿತು.
ವಿಶೇಷವೆಂದರೆ, T -೨೦ ವಿಶ್ವಕಪ್ ಇತಿಹಾಸದಲ್ಲಿ ಭಾರತೀಯ ಮಹಿಳಾ ಬಾಲರ್ ಗಳ ಪೈಕಿ ಇದು ಮೂರನೇ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ. 2010ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಡಯಾನಾ ಡೇವಿಡ್ ದಾಖಲಿಸಿದ್ದ ಪ್ರದರ್ಶನ ಇನ್ನೂ ಅಗ್ರ ಸ್ಥಾನದಲ್ಲಿದೆ. ವಿಶ್ವ ಕಪ್ ನ ಮೊದಲ ಪಂದ್ಯದಲ್ಲೇ ಶ್ರೀ ಚರಣಿ ನೀಡಿದ ಈ ಅಮೋಘ ಪ್ರವಚನ ಭಾರತೀಯ ಕ್ರಿಕೆಟ್ ಗೆ ಮತ್ತೊಂದು ಭರವಸೆಯ ನಕ್ಷತ್ರ ಉದಯವಾಗಿರುವ ಸೂಚನೆ ನೀಡಿದೆ.
ಈ ಪಂದ್ಯದಲ್ಲಿ, ಭಾರತೀಯ ಸ್ಪಿನ್ ಬೌಲರ್ ಗಳು ಪಿಚ್ ನಲ್ಲಿನ ತಿರುವಿನ ಸಂಪೂರ್ಣ ಲಾಭವನ್ನು ಪಡೆದುಕೊಂಡು 9 ಪಾಕಿಸ್ತಾನಿ ಬ್ಯಾಟ್ಸ್ಮನ್ ಗಳನ್ನು ಔಟ್ ಮಾಡಿದರು. ಮಹಿಳಾ ಟಿ20 ವಿಶ್ವಕಪ್ ನ ಒಂದೇ ಇನ್ನಿಂಗ್ಸ್ ನಲ್ಲಿ ಪಡೆದ ಅತಿ ಹೆಚ್ಚು ವಿಕೇಡ್ಗಳ ವಿಶ್ವ ದಾಖಲೆಯನ್ನು ಭಾರತ ಸರಿಗಟ್ಟಿದೆ. ಇದಕ್ಕೂ ಮೊದಲು, ಭಾರತದ ಸ್ಪಿನ್ನರ್ ಗಳು 2018ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಇನ್ನಿಂಗ್ಸ್ ನಲ್ಲಿ 9 ವಿಕೆಟ್ಗಳನ್ನು ಮತ್ತು ಪಾಕಿಸ್ತಾನದ ಸ್ಪಿನ್ನರ್ ಗಳು 2023ರಲ್ಲಿ ಐರ್ಲೆಂಡ್ ವಿರುದ್ಧದ ಇನ್ನಿಂಗ್ಸ್ ನಲ್ಲಿ 9 ವಿಕೆಟ್ಗಳನ್ನು ಪಡೆದಿದ್ದರು.
ಪಾಕಿಸ್ತಾನ ವಿರುದ್ಧ ಭಾರತದ ಪ್ರಾಬಲ್ಯ ಮುಂದುವರಿ;ವಿಶ್ವ ಕಪ್ ನಲ್ಲಿ ಮತ್ತೆರಡು ಐತಿಹಾಸಿಕ ದಾಖಲೆಗಳು!
2026ರ ಮಹಿಳಾ ಟಿ20 ವಿಶ್ವಕಪ್ ನಲ್ಲಿ ಸ್ಥಾನ ವಿರುದ್ಧದ ಭರ್ಜರಿ ಗೆಲುವಿನೊಂದಿಗೆ ಭಾರತದ ಮತ್ತೆರಡು ಮಹತ್ವದ ದಾಖಲೆಗಳನ್ನು ತನ್ನ ಹೆಸರಿಗೆ ಸೇರಿಸಿಕೊಂಡಿದೆ. ಮೈದಾನದಲ್ಲಿನ ಪ್ರದರ್ಶನ ಮಾತ್ರವಲ್ಲದೆ, ಪ್ರೇಕ್ಷಕರ ಬೆಂಬಲದಲ್ಲಿಯೂ ಈ ಪಂದ್ಯ ಹೊಸ ಇತಿಹಾಸ ಬರೆದಿದೆ.
ಐಸಿಸಿ ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಒಂದೇ ಎದುರಾಳಿ ವಿರುದ್ಧ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ತಂಡಗಳ ಪಟ್ಟಿಯಲ್ಲಿ ಭಾರತ ಇದೀಗ ಮೂರನೇ ಸ್ಥಾನಕ್ಕೆ ಏರಿದೆ. ಪಾಕಿಸ್ತಾನ ವಿರುದ್ಧ ಆಡಿದ 9 ವಿಶ್ವಕಪ್ ಪಂದ್ಯಗಳಲ್ಲಿ ಭಾರತ ಏಳು ಗೆಲುವು ದಾಖಲಿಸಿದ್ದು, ಸಾಂಪ್ರದಾಯಿಕ ಎದುರಾಳಿಯ ವಿರುದ್ಧ ತನ್ನ ಮೈಲುಗೈಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಈ ಪಟ್ಟಿಯಲ್ಲಿ 9 ಪಂದ್ಯಗಳಲ್ಲಿ ಎಂಟು ಬಾರಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿರುವ ಆಸ್ಟ್ರೇಲಿಯ ಆಗ್ರ ಸ್ಥಾನದಲ್ಲಿದೆ.
ಇದೇ ವೇಳೆ, ಭಾರತ ಪಾಕಿಸ್ತಾನ್ ಪಂದ್ಯ ಪ್ರೇಕ್ಷಕರ ಸಂಖ್ಯೆಯಲ್ಲಿಯೂ ಹೊಸ ವಿಶ್ವ ದಾಖಲೆ ನಿರ್ಮಿಸಿದೆ. ಬರ್ಮಿಂಗ್ಹ್ಯಾಮ್ ನ ಎಡ್ಜ ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆದ ಈ ಹೈ ವೋಲ್ಟೇಜ್ ಪಂದ್ಯವನ್ನು ವೀಕ್ಷಿಸಲು 18,814 ಅಭಿಮಾನಿಗಳು ಆಗಮಿಸಿದ್ದರು. ಮಹಿಳಾ T -೨೦ ವಿಶ್ವ ಕಪ್ ಇತಿಹಾಸದಲ್ಲಿ ಯಾವುದೇ ಗುಂಪು ಹಂತದ ಪಂದ್ಯಕ್ಕೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರು ಹಾಜರಾಗುವುದಿಲ್ಲ ಇದೇ ಮೊದಲ ಬಾರಿ.
ಈ ಹಿಂದೆ ಏಷ್ಯಾದ 2024 ರಲ್ಲಿ ದುಬೈನಲ್ಲಿ ನಡೆದ ಭಾರತ ಪಾಕಿಸ್ತಾನ ಪಂದ್ಯ 15,935 ಪ್ರೇಕ್ಷಕರೊಂದಿಗೆ ಈ ದಾಖಲೆಯನ್ನು ಹೊಂದಿತು. ಇದೀಗ ಬರ್ಮಿಂಗ್ಹ್ಯಾಮ್ ನಲ್ಲಿ ದಾಖಲೆಯನ್ನು ಮೀರಿಸಿರುವ ಅಭಿಮಾನಿಗಳು ಮಹಿಳಾ ಕ್ರಿಕೆಟ್ ಗೆ ಹೆಚ್ಚುತ್ತಿರುವ ಜನಪ್ರಿಯತೆಯನ್ನು ಜಗತ್ತಿಗೆ ತೋರಿಸಿದ್ದಾರೆ.
ಒಟ್ಟಾರೆ, ಪಾಕಿಸ್ತಾನ ವಿರುದ್ಧದ ಈ ಐತಿಹಾಸಿಕ ಗೆಲುವಿನ ಮೂಲಕ ಭಾರತ ಮಹಿಳಾ ತಂಡ ಮೈದಾನದಲ್ಲೂ, ದಾಖಲೆಯ ಪುಸ್ತಕದಲ್ಲೂ ತನ್ನ ಛಾಪು ಮೂಡಿಸಿದ್ದು, ವಿಶ್ವಕಪ್ ಅಭಿಯಾನಕ್ಕೆ ಅತ್ಯಂತ ಆತ್ಮವಿಶ್ವಾಸದ ಆರಂಭವನ್ನು ನೀಡಿದೆ.
Also Read:
ಕನಸಿನ ಜೀವನದ ಬಗ್ಗೆ ರಶ್ಮಿಕಾ ಮಾತು: "ನನ್ನ ಬೆಸ್ಟ್ ಫ್ರೆಂಡ್ ನನ್ನ ಮದುವೆಯಾಗಿದ್ದೇನೆ"