ಇಸ್ರೇಲ್ - ಮೆಕ್ಸಿಕೋದಲ್ಲಿ ಇಸ್ರೇಲ್ ರಾಯಭಾರಿ ಕೊಲ್ಲುವ ಇರಾನ್ ಸಂಚು ವಿಫಲಗೊಳಿಸಿದ್ದೇವೆ ಎಂದ ಅಮೆರಿಕ
ರಾಯಭಾರಿ ಐನಾಟ್ ಕ್ರಾಂಜ್ ನೀಗರ್ ಅವರನ್ನು ಕೊಲ್ಲುವ ಸಂಚು ರೂಪಿಸಿದ್ದು, ಇದನ್ನು ವಿಫಲಗೊಳಿಸಿದ್ದೇವೆ ಎಂದು ಅಮೆರಿಕ ತಿಳಿಸಿದೆ. ಆದರೆ, ಈ ಬಗ್ಗೆ ಮೆಕ್ಸಿಕೋ ಯಾವುದೇ ಹೇಳಿಕೆ ನೀಡಿಲ್ಲ
ವಾಷಿಂಗ್ಟನ್, ಅಮೆರಿಕ:
ಕಳೆದ ವರ್ಷದ ಅಂತ್ಯದಲ್ಲೇ ರಾಯಭಾರಿ ಐನಾಟ್ ಕ್ರಾಂಜ್ ನೀಗರ್ ಅವರನ್ನು ಕೊಲ್ಲುವ ಸಂಚು ರೂಪಿಸಲಾಗಿತ್ತು ಎಂದು ಆರೋಪಿಸಲಾಗಿದೆ. ಈ ವರ್ಷದ ಮಧ್ಯಭಾಗದವರೆಗೆ ಅದು ಸಕ್ರಿಯವಾಗಿತ್ತು. ಆದರೆ, ಅದು ವಿಫಲವಾಯಿತು ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ಸೂಕ್ಷ್ಮತೆ ಹಿನ್ನೆಲೆ ಈ ಕುರಿತು ಹೆಸರು ಬಹಿರಂಗಪಡಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ಈ ಸಂಚನ್ನು ಹೇಗೆ ಪತ್ತೆ ಮಾಡಲಾಯಿತು ಎಂಬುದರ ಕುರಿತು ಮಾಹಿತಿ ಬಹಿರಂಗಪಡಿಸಿಲ್ಲ. ಈ ಕುರಿತು ಇರಾನ್ ಕೂಡ ಯಾವುದೇ ಹೇಳಿಕೆ ನೀಡಿಲ್ಲ.
ಮೆಕ್ಸಿಕೋದಲ್ಲಿರುವ ಭದ್ರತಾ ಮತ್ತು ಕಾನೂನು ಜಾರಿ ಸೇವೆಗೆ ನಾವು ಧನ್ಯವಾದಗಳನ್ನು ತಿಳಿಸುತ್ತೇವೆ. ಇರಾನ್ ನಿರ್ದೇಶಿತ ಭಯೋತ್ಪಾದನೆ ಜಾಲತಾಣ ಪ್ರಯತ್ನ ವಿಫಲಗೊಳಿಸಲಾಗಿದೆ ಎಂದು ಇಸ್ರೇಲ್ ವಿದೇಶಿ ಸಚಿವರು ಹೇಳಿಕೆಯಲ್ಲಿ ತಿಳಿಸಿದರು.
ಇಸ್ರೇಲ್ ಭದ್ರತೆ ಮತ್ತು ಗುಪ್ತಚರ ಸಮುದಾಯ ನಿರಂತರವಾಗಿ ಕೆಲಸ ಮಾಡುತ್ತಿದ್ದು, ಭದ್ರತೆ ಮತ್ತು ಗುಪ್ತಚರ ಏಜೆನ್ಸಿ ಸಂಪೂರ್ಣ ಸಹಕಾರದಿಂದ ಇರಾನ್ನ ಭಯೋತ್ಪಾದಕರ ಬೆದರಿಕೆಯನ್ನು ವಿಫಲಗೊಳಿಸಿದೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ್ದ ಮೆಕ್ಸಿಕೊ ವಿದೇಶ ಸಂಬಂಧ ಮತ್ತು ಭದ್ರತಾ ಸಚಿವರು, ಮೆಕ್ಸಿಕೊದಲ್ಲಿ ಇಸ್ರೇಲ್ ರಾಯಭಾಗಿ ವಿರುದ್ಧ ನಡೆಸಲಾದ ಪ್ರಯತ್ನ ಕುರಿತು ಯಾವುದೇ ವರದಿ ಇಲ್ಲ ಎಂದರು.
ಮೆಕ್ಸಿಕೋದ ಇಸ್ರೇಲಿ ರಾಯಭಾರಿಯನ್ನು ಹತ್ಯೆ ಮಾಡಲು ಇರಾನ್ ನಡೆಸಿದ್ದ ಸಂಚನ್ನು ಅಮೆರಿಕ ಮತ್ತು ಇಸ್ರೇಲಿ ಗುಪ್ತಚರ ಸಂಸ್ಥೆಗಳ ನೆರವಿನೊಂದಿಗೆ ಮೆಕ್ಸಿಕನ್ ಅಧಿಕಾರಿಗಳು ವಿಫಲಗೊಳಿಸಿದ್ದಾರೆ ಎಂದು ಇಸ್ರೇಲ್ ಮತ್ತು ಅಮೆರಿಕ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಅಂತಹ ಸಂಚಿನ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಮೆಕ್ಸಿಕನ್ ಅಧಿಕಾರಿಗಳು ತಿಳಿಸಿದ್ದಾರೆ.
ಮೆಕ್ಸಿಕೊದ ರಾಜ್ಯ ವಿಭಾಗವೂ ಈ ಕುರಿತು ತಕ್ಷಣಕ್ಕೆ ಯಾವುದೇ ವಿವರಣೆ ನೀಡಿಲ್ಲ. ತನ್ನದೇ ಆದ ನಾಗರಿಕರು, ಅಮೆರಿಕನ್ನರು ಮತ್ತು ಇತರ ರಾಷ್ಟ್ರಗಳ ಜನರನ್ನು ಗುರಿಯಾಗಿಸಿಕೊಂಡು ಇರಾನ್ನ ಅಂತಾರಾಷ್ಟ್ರೀಯ ಸಂಚು ನಡೆಸುವುದು ರಾಷ್ಟ್ರದ ನಡವಳಿಕೆಗೆ ಹೊಂದಿಕೆಯಾಗುವುದಿಲ್ಲ ಎಂದಿದ್ದಾರೆ..
ಅಮೆರಿಕ ಸರ್ಕಾರ ಸಮಾನ ಮನಸ್ಕ ಸರ್ಕಾರದೊಂದಿಗೆ ಮಾಹಿತಿ ಹಂಚಿಕೊಳ್ಳುವ ಅಭ್ಯಾಸ ಹೊಂದಿದ್ದು, ಇರಾನ್ನ ಈ ಸಂಚಿನ ಕುರಿತು ಜಾಗೃತಿ ಮೂಡಿಸಿತು. ಒಟ್ಟಿಗೆ ಈ ಬೆದರಿಕೆ ವಿರುದ್ಧ ಕಾರ್ಯಾಚರಣೆ ನಡೆಸಿದ್ದು, ಅಪರಾಧಿಗಳನ್ನು ಪತ್ತೆ ಮಾಡಿದೆ ಎಂದು ತಿಳಿಸಿದೆ.
ನಮ್ಮ ದೇಶದಲ್ಲಿನ ಎಲ್ಲ ಅಧಿಕೃತ ರಾಯಭಾರಿಗಳ ಪ್ರತಿನಿಧಿಗಳ ಜೊತೆಗೆ ಸುಗಮ ಮಾತುಕತೆ ನಡೆಸುವ ಇಚ್ಛೆಯನ್ನು ಹೊಂದಲಾಗಿದೆ ಎಂದು ವಿದೇಶಿ ಸಚಿವರು ತಿಳಿಸಿದ್ದು, ಯಾವಾಗಲೂ ರಾಷ್ಟ್ರೀಯ ಸಾರ್ವಭೌಮತ್ವದ ಚೌಕಟ್ಟಿನೊಳಗೆ, ಅದನ್ನು ವಿನಂತಿಸುವ ಎಲ್ಲ ಭದ್ರತಾ ಸಂಸ್ಥೆಗಳೊಂದಿಗೆ ಗೌರವಾನ್ವಿತ ಮತ್ತು ಸಂಘಟಿತ ಸಹಯೋಗವನ್ನು ಹೊಂದಿರುವುದಾಗಿ ತಿಳಿಸಿದರು.
ಇನ್ನಷ್ಟು ಓದಿರಿ:
ಅಮೆರಿಕ ಸರ್ಕಾರ ಶಟ್ಡೌನ್: ಶನಿವಾರವೂ 1,000 ವಿಮಾನ ಸಂಚಾರ ರದ್ದು!