BELAGAVI NEWS :
ನವದೆಹಲಿ: ಜೂನ್ 21ರಂದು ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ದೇಶಾದ್ಯಂತ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಈ ಬಾರಿ "ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ" ಎಂಬ ಘೋಷವಾಕ್ಯದಡಿ ಯೋಗ ದಿನವನ್ನು ಆಚರಿಸಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಯೋಗಾಭ್ಯಾಸ ಮಾಡಲು ದೇಶದ ವಿವಿಧ ಭಾಗಗಳ ಸಂಸ್ಥೆಗಳು ಮತ್ತು ಸಮುದಾಯಗಳಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬರೋಬ್ಬರಿ 6 ಲಕ್ಷಕ್ಕೂ ಹೆಚ್ಚು ನಡೆದಿವೆ ಎಂದು Ministy of Ayush ನ ಯೋಗ ಸಂಗಮ ಪೋರ್ಟಲ್ ತಿಳಿಸಿದೆ.
2026ರ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಆಯೋಜಿಸಿರುವ ಯೋಗ ಸಂಗಮ ಉಪಕ್ರಮದ ಮೂಲಕ ದೇಶಾದ್ಯಂತ ಸಂಸ್ಥೆಗಳು ಮತ್ತು ಸಮುದಾಯಗಳನ್ನು ಸಂಪರ್ಕಿಸುವ ಗುರಿ ಹೊಂದಲಾಗಿದೆ. ಸಾಮಾನ್ಯ ಯೋಗ ಶಿಷ್ಟಾಚಾರದ ಆಧಾರದ ಮೇಲೆ ಒಂದೇ ಸಮಯದಲ್ಲಿ ಸಿಂಕ್ರೋನೈಸ್ಡ್ ಯೋಗ ಅವಧಿಗಳನ್ನು ನಡೆಸಲು ಈ ಕಾರ್ಯಕ್ರಮವ ಅವಕಾಶ ಕಲ್ಪಿಸುತ್ತಿದೆ.
ಒಂದೇ ಸ್ಥಳದಲ್ಲಿ ನಡೆಯುವ ಆಚರಣೆಗೆ ಸೀಮಿತವಾಗದೆ, ದೇಶದ ವಿವಿಧ ಭಾಗಗಳಲ್ಲಿರುವ ಸಂಸ್ಥೆಗಳು ತಮ್ಮದೇ ಸ್ಥಳಗಳಲ್ಲಿ ಯೋಗ ಕಾರ್ಯಕ್ರಮಗಳನ್ನು ಆಯೋಜಿಸಿ ರಾಷ್ಟ್ರೀಯ ಮಟ್ಟದ ಯೋಗ ಚಳುವಳಿಯ ಭಾಗವಾಗಲು ಈ ಉಪಕ್ರಮ ನೆರವಾಗಿಲಿದೆ.
ಜೂನ್ 21ರಂದು ನೋಂದಾಯಿತ ಸಂಸ್ಥೆಗಳು ತಮ್ಮ ಸ್ಥಳಗಳಲ್ಲಿ ಯೋಗಾಭ್ಯಾಸ ನಡೆಸುವ ಮೂಲಕ ಪ್ರಧಾನಿ ಮೋದಿ ಅವರೊಂದಿಗೆ ರಾಷ್ಟ್ರವ್ಯಾಪ್ತಿ ಯೋಗ ಸಂಗಮ ಕಾರ್ಯಕ್ರಮಕ್ಕೆ ಸೇರ್ಪಡೆಯಾಗಲಿವೆ. ಪೋರ್ಟಲ್ ನಲ್ಲಿ ನೋಂದಣಿಯ ಅವಕಾಶ ನೀಡಿದ ಬಳಿಕ ಇತ್ತೀಚಿನ ದಿನಗಳಲ್ಲಿ ನೋಂದಣಿ ಪ್ರಮಾಣವನ್ನು ಗಣನೀಯ ಏರಿಕೆ ಕಂಡಿದ್ದು, ಯೋಗ ದಿನಾಚರಣೆಯಲ್ಲಿ ಭಾಗವಹಿಸಲು ಜನರಲ್ಲಿ ಹೆಚ್ಚುತ್ತಿರುವ ಉತ್ಸಾಹವನ್ನು ಇದು ತೋರಿಸುತ್ತದೆ ಎಂದು ಆಯುಷ್ ಸಚಿವಾಲಯ ತಿಳಿಸಿದೆ.
ಯೋಗ ಸಂಗಮಕ್ಕೆ ಭರ್ಜರಿ ಬೆಂಬಲ: ದೇಶಾದ್ಯಂತ 6 ಲಕ್ಷ ನೋಂದಣಿ, 778 ಜಿಲ್ಲೆಗಳಿಗೆ ತಲುಪಿದ ಅಭಿಯಾನ
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಯೋಗ ಕಾರ್ಯಕ್ರಮಕ್ಕೆ ದೇಶಾದ್ಯಂತ ಭಾರೀ ಬೆಂಬಲ ವ್ಯಕ್ತವಾಗಿದೆ. ಶಾಲೆಗಳು, ಕಾಲೇಜುಗಳು, ಸರ್ಕಾರಿ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು, ಎನ್ ಜಿಒಗಳು ಹಾಗೂ ವಿವಿಧ ಸಮುದಾಯ ಗುಂಪುಗಳು ಯೋಗ ಸಂಗಮ ಉಪಕ್ರಮದಲ್ಲಿ ನೋಂದಣಿ ಮಾಡಿಕೊಂಡಿವೆ.
Ministry of Ayush ಮಾಹಿತಿ ಪ್ರಕಾರ, ಯೋಗ ಸಂಗಮ ಅಭಿಯಾನವು ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದ್ದು,778 ಜಿಲ್ಲೆಗಳಿಗೆ ತಲುಪಿದೆ.
ನೋಂದಾಯಿತ ಸಂಖ್ಯೆಗಳಲ್ಲಿ 3.22 ಲಕ್ಷಕ್ಕೂ ಹೆಚ್ಚು ಸರ್ಕಾರಿ ಸಂಸ್ಥೆಗಳು, ಸುಮಾರು 2 ಲಕ್ಷ ಶಿಕ್ಷಣ ಸಂಸ್ಥೆಗಳು, 16,000 ಕ್ಕೂ ಹೆಚ್ಚು ಖಾಸಗಿ ಸಂಸ್ಥೆಗಳು, 5,000ಕ್ಕೂ ಹೆಚ್ಚು ಎನ್ ಜಿಒ ಗಳು ಹಾಗೂ ಇತರ ವಿಭಾಗಗಳಿಂದ ಸುಮಾರು 44,000 ಸಂಸ್ಥೆಗಳು ಸೇರಿವೆ.
ರಾಜ್ಯವಾರು ನೋಂದಣಿಯಲ್ಲಿ West Bengal ಅಗ್ರಸ್ಥಾನದಲ್ಲಿದ್ದು, ಇಲ್ಲಿ 2.76 ಲಕ್ಷಕ್ಕೂ ಹೆಚ್ಚು ನೋಂದಣಿಗಳು ನಡೆದಿವೆ. ನಂತರ Rajasthan ಸುಮಾರು 1.50 ಲಕ್ಷ ನೋಂದಣಿಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ಯೋಗವನ್ನು ಜನರ ದೈನಂದಿನ ಜೀವನದ ಭಾಗವಾಗಿಸುವ ಉದ್ದೇಶದಿಂದ ಆಯುಷ್ ಸಚಿವಾಲಯವು ಇನ್ನಷ್ಟು ಸಂಸ್ಥೆಗಳು ಮತ್ತು ಸಮುದಾಯಗಳು ಯೋಗ ಸಂಗಮ ಕಾರ್ಯಕ್ರಮದಲ್ಲಿ ನೋಂದಣಿ ಮಾಡಿಕೊಂಡು ಭಾಗವಹಿಸುವಂತೆ ಕರೆ ನೀಡಿದೆ. ಈ ಬಾರಿ ಯೋಗ ದಿನಾಚರಣೆ ರಾಷ್ಟ್ರವ್ಯಾಪ್ತಿ ಸಾಮೂಹಿಕ ಚಳುವಳಿಯ ರೂಪ ಪಡೆಯುತ್ತಿದೆ.
Also Read:
ಜುಲೈನಲ್ಲಿ ಸಿನಿ ಜಾತ್ರೆ : ‘ಸು ಫ್ರಂ ಸೋ’ ರಿಲೀಸ್ ದಿನವೇ ಬರ್ತಿದೆ ‘ಕರಾವಳಿ’!