<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Trending

Iran oil leak : ಖಾರ್ಗ್ ದ್ವೀಪ ತೈಲ ಸೋರಿಕೆ ಜಾಗತಿಕ ಆತಂಕಕ್ಕೆ ಕಾರಣ

Iran oil leak :  ಖಾರ್ಗ್ ದ್ವೀಪ ತೈಲ ಸೋರಿಕೆ ಜಾಗತಿಕ ಆತಂಕಕ್ಕೆ ಕಾರಣ
Summary: Description : The oil spill that occurred in Kharg Island amid the Hormuz crisis has raised concerns about the potential for a serious impact on Iran's economy. There is talk that the environmental and commercial damage caused in this area, which is a major oil export hub, could further strain the country's economic situation.

belagavi news :

ಮಧ್ಯಪ್ರಾಚ್ಯದಲ್ಲಿ ಹಾರ್ಮುಜ್ ಬಿಕ್ಕಟಿನ ನಡುವೆ, ಇರಾನ್ ನ ಆರ್ಥಿಕ ಜೀವನಾಡಿಯಾಗಿರುವ ಖಾರ್ಗ್ ದ್ವೀಪದಲ್ಲಿ ದೊಡ್ಡ ಪ್ರಮಾಣದ ತೈಲಸೋರಿಗೆ ಸಂಭವಿಸಿದೆ. ತೈಲ ತೋರಿಕೆಯನ್ನು ಮೇಲ್ವಿಚಾರಣೆ ಮಾಡುವ ಆರ್ಬಿಟಲ್ EOS ಸಂಸ್ಥೆಯ ಪ್ರಕಾರ, ದ್ವೀಪದ ಸುತ್ತಲಿನ ಸಮುದ್ರ ಪ್ರದೇಶದಲ್ಲಿ ಸುಮಾರು 20 ಚದರ್ ಮೈಲಿಗಿಂತಲೂ ಹೆಚ್ಚು ವಿಸ್ತೀರ್ಣದಲ್ಲಿ ತೈಲದ ಪದರ ಆವರಿಸಿರುವುದು ಉಪಗ್ರಹ ಚಿತ್ರಗಳಲ್ಲಿ ದೃಢಪಟ್ಟಿದೆ. ಈ ಘಟನೆ ಪ್ರಾದೇಶಿಕವಾಗಿ ಆತಂಕ ಹೆಚ್ಚಿಸಿದ್ದು, ಪರಿಸರ ಹಾನಿಯ ಜೊತೆಗೆ ತೈಲ ರಫ್ತು ಹಾಗೂ ಸಾಗಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳ ಬಗ್ಗೆ ಚಿಂತನೆ ವ್ಯಕ್ತವಾಗಿದೆ. ಹಾರ್ಮುಜ್ ಬಿಕ್ಕಟ್ಟಿನ ಹಿನ್ನೆಲೆ ಇರುವಾಗಲೇ ಈ ಸೋರಿಕೆ ಸಂಭವಿಸಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ.

ಟೆಹ್ರಾನ್: ಮಧ್ಯ ಪ್ರಾಚ್ಯದಲ್ಲಿ ಅಮೆರಿಕಾ - ಇರಾನ್ ನಡುವಿನ ಹಾರ್ಮುಜ್ ಜಲಸಂದಿ ಬಿಕ್ಕಟ್ಟಿನ ನಡುವೆ, ಇರಾನಿನ ಆರ್ಥಿಕ ಬೆನ್ನೆಲುಬು ಎಂದು ಪರಿಗಣಿಸಲ್ಪಡುವ ಖಾರ್ಗ್ ದ್ವಿಪದಲ್ಲಿ ತೈಲ ಸೋರಿಕೆ ಸಂಭವಿಸಿರುವುದು ಆತಂಕ ಹೆಚ್ಚಿಸಿದೆ. ಉಪಗ್ರಹ ಚಿತ್ರಗಳಲ್ಲಿ ದ್ವೀಪದ ಸುತ್ತಲಿನ ಸಮುದ್ರದ ಮೇಲ್ಮೈಯಲ್ಲಿ ತೈಲದ ಪದರ ಆವರಿಸಿರುವುದು ಕಂಡುಬಂದಿದೆ.

ಇರಾನಿನ ಪ್ರಮುಖ ತೈಲ ರಫ್ತು ಟರ್ಮಿನಲ್ ಆಗಿರುವ, ಹಾರ್ಮುಜ್ ಜಲಸಂಧಿಯ ಕರಾವಳಿ ಸಮೀಪದ ಖಾರ್ಗ್ ದ್ವಿಪದ ಸುತ್ತಲೂ ಸುಮಾರು 3000 ಬ್ಯಾರೆಲ್ ಗಳಿಗೂ ಹೆಚ್ಚು ತೈಲಸೋರಿಗೆ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಈ ತೈಲವು ಪಶ್ಚಿಮ ಕರಾವಳಿಯಲ್ಲಿ ಸುಮಾರು 20 ಚದರ್ ಮೈಲಿಗಿಂತಲೂ ಹೆಚ್ಚು ಪ್ರದೇಶವನ್ನು ಆವರಿಸಿದ್ದು, ದಕ್ಷಿಣದ ಸೌದಿ ಅರೇಬಿಯಾ ಜಲಮಾರ್ಗದತ್ತ ಹರಡುತ್ತಿರುವುದಾಗಿ ತೈಲ ಸೋರಿಕೆಯನ್ನು ಮೇಲ್ವಿಚಾರಣೆ ಮಾಡುವ ಆರ್ಬೀಟಲ್ EOS ಸಂಸ್ಥೆಗೆ ತಿಳಿಸಿದೆ.ಆದಾಗ್ಯೂ, ಈ ಸೋರಿಕೆ ನಿಖರ ಮೂಲ ಹಾಗೂ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಈ ಘಟನೆಯು ಈಗಾಗಲೇ ಪ್ರಾದೇಶಿಕ ಮಟ್ಟದಲ್ಲಿ ಪರಿಸರ ಹಾಗೂ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಿದೆ.

Sponsored

ಸ್ಯಾಟಲೈಟ್ ನಲ್ಲಿ ಸರಿಯಾದ ದೃಶ್ಯಗಳು ಆತಂಕ ಹೆಚ್ಚಿಸಿವೆ. ಯುರೋಪಿಯನ್ ಒಕ್ಕೂಟದ ಕೋಪರ್ನಿಕಸ್ ಸೆಂಟಿನೆಲ್ -1,ಸೆಂಟಿನೆಲ್-2, ಮತ್ತು ಸೆಂಟಿನೆಲ್ 3, ಉಪಗ್ರಹಗಳು ಆರರಿಂದ ಮೇ ಎಂಟರ ನಡುವೆ ಸೆರೆಹಿಡಿದ ಚಿತ್ರಗಳಲ್ಲಿ ಇರಾನ್ನ ಪ್ರಮುಖ ತೈಲ ರಫ್ತು ಕೇಂದ್ರವಾದ ಖಾರ್ಗ್ ದ್ವೀಪದ ಪಶ್ಚಿಮ ಭಾಗದಲ್ಲಿ ನೀರಿನ ಮೇಲ್ಮೈಯಲ್ಲಿ ಹರಡಿರುವ ಬೂದು ಹಾಗೂ ಬಿಳಿ ಬಣ್ಣದ ಪದರ ಸ್ಪಷ್ಟವಾಗಿ ಕಾಣಿಸಿದೆ.

ಸಂಘರ್ಷ ಮತ್ತು ಪರಿಸರ ವೀಕ್ಷಣಾಲಯದ ಸಂಶೋಧಕ ಲಿಯಾನ್ ಮೋರ್ಲ್ಯಾಂಡ್ ಅವರ ಪ್ರಕಾರ, ಈ ದೃಶ್ಯವು ತೈಲದ ಸ್ವರೂಪದೊಂದಿಗೆ ದೃಷ್ಟಿಗೊಚರವಾಗಿ ಹೊಂದಿಕೆಯಾಗುತ್ತದೆ. ಅದೇ ರೀತಿ ಹವಾಮಾನ ಮತ್ತು ಸರಕು ಕ್ಷೇತ್ರದ ಪರಿಣತ ಸಲಹಾ ಸಂಸ್ಥೆ ಡೇಟಾ ಬೆಸ್ಕಾಂ ಸಹ ಸಂಸ್ಥಾಪಕ ಲೂಯಿಸ್ ಗೊಡ್ಡಾರ್ಡ್ ಅವರು ಸಹ ಉಪಗ್ರಹ ಚಿತ್ರಣವು ತೈಲದ ಪದರವನ್ನು ಸೂಚಿಸುತ್ತಿದ್ದು, ಇರಾನ್ ವಿರುದ್ಧ ಅಮೆರಿಕ ಇಸ್ರೇಲ್ ಸಂಘರ್ಷ ಆರಂಭವಾದ ನಂತರ ಕಳೆದ ಸುಮಾರು 70 ದಿನಗಳಲ್ಲಿ ಕಂಡುಬಂದ ಅತ್ಯಂತ ದೊಡ್ಡ ಪರಿಸರ ಘಟಗಳಲ್ಲಿ ಒಂದಾಗಿರಬಹುದು ಎಂದು ವಿಶ್ಲೇಷಿಸಿದ್ದಾರೆ.ಆದರೆ ಈ ಸೋರಿಕೆಯ ಕುರಿತು ಅಮೆರಿಕಾ ಅಥವಾ ಇರಾನ್ ಸರ್ಕಾರದಿಂದ ಇದುವರೆಗೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡಲಾಗಿಲ್ಲ.

ಖಾರ್ಗ್ ದ್ವೀಪದಲ್ಲಿ ತೈಲ ಸಂಗ್ರಹಣಾ ಸಾಮರ್ಥ್ಯ ತುಂಬುತ್ತಿರುವ ಕುರಿತು ಅಮೆರಿಕಾ ಈಗಾಗಲೇ ಎಚ್ಚರಿಕೆ ನೀಡಿತ್ತು. ಅಮೇರಿಕಾ ಇರಾನ್ ಯುದ್ಧದ ಭಾಗವಾಗಿ ಖಾರ್ಗ್ ದ್ವೀಪದಲ್ಲಿನ ಇರಾನ್ ನ ಮಿಲಿಟರಿ ನೆಲೆಗಳನ್ನು ಧ್ವಂಸಗೊಳಿಸಿದ ನಂತರ,ಅಮೇರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಾರ್ಗ್ ನ ತೈಲ ಘಟಕಗಳ ಮೇಲೂ ದಾಳಿ ಮಾಡುವುದಾಗಿ ಎಚ್ಚರಿಸಿದ್ದರು. ಆದಾಗ್ಯೂ ಅದು ನಡೆದಿಲ್ಲ.ಇದಾದ ಬಳಿಕ, ಅಮೇರಿಕಾ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಕೂಡ ಖಾರ್ಗ್ ದ್ವೀಪದ ಸಂಗ್ರಹಣಾ ಸಾಮರ್ಥ್ಯ ಕೆಲವೇ ದಿನಗಳಲ್ಲಿ ತುಂಬುವ ಹಂತಕ್ಕೆ ತಲುಪಬಹುದು ಎಂದು ಎಚ್ಚರಿಸಿದ್ದರು.

ನಿರ್ಬಂಧಗಳ ನಡುವೆ ಇರಾನ್ ತನ್ನ ತೈಲ ಉತ್ಪಾದನೆಯನ್ನು ಕಡಿಮೆ ಮಾಡುವ ಉಂಟುಮಾಡಬಹುದು ಎಂದು ಅವರು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಖಾರ್ಗ್ ದ್ವೀಪವು ಇರಾನ್ ನ ಆರ್ಥಿಕ ಜೀವನಾಡಿಯಾಗಿದ್ದು, ದೇಶದ ಶೇ.90ರಷ್ಟು ತೈಲ ರಫ್ತು ಇಲ್ಲಿಂದಲೇ ನಡೆಯುತ್ತಿದೆ.ಸಾಮಾನ್ಯವಾಗಿ ಈ ದ್ವೀಪದಿಂದ ದಿನಕ್ಕೆ 1.5ರಿಂದ2 ಮಿಲಿಯನ್ ಬ್ಯಾರೆಲ್ ಗಳು ತೈಲ ರಫ್ತು ನಡೆಯುತ್ತಿತ್ತು,ವಾರ್ಷಿಕವಾಗಿ ಸುಮಾರು 950ಮಿಲಿಯನ್ ಬ್ಯಾರೆಲ್ ಗಳ ನಿರ್ವಹಣೆ ಇತ್ತು.ಆದರೆ ಹೊರ್ಮುಜ್ ಜಲ ಸಂಧಿಯಲ್ಲಿನ ಯುದ್ಧ ಸನ್ನಿವೇಶ,ಅಮೇರಿಕಾ ದಿಗ್ಬಂಧನ ಹಾಗೂ ಬಂದರುಗಳ ಮೇಲಿನ ನಿರ್ಬಂಧ ಗಳಿಂದಾಗಿ ತೈಲ ರಫ್ತು ತೀವ್ರವಾಗಿ ಕುಠಿತವಾಗಿದೆ. ಇದೀಗ ತೈಲ ಸೋರಿಕೆಯ ವರದಿಗಳು ಹೊರಬಂದಿರುವುದರಿಂದ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಬಹುದು ಎಂದು ವಿಶ್ಲೇಷಕರು ಎಚ್ಚರಿಕೆ ನೀಡಿದ್ದಾರೆ.

Sponsored

Also Read:

IPL 2026: KKR Vs DC : ಅವರು ಫಿಲ್ ಅಬ್ಬರ, ಕಲ್ಕತ್ತಾಗೆ ಸತತ ನಾಲ್ಕನೆಯ ಜಯ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online