<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Politics

ಭಾರತೀಯ ನಾವಿಕರ ಸಾವಿಗೆ ನ್ಯಾಯ ಬೇಕು : ಟ್ರಂಪ್ ಜೊತೆ ಮೋದಿ ಚರ್ಚಿಸಲಿ ಎಂದ ಪ್ರಿಯಾಂಕಾ ಗಾಂಧಿ ವಾದ್ರಾ

ಭಾರತೀಯ ನಾವಿಕರ ಸಾವಿಗೆ ನ್ಯಾಯ ಬೇಕು : ಟ್ರಂಪ್ ಜೊತೆ ಮೋದಿ ಚರ್ಚಿಸಲಿ ಎಂದ ಪ್ರಿಯಾಂಕಾ ಗಾಂಧಿ ವಾದ್ರಾ
Summary: The G-7 summit begins in France today, and important bilateral talks will be held between Prime Minister Narendra Modi and US President Donald Trump on Wednesday. In this context, Congress leader Priyanka Gandhi Vadra has demanded that Prime Minister Modi should raise the death of Indian sailors with Trump.

belagavi news :

ಅಮೆರಿಕ ಸೇನೆಯ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಮೃತಪಟ್ಟಿರುವ ವಿಚಾರವನ್ನು ಪ್ರಾನ್ಸ್ ನಲ್ಲಿ ನಡೆಯುತ್ತಿರುವ ಜಿ -7 ಶೃಂಗ ಸಭೆಯ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎದುರು ಪ್ರಧಾನಿ ಮೋದಿ ಪ್ರಸ್ತಾಪಿಸಬೇಕು ಎಂದು ಕಾಂಗ್ರೆಸ್ ಸಂಸದ ಪ್ರಿಯಾಂಕ ಗಾಂಧಿ ವಾದ್ರಾ ಒತ್ತಾಯಿಸಿದ್ದಾರೆ.

ಫ್ರಾನ್ಸ್ ನಲ್ಲಿ ಇಂದಿನಿಂದ ಜಿ-7 ಶೃಂಗ ಸಭೆ ಆರಂಭವಾಗಿದ್ದು, ಬುದುವಾರ ಪ್ರಧಾನಿ ಮೋದಿ ಮತ್ತು ಟ್ರಂಪ್ ನ ನಡುವೆ ಮಹತ್ವದ ದ್ವಿಪಕ್ಷಿಯ ಮಾತುಕತೆ ನಡೆಯಲಿದೆ. ಈ ಬೇಟಿಯ ಸಂದರ್ಭದಲ್ಲಿ ಭಾರತೀಯ ನಾವಿಕರ ಸಾವಿನ ಕುರಿತು ಸ್ಪಷ್ಟನೆ ಹಾಗೂ ನ್ಯಾಯಕ್ಕಾಗಿ ಭಾರತವನ್ನು ವ್ಯಕ್ತಪಡಿಸಬೇಕು ಎಂದು ಪ್ರಿಯಾಂಕ ಆಗ್ರಹಿಸಿದ್ದಾರೆ.

ಕಳೆದ ವರ್ಷದ ಫೆಬ್ರುವರಿಯಲ್ಲಿ ಅಮೆರಿಕಾದ ವಾಷಿಂಗ್ಟನ್ ನಲ್ಲಿ ನಡೆದ ಘಟನೆಯ ಬಳಿಕ ಮೋದಿ ಮತ್ತು ಟ್ರಂಪ್ ನಡುವಿನ ಮೊದಲ ಮುಖಾಮುಖಿ ಮಾತುಕತೆ ಇದಾಗಿದ್ದು, ಜಾಗತಿಕ ರಾಜಕೀಯ, ಭದ್ರತೆ, ವ್ಯಾಪಾರ ಸೇರಿದಂತೆ ಹಲವು ಪ್ರಮುಖ ವಿಷಯಗಳು ಚರ್ಚೆಗೆ ಬರುವ ನಿರೀಕ್ಷೆ ಇದೆ.

Sponsored

ಇದರ ನಡುವೆ ಭಾರತೀಯ ನಾವಿಕರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಿಲುವು ತಾಳಬೇಕು ಎಂದು ಪ್ರಿಯಾಂಕ ಗಾಂಧಿ ಒತ್ತಾಯಿಸಿದ್ದು, ಈ ವಿಷಯ ಜಿ-7 ಶೃಂಗಸಭೆಯ ಪ್ರಮುಖ ಚರ್ಚೆಗಳಲ್ಲಿ ಒಂದಾಗುವ ಸಾಧ್ಯತೆ ಇದೆ. ಪ್ರಧಾನಿ ಮೋದಿಯಲ್ಲಿ ಭಾರತೀಯರ ಹಿತಾಸಕ್ತಿಯನ್ನು ಪ್ರತಿನಿಧಿಸಿ, ಮೃತ ನಾವಿಕರ ಕುಟುಂಬಗಳಿಗೆ ನ್ಯಾಯ ದೊರಕುವಂತೆ ಕ್ರಮ ಕೈಗೊಳ್ಳಬೇಕು ಎಂಬುದು ಕಾಂಗ್ರೆಸ್ ಆಗ್ರಹವಾಗಿದೆ.

ಇರಾನ್ ಮತ್ತು ಅಮೆರಿಕಾದ ನಡುವೆ ಶಾಂತಿ ಒಪ್ಪಂದಕ್ಕೂ ಮೊದಲು,

ಹರ್ಮುಜ್ ಜಲಸಂಧಿಯಲ್ಲಿ ಅಮೆರಿಕಾದ ನೌಕಾಪಡೆಯು ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಭಾರತೀಯ ಮೂವರು ನಾವಿಕರು ಸಾವನ್ನಪ್ಪಿದ್ದಾರೆ. ಇದನ್ನು ಭಾರತ ಖಂಡಿಸಿದೆ.

ನಾವಿಕರು ಸಾವನ್ನಪ್ಪಿದ್ದಾರೆ. ಇದು ಅತ್ಯಂತ ಖಂಡನೀಯ ಘಟನೆ. ಈ ವಿಷಯವನ್ನು ಪ್ರಧಾನಿ ಮೋದಿ ಅವರು ಅಧ್ಯಕ್ಷ ಟ್ರಂಪ್ ಅವರ ಎದುರು ಪ್ರಸ್ತಾಪಿಸಬೇಕು" ಎಂದು ಹೇಳಿದ್ದಾರೆ.

Sponsored

ಇದೇ ವೇಳೆ, ಇಂತಹ ಗಂಭೀರ ಘಟನೆಗಳ ಕುರಿತು ಭಾರತದಿಂದ ನಿರೀಕ್ಷಿತ ಮಟ್ಟದ ಪ್ರತಿಕ್ರಿಯೆ ವ್ಯಕ್ತವಾಗದಿರುವುದಕ್ಕೂ ಅವರು ಬೇಸರ ವ್ಯಕ್ತಪಡಿಸಿದರು. "ನಮ್ಮ ನಾಗರಿಕರು ಸಾವಿಗೀಡಾದಂತಹ ಪ್ರಕರಣಗಳ ಬಗ್ಗೆ ನಾವು ಬಹಿರಂಗವಾಗಿ ಮತ್ತು ತೀಕ್ಷ್ಣ ವಾಗಿ ಮಾತನಾಡುತ್ತಿಲ್ಲ ಎಂಬುವುದು ಆಶ್ಚರ್ಯಕರ ಸಂಗತಿ. ದೇಶದ ಪ್ರಜೆಗಳ ಜೀವದ ಪ್ರಶ್ನೆ ಬಂದಾಗ ಸರ್ಕಾರ ಸ್ಪಷ್ಟ ಹಾಗೂ ದೃಢ ನಿಲುವು ತಾಳಬೇಕು" ಎಂದು ಕಳವಳ ವ್ಯಕ್ತಪಡಿಸಿದರು.

ಫ್ರಾನ್ಸ್ ನಲ್ಲಿ ನಡೆಯುತ್ತಿರುವ ಜಿ-7 ಸಂಘ ಸಭೆಯ ಸಂದರ್ಭದಲ್ಲಿ ಬುಧವಾರ ಪ್ರಧಾನಿ ಮೋದಿ ಮತ್ತು ಡ್ರೊನಾಲ್ಡ್ ಟ್ರಂಪ್ ನಡುವೆ ದ್ವಿ ಪಕ್ಷಿಯ ಮಾತುಕತೆ ನಡೆಯಲಿದ್ದು, ಈ ಭೇಟಿಯಲ್ಲಿ ಭಾರತೀಯ ನಾಯಕರ ಸಾವಿನ ವಿಚಾರ ಚರ್ಚೆಗೆ ಬರಬಹುದೇ ಎಂಬ ಕುತೂಹಲ ಮೂಡಿದೆ. ಈ ವಿಷಯದ ಕುರಿತು ಕೇಂದ್ರ ಸರ್ಕಾರದ ಮುಂದಿನ ನಡೆ ಏನಾಗಲಿದೆ ಎಂಬುದರತ್ತ ದೇಶದ ಗಮನ ನೆಟ್ಟಿದೆ.

ಸಿಂಧೂರು ಕಾರ್ಯಾಚರಣೆ, ಸುಂಕ ವಿವಾದದ ಬಳಿಕ ಮೋದಿ ಟ್ರಂಪ್ ಮೊದಲ ಬೇಟಿ ; ಜಾಗತಿಕ ಗಮನ ಸೆಳೆದ ಮಾತುಕತೆ.

ಫ್ರಾನ್ಸ್ ನಲ್ಲಿ ನಡೆಯುತ್ತಿರುವ ಜಿ - 7 ಶೃಂಗಸಭೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷರು ನಡುವಿನ ದ್ವಿಪಕ್ಷಿಯ ಮಾತುಕತೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಪಾಕಿಸ್ತಾನ ವಿರುದ್ಧ ಭಾರತ ನಡೆಸಿದ ಆಪರೇಷನ್ ಸಿಂಧೂರು ಹಾಗೂ ಭಾರತದ ಮೇಲೆ ಅಮೆರಿಕ ವಿಧಿಸಿದ ಬಾರಿ ಸುಂಕದ ಬಳಿಕ ಉಭಯ ರಾಷ್ಟ್ರಗಳ ಸಂಬಂಧಗಳಲ್ಲಿ ಕೆಲವೊಂದು ಭಿನ್ನಾಭಿಪ್ರಾಯಗಳು ಕಾಣಿಸಿಕೊಂಡಿದ್ದವು. ಇಂಥ ಬೆಳವಣಿಗೆಗಳ ನಂತರ ಉಭಯ ನಾಯಕರಾ ನಡುವಿನ ಮೊದಲ ಮುಖಾಮುಖಿ ಭೇಟಿ ಇದಾಗಿದೆ.

Sponsored

ಆಪರೇಷನ್ ಸಿಂಧೂರ ಬಳಿಕ ಭಾರತ ಅಮೆರಿಕ ನಡುವಿನ ಉದ್ವಿಗ್ನತೆ ಹೆಚ್ಚಾಗಿದ್ದರೆ, ಮತ್ತೊಂದಡೆ ಅಮೆರಿಕಾದ ಸುಂಕ ನಿಧಿಯು ಭಾರತ ಅಮೆರಿಕ ವ್ಯಾಪಾರ ಸಂಬಂಧಗಳ ಮೇಲು ಪರಿಣಾಮ ಬೀರಿತು. ಈ ಹಿನ್ನೆಲೆಯಲ್ಲಿ ಮೋದಿ ಟ್ರಂಪ್ ಬೇದಿ ಕೇವಲ ಔಪಚಾರಿಕ ಮಾತುಕತೆಯಲ್ಲ, ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಹಾಗೂ ಆರ್ಥಿಕ ಸಂಬಂಧಗಳ ದಿಕ್ಕನ್ನು ನಿರ್ಧರಿಸುವ ಮಹತ್ವದ ಸಭೆಯಾಗಿ ಪರಿಗಣಿಸಲಾಗಿದೆ.

ಇದಕ್ಕೂ ಮುನ್ನ ಉಭಯ ನಾಯಕರು ದೂರವಾಣಿ ಮೂಲಕ ಹಲವು ಬಾರಿ ಸಂಭಾಷಣೆ ನಡೆಸಿದ್ದರು. ಕಳಪೆ ಫೆಬ್ರುವರಿಯಲ್ಲಿ ಮಧ್ಯಂತರ ದೀಪಕ್ಷಿಯ ವ್ಯಾಪಾರ ಒಪ್ಪಂದಕ್ಕೆ ಸಾತ್ವಿಕ ಒಪ್ಪಿಗೆ ಸೂಚಿಸಿದ್ದರು, ಅದರ ಅಂತಿಮ ರೂಪ ರೇಷಗಳ ಕುರಿತು ಮಾತು ಕಥೆಗಳು ಇನ್ನು ಮುಂದುವರೆದಿದೆ.

ನಾವಿಕರ ಸಾವು ಪ್ರಕರಣ: ಅಮೇರಿಕಾಕೆ ಭಾರತ ತೀವ್ರ ಕಂಡನೆ; ಜೈ ಶಂಕರ್ ರುಬಿಯೊ ಮಾತುಕತೆ, ರಾಯಬಾರಿಗೆ ಸಮನ್ಸ್

ಒಮನ್ ಕರಾವಳಿಯಲ್ಲಿ ನಿಂತಿದ್ದ ವಾಣಿಜ್ಯ ಹಡಗಿನ ಮೇಲೆ ಅಮೆರಿಕಾದ ಪದಗಳು ನಡೆಸಿದ ದಾಳಿಯಲ್ಲಿ ಮೂವರು ಭಾರತೀಯ ನಾಯಕರು ಮೃತಪಟ್ಟ ಘಟನೆ ಭಾರತ ಸರ್ಕಾರ ತೀವ್ರ ಕಂಡನೆ ವ್ಯಕ್ತಪಡಿಸಿದೆ. ಈ ಘಟನೆಯ ವಿರುದ್ಧ ನವದೆಹಲಿ ರಾಜತಾಂತ್ರಿಕವಾಗಿ ಗಂಭೀರ ಸಮಾಧಾನವನ್ನು ದಾಖಲಿಸಿದೆ.

Sponsored

ವಿದೇಶಾಂಗ ಸಚಿವ ಎಸ್ ಜಯಶಂಕರ್ ಅವರು ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೋ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿ, ಈ ದಾರಿಯ ಬಗ್ಗೆ ಭಾರತದ ತೀವ್ರ ಆಕ್ಷೇಪವನ್ನು ತಿಳಿಸಿದ್ದಾರೆ. ಭಾರತೀಯ ನಾಗರಿಕರ ಜೀವ ಹಾನಿಗೆ ಕಾರಣವಾದ ಈ ಒಪ್ಪಂದವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಭಾರತ ಸ್ಪಷ್ಟವಾಗಿ ತಿಳಿಸಿದೆ.

ಇದೆ ವೇಳೆ, ನವದೆಹಲಿಯಲ್ಲಿರುವ ಅಮೆರಿಕಾದ ಹಂಗಾಮಿ ರಾಯಬಾರಿ ಜೆಸನ್ ಮಿಕ್ಸ್ ಅವರಿಗೆ ವಿದೇಶಾಂಗ ಇಲಾಖೆ ಸಮನ್ಸ್ ಜಾರಿಗೊಳಿಸಿದೆ. ಒಮನ್ ಕರಾವಳಿಯಲ್ಲಿ ಭಾರತೀಯ ಸಿಬ್ಬಂದಿ ಇದ್ದ ವಾಣಿಜ್ಯ ಹಡಗುಗಳ ಮೇಲೆ ಅಮೆರಿಕ ಮಿಲಿಟರಿ ನಡೆಸಿದ ಪ್ರಾಣಾಂತಿಕ ದಾಳಿಗಳು ಅಸ್ವೀಕಾರಾರ್ಹವಾಗಿವೆ ಎಂದು ಭಾರತ ತೀಕ್ಷ್ಣವಾಗಿ ಎಚ್ಚರಿಕೆ ನೀಡಿದೆ.

Also Read:

ಟೆಸ್ಲಾ ಮಾಡೆಲ್ YL ಬಿಡುಗಡೆ: ಸಿಂಗಲ್ ಚಾರ್ಜ್ ಗೆ 681 ಕಿಮೀ ರೇಂಜ್, ಡೆಲಿವರಿ ಶುರು

Sponsored
You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online