Belagavi News:
ಹಲ್ದ್ವಾನಿ, ಉತ್ತರಾಖಂಡ್: ವಿಶ್ವ ಪ್ರಸಿದ್ಧ ಕೈಲಾಸ ಮಾನಸ ಸರೋವರ ಯಾತ್ರೆ 2026 ಜುಲೈ 4ರಂದು ಆರಂಭವಾಗಲಿದ್ದು, ಯಾತ್ರೆಗೆ ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಕುಮಾವೂನ್ ಮಂಡಲ ವಿಕಾಸ ನಿಗಮ (KMVN) ಪೂರ್ಣಗೊಳಿಸಿದೆ. ಯಾತ್ರಿಕರ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ಆಡಳಿತ ಹಾಗೂ KMVN ಅಂತಿಮ ಹಂತದ ವ್ಯವಸ್ಥೆಗಳನ್ನು ಕೈಗೊಂಡಿವೆ.
ಹಿಂದೂಗಳ ಅತ್ಯಂತ ಪವಿತ್ರ ಯಾತ್ರೆಗಳಲ್ಲಿ ಒಂದಾದ ಕೈಲಾಸ ಮಾನಸ ಸರೋವರ ಯಾತ್ರೆ ಭಕ್ತಿ, ಆಧ್ಯಾತ್ಮಿಕತೆ ಮತ್ತು ಕಠಿಣ ಪರ್ವತಾವರೋಹಣದ ಅನುಭವದ ಸಂಗಮವಾಗಿದೆ. ಈ ವರ್ಷದ ಯಾತ್ರೆಯಲ್ಲಿ ಒಟ್ಟು 10 ಗುಂಪುಗಳು ಭಾಗವಹಿಸಲಿದ್ದು. ಪ್ರತಿ ಗುಂಪಿನಲ್ಲಿ ಸುಮಾರು 50 ಯಾತ್ರಿಕರು ಸೇರಿ ಒಟ್ಟು 500 ಮಂದಿ ಯಾತ್ರಿಕರು ಭಾಗವಹಿಸಲಿದ್ದಾರೆ.
KMVN ನೀಡಿರುವ ಮಾಹಿತಿಯ ಪ್ರಕಾರ, ಮೊದಲ ಯಾತ್ರಿಕರ ತಂಡ ಜುಲೈ 4ರಂದು ದೆಹಲಿಯಿಂದ ಹೊರಟು ತನಕಪುರ ತಲುಪಲಿದೆ. ನಂತರ ಜುಲೈ 5ರಂದು ತಂಡ ಪಿಥೋರಗಢ ಮಾರ್ಗವಾಗಿ ಧಾರ್ಚುಲಾಗೆ ಪ್ರಯಾಣ ಬೆಳೆಸಲಿದೆ. ಸಾಂಪ್ರದಾಯಿಕ ಮಾರ್ಗದಂತೆ ಯಾತ್ರಿಕರು ತನಕ್ ಪೂರ, ಧಾರ್ಚುಲಾ, ಗುಂಜಿ ಮತ್ತು ಲಿಪುಲೇಖ್ ಪಾಸ್ ಮೂಲಕ ಕೈಲಾಸ ಮಾನಸ ಸರೋವರ ತಲುಪಲಿದ್ದಾರೆ.
ಯಾತ್ರೆಯ ಯಶಸ್ವಿ ಆಯೋಜನೆಗಾಗಿ ಮಾರ್ಗದ ವಿವಿಧ ಸ್ಥಳಗಳಲ್ಲಿ ವಸತಿ, ಆಹಾರ, ವೈದ್ಯಕೀಯ ನೆರವು ಹಾಗೂ ಸುರಕ್ಷತಾ ವ್ಯವಸ್ಥೆಗಳನ್ನು ಬಲಪಡಿಸಲಾಗಿದೆ. ಯಾತ್ರಿಕರಿಗೆ ಯಾವುದೇ ತೊಂದರೆ ಆಗದಂತೆ ಎಲ್ಲಾ ಅಗತ್ಯ ಮೂಲಸೌಕರ್ಯಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿ ವರ್ಷ ಸಾವಿರಾರು ಭಕ್ತರು ಕಾತರದಿಂದ ಕಾಯುವ ಕೈಲಾಸ ಮಾನಸ ಸರೋವರ ಯಾತ್ರೆ ಈ ವರ್ಷವೂ ಅಧ್ಯಾತ್ಮಿಕ ಅನುಭವದೊಂದಿಗೆ ಭಕ್ತಾರಿಗೆ ವಿಶೇಷ ಅವಕಾಶ ಕಲ್ಪಿಸಲಿದೆ.
ಯಾತ್ರೆಯ ವೇಳೆ ಯಾತ್ರಿಕರ ವಸತಿ, ಆಹಾರ, ಆರೋಗ್ಯ ಸೇವೆಗಳು ಹಾಗೂ ಭದ್ರತೆಗೆ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಯಾತ್ರಿಕರು ಯಾವುದೇ ಅನಾನುಕೂಲತೆ ಎದುರಿಸದಂತೆ ಯಾತ್ರೆಯ ಮಾರ್ಗದಲ್ಲಿರುವ ಎಲ್ಲಾ ವಿಶ್ರಾಂತಿ ಕೇಂದ್ರಗಳು ಮತ್ತು ಅತಿಥಿ ಗೃಹಗಳ ಸೌಲಭ್ಯಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
KMVN ಅಧಿಕಾರಿಗಳ ಪ್ರಕಾರ, ಯಾತ್ರಿಕರಿಗೆ ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣದ ಅನುಭವ ನೀಡುವುದು ಪ್ರಮುಖ ಗುರಿಯಾಗಿದೆ. ಇದಕ್ಕಾಗಿ ಮಾರ್ಗದ ವಿವಿಧ ಸ್ಥಳಗಳಲ್ಲಿ ವೈದ್ಯಕೀಯ ತಂಡಗಳು, ತುರ್ತು ಸೇವೆಗಳು ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಸಜ್ಜುಗೊಳಿಸಲಾಗುತ್ತಿದೆ.
ಇದೆ ವೇಳೆ, ಯಾತ್ರೆಯಿಂದ ಹಿಂದಿರುಗುವ ಭಕ್ತರ ಅನುಕೂಲಕ್ಕಾಗಿ ಹಲ್ದ್ವಾನಿಯಲ್ಲಿರುವ ಲೋಕೋಪಯೋಗಿ ಇಲಾಖೆ (PWD) ಅತಿಥಿ ಗೃಹವನ್ನು KMVNಗೆ ವರ್ಗಾಯಿಸಲಾಗಿದೆ. ಈ ಅತಿಥಿ ಗೃಹವನ್ನು ಶೀಘ್ರದಲ್ಲೇ ನವೀಕರಿಸಿ. ಯಾತ್ರಿಕರಿಗೆ ಉತ್ತಮ ವಸತಿ ಮತ್ತು ವಿಶ್ರಾಂತಿ ಸೌಲಭ್ಯಗಳನ್ನು ಒದಗಿಸಲಾಗುವುದು.
ಈ ವರ್ಷದ ಕೈಲಾಸ ಮಾನಸ ಸರೋವರ ಯಾತ್ರೆಯಲ್ಲಿ ಒಟ್ಟು 10ತಂಡಗಳು ಭಾಗವಹಿಸಲಿದ್ದು. ಸುಮಾರು 500 ಯಾತ್ರಿಕರೂ ಪವಿತ್ರ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಾಂಪ್ರದಾಯಿಕ ಮಾರ್ಗವಾಗ ತನಕಪುರ, ಫಾರ್ಚುಲಾ, ಗುಂಜಿ ಮತ್ತು ಲಿಪುಲೇಖ್ ಪಾಸ್ ಮೂಲಕ ಯಾಂತ್ರಿಕರು ಕೈಲಾಸ ಮಾನಸ ಸರೋವರ ತಲುಪರಲಿದ್ದಾರೆ.
ಭಕ್ತಿ, ನಂಬಿಕ ಮತ್ತು ಆಧ್ಯಾತ್ಮಿಕ ಅನುಭವದ ಪ್ರತಿಕವಾಗಿರುವ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಸುರಕ್ಷಿತ, ಆರಾಮದಾಯಕ ಮತ್ತು ಸ್ಮರಣೀಯವಾಗಿಸಲು KMVN ವಿಶೇಷ ಕಮನ ಹರಿಸಿದೆ. ಯಾತ್ರಿಕರಿಗೆ ಅತ್ಯುತ್ತಮ ಸೌಲಭ್ಯಗಳನ್ನು ಒದಗಿಸುವ ಮೂಲಕ ಈ ವರ್ಷದ ಯಾತ್ರೆಯನ್ನು ಯಶಸ್ವಿಯಾಗಿ ನಡೆಸಲು ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ.
Also Read:
ಕರ್ನಾಟಕ ರಾಜಕೀಯದಲ್ಲಿ ಹೊಸ ತಿರುವು : ಅಧಿಕಾರ ಹಂಚಿಕೆ ಗುಟ್ಟು ಬಿಚ್ಚಿಟ್ಟ ಸಿಎಂ