<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ಇರಾನ್-ಯು ಎಸ್ ಒಪ್ಪಂದದ ಬಗ್ಗೆ ಇಸ್ರೇಲ್ ಸ್ಪೋಟಕ ಹೇಳಿಕೆ

ಇರಾನ್-ಯು ಎಸ್ ಒಪ್ಪಂದದ ಬಗ್ಗೆ ಇಸ್ರೇಲ್ ಸ್ಪೋಟಕ  ಹೇಳಿಕೆ
Summary: The statement, which comes amid Iran-Israel tensions and US capital efforts, sends a clear message that Israel will make independent decisions about its national security and foreign policy.

BELAGAVI NEWS :

ಇರಾನ್ ಅಮೆರಿಕ ಒಪ್ಪಂದದ ಬಗ್ಗೆ ಇಸ್ರೇಲ್ ನ ರಾಷ್ಟ್ರೀಯ ಭದ್ರತಾ ಸಚಿವ ಇಟಮರ್ ಬೆನ್ ಗ್ವಿರ್ ಮಹತ್ವದ ಹೇಳಿಕೆ ನೀಡಿದ್ದು, "ಇರಾನ್ ಯುಎಸ್ ಒಪ್ಪಂದದಲ್ಲಿ ನಾವು ಪಾಲುದಾರರಲ್ಲ. ಆದ್ದರಿಂದ ಆ ಒಪ್ಪಂದ ನಮ್ಮ ನಿರ್ಧಾರಗಳನ್ನು ಯಾವುದೇ ರೀತಿಯಲ್ಲಿ ನಿರ್ಬಂಧಿಸುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, "ಅಮೆರಿಕ ನೇತೃತ್ವದ ಯಾವುದೇ ಉಪಕ್ರಮಗಳು ಇಸ್ರೇಲ್ ನ ದೇಶಿಯ ಅಥವಾ ಮಿಲಿಟರಿ ನೀತಿಯನ್ನು ನಿರ್ದೇಶಿಸುವುದಿಲ್ಲ.ಅಮೆರಿಕ ಅಧ್ಯಕ್ಷ ಟ್ರಂಪ್ ಇರಾನ್ ನೊಂದಿಗೆ ಮಾಡಿಕೊಂಡಿರುವ ಒಪ್ಪಂದವು ನಮ್ಮ ಮೇಲೆ ಯಾವುದೇ ಬಾದ್ಯತೆ ವಿಧಿಸುವುದಿಲ್ಲ" ಎಂದು ತಿಳಿಸಿದ್ದಾರೆ.

ಇದೇ ವೇಳೆ, "ಇಸ್ರೇಲ್ ಯುನೈಟೆಡ್ ಸ್ಟೇಟ್ಸ್ ಗೆ ಒಳಪಟ್ಟ ರಾಷ್ಟ್ರವಲ್ಲ. ನಮ್ಮದು ಸ್ವತಂತ್ರ ಮತ್ತು ಸಾರ್ವಭೌಮ ದೇಶ. ನಮ್ಮ ಮೊದಲ ಕರ್ತವ್ಯ ಇಸ್ರೇಲ್ ನಾಗರಿಕರು, ಐಡಿಎಫ್ ಸೈನಿಕರು ಹಾಗೂ ಯಹೂದಿ ಸಮುದಾಯದ ಭದ್ರತೆಯನ್ನು ಕಾಪಾಡುವುದಾಗಿದೆ" ಎಂದು ಅವರು ಹೇಳಿದ್ದಾರೆ.

ಮಧ್ಯಪ್ರಾಚ್ಯದಲಿ ಎತ್ತುತ್ತಿರುವ ಉದ್ವಿಗ್ನತೆಯ ನಡುವೆಯೇ ಬಂದಿರುವ ಈ ಹೇಳಿಕೆ ಜಾಗತಿಕ ಮದ್ಯದಲ್ಲಿ ಗಮನ ಸೆಳೆದಿದ್ದು, ಇಸ್ರೇಲ್ ತನ್ನ ಭದ್ರತಾ ಹಿತಾಸಕ್ತಿಗಳ ವಿಚಾರದಲ್ಲಿ ಸ್ವಾತಂತ್ರ್ಯ ನಿಲುವು ಮುಂದುವರಿಸಲಿದೆ ಎಂಬ ಸಂದೇಶವನ್ನು ರವಾನಿಸಿದೆ. ಈ ಬೆಳವಣಿಗೆ ಅಮೆರಿಕ ಇರಾನ್ ಮಾತುಕತೆಗಳ ಮೇಲು ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

ಇಸ್ರೇಲ್ ನ ರಾಷ್ಟ್ರೀಯ ಭದ್ರತಾ ಸಚಿವ ಇಟಮರ್ ಬೆನ್ ಗ್ವಿರ್ ಮತ್ತೊಮ್ಮೆ ಖಡಕ್ ಸಂದೇಶ ರವಾನಿಸಿದ್ದು, "ಇಸ್ರೇಲ್ ನ ಭದ್ರತೆಯನ್ನು ಬಲಿಕೊಟ್ಟು ಅಂತರಾಷ್ಟ್ರೀಯ ಒತ್ತಡಕ್ಕೆ ಮನೆದಾಗಲೆಲ್ಲಾ ನಾವು ಅದರ ಬೆಲೆಯನ್ನು ರಕ್ತದ ರೂಪದಲ್ಲಿ ಪಾವತಿಸಿದ್ದೇವೆ" ಎಂದು ಹೇಳಿದ್ದಾರೆ.

ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, " ಓಸ್ಲೋ ಒಪ್ಪಂದದ ಸಮಯದಲ್ಲೂ ಇದು ಸತ್ಯವಾಗಿತ್ತು. 2026ರ ಲೆಬನಾನ್ ಒಪ್ಪಂದದ ಸಂದರ್ಭದಲ್ಲಿ ಅದೇ ಅನುಭವ ಎದುರಾಯಿತು. ಗಾಜಾದಲ್ಲಿ ಜಾರಿಗೊಂಡ ಪ್ರತಿಯೊಂದು ನಿರ್ಬಂಧದ ಅವಧಿಯಲ್ಲಿ ಅದರ ಪರಿಣಾಮವನ್ನು ನಾವು ಅನುಭವಿಸಿದ್ದೇವೆ" ಎಂದು ಉಲ್ಲೇಖಿಸಿದ್ದಾರೆ.

ಇದೇ ವೇಳೆ,ಅಮೇರಿಕಾದೊಂದಿಗೆ ಇರುವ ಸ್ನೇಹ ಸಂಬಂಧವನ್ನು ಒಪ್ಪಿಕೊಂಡ ಅವರು, "ನಾವು ಅಮೆರಿಕವನ್ನು ಗೌರವಿಸುತ್ತೇವೆ ಮತ್ತು ಅಧ್ಯಕ್ಷ ಟ್ರಂಪ್ ಗೆ ಕೃತಜ್ಞರಾಗಿದ್ದೇವೆ. ಆದರೆ ಇಸ್ರೇಲ್ ಯಾವುದೇ 'ಬನಾನ ರಿಪಬ್ಲಿಕ್' ಅಲ್ಲ. ನಮ್ಮ ದೇಶದ ಭದ್ರತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ನಮ್ಮ ಹಕ್ಕು" ಎಂದು ಸ್ಪಷ್ಟಪಡಿಸಿದ್ದಾರೆ.

ಮಧ್ಯ ಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಇಸ್ರೇಲ್ ನ ಈ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ದೇಶದ ಭದ್ರತೆ ವಿಚಾರದಲ್ಲಿ ಯಾವುದೇ ಬಾಹ್ಯ ಒತ್ತಡಕ್ಕೆ ಮರೆಯುವುದಿಲ್ಲ ಎಂಬ ಕಠಿಣ ಸಂದೇಶವನ್ನು ಜಗತ್ತಿಗೆ ರವಾನಿಸಿದೆ.

ಇಸ್ರೇಲ್ ನ ರಾಷ್ಟ್ರೀಯ ಭದ್ರತಾ ಸಚಿವ ಇಟಮರ್ ಬೆನ್ ಗ್ವಿರ್ ಮತ್ತೊಮ್ಮೆ ಕಠಿಣ ನಿಲುವು ವ್ಯಕ್ತಪಡಿಸಿದ್ದು, ಲೇಬನಾನ್ ಕಡೆಯಿಂದ ಇಸ್ರೇಲ್ ಗುರಿಯತ್ತ ಬರುವ ಯಾವುದೇ ಡ್ರೋನ್ ಅಥವಾ ಕ್ಷಿಪಣಿಯನ್ನು ತಕ್ಷಣ ದಾಳಿ ಮೂಲಕ ತಡೆಗಟ್ಟಲಾಗುತ್ತದೆ ಎಂದು ಹೇಳಿದ್ದಾರೆ.

ಅವರು ಸ್ಪಷ್ಟಪಡಿಸಿದ್ದು, ಇಂತಹ ಬೆದರಿಕೆಗಳನ್ನು ತಡೆಯಲು ಭದ್ರತೆಯನ್ನು ಖಚಿತಪಡಿಸದ ಯಾವುದೇ ಒಪ್ಪಂದಕ್ಕೆ ಇಸ್ರೇಲ್ ಪಾಲುದಾರ ವಾಗುವುದಿಲ್ಲ ಹಾಗೂ ಅದು ದೇಶವನ್ನು ಯಾವುದೇ ರೀತಿಯಲ್ಲಿ ನಿರ್ಬಂಧಿಸುವುದಿಲ್ಲ ಎಂದು ಹೇಳಿದ್ದಾರೆ. ಇಸ್ರೇಲ್ ತನ್ನ ಭದ್ರತೆಯ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ.

ಇದೇ ವೇಳೆ Hezbollah ವಿರುದ್ಧ ಕಠಿಣ ನಿಲುವು ತಾಳಿರುವ ಅವರು, "ಹೆಜ್ಬೋಲ್ಲಾವನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸುವುದಕ್ಕಿಂತ ಕಡಿಮೆ ಯಾವುದಕ್ಕೂ ಒಪ್ಪಿಕೊಳ್ಳಬಾರದು" ಎಂದು ಹೇಳಿದ್ದಾರೆ. ಭಯೋತ್ಪಾದಕ ಮೂಲ ಸೌಕರ್ಯವನ್ನು ತೆರವುಗೊಳಿಸಿದ ಮತ್ತು ವಶಪಡಿಸಿಕೊಂಡ ಪ್ರದೇಶಗಳಿಂದ ಇಸ್ರೇಲ್ ಹಿಂದೆ ಸರಿಯಬಾರದು ಎಂಬುದು ಅವರ ಆಗ್ರಹವಾಗಿದೆ.

ಇಸ್ರೇಲ್ ಮೇಲೆ ಗುರಿಯಾಗುವ ಯಾವುದೇ ದಾರಿಗೆ ತಕ್ಷಣ ಮತ್ತು ದೃಢ ಪ್ರಕ್ರಿಯೆ ನೀಡಲಾಗುತ್ತದೆ ಎಂದು ಹೇಳುವವರು, "ಇಸ್ರೇಲ್ ಮೇಲೆ ಗುಂಡಿನ ದಾಳಿ ನಡೆಯುವಾಗ ನಾವು ಒಂದು ಕ್ಷಣವೂ ಮೌನವಾಗಬಾರದು" ಎಂದು ತಮ್ಮ ನಿಲುವನ್ನು ಪುನರುಚ್ಚರಿಸಿದ್ದಾರೆ.

ಮಧ್ಯ ಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಮತ್ತಷ್ಟು ರಾಜಕೀಯ ಹಾಗೂ ಭದ್ರತಾ ಚರ್ಚೆಗೆ ಕಾರಣವಾಗಿದೆ.

Also Read:

ಯುರೋಪ್ ನಿಂದ ಮಹತ್ವದ ನಿರ್ಧಾರ: ಇರಾನ್ ನಿರ್ಬಂಧ ಸಡಿಲಿಕೆಗೆ ಒಪ್ಪಿಗೆ, ಅಣ್ವಸ್ತ್ರ ನಿಯಂತ್ರಣ ಕಡ್ಡಾಯ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online