ಕನ್ನಡ ಚಿತ್ರರಂಗದಲ್ಲಿ ಹೊಸ ಉತ್ಸಾಹತಂದಿರುವ ದೈವ ಚಿತ್ರದ ಟ್ರೈಲರ್ ಇದೀಗ ಬಿಡುಗಡೆಯಾಗಿದೆ.ಮುಖ್ಯ ಪಾತ್ರವನ್ನು ಎಂ ಜೆ ಜಯರಾಜ್ ಅವರು ಅಭಿನಯಿಸಿದ್ದು,ನಿರ್ದೇಶನವನ್ನು ಕೂಡ ತಮ್ಮದೇ ಕೈಯಿಂದ ನಿರ್ವಹಿಸಿದ್ದಾರೆ.
ಈ ದೈವ ಚಿತ್ರವು ಮಾನವ ಸಂಬಂಧಗಳು,ಭಾವನೆಗಳು ಮತ್ತು ತೀವ್ರ ಆತ್ಮೀಯತೆಯನ್ನು ಪ್ರೇಕ್ಷಕರಿಗೆ ತಲುಪಿಸುತ್ತಿದೆ. ಟ್ರೈಲರ್ ನಲ್ಲಿ ದೃಶ್ಯ ವೈಭವ,ಆಕ್ಟಿಂಗ್,ಮತ್ತು ಸಂಗೀತ ಮಿಶ್ರಣ ಅತ್ಯಂತ ಸುಂದರವಾಗಿ ಚಿತ್ರಿಸಿದ್ದಾರೆ.
ಹೌದು ನಿಜ ಕನ್ನಡ ಚಿತ್ರರಂಗಕ್ಕೆ ಹೊಸ ಪ್ರತಿಭಾನ್ವಿತರು ಎಂಟ್ರಿ ಕೊಡುವುದು ಹೊಸದೇನಲ್ಲ.ಆದರೆ ಲೆಕ್ಚರರ್ ಕೆಲಸಕ್ಕೆ ಗುಡ್ ಬೈ ಹೇಳಿ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮ ಕನಸನ್ನು ಬಿತ್ತಲು ಬಂದಿರುವವರು ಎಂದರೆ ವಿಶೇಷವಾದದ್ದು. ಇದೇ ಕಹಾನಿಯ ನಾಯಕ ಎಂ ಜಿ ಜಯರಾಜ್ ಅವರು ಪ್ರಧಾನ ಪಾತ್ರದಲ್ಲಿ ಅಭಿನಯಿಸಿದರು.
ದೈವ ಚಿತ್ರದ ಟ್ರೈಲರ್ ನಲ್ಲಿ ತೀವ್ರ ಭಾವನೆಗಳು ,ದೃಶ್ಯ ವೈಭವ ಮತ್ತು ಹೃದಯಸ್ಪರ್ಶಿ ಸಂಗೀತ ಎಲ್ಲವೂ ಮಿಶ್ರವಾಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮತ್ತು ಆಶಾವಾದವನ್ನು ಹುಟ್ಟುಹಾಕಿವೆ.
ದೈವ ಚಿತ್ರದ ಟ್ರೈಲರ್ ಬಿಡುಗಡೆಗೆ ರಾಘವೇಂದ್ರ ಸ್ವಾಮೀಜಿಗಳ ಆಶೀರ್ವಾದ:
ಬಹುತೇಕ ಶೂಟಿಂಗ್ ಮುಗಿಸಿ,ಬಿಡುಗಡೆಗೆ ಸಜ್ಜಾಗಿರುವ ದೈವ ಚಿತ್ರದ ಟ್ರೈಲರ್ ಇದೀಗ ಪ್ರೇಕ್ಷಕರ ಮುಂದಿದೆ. ಟ್ರೈಲರ್ ಬಿಡುಗಡೆಯ ಕಾರ್ಯಕ್ರಮವನ್ನುನಿರ್ದೇಶಕರ ತಾಯಿ ಮತ್ತು ನಿರ್ಮಾಪಕ ಯು ಆಗಿರುವಂತಹ ಜಯಮ್ಮ ಪದ್ಮರಾಜ್ ಅವರು ನಡೆಸಿದ್ದು ಎಲ್ಲರಿಗೂ ಶುಭ ಹಾರೈಸಿದ್ದಾರೆ.
ಚಿತ್ರವು ವಿಭಿನ್ನ ಕಥಾ ಅಂದರ ಮತ್ತು ಮನರಂಜನೆಯೊಂದಿಗೆ,ಟ್ರೈಲರ್ ಮಾತ್ರವೇ ನೋಡುವವರಲ್ಲಿ ಕುತೂಹಲವನ್ನು ಮೂಡಿಸಿದ್ದು,ಸಿನಿಮಾದ ಪ್ರತಿಯೊಂದು ದೃಶ್ಯ ಪ್ರೇಕ್ಷಕರನ್ನು ಬಾಡಿಸಲು ಸಿದ್ಧವಾಗಿದೆ.
ದೈವ ಚಿತ್ರದ ಟ್ರೈಲರ್ ಅನಾವರಣದ ನಂತರ ಮಾತನಾಡಿದ ನಟ ಮತ್ತು ನಿರ್ದೇಶಕರಾದ ಎಂ.ಜೆ.ಜಯರಾಜ್ ನಾನು ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದೆ.ಕೆಲಸಕ್ಕೆ ರಾಜೀನಾಮೆ ನೀಡಿ, ನಿರ್ದೇಶಕ ರವಿ ಶ್ರೀವತ್ಸ ಅವರ ಬಳಿ ಸಹಾಯಕ ನಿರ್ದೇಶಕನಾಗಿ ಸಿನಿಮಾ ಇಂಡಸ್ಟ್ರಿಗೆ ಬಂದೆ.ನಂತರ ಸಿನಿಮಾ ಬಗ್ಗೆ ತಿಳಿದುಕೊಂಡು ಈ ಚಿತ್ರವನ್ನು ನಿರ್ದೇಶಸುವುದರ ಜೊತೆಗೆ ನಾಯಕನಾಗಿಯೂ ನಟಿಸಿದ್ದೇನೆ ನಮ್ಮ ತಾಯಿ ನಿರ್ಮಾಣ ಮಾಡಿದ್ದಾರೆ ಎಂದು ಹೃದಯಪೂರ್ವಕವಾಗಿ ತಿಳಿಸಿದರು.
ಇತ್ತೀಚಿಗಷ್ಟೇ ಬಿಡುಗಡೆಯಾಗಿರುವ ದೈವ ಚಿತ್ರದ ಟ್ರೈಲರ್ ಜನರ ಮನಸ್ಸನ್ನು ಗೆದ್ದಿದ್ದು,ನಮ್ಮೆಲ್ಲರಿಗೂ ದೈವ ಎಂದರೆ ಮೊದಲು ನೆನಪಾಗುವುದು ರಿಷಬ್ ಶೆಟ್ಟಿ ಕಾಂತಾರ ಸಿನಿಮಾ. ಅದರಲ್ಲಿ ಅವರು ದಕ್ಷಿಣ ಕನ್ನಡ ದೈವಗಳ ಬಗ್ಗೆ ಹೇಳಿದ್ದಾರೆ.ನಾನು ಈ ಚಿತ್ರದಲ್ಲಿ ಮಂಡ್ಯ ಜಿಲ್ಲೆಯ ಜೋಗಿಗಳ ಬಗ್ಗೆ ಹೇಳಿದ್ದೇನೆ.ಇದೊಂದು ಪಕ್ಕಾ ಹಳ್ಳಿಯ ಸೊಗಡಿನ ಸಿನಿಮಾ ವಾಗಿದೆ. ಯಾವುದೇ ಸೆಟ್ ಹಾಕದೆ, ಶಿರಸಿ ಬಳಿಯ ಹಳ್ಳಿಯೊಂದರಲ್ಲಿ ಚಿತ್ರದ ಹೆಚ್ಚಿನ ಭಾಗದ ಚಿತ್ರೀಕರಣ ಮಾಡಿದ್ದೇವೆ.ನನ್ನ ಪಾತ್ರ ಎರಡು ಶೇಡ್ ಗಳಲ್ಲಿ ಇರಲಿದೆ.
ಈ ದೈವ ಚಿತ್ರಕ್ಕೆ ವಿಜೇತ್ ಮಂಜಯ್ಯ ಸಂಗೀತ,ಸಿದ್ದಾರ್ಥ್ ಕ್ಯಾಮೆರಾ ವರ್ಕ್ ಇದೆ.ಜೊತೆಗೆ ಕಲ್ಪವೃಕ್ಷ ಕ್ರಿಯೇಶನ್ ಬ್ಯಾನರ್ ಅಡಿಯಲ್ಲಿ ರಾಮಪ್ಪ ಸೋಮಪ್ಪ ಮೆಗಲಮನಿ,ಸೋಮಶೇಖರ್ ಜಿ.ಪಟ್ಟಣಶೆಟ್ಟಿ ಅವರ ಸಹ ನಿರ್ಮಾಣವಿದೆ.ಫೆಬ್ರುವರಿ 12 ರಂದು ರಾಜ್ಯದ್ಯಂತ ದೈವದ ದರ್ಶನ ಸಿಗಲಿದೆ ಎಂದು ತಿಳಿಸಿದ್ದಾರೆ.
ಈ ಚಿತ್ರಕ್ಕೆ ಸಂಬಂಧಿಸಿದಂತಹ ವ್ಯಕ್ತಿ ಮಂಜೂರಾಜು ಸೂರ್ಯ ಮಾತನಾಡಿ ಗ್ರಾಮೀಣ ಸೊಗಡಿನ ಈ ಚಿತ್ರದಲ್ಲಿ ನನ್ನದು NGO ಮೂಲಕ ಹಳ್ಳಿಯ ಮಕ್ಕಳಿಗೆ ಶಿಕ್ಷಣ ನೀಡುವ ಶಿಕ್ಷಕನ ಪಾತ್ರ ಚಿತ್ರದ ಸಹ ನಿರ್ದೇಶಕನಾಗಿಯು ಕೆಲಸ ಮಾಡಿದ್ದೇನೆ ಎಂದು ಹೇಳಿದರು.
ಇನ್ನಷ್ಟು ಓದಿರಿ:
ವಾರದ ಭವಿಷ್ಯ: ಪ್ರೀತಿಯಲ್ಲಿ ಸಿಹಿ ಸುದ್ದಿ, ಉದ್ಯೋಗಸ್ಥರಿಗೆ ವಿವಾಹ ಸಾಧ್ಯತೆ!