<?= $pageTitle ?>
Logo
ಮುಖಪುಟ ಓದುವುದು ಕೇಳು
Education

KCET 2026ರ ಟಾಪರ್ಸ್ ಅನೌನ್ಸ್ : ರಾಜ್ಯದಾದ್ಯಂತ ಮಿಂಚಿದ ವಿದ್ಯಾರ್ಥಿನಿಯರು

KCET 2026ರ ಟಾಪರ್ಸ್ ಅನೌನ್ಸ್ : ರಾಜ್ಯದಾದ್ಯಂತ ಮಿಂಚಿದ ವಿದ್ಯಾರ್ಥಿನಿಯರು
Summary: The results of the Karnataka Common Entrance Test 2026 have been declared and this time too, girls have emerged victorious. Girls students have grabbed attention by securing top positions in engineering, pharmacy and other disciplines.

Belagavi News:

ಲಕ್ಷಾಂತರ ವಿದ್ಯಾರ್ಥಿಗಳು ಕಾತುರದಿಂದ ನಿರೀಕ್ಷಿಸಿದ್ದ 2026 ನೇ ಸಾಲಿನ ಕರ್ನಾಟಕದ ಸಾಮಾನ್ಯ ಪ್ರವೇಶ ಪರೀಕ್ಷೆ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇಂದು ಅಧಿಕೃತವಾಗಿ ಪ್ರಕಟಿಸಿದೆ. ಫಲಿತಾಂಶದೊಂದಿಗೆ ಇಂಜಿನಿಯರಿಂಗ್ ಹಾಗೂ ವೆಟರ್ನರಿ ವಿಭಾಗಗಳ ಟಾಪರ್ ಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಈ ಬಾರಿಯೂ ಹೆಣ್ಣು ಮಕ್ಕಳು ಅಗ್ರಸ್ಥಾನಗಳನ್ನು ಪಡೆದು ತಮ್ಮ ಮೈಲುಗೈಯನ್ನು ಸಾಬೀತುಪಡಿಸಿದ್ದಾರೆ.

ಇಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ ತನಿಷ್ಕ ಕಾರ್ತಿಕ್ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದು ಸಾಧನೆ ಮೆರೆದಿದ್ದಾರೆ. ಅದೇ ವೇಳೆ ವೆಟರ್ನರಿ ವಿಭಾಗದಲ್ಲಿ ನಯನ ಗೋಪಿ ಮೊದಲ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ. ಈ ಇಬ್ಬರ ವಿದ್ಯಾರ್ಥಿನಿಯರು ಸಾಧನೆ ರಾಜದಾದ್ಯಂತ ಪ್ರಶಂಸೆಗೆ ಪಾತ್ರವಾಗಿದೆ.

ಫಲಿತಾಂಶದ ಅಂಕಿ ಅಂಶಗಳನ್ನು ಗಮನಿಸಿದರೆ, ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶ ಪರೀಕ್ಷೆಗಳಲ್ಲಿ ವಿದ್ಯಾರ್ಥಿನಿಯರು ಅತ್ಯುತ್ತಮ ಪ್ರದರ್ಶನ ನೀಡಿರುವುದು ಸ್ಪಷ್ಟವಾಗಿದೆ. ಕಳೆದ ಕೆಲವು ವರ್ಷಗಳಿಂದ ಮುಂದುವರೆದಿರುವ ಈ ಪ್ರವೃತ್ತಿ ಈ ಬಾರಿಯೂ ಪುನರಾವರ್ತನೆಯಾಗಿದ್ದು, ಹೆಣ್ಣು ಮಕ್ಕಳ ಶೈಕ್ಷಣಿಕ ಸಾಧನೆ ಮತ್ತೊಮ್ಮೆ ಸಾಬೀತಾಗಿದೆ.

ಇನ್ನು ಬೆಂಗಳೂರಿನ ಪ್ರತಿಷ್ಠಿತ ಆರ್. ವಿ.ಪಿಯು ಕಾಲೇಜ್ ಟಾಪರ್ಸ್ ಗಳಪಟ್ಟಿಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ಹಲವು ವಿದ್ಯಾರ್ಥಿಗಳು ಉನ್ನತ ರ‍್ಯಾಂಕ್ ಗಳನ್ನು ಪಡೆಯುವ ಮೂಲಕ ಸಂಸ್ಥೆಯ ಶೈಕ್ಷಣಿಕ ಗುಣಮಟ್ಟವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಕೆಇಎರುವ ಫಲಿತಾಂಶವನ್ನು ಅಭ್ಯರ್ಥಿಗಳು ಅಧಿಕೃತವಾಗಿ ವೆಬ್ಸೈಟ್ನಲ್ಲಿ ತಮ್ಮ ನೊಂದಣಿ ಸಂಖ್ಯೆ ಹಾಗೂ ಅಗತ್ಯ ವಿವರಗಳನ್ನು ನಮೂದಿಸುವ ಮೂಲಕ ಪರಿಶೀಲಿಸಬಹುದು. ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಕೌನ್ಸಿಲಿಂಗ್ ಪ್ರಕ್ರಿಯೆ ಹಾಗೂ ಸಿ ಟು ಹಂಚಿಕೆ ಕುರಿತ ಮಾಹಿತಿಗಾಗಿ ವಿದ್ಯಾರ್ಥಿಗಳು ಕಾದು ಕುಳಿತಿದ್ದಾರೆ.

ಯುಜಿಸಿಇಟಿ ಕರ್ನಾಟಕದ ಪ್ರಮುಖ ವೃತ್ತಿಪರ ಕೋರ್ಸ್ ಗಳಾದ ಇಂಜಿನಿಯರಿಂಗ್, ಫಾರ್ಮಸಿ, ಕೃಷಿ, ವೇಟರ್ನರಿ ಸೇರಿದಂತೆ ವಿವಿಧ ವಿಭಾಗಗಳಿಗೆ ಪ್ರವೇಶ ಪಡೆಯುವ ಪ್ರಮುಖ ಪರೀಕ್ಷೆಯಾಗಿದ್ದು, ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗುತ್ತಾರೆ.

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿಯ ಟಾಪರ್ಸ್ ಪಟ್ಟಿಯಲ್ಲಿ ಬೆಂಗಳೂರಿನ ಜಯನಗರದ ಆರ್.ವಿ.ಪಿಯು ಕಾಲೇಜ್ ಭರ್ಜರಿ ಸಾಧನೆ ಮಾಡಿದೆ. ವಿವಿಧ ವಿಭಾಗಗಳ ರಾಜ್ಯ ರ‍್ಯಾಂಕ್ ಪಟ್ಟಿಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಮಿಂಚುವ ಮೂಲಕ ಗಮನ ಸೆಳೆದಿದ್ದಾರೆ.

ಇಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯದ ಮೊದಲ ರ‍್ಯಾಂಕ್ ಪಡೆದಿರುವ ತನಿಷ್ಕ ಕಾರ್ತಿಕ್ ಆರ್.ವಿ.ಪಿಯು ಕಾಲೇಜ್ ವಿದ್ಯಾರ್ಥಿನಿಯಾಗಿದ್ದು, ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಇದೇ ಕಾಲೇಜಿನ ವಿದ್ಯಾರ್ಥಿ ರಿತಿಕ್ ಕುಮಾರ್ ಬೆಟರ್ನರಿ ವಿಭಾಗದಲ್ಲಿ ಮೂರನೇ ರ‍್ಯಾಂಕ್ ಪಡೆದು ಮತ್ತೊಮ್ಮೆ ಸಾಧನೆ ದಾಖಲಿಸಿದ್ದಾರೆ.

ಇದರೊಂದಿಗೆ ದಾವಣಗೆರೆ ಸರ್.ಎಂ.ವಿ.ಪಿಯು ಕಾಲೇಜು ಕೂಡ ರಾಜ್ಯಮಟ್ಟದಲ್ಲಿ ಗಮನ ಸೆಳೆದಿದ್ದು, ವೆಟರ್ನರಿ ವಿಭಾಗದಲ್ಲಿ ದ್ವಿತೀಯ ರ‍್ಯಾಂಕ್ ಪಡೆಯುವ ಮೂಲಕ ತನ್ನ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

KEA KCET 2025 ಫಲಿತಾಂಶ ವೀಕ್ಷಿಸುವುದು ಹೇಗೆ ? :

ಕೆ ಸಿ ಇ ಟಿ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ ಗಳಲ್ಲಿ ತಮ್ಮ ಪಲಿತಾಂಶವನ್ನು ಪರಿಶೀಲಿಸಬಹುದು

ಅಧಿಕೃತ ವೆಬ್ ಸೈಟ್ ಗಳು :

1. cetonline.karnataka.gov.in/kea/

2. karresults.nic.in

ಅಭ್ಯರ್ಥಿಗಳು ತಮ್ಮ ರಿಜಿಸ್ಟರ್ ನಂಬರ್ ನಮೂದಿಸುವ ಮೂಲಕ ಸ್ಕೋರ್ ಕಾರ್ಡ್ ಅನ್ನು ಆನ್ಲೈನ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು. ಫಲಿತಾಂಶದೊಂದಿಗೆ ರ‍್ಯಾಂಕ್ ವಿಷಯವಾರು ಅಂಕಗಳು ಹಾಗೂ ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದ ಮಾಹಿತಿಯು ಲಭ್ಯವಾಗಲಿದೆ.

KCET 2025 ಮತ್ತು 26 : ಆರ್ ವಿ ಪಿಯು ಕಾಲೇಜಿನ ಸಾಧನೆಗೆ ಶಿಕ್ಷಣ ವಲಯದಲ್ಲಿ ಮೆಚ್ಚುಗೆ:

ಪ್ರತಿ ವರ್ಷ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ನೀಡಿರುವ ಆರ್ ವಿ ಪಿಯು ಕಾಲೇಜು, ಈ ಬಾರಿಯೂ ರಾಜ್ಯದ ಟಾಪರ್ಸ್ ಪಟ್ಟಿಯಲ್ಲಿ ಪ್ರಮುಖ ಸ್ಥಾನಗಳನ್ನು ಪಡೆದು ತನ್ನ ಶೈಕ್ಷಣಿಕ ಗುಣಮಟ್ಟವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ವಿದ್ಯಾರ್ಥಿಗಳ ಸಾಧನೆಗೆ ಪೋಷಕರು, ಶಿಕ್ಷಕರು ಹಾಗೂ ಶಿಕ್ಷಣ ತಜ್ಞರು ಅಭಿನಂದನೆ ಸಲ್ಲಿಸಿದ್ದಾರೆ.

Also Read:

ಕ್ಲಿಯರ್ ಔಟ್ ಎಡವಟ್ಟು? ನಾಟಕವಾಡಿ, ಬಚಾವಾದ ಕೆಎಲ್ ರಾಹುಲ್!

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online