Belagavi News:
ನವದೆಹಲಿ: ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಗಳ ಆಧಾರದ ಮೇಲೆ ನಿರ್ಧಾರಗಳನ್ನು ಕೈಗೊಳ್ಳುವ ಸಾರ್ವಭೌಮ ರಾಷ್ಟ್ರವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ವಿರುದ್ಧ ನಿರ್ಬಂಧಗಳ ಬೆದರಿಕೆಗಳು ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ರಷ್ಯಾ ಅಧ್ಯಕ್ಷ Vladimir Putin ಹೇಳಿದ್ದಾರೆ.
Moscow ನಲ್ಲಿ ನಡೆದ ಸೇಂಟ್ ಪೀಟರ್ಸ್ ಬರ್ಗ್ ಅಂತಾರಾಷ್ಟ್ರೀಯ ಆರ್ಥಿಕ ವೇದಿಕೆ 2026 ಕಾರ್ಯಕ್ರಮದಲ್ಲಿ ಮಾತನಾಡಿದ ಪುಟಿನ್, ಭಾರತವನ್ನು ರಷ್ಯಾದ "ಸಹೋದರ ಮತ್ತು ವಿಶ್ವಾಸಾರ್ಹ ಪಾಲುದಾರ" ಎಂದು ಬಣ್ಣಿಸಿದರು. ಭಾರತದೊಂದಿಗೆ ರಷ್ಯಾ ಹೊಂದಿರುವ ಸಂಬಂಧಗಳು ಪರಸ್ಪರ ನಂಬಿಕೆ, ಗೌರವ ಮತ್ತು ದೀರ್ಘಕಾಲದ ಸ್ನೇಹದ ಮೇಲೆ ನಿರ್ಮಾಣಗೊಂಡಿದೆ ಎಂದು ಅವರು ಹೇಳಿದರು.
ನವದೆಹಲಿಯೊಂದಿಗಿನ ಪಾಲುದಾರಿಕೆಗೆ ರಷ್ಯಾ ಬದ್ಧವಾಗಿದೆ ಎಂದು ಪುನರುಚ್ಚರಿಸಿದ ಪುಟಿನ್, ಭಾರತದೊಂದಿಗಿನ ಸಹಕಾರವು ಯಾವುದೇ ರಾಜಕೀಯ ಸಂದರ್ಭಗಳು ಅಥವಾ ಜಾಗತಿಕ ಒತ್ತಡಗಳಿಂದ ಪ್ರಭಾವಿತವಾಗಿಲ್ಲ ಎಂದು ಸ್ಪಷ್ಟಪಡಿಸಿದರು. "ಭಾರತವು ರಷ್ಯಾದ ಅತ್ಯಂತ ಪ್ರಮುಖ ಪಾಲುದಾರ ರಾಷ್ಟ್ರಗಳಲ್ಲಿ ಒಂದಾಗಿದೆ. ಉಭಯ ದೇಶಗಳ ನಡುವಿನ ಸಹಕಾರ ಬದಲಾಗುತ್ತಿರುವ ರಾಜಕೀಯ ಪರಿಸ್ಥಿತಿಗಳಿಂದ ಪ್ರಭಾವಿತವಾಗುವುದಿಲ್ಲ ನಮ್ಮ ನಡುವಿನ ಸಂಬಂಧ ಉತ್ತಮ ನಂಬಿಕೆ ಮತ್ತು ಸಹೋದರತ್ವದ ಭಾವನೆಯ ಮೇಲೆ ನಿಂತಿದೆ" ಎಂದು ಅವರು ಹೇಳಿದರು.
ಭಾರತ - ರಷ್ಯಾ ನಡುವಿನ ರಕ್ಷಣಾ, ಇಂಧನ, ವ್ಯಾಪಾರ ಹಾಗೂ ತಂತ್ರಜ್ಞಾನ ಕ್ಷೇತ್ರಗಳ ಸಹಕಾರ ನಿರಂತರವಾಗಿ ವಿಸ್ತರಿಸುತ್ತಿದ್ದು, ಉಭಯ ರಾಷ್ಟ್ರಗಳ ಬಾಂಧವ್ಯ ಮತ್ತಷ್ಟು ಬಲಗೊಳ್ಳುತ್ತಿದೆ. ಪುಟಿನ್ ಅವರ ಈ ಹೇಳಿಕೆ ಜಾಗತಿಕ ರಾಜಕೀಯ ವಲಯದಲ್ಲಿ ಗಮನ ಸೆಳೆದಿದ್ದು, ಭಾರತ ರಷ್ಯಾ ಸಂಬಂಧಗಳ ಮಹತ್ವವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.
ಭಾರತದ ಮಾನವ ಸಂಪನ್ಮೂಲ ಸಾಮರ್ಥ್ಯವನ್ನು ಶ್ಲಾಘಿಸಿದ ರಷ್ಯಾ ಅಧ್ಯಕ್ಷ Vladimir Putin, ಭಾರತೀಯರು ಉನ್ನತ ಶಿಕ್ಷಣ ಪಡೆದವರಾಗಿದ್ದು, ವಿಶೇಷವಾಗಿ ಕೋಡಿಂಗ್ ಆಗು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಜಾಗತಿಕ ಮಟ್ಟದ ಪರಿಣಿತರಾಗಿ ಗುರುತಿಸಿಕೊಂಡಿದ್ದಾರೆ ಎಂದು ಹೇಳಿದರು. ಜಾಗತಿಕ ಸಾಫ್ಟ್ವೇರ್ ಮಾರುಕಟ್ಟೆಯಲ್ಲಿ ಭಾರತ ಮಹತ್ವದ ಸ್ಥಾನವನ್ನು ಹೊಂದಿದ್ದು, ವಿಶ್ವದ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತೀಯರ ಕೊಡುಗೆ ಗಮನಾರ್ಹವಾಗಿದೆ ಎಂದು ಅವರು ಪ್ರಶಂಸಿಸಿದರು.
ಹಾರ್ಮುಜ್ ಜಲಸಂಧಿಯ ಸುತ್ತಲಿನ ಉದ್ವಿಗ್ನ ಪರಿಸ್ಥಿತಿಯನ್ನು ಉಲ್ಲೇಖಿಸಿದ ಪುಟಿನ್, ಇಂತಹ ಸವಾಲಿನ ಸಂದರ್ಭಗಳಲ್ಲೂ ರಷ್ಯಾ ಮತ್ತು ಭಾರತೀಯ ಕಂಪನಿಗಳು ಪರಸ್ಪರ ಸಹಕಾರವನ್ನು ವೃದ್ಧಿಸಿಕೊಂಡು ಸರಿಯಾದ ನಿರ್ಧಾರ ತೆಗೆದುಕೊಂಡಿವೆ ಎಂದು ಅವರು ಹೇಳಿದರು. ರಷ್ಯಾ ಈಗ ಭಾರತ ಹಾಗೂ ಇತರ ಏಷ್ಯಾದ ರಾಷ್ಟ್ರಗಳಿಗೆ ತನ್ನ ಪೂರೈಕೆಗಳನ್ನು ಹೆಚ್ಚಿಸುತ್ತಿದ್ದು ಪಾಲುದಾರ ರಾಷ್ಟ್ರಗಳೊಂದಿಗೆ ತಾಂತ್ರಿಕ ಪರಿಹಾರಗಳು ಮತ್ತು ಪರಿಣಿತಿಯನ್ನು ಹಂಚಿಕೊಳ್ಳುವುದನ್ನು ಮುಂದುವರಿಸುತ್ತಿದೆ ಎಂದು ತಿಳಿಸಿದರು.
ಭಾರತದೊಂದಿಗಿನ ಮಸ್ಕೋದ ಬಾಂಧವ್ಯವನ್ನು ಯಾವುದೇ ಬಾಹ್ಯ ಶಕ್ತಿಗಳು ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಪುಟಿನ್, "ನಮ್ಮ ಎಲ್ಲಾ ಪಾಲುದಾರ ರಾಷ್ಟ್ರಗಳಂತೆ ಭಾರತದೊಂದಗಿನ ಸಹಕಾರವು ರಾಜಕೀಯ ಪ್ರೇರಿತವಾಗಿಲ್ಲ. ಭಾರತಕ್ಕೆ ಏನು ನೀಡಬೇಕು ಅಥವಾ ಏನು ಮಾಡಬಾರದು ಎಂದು ಯಾರೂ ನಮಗೆ ಸೂಚಿಸಲು ಸಾಧ್ಯವಿಲ್ಲ. ರಷ್ಯಾ ತನ್ನ ಪಾಲುದಾರರೊಂದಿಗೆ ಮಾಡಿಕೊಂಡಿರುವ ಬದ್ಧತೆಗಳನ್ನು, ವಿಶೇಷವಾಗಿ ಭಾರತದಂತಹ ವಿಶ್ವಾಸಾರ್ಹ ಸ್ನೇಹ ರಾಷ್ಟ್ರಗಳೊಂದಿಗೆ ಮುಂದುವರಿಸಿಕೊಂಡು ಹೋಗಲಿದೆ" ಎಂದು ಹೇಳಿದರು.
ಭಾರತ- ರಷ್ಯಾ ನಡುವಿನ ದೀರ್ಘಕಾಲದ ಸ್ನೇಹ, ವ್ಯಾಪಾರ, ಇಂಧನ, ತಂತ್ರಜ್ಞಾನ ಹಾಗೂ ರಕ್ಷಣಾ ಕೇಂದ್ರಗಳ ಸಹಕಾರವು ಮತ್ತಷ್ಟು ಬಲಗೊಳ್ಳುತ್ತಿರುವ ಸಂದರ್ಭದಲ್ಲಿ ಪುಟಿನ್ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಭಾರತವನ್ನು " ಸಹೋದರ ಮತ್ತು ವಿಶ್ವಾಸಾರ್ಹ ಪಾಲುದಾರ" ಎಂದು ಬಣ್ಣಿಸಿರುವ ಅವರ ಮಾತುಗಳು ಉಭಯ ರಾಷ್ಟ್ರಗಳ ನಡುವಿನ ಭಾಂದವ್ಯದ ಗಟ್ಟಿತನವನ್ನು ಮತ್ತೊಮ್ಮೆ ಪ್ರತಿಬಿಂಬಿಸಿವೆ.
ಭಾರತದೊಂದಿಗಿನ ಅವರೇ ನಾವು ರಕ್ಷಣಾ ಸಂಬಂಧಗಳ ಕುರಿತು ಮಾತನಾಡಿದ ರಷ್ಯಾ ಅಧ್ಯಕ್ಷ Vladimir Putin, ಭಾರತ ಮತ್ತು ರಷ್ಯಾ ನಡುವಿನ ಸಹಕಾರವು ಸೋವಿಯತ್ ಯುಗದಿಂದಲೂ ಮುಂದುವರಿದ ದೀರ್ಘ ಇತಿಹಾಸವನ್ನು ಹೊಂದಿದೆ ಎಂದು ತಿಳಿಸಿದ್ದಾರೆ. ಭಾರತದ ಸಶಸ್ತ್ರ ಪಡೆಗಳಲ್ಲಿನ ಗಮನಾರ್ಹ ಭಾಗವು ರಷ್ಯಾ ನಿರ್ಮಿತ ಉಪಕರಣಗಳಿಂದ ಸಜ್ಜುಗೊಂಡಿದ್ದು, ಈ ಸಹಕಾರವು ದಶಕಗಳಿಂದ ಮುಂದುವರಿದ ಪರಂಪರೆಯಾಗಿದೆ ಎಂದು ಅವರು ಹೇಳಿದ್ದಾರೆ.
ಈ ಸಂಬಂಧವು ಕೇವಲ ಶಸ್ತ್ರಾಸ್ತ್ರಗಳ ಗಳಿಗೆ ಮತ್ತು ಮಾರಾಟಕ್ಕೆ ಮಾತ್ರ ಸೀಮಿತವಾಗಿಲ್ಲ, ಬದಲಾಗಿ ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳಿಗೂ ವಿಸ್ತರಿಸಿದೆ ಎಂದು ಪುಟಿನ್ ವಿವರಿಸಿದರು. ಭಾರತ ಮತ್ತು ರಷ್ಯಾದ ತಜ್ಞರ ಯಶಸ್ವಿ ಸಹಕಾರಕ್ಕೆ ಉದಾಹರಣೆಯಾಗಿ BrahMos missile ಯೋಜನೆಯನ್ನು ಅವರು ಉಲ್ಲೇಖಿಸಿದರು.
ಭಾರತವು ತನ್ನ ಅಗತ್ಯಗಳಿಗೆ ಅನುಗುಣವಾಗಿ ತಂತ್ರಜ್ಞಾನ ಮತ್ತು ರಕ್ಷಣಾ ಉತ್ಪನ್ನಗಳನ್ನು ಆಯ್ಕೆ ಮಾಡುವ ಸಂಪೂರ್ಣ ಸ್ವಾತಂತ್ರ್ಯ ಹೊಂದಿದೆ ಎಂದು ಹೇಳಿದ ಅವರು, ಭಾರತವು ಸದಾ ತನ್ನ ರಾಷ್ಟ್ರೀಯ ಹಿತಾಸಕ್ತಿ ಗಳಿಂದಲೇ ಮಾರ್ಗದರ್ಶಿತವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಅದೇ ವೇಳೆ BRICS ಗುಂಪಿನ ಹೆಚ್ಚುತ್ತಿರುವ ಆರ್ಥಿಕ ಮಹತ್ವವನ್ನು ಉಲ್ಲೇಖಿಸಿದ ಪುಟಿನ್, ಈ ರಾಷ್ಟ್ರಗಳು ಈಗ ಜಾಗತಿಕ ವಾರ್ಷಿಕ ಆರ್ಥಿಕ ಬೆಳವಣಿಗೆ ಸುಮಾರು ಅರ್ಧದಷ್ಟು ಪಾಲನ್ನು ಹೊಂದಿವೆ ಎಂದು ಹೇಳಿದರು. ಅವರ ವಿರುದ್ಧವಾಗಿ G7 ದೇಶಗಳ ಕೊಡುಗೆ ಗಮನಾರ್ಹವಾಗಿ ಕುಸಿಯುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
ಭಾರತ ರಷ್ಯಾ ರಕ್ಷಣಾ ಸಹಕಾರ ತಂತ್ರಜ್ಞಾನ ವಿನಿಮಯ ಮತ್ತು ಜಾಗತಿಕ ಆರ್ಥಿಕ ಸಮತೋಲನದ ಕುರಿತಾಗಿ ಪುಟಿನ್, ಈ ಹೇಳಿಕೆಗಳು ಅಂತಾರಾಷ್ಟ್ರೀಯ ವಲಯದಲ್ಲಿ ಗಮನ ಸೆಳೆದಿವೆ.
Also Read:
ಕನ್ನಡದ ರವಿ ಬಸ್ರೂರು ಬಾಲಿವುಡ್ ಎಂಟ್ರಿ : ಸ್ಟಾರ್ ನಿರ್ದೇಶಕನ ಚಿತ್ರಕ್ಕೆ ಸಂಗೀತ