<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ; ಡ್ರೋನ್ ಗಳನ್ನು ಹೊಡೆದೂರುಳಿಸಿದ ಕುವೈತ್, USನಿಂದ ಪ್ರತಿದಾಳಿ!

ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ; ಡ್ರೋನ್ ಗಳನ್ನು ಹೊಡೆದೂರುಳಿಸಿದ ಕುವೈತ್, USನಿಂದ ಪ್ರತಿದಾಳಿ!
Summary: Tensions have further intensified in the Middle East. Iran has launched missile and drone attacks targeting US military bases. Kuwaiti officials said that several drones and missiles were shot down during the attack. The US has launched a counter-attack in response. The threat of war in the region has further increased. Read this report for complete information on the latest developments in the Iran-US conflict, its impact on global markets and the security situation in the Middle East.

Balagavi News:

ಕುವೈತ್ ಸಿಟಿ: ಮಧ್ಯ ಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದ್ದು, ಗಲ್ಫ್ ಪ್ರದೇಶದಾದ್ಯಂತೆ ಯುದ್ಧದ ಕಾರ್ಮೋಡ ಕವಿದಿದೆ. ಕುವೈತ್ ನ ಹಲವು ಪ್ರದೇಶಗಳಲ್ಲಿ ಭಾರಿ ಸ್ಪೋಟದ ಶಬ್ದಗಳು ಕೇಳಿ ಬಂದಿರುವ ನಡುವೆ, ದೇಶದ ವಾಯು ರಕ್ಷಣಾ ಪಡೆಗಳು ತಮ್ಮ ಯಾವು ವ್ಯಾಪ್ತಿಗೆ ಪ್ರವೇಶಿಸಿದ ಇರಾನ್ ನ ಕ್ಷಿಪಣಿ ಹಾಗೂ ಡ್ರೋನ್ ಗಳನ್ನು ಯಶಸ್ವಿಯಾಗಿ ಹೊಡೆದುರುಳಿಸಿರುವುದಾಗಿ ಅಧಿಕೃತವಾಗಿ ಘೋಷಿಸಿದೆ.

ಈ ಕುರಿತು ಪ್ರಕಟಣೆ ನೀಡಿರುವ ಕುವೈತ್ ಸೇನೆ, ದೇಶದ ಯಾವ ರಕ್ಷಣಾ ವ್ಯವಸ್ಥೆಗಳು ಪ್ರಸ್ತುತ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಪರಿಣಾಮಕಾರಿಯಾಗಿ ಎದುರಿಸುತ್ತಿವೆ ಎಂದು ತಿಳಿಸಿದೆ. ಸಾರ್ವಜನಿಕರು ಕೇಡುತ್ತಿರುವ ಸ್ಪೋಟದ ಶಬ್ದಗಳು ಶತ್ರು ದಾಳಿಗಳನ್ನು ತಡೆಗಟ್ಟುವ ಕಾರ್ಯಾಚರಣೆಗಳ ಭಾಗವಾಗಿದ್ದು. ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಕುವೈತ್ ಯಾವ ರಕ್ಷಣಾ ಪಡೆಗಳು ಆಕಾಶದಲ್ಲೇ ಕ್ಷಿಪಣಿ ಮತ್ತು ಡ್ರೋನ್ ಗಳನ್ನು ಹೊಡೆದುರುಳಿಸುತ್ತೆದ್ದು, ಅವುಗಳ ಅವಶೇಷಗಳು ವಿವಿಧ ಪ್ರದೇಶಗಳಲ್ಲಿ ಬೀಳುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನಡೆಲಾಗಿದೆ. ಯಾವುದೇ ಕ್ಷಿಪಣಿ ಅವಶೇಷ, ಲೋಹದ ತುಂಡು ಅಥವಾ ಗುರುತಿಸಲಾಗದ ವಸ್ತುಗಳು ಕಂಡು ಬಂದರೆ ಅವುಗಳನ್ನು ಮುಟ್ಟಬಾರದು ಹಾಗೂ ಆ ಸ್ಥಳದಿಂದ ದೂರ ಉಳಿಯಬೇಕು ಎಂದು ನಾಗರಿಕರಿಗೆ ಸೂಚಿಸಲಾಗಿದೆ.

ರಕ್ಷಣಾ ಸಚಿವಾಲಯದ ವಕ್ತಾರ ಕರ್ನಲ್ ಸೌದ್ ಅಬ್ದುಲಜೀಜ್ ಅಲ್-ಒಟ್ಟೆಬಿ ಮಾತನಾಡಿ, "ನಾಗರಿಕರು ಹಾಗೂ ವಿದೇಶಿ ನಿವಾಸಿಗಳು ಹೆಚ್ಚಿನ ಜಾಗರೂಕತೆ ವಹಿಸಬೇಕು. ಯಾವುದೇ ಅನುಮಾನಾಸ್ಪದ ವಸ್ತು ಅಥವಾ ಅವಶೇಷ ಕಂಡುಬಂದರೆ ತಕ್ಷಣ 112 ತುರ್ತು ಸಹಾಯವಾಣಿ ಮೂಲಕ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು" ಎಂದು ಮನವಿ ಮಾಡಿದ್ದಾರೆ.

ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಗಲ್ಫ್ ರಾಷ್ಟ್ರಗಳ ಭದ್ರತಾ ವ್ಯವಸ್ಥೆಗಳು ಹೈ ಅಲರ್ಟ್ ಗೆ ತೆರಳಿದ್ದು. ಮಧ್ಯ ಪ್ರಾಚ್ಯದ ಭದ್ರತಾ ಪರಿಸ್ಥಿತಿಯತ್ತ ಜಾಗತಿಕ ಸಮುದಾಯದ ಗಮನ ಕೇಂದ್ರಿಕೃತವಾಗಿದೆ. ಈ ಬೆಳವಣಿಗೆಗಳು ಅಂತರಾಷ್ಟ್ರೀಯ ರಾಜಕೀಯ ಹಾಗೂ ಜಾಗತಿಕ ತೈಲ ಮಾರುಕಟ್ಟೆಗಳ ಮೇಲೊ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಅದೇ ವೇಳೆ, ಇರಾನ್ ನಸರ್ಕಾರಿ ಮಾಧ್ಯಮ ಐಆರ್ ಐಬಿ (IRIB), ಕುವೈತ್ ನಲ್ಲಿ ನೆಲೆಗೊಂಡಿರುವ ಅಮೆರಿಕದ ಸೇನಾ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡೆ ವೈಮಾನಿಕ ಧಾಡಿಗಳನ್ನು ನಡೆಸಲಾಗಿದೆ ಎಂದು ವರದಿ ಮಾಡಿದೆ. ಪರ್ಷಿಯನ್ ಕೊಲ್ಲಿ, ಹಾರ್ಮೋಜ್ ಜಲಸಂಧಿ ಹಾಗೂ ಕೆಶ್ಮ್ ದ್ವಿಪ ಪ್ರದೇಶಗಳಲ್ಲಿ ನಡೆದ ಅಮೆರಿಕದ ಅತ್ತಿ ಚೆನ ಕಾರ್ಯಾಚರಣೆಗಳಿಗೆ ಪ್ರತಿಕ್ರಿಯೆಯಾಗಿ ಈ ದಾಳಿಯನ್ನು ನಡೆಸಲಾಗಿದೆ ಎಂದು ಇರಾನ್ ಪರ ಮಾಧ್ಯಮಗಳು ಪ್ರತಿಪಾದಿಸಿವೆ.

ವರದಿಗಳ ಪ್ರಕಾರ, ಕುವೈತ್ ನಲ್ಲಿರುವ ಅಮೆರಿಕನ್ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ಹಾಗೂ ಡ್ರೋನ್ ದಾರಿಗಳನ್ನು ನಡೆಸಲಾಗಿದ್ದು. ಪ್ರದೇಶದಲ್ಲಿ ಭದ್ರತಾ ಆತಂಕ ಮತ್ತಷ್ಟು ಹೆಚ್ಚಾಗಿದೆ.

ದಿಗ್ಬಂಧನ ಉಲ್ಲಂಘಿಸಿದ ತೈಲ ಟ್ಯಾಂಕರ್ ಮೇಲೆ ಅಮೆರಿಕದ ಕ್ರಮ:

ಮತ್ತೊಂದೆಡೆ, ದಿಗ್ಬಂಧನ ನಿಯಮಗಳನ್ನು ಉಲ್ಲಂಘಿಸಿ ಇರಾನ್ ಬಂದರನ್ನು ತಲುಪಲು ಯತ್ನಿಸುತ್ತಿದ್ದ ತೈಲ ಟ್ಯಾಂಕರ್ ಅನ್ನು ಕಡೆಯಲು ಕ್ಷಿಪಣಿ ಹಾರಿಸಿದ ವುದಾಗಿ ಅಮೆರಿಕ ಸೇನೆ ಹೇಳಿದೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಈ ಬೆಳವಣಿಗೆಗಳು ಗಲ್ಫ್ ಪ್ರದೇಶದ ಸಮುದ್ರ ಭದ್ರತೆಯ ಮೇಲಿನ ಕಳವಳವನ್ನು ಮತ್ತಷ್ಟು ಹೆಚ್ಚಿಸಿವೆ.

ಇರಾನ್ ಕ್ಷಿಪಣಿಗಳು ವಿಫಲ; ಅಮೇರಿಕದಿಂದ ಪ್ರತಿ ದಾಳಿ:

ಕುವೈತ್ ಮತ್ತು ಬಹ್ರೇನ್ ಕಡೆಗೆ ಉಡಾಯಿಸಲಾದ ಹಲವು ಇರಾನ್ ಕ್ಷಿಪಣಿಗಳು ಗುರಿ ತಲುಪುವ ಮುನ್ನವೇ ವಿಫಲವಾಗಿದೆ ಅಥವಾ ವಾಯು ರಕ್ಷಣಾ ವ್ಯವಸ್ಥೆಗಳಿಂದ ಹೊಡೆದುರುಳಿಸಲ್ಪಟ್ಟಿವೆ ಎಂದು ಅಮೆರಿಕ ಸೇನೆ ತಿಳಿಸಿದೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಅಮೆರಿಕವು ಪ್ರತಿಕ್ರಿಯಾತ್ಮಕ ಕ್ರಮವಾಗಿ ಇರಾನ್ ಗೆ ಸಂಬಂಧಿಸಿದ ಕೆಲವು ಸೌಲಭ್ಯಗಳ ಮೇಲೆ ದಾಳಿ ನಡೆಸಿದೆ ಎಂಬ ವರದಿಗಳು ಹೊರಬಿದ್ದಿವೆ.

ಮಧ್ಯ ಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ:

ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವುದರಿಂದ ಮಧ್ಯ ಪ್ರಾಚ್ಯದಲ್ಲಿ ಯುದ್ಧದ ಭೀತಿ ಹೆಚ್ಚಾಗಿದೆ.

ಕುವೈತ್, ಬಹ್ರೇನ್ ಸೇರಿದಂತೆ ಕಲ್ಪ್ ರಾಷ್ಟ್ರಗಳು ಹೈ ಅಲರ್ಟ್ ಘೋಷಿಸಿದ್ದು. ಜಾಗತಿಕ ತೈಲ ಮಾರುಕಟ್ಟೆ ಸಮುದ್ರ ಮಾರ್ಗಗಳು ಹಾಗೂ ಅಂತರಾಷ್ಟ್ರೀಯ ಭದ್ರತಾ ಪರಿಸ್ಥಿತಿಯ ಮೇಲೆ ಈ ಬೆಳವನಿಗೆಗಳು ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

Also Read:

ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈತಪ್ಪಿದ ಹಿಂದಿನ ರಹಸ್ಯ ಏನು? ಸತೀಶ್ ಜಾರಕಿಹೊಳಿ ಲೆಕ್ಕಾಚಾರ ತಪ್ಪಿದ್ದೇಗೆ? ಇಲ್ಲಿದೆ ಮಾಹಿತಿ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online