BELAGAVI NEWS:
ಜೆರುಸಲೇಂ, ಜುಲೈ06 :ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರು ಅಮೆರಿಕ ಉಪಾಧ್ಯಕ್ಷ ಜೇಡಿ ವ್ಯಾನ್ಸ್ ನೀಡಿದ್ದ"ಅಮೆರಿಕ ಮಾತ್ರ ಇಸ್ರೇಲ್ ಗೆ ಏಕೈಕ ಶಕ್ತಿಶಾಲಿ ಮಿತ್ರ ರಾಷ್ಟ್ರ" ಎಂಬ ಹೇಳಿಕೆಯನ್ನು ತಳ್ಳಿ ಹಾಕಿದ್ದಾರೆ. ಜಗತ್ತಿನಲ್ಲಿ ಇಸ್ರೇಲ್ ಗೆ ಅಮೆರಿಕ ಮಾತ್ರವಲ್ಲದೆ ಭಾರತ ಸೇರಿದಂತೆ ಹಲವು ರಾಷ್ಟ್ರಗಳ ಬಲಿಷ್ಠ ಬೆಂಬಲವಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನೇತನ್ಯಾಹು ಮಾತನಾಡಿ, ಭಾರತವು 1.4 ಬಿಲಿಯನ್ ಜನಸಂಖ್ಯೆಯೊಂದಿಗೆ ಇಸ್ರೇಲ್ ಗೆ ಅತ್ಯಂತ ಪ್ರಮುಖ ಮಿತ್ರ ರಾಷ್ಟ್ರವಾಗಿದೆ ಎಂದು ಶ್ಲಾಫಿಸಿದ್ದಾರೆ. ಭಾರತದಿಂದ ಇಸ್ರೇಲ್ ಗೆ ದೊರೆಯುತ್ತಿರುವ ರಾಜತಾಂತ್ರಿಕ, ತಂತ್ರಜ್ಞಾನ ಹಾಗೂ ಆರ್ಥಿಕ ಬೆಂಬಲವೂ ಎರಡು ದೇಶಗಳ ನಡುವಿನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಇಸ್ರೇಲ್ ನ ತಂತ್ರಜ್ಞಾನ ಮತ್ತು ಸೈನಿಕ ಶಕ್ತಿಗೆ ವಿಶ್ವದ ಅನೇಕ ದೇಶಗಳಿಂದ ಹೆಚ್ಚಿನ ಬೇಡಿಕೆ ಇರುವುದಾಗಿ ಹೇಳಿದ ನೆತನ್ಯಾಹು, ಸೈಬರ್ ಭದ್ರತಾ ಕ್ಷೇತ್ರದಲ್ಲಿ ಇಸ್ರೇಲ್ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದು ಉಲ್ಲೇಖಿಸಿದ್ದಾರೆ. ಈ ಸಾಧನೆ ಇಸ್ರೇಲ್ ನ ಜಾಗತಿಕ ಪ್ರಭಾವ ಮತ್ತು ಭದ್ರತಾ ಸಾಮರ್ಥ್ಯವನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.
ಹೇಳಿಕೆಗಳು ಜಾಗತಿಕ ರಾಜಕೀಯ ವಲಯದಲ್ಲಿ ಭಾರತ -ಇಸ್ರೇಲ್-ಅಮೆರಿಕ ತ್ರಿಕೋನ ಸಂಬಂಧಗಳ ಮಹತ್ವವನ್ನು ಮತ್ತೊಮ್ಮೆ ಚರ್ಚೆಗೆ ತಂದಿವೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭಾರತದಿಂದ ಇಸ್ರೇಲ್ ಗೆ ದೊರೆಯುತ್ತಿರುವ ಅಗಾದ ಬೆಂಬಲವನ್ನು ಮತ್ತೊಮ್ಮೆ ಶ್ಲಾಫಿಸಿದ್ದಾರೆ. ಅಮೇರಿಕಾ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರ ಹೇಳಿಕೆಯನ್ನು ಸಂಪೂರ್ಣವಾಗಿ ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ ಅವರು, ಜಾಗತಿಕ ವೇದಿಕೆಯಲ್ಲಿ ಇಸ್ರೇಲ್ ಗೆ ಅಮೆರಿಕ ಮಾತ್ರವಲ್ಲದೆ ಭಾರತ ಸೇರಿದಂತೆ ಹಲವು ಶಕ್ತಿಶಾಲಿ ಮಿತ್ರ ರಾಷ್ಟ್ರಗಳ ಬೆಂಬಲವು ಇದೆ ಎಂದು ಸ್ಪಷ್ಟಪಡಿಸಿದ್ದಾರೆ.
ನೇತನ್ಯಾಹು ಮಾತನಾಡಿ, "ನಾನು ಜೆಡಿ ವ್ಯಾನ್ಸ್ ಅವರನ್ನು ಗೌರವಿಸುತ್ತೇನೆ. ಆದರೆ ಅವರು ಹೇಳುವ ಎಲ್ಲ ಮಾತುಗಳನ್ನು ನಾನು ಒಪ್ಪಲು ಸಾಧ್ಯವಿಲ್ಲ. ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲ್ ನ ಅತ್ಯುತ್ತಮ ಸ್ನೇಹಿತ ಎಂಬುವುದರಲ್ಲಿ ಯಾವುದೇ ಸಂಶಯವಿಲ್ಲ .ಆದರೆ ಇಸ್ರೇಲ್ಗೆ ಭಾರತದಂತಹ ಇನ್ನೂ ಹಲವು ಶಕ್ತಿಶಾಲಿ ಸ್ನೇಹಿತ ರಾಷ್ಟ್ರಗಳು ಇದ್ದಾರೆ," ಎಂದು ಹೇಳಿದ್ದಾರೆ.
ಭಾರತದ ಬೆಂಬಲವನ್ನು ವಿಶೇಷವಾಗಿ ಉಲ್ಲೇಖಿಸಿದವರು, "ಭಾರತವು ಸುಮಾರು 140 ಕೋಟಿ (1.4ಬಿಲಿಯನ್)ಜನಸಂಖ್ಯೆ ಹೊಂದಿರುವ ಮಹಾ ಶಕ್ತಿ ರಾಷ್ಟ್ರವಾಗಿದೆ. ಅಲ್ಲಿಂದ ಇಸ್ರೇಲ್ ಗೆ ಸಿಗುತ್ತಿರುವ ಬೆಂಬಲ ಅಪಾರವಾಗಿದೆ. ನನ್ನ ಫೇಸಬುಕ್ ಖಾತೆಯನ್ನು ನೋಡಿದರೆ ಸಾಕು, ಭಾರತದ ಜನರು ನಮ್ಮ ಮೇಲೆ ತೋರಿಸುತ್ತಿರುವ ಪ್ರೀತಿ ಮತ್ತು ಬೆಂಬಲದ ಪ್ರಮಾಣ ಸ್ಪಷ್ಟವಾಗಿ ಗೋಚರಿಸುತ್ತದೆ," ಎಂದು ತಿಳಿಸಿದ್ದಾರೆ.
ಈ ಹೇಳಿಕೆಗಳು ಭಾರತ- ಇಸ್ರೇಲ್ ಸಂಬಂಧದ ಬಲವನ್ನು ಮತ್ತೊಮ್ಮೆ ಹೈಲೈಟ್ ಮಾಡಿದ್ದು, ಅಂತರಾಷ್ಟ್ರೀಯ ರಾಜಕೀಯ ವಲಯದಲ್ಲಿ ಗಮನ ಸೆಳೆದಿವೆ.
ಜೆಡಿ ವ್ಯಾನ್ಸ್ ಹೇಳಿದ್ದೇನು?
ಕಳೆದ ತಿಂಗಳು ಶ್ವೇತಭವನದಲ್ಲಿ ನಡೆದ ಪತ್ರಿಕಾಗೋಷ್ಠಿ ಹಾಗೂ ದಿ ನ್ಯೂಯಾರ್ಕ್ ಟೈಮ್ಸ್ ಸಂದರ್ಶನದಲ್ಲಿ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಇಸ್ರೇಲ್ ಸರಕಾರದ ಕೆಲವು ನಿಲುವುಗಳನ್ನು ಕಠಿಣವಾಗಿ ಟೀಕಿಸಿದ್ದರು. ವಿಶೇಷವಾಗಿ ಅಮೆರಿಕ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಶಾಂತಿ ಮಾತುಕತೆಗಳಿಗೆ ಇಸ್ರೇಲ್ ನೀಡುತ್ತಿರುವ ವಿರೋಧದ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು.
ವ್ಯಾನ್ಸ್ ಅವರ ಪ್ರಕಾರ, ಇಸ್ರೇಲ್ ಗೆ ಜಾಗತಿಕ ಮಟ್ಟದಲ್ಲಿ ಅತ್ಯಂತ ಬಲವಾದ ಬೆಂಬಲ ನೀಡುತ್ತಿರುವುದು ಅಮೆರಿಕ ಮಾತ್ರವಾಗಿದ್ದು ಅಧ್ಯಕ್ಷರು ಟ್ರಂಪ್ ಇಸ್ರೇಲ್ ಪರವಾಗಿ ನಿಂತಿರುವ ಪ್ರಮುಖ ನಾಯಕ ಎಂದು ಅವರು ಹೇಳಿದ್ದಾರೆ.
"ನಾನು ಇಸ್ರೇಲ್ ಸರ್ಕಾರದ ಜಾಗದಲ್ಲಿದ್ದರೆ, ಜಗತ್ತಿನಲ್ಲಿ ನಮಗೆ ಇರುವ ಏಕೈಕ ಪ್ರಬಲ ಮಿತ್ರ ರಾಷ್ಟ್ರವಾದ ಅಮೆರಿಕಾದ ವಿರುದ್ಧ ನಡೆಯುವಂತಹ ಕ್ರಮಗಳನ್ನು ಕೈಗೊಳ್ಳುವುದಿಲ್ಲ. ಕೇವಲ ಸೈನಿಕ ಶಕ್ತಿಯಿಂದಲೇ ಎಲ್ಲಾ ರಾಷ್ಟ್ರೀಯ ಭದ್ರತಾ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ' ಎಂದು ವ್ಯಾನ್ ಹೇಳಿದ್ದಾರೆ.
ಈ ಹೇಳಿಕೆಗಳು ಅಮೆರಿಕ - ಇಸ್ರೇಲ್ ಸಂಬಂಧಗಳ ನಡುವಿನ ಸೂಕ್ಷ್ಮ ರಾಜಕೀಯ ಸಮೀಕರಣಗಳ ಕುರಿತು ಹೊಸ ಚರ್ಚೆಗೆ ಕಾರಣವಾಗಿದೆ.
ಜಾಗತಿಕ ಮಟ್ಟದಲ್ಲಿ ಇಸ್ರೇಲ್ ನ ತಂತ್ರಜ್ಞಾನ ಮತ್ತು ಮಿಲಿಟರಿ ಸಾಮರ್ಥ್ಯಕ್ಕೆ ಭಾರಿ ಬೇಡಿಕೆ ಇರುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ತಿಳಿಸಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಟೀಕೆಗಳು ಕೇಳಿ ಬರುತ್ತಿದ್ದರು, ಇಸ್ರೇಲ್ ಗೆ ಅನೇಕ ದೇಶಗಳ ಬೆಂಬಲ ತಂತ್ರಜ್ಞಾನ, ರಕ್ಷಣಾ ವ್ಯವಸ್ಥೆ ಮತ್ತು ಸೈಬರ್ ಭದ್ರತಾ ಕ್ಷೇತ್ರಗಳಲ್ಲಿ ಮುಂದುವರೆದಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನೇತನ್ಯಾಹು ಹೇಳುವಂತೆ, ವಿಶ್ವದ ಹಲವು ರಾಷ್ಟ್ರಗಳ ನಾಯಕರು ತಮ್ಮೊಂದಿಗೆ ನೇರವಾಗಿ ಸಂಪರ್ಕದಲ್ಲಿದ್ದು, ಸಾರ್ವಜನಿಕವಾಗಿ ರಾಜಕೀಯ ಕಾರಣಗಳಿಂದ ಬೆಂಬಲ ವ್ಯಕ್ತಪಡಿಸಲು ಸಾಧ್ಯವಾಗದಿದ್ದರೂ, ಖಾಸಗಿಯಾಗಿ ಇಸ್ರೇಲ್ ನ ಮಿಲಿಟರಿ ತಂತ್ರಗಳು, ಕೃತಕ ಬುದ್ಧಿಮತ್ತೆ ಮತ್ತು ಸೈಬರ್ ಭದ್ರತಾ ಪರಿಣತಿಯನ್ನು ಬಳಸಿಕೊಳ್ಳಲು ಆಸಕ್ತಿ ತೋರಿಸುತ್ತಿದ್ದಾರೆ. ಇಸ್ರೇಲ್ ಸೈಬರ್ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಈ ನಡುವೆ, ಅಂತರಾಷ್ಟ್ರೀಯ ರಾಜಕೀಯ ವಲಯದಲ್ಲಿ ಮಹತ್ವದ ಬೆಳವಣಿಗೆಯಾಗಿ, ಮಾಜಿ ಅಮೇರಿಕಾ ಅಧ್ಯಕ್ಷರು ಟ್ರಂಪ್ ಮತ್ತು ನೇತನ್ಯಾಹು ನಡುವೆ ಶೀಘ್ರದಲ್ಲೇ ಭೇಟಿಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಆಕ್ಸಿಯೋಸ್ ವರದಿ ಪ್ರಕಾರ, ಪ್ರಾದೇಶಿಕ ಭದ್ರತೆ, ಇರಾನ್ ಹಾಗೂ ಲೆಬನಾನ್ ಸಂಬಂಧಿತ ವಿಷಯಗಳಲ್ಲಿ ಇಬ್ಬರ ನಡುವೆ ಕೆಲ ಬಿನ್ನಾಭಿಪ್ರಾಯಗಳು ಇದ್ದರೂ, ನ್ಯಾಟೋ ಶೃಂಗಸಭೆಯ ನಂತರ ಶ್ವೇತ ಭವನದಲ್ಲಿ ಅಥವಾ ಮುಂದಿನ ವಾರಗಳಲ್ಲಿ ಇಬ್ಬರು ನಾಯಕರು ಮುಖಾಮುಖಿಯಾಗಿ ಭೇಟಿಯಾಗಿ ಮಹತ್ವದ ಚರ್ಚೆ ನಡೆಸಲು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಬೆಳವಣಿಗೆಗಳು ಜಾಗತಿಕ ರಾಜಕೀಯ ಸಮೀಕರಣಗಳ ಮೇಲೆ ಗಮನಾರ್ಹ ಪರಿಣಾಮ ಬೀರುವ ಸಾಧ್ಯತೆ ಇದೆ.