belagavi news :
ಅಮೆರಿಕ-ಇರಾನ್ ನಡುವೆ ಹಾರ್ಮುಜ್ ಜಲಸಂಧಿ ವಿವಾದ ಮತ್ತಷ್ಟು ತೀವ್ರ!
ಹಾರ್ಮುಜ್ ಜಲಸಂಧಿಯ ನಿಯಂತ್ರಣ ವಿಚಾರದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಜಲಸಂಧಿ ಸಂಪೂರ್ಣವಾಗಿ ತಮ್ಮ ನಿಯಂತ್ರಣದಲ್ಲಿದೆ ಎಂದು ಡ್ರೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ ಬೆನ್ನಲ್ಲೇ, ಇರಾನ್ ಕಠಿಣ ಪ್ರತಿಕ್ರಿಯೆ ನೀಡಿ,"ಇನ್ನು ಮುಂದೆ ಹಾರ್ಮುಜ್ ಜಲಸಂಧಿಯಲ್ಲಿ ಸಂಚಾರ ಇರಾನ್ ನ ನಿಯಮಗಳಡಿಯಲ್ಲೇ ನಡೆಯಲಿದೆ" ಎಂದು ಸ್ಪಷ್ಟಪಡಿಸಿದೆ.
ಉಭಯ ರಾಷ್ಟ್ರಗಳ ನಡುವೆ ನಡೆದ ಮಾತುಕತೆಗಳ ಬಳಿಕವೂ ಪರಿಸ್ಥಿತಿ ಸಂಪೂರ್ಣವಾಗಿ ಶಮನವಾಗಿಲ್ಲ. ಜಾಗತಿಕ ತೈಲ ಸಾಧನೆಯ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯ ಭದ್ರತೆ ಕುರಿತು ವಿಶ್ವದ ಗಮನ ನೆಟ್ಟಿದೆ. ಯಾವುದೇ ಸಂಘರ್ಷ ಉಂಟಾದರೆ ಜಾಗತಿಕ ತೈಲ ಮಾರುಕಟ್ಟೆ ಹಾಗೂ ಆರ್ಥಿಕತೆಯ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ.
ಆದರೆ ಉದ್ವಿಗ್ನತೆ ಮತ್ತಷ್ಟು ಹೆಚ್ಚಿದಂತೆ ತಡೆಯಲು ಎರಡು ದೇಶಗಳು ಮಹತ್ವದ ಹೆಜ್ಜೆ ಇಟ್ಟಿವೆ. ತುರ್ತು ಸಮಾನಕ್ಕಾಗಿ ವಿಶೇಷ ಹಾಟ್ ಲೈನ್ ಹಾಗೂ ಸಮನ್ವಯ ಕೇಂದ್ರ ಸ್ಥಾಪಿಸಲು ಉಭಯ ರಾಷ್ಟ್ರಗಳು ಒಪ್ಪಿಗೆ ಸೂಚಿಸಿರುವುದು ಪರಿಸ್ಥಿತಿ ನಿಯಂತ್ರಣಕ್ಕೆ ಸಹಕಾರಿಯಾಗಬಹುದು ಅಂದು ನಿರೀಕ್ಷೆ ಮೂಡಿಸಿದೆ.
ಹಾರ್ಮುಜ್ ಜಲಸಂಧಿ ವಿಚಾರದಲ್ಲಿ ಅಮೆರಿಕ ಇರಾನ್ ವಾಕ್ಸಮರ ತೀವ್ರ !
ಸ್ವಿಜರ್ಲ್ಯಾಂಡ್ ನಲ್ಲಿ ನಡೆದ ಮಾತುಕತೆಗಳು ಯಶಸ್ವಿಯಾಗಿದ್ದು, ಯುದ್ಧದ ಆತಂಕ ತಾತ್ಕಾಲಿಕವಾಗಿ ಕಡಿಮೆಯಾಗಿದೆ ಎಂದು ಅಮೆರಿಕ ಹೇಳುತ್ತಿದ್ದರು, ಹಾರ್ಮುಜ್ ಜಲಸಂಧಿ ನಿಯಂತ್ರಣದ ವಿಚಾರದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಭಿನ್ನಾಭಿಪ್ರಾಯ ಮತ್ತಷ್ಟು ಗಾಢವಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, "ಹಾರ್ಮುಜ್ ಜಲಸಂಧಿಯ ಮೇಲೆ ನಮಗೆ ಸಂಪೂರ್ಣ ನಿಯಂತ್ರಣವಿದೆ" ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಇರಾನ್ ತೀವ್ರ ಪ್ರತಿಕ್ರಿಯೆ ನೀಡಿದೆ. ಸ್ವಿಜರ್ಲ್ಯಾಂಡ್ ಮಾತುಕತೆಯಿಂದ ಹಿಂತಿರುಗಿದ ಇರಾನ್ ನ ಪ್ರಮುಖ ಸಮಾಲೋಚಕ Mohammad Bagher Ghalibaf, " ಹಾರ್ಮುಜ್ ಜಲಸಂಧಿಯ ನಿರ್ವಹಣೆ ಇನ್ನೂ ಮುಂದೆ ಯುದ್ಧಕ್ಕೂ ಮುಂಚಿನ ಸ್ಥಿತಿಗೆ ಮರಳುವುದಿಲ್ಲ. ಅದು ಇರಾನ್ ನ ನಿಯಮ ಮತ್ತು ವ್ಯವಸ್ಥೆಗಳ ಅಡಿಯಲ್ಲೇ ಕಾರ್ಯನಿರ್ವಹಿಸಲಿದೆ" ಎಂದು ಸ್ಪಷ್ಟಪಡಿಸಿದ್ದಾರೆ.
ಇದರ ಜೊತೆಗೆ, "ಇರಾನ್ ಅಮೆರಿಕವನ್ನು ಹಿಂದೆಂದೂ ನಂಬಿರಲಿಲ್ಲ, ಮುಂದೆಯೂ ನಂಬುವುದಿಲ್ಲ"ಎಂದು ಗಾಲಿಬಾಪ್ ವಾಷಿಂಗ್ಟನ್ ವಿರುದ್ಧ ವಾಗ್ದಾಯಿ ನಡೆಸಿದ್ದು, ಉಭಯ ದೇಶಗಳ ನಡುವಿನ ಅವಿಶ್ವಾಸ ಇಂದು ಮುಂದುವರೆದಿದೆ ಎಂಬುದನ್ನು ತೋರಿಸಿದೆ.
ಜಾಗತಿಕ ತೈಲ ಸಾಧನೆಯ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿ ಕುರಿತ ಈ ಬೆಳವಣಿಗೆಗಳು ಮಧ್ಯಪ್ರಾಚ್ಯದ ರಾಜಕೀಯ ಸಮೀಕರಣಗಳ ಮೇಲೆ ಮಾತ್ರವಲ್ಲ, ವಿಶ್ವದ ಇಂಧನ ಮಾರುಕಟ್ಟೆಯ ಮೇಲು ಪರಿಣಾಮ ಬೀರುವ ಸಾಧ್ಯತೆ ಇದೆ. ಅಮೇರಿಕಾ-ಇರಾನ್ ಸಂಬಂಧಗಳು ಯಾವ ದಿಕ್ಕಿಗೆ ಸಾಗಲಿದೆ ಎಂಬುದರತ್ತ ಈಗ ಜಗತ್ತಿನ ಕಣ್ಣು ನೆಟ್ಟಿದೆ.
ಹಾರ್ಮುಜ್ ಜಲಸಂಧಿ ವಿಚಾರದಲ್ಲಿ ಟ್ರಂಪ್ ಇರಾನ್ ನಡುವೆ ಮುಂದುವರೆದ ತಿಕ್ಕಾಟ!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಓವಲ್ ಕಚೇರಿಯಲ್ಲಿ ಮಾತನಾಡಿ, ತಮ್ಮ ದೇಶದ ಶಕ್ತಿಶಾಲಿ ನೌಕಾಪಡೆ ಹಾರ್ಮುಜ್ ಜಲಸಂಧಿಯ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದೆ ಎಂದು ಹೇಳಿದ್ದಾರೆ. ಅಲ್ಲದೆ, ಅಮೆರಿಕ ವಿಧಿಸಿರುವ ಆರ್ಥಿಕ ನಿರ್ಬಂಧಗಳು ಬಾಂಬ್ ದಾಳಿಗಿಂತಲೂ ಹೆಚ್ಚು ಪರಿಣಾಮಕಾರಿ ಎಂದು ಹೇಳುವ ಮೂಲಕ ಇರಾನ್ ಪ್ರತಿಪಾದನೆಗಳನ್ನು ತಳ್ಳಿ ಹಾಕಿದ್ದಾರೆ.
ಜಲಮಾರ್ಗವನ್ನು ಮುಕ್ತವಾಗಿಡಲು ಅಮೆರಿಕ ಯಶಸ್ವಿಯಾಗಿದೆ ಎಂದು ಟ್ರಂಪ್ ಹೇಳಿದು, ಹಾರ್ಮುಜ್ ಜಲಸಂಧಿಯ ಮೇಲಿನ ಹಿಡಿತದ ಬಗ್ಗೆ ಉಭಯ ರಾಷ್ಟ್ರಗಳ ನಡುವಿನ ವಾದ ಮತ್ತಷ್ಟು ತೀವ್ರಗೊಂಡಿದೆ.
ಆದರೆ, ಈ ರಾಜತಾಂತ್ರಿಕ ಸಂಘರ್ಷದ ನಡುವೆಯೂ ಸಮುದ್ರದಲ್ಲಿ ಯಾವುದೇ ಅಚಾನಕ ಸಂಘರ್ಷ ಅಥವಾ ತಪ್ಪು ಅರ್ಥೈಸಿಕೊಳ್ಳುವಿಕೆ ನಡೆಯದಂತೆ ತಡೆಯಲು ಅಮೆರಿಕ ಮತ್ತು ಇರಾನ್ ಒಪ್ಪಿಗೆ ಸೂಚಿಸಿವೆ. ಜಲ ಸಂಧಿಯಲ್ಲಿ ಸಂಚರಿಸುವ ಹಡಗುಗಳ ಬಗ್ಗೆ ಯಾವುದೇ ಸಮಸ್ಯೆ ಎದುರಾದರೆ ತಕ್ಷಣ ಸಂಪರ್ಕಿಸಲು ನೇರ ದೂರವಾಣಿ ಮತ್ತು ಸಮನ್ವಯ ಕೇಂದ್ರ ಸ್ಥಾಪಿಸಲು ನಿರ್ಧರಿಸಲಾಗಿದೆ.
ಸೋಮವಾರ ಮುಕ್ತಗೊಂಡ ಮಾತುಕತೆಯಲ್ಲಿ ಮುಂದಿನ 60 ದಿನಗಳಲ್ಲಿ ವ್ಯಾಪಕ ಒಪ್ಪಂದ ಸಾಧಿಸುವ ಗುರಿಯೊಂದಿಗೆ ಮಾರ್ಗಸೂಚಿಯೊಂದಕ್ಕೆ ಎರಡು ದೇಶಗಳು ಒಪ್ಪಿಕೊಂಡಿವೆ ಎನ್ನಲಾಗಿದೆ. ಇರಾನ್ ವಿದೇಶಾಂಗ ಸಚಿವ Abbas Araghchi ಪ್ರಕಾರ, ಕೆಲವು ಸ್ಥಗಿತಗೊಂಡ ಇರಾನಿನ ಆಸ್ತಿಗಳನ್ನು ಬಿಡುಗಡೆ ಮಾಡಲು ಮತ್ತು ತೈಲ ರಫ್ತು ನಿರ್ಬಂಧಗಳನ್ನು ಸಲ್ಲಿಸಲು ಅಮೆರಿಕ ಸಮ್ಮತಿಸಿದೆ. ಆದರೆ ಈ ಕುರಿತು ಅಮೆರಿಕಾದ ಜಂಟಿ ಹೇಳಿಕೆಯಲ್ಲಿ ಫಸ್ಟ್ ಮಾಹಿತಿ ಹೊರ ಬಂದಿಲ್ಲ.
ಹಾರ್ಮುಜ್ ಜಲಸಂದಿ ಕುರಿತ ನಿಯಂತ್ರಣ ವಿವಾದದ ನಡುವೆ ರಾಜತಾಂತ್ರಿಕ ಮಾತುಕತೆಗಳು ಮುಂದುವರೆದಿದ್ದು, ಮುಂದಿನ ಬೆಳವಣಿಗೆಗಳು ಜಾಗತಿಕ ಇಂಧನ ಮಾರುಕಟ್ಟೆ ಮತ್ತು ಮಧ್ಯಪ್ರಾಚ್ಯದ ಭದ್ರತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
Also Read:
ಧರ್ಮಸ್ಥಳ ಆಣೆ-ಪ್ರಮಾಣ ಚರ್ಚೆ: ಬಿಜೆಪಿ ನಿಲುವಿನ ಬಗ್ಗೆ ಆರ್. ಅಶೋಕ್ ಪ್ರತಿಕ್ರಿಯೆ