ಲೆಬೆನಾನ್ ಪ್ಯಾಲೆಸ್ಟೀನಿಯನ್ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ವಾಯುದಾಳಿ
ಇಸ್ರೇಲ್ ದಾಳಿಯನ್ನು ಹಮಾಸ್ ಖಂಡಿಸಿದೆ, ಆದರೆ ಅತ್ತ ಇಸ್ರೇಲ್ ಆರೋಪವನ್ನು ತಳ್ಳಿ ಹಾಕಿದೆ.
ಸಿಡಾನ್, ಲೆಬನಾನ್:
ಒಂದು ವರ್ಷದ ಹಿಂದೆ ಇಸ್ರೇಲ್ - ಹಿಜ್ಬುಲ್ಲಾ ಯುದ್ಧದ ಕದನ ವಿರಾಮದ ಬಳಿಕ ಲೆಬನಾನ್ನಲ್ಲಿ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ. ಕರಾವಳಿ ನಗರ ಸಿಡಾನ್ನ ಹೊರವಲಯದಲ್ಲಿರುವ ಐನ್ ಎಲ್-ಹಿಲ್ವೆ ನಿರಾಶ್ರಿತರ ಶಿಬಿರದಲ್ಲಿರುವ ಮಸೀದಿಯ ಪಾರ್ಕಿಂಗ್ ಸ್ಥಳಕ್ಕೆ ಡ್ರೋನ್ ದಾಳಿ ನಡೆಸಿದ್ದು, ಅಲ್ಲಿ ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ಸರ್ಕಾರಿ ರಾಷ್ಟ್ರೀಯ ಸುದ್ದಿ ಸಂಸ್ಥೆ ತಿಳಿಸಿದೆ.
ಹೆಚ್ಚಿನ ವಿವರಗಳನ್ನು ನೀಡದೇ, ವೈಮಾನಿಕ ದಾಳಿಯಲ್ಲಿ 13 ಜನರು ಸಾವನ್ನಪ್ಪಿದ್ದಾರೆ. ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ತಿಳಿಸಿದೆ. ಆಂಬ್ಯುಲೆನ್ಸ್ಗಳು ಗಾಯಾಳುಗಳು ಮತ್ತು ಸತ್ತವರನ್ನು ಸ್ಥಳಾಂತರಿಸುವ ಕೆಲಸಕ್ಕೆ ಧಾವಿಸಿದ ಕಾರಣ ಆ ಪ್ರದೇಶದಲ್ಲಿನ ಹಮಾಸ್ ಹೋರಾಟಗಾರರು, ಪತ್ರಕರ್ತರು ಸ್ಥಳಕ್ಕೆ ಭೇಟಿ ನೀಡುವುದನ್ನು ತಡೆದಿದ್ದಾರೆ.
ದಕ್ಷಿಣ ಲೆಬನಾನ್ನಲ್ಲಿರುವ ಪ್ಯಾಲೆಸ್ಟೀನಿಯನ್ ನಿರಾಶ್ರಿತರ ಶಿಬಿರದ ಮೇಲೆ ಮಂಗಳವಾರ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ 13 ಜನರು ಸಾವನ್ನಪ್ಪಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಹಮಾಸ್ ತರಬೇತಿ ಆವರಣದ ಮೇಲೆ ದಾಳಿ:
ಕಳೆದ ಎರಡು ವರ್ಷಗಳಲ್ಲಿ, ಲೆಬನಾನ್ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಗಳಲ್ಲಿ ಉಗ್ರಗಾಮಿ ಹಿಜ್ಬುಲ್ಲಾ ಗುಂಪಿನ ಹಲವಾರು ಅಧಿಕಾರಿಗಳು ಹಾಗೂ ಹಮಾಸ್ನಂತಹ ಪ್ಯಾಲೆಸ್ಟೀನಿಯನ್ ಬಣಗಳ ಕಾರ್ಯಕರ್ತರು ಸಾವನ್ನಪ್ಪಿದ್ದಾರ. ಹಮಾಸ್ನ ಉಪ ರಾಜಕೀಯ ಮುಖ್ಯಸ್ಥ ಮತ್ತು ಗುಂಪಿನ ಮಿಲಿಟರಿ ವಿಭಾಗದ ಸ್ಥಾಪಕ ಸಲೇಹ್ ಅರೌರಿ, ಜನವರಿ 2, 2024 ರಂದು ಬೈರುತ್ನ ದಕ್ಷಿಣ ಉಪನಗರದಲ್ಲಿ ನಡೆದ ಡ್ರೋನ್ ದಾಳಿಯಲ್ಲಿ ಸಾವನ್ನಪ್ಪಿದ್ದರು.
ಅಂದಿನಿಂದ ಹಲವಾರು ಇತರ ಹಮಾಸ್ ಅಧಿಕಾರಿಗಳು ದಾಳಿಯಲ್ಲಿ ಸಾವನ್ನಪ್ಪಿದ್ದಾರೆ.
2023 ಅಕ್ಟೋಬರ್ 7ರಂದು ದಕ್ಷಿಣ ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯಲ್ಲಿ ಸುಮಾರು 1,200 ಜನರು ಸಾವನ್ನಪ್ಪಿದ್ದರು. ಇದಕ್ಕೆ ಪ್ರತಿಯಾಗಿ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಹತ್ತಾರು ಸಾವಿರ ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದರು ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ.
ಇಸ್ರೇಲ್ ಮತ್ತು ಅದರ ಸೈನ್ಯದ ವಿರುದ್ಧ ದಾಳಿಗೆ ಸಿದ್ಧತೆ ನಡೆಸುತ್ತಿದ್ದ ಹಮಾಸ್ ತರಬೇತಿ ಆವರಣದ ಮೇಲೆ ದಾಳಿ ನಡೆಸಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ. ಹಮಾಸ್ ಗುಂಪು ಕಾರ್ಯನಿರ್ವಹಿಸುವಲ್ಲೆಲ್ಲ ಅದರ ವಿರುದ್ಧ ಇಸ್ರೇಲ್ ಸೇನೆಯು ಕಾರ್ಯಾಚರಣೆ ಮುಂದುವರಿಸಲಿದೆ ಎಂದು ಹೇಳಿದೆ. ಹಮಾಸ್ ಇಸ್ರೇಲ್ ದಾಳಿಯನ್ನು ಖಂಡಿಸಿದೆ. ಕ್ರೀಡಾ ಮೈದಾನಕ್ಕೂ ದಾಳಿ ಮಾಡಿದೆ. ಅದು ತರಬೇತಿ ಆವರಣವಲ್ಲ ಎಂದು ಹೇಳಿದೆ.
ಇನ್ನಷ್ಟು ಓದಿರಿ :
ಆಸ್ಟ್ರೇಲಿಯಾದಲ್ಲಿ ಅಪಘಾತ; ಭಾರತೀಯ ಮೂಲದ ಗರ್ಭಿಣಿ ಟೆಕ್ಕಿ