Belagavi news:
ದೇಶದ ಆರ್ಥಿಕ ಪರಿಸ್ಥಿತಿ ಕುರಿತು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಜನರಿಗೆ ಹಲವು ಸಲಹೆಗಳನ್ನು ನೀಡಿದ್ದ ಬೆನ್ನಲ್ಲೇ, ಇದೀಗ ಚಿತ್ರರಂಗದ ಆರ್ಥಿಕತೆಯ ಬಗ್ಗೆ ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಕಮಲ್ ಹಾಸನ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಿನಿಮಾ ನಿರ್ಮಾಣ ಕ್ಷೇತ್ರದಲ್ಲಿ ವೆಚ್ಚ ನಿಯಂತ್ರಣ ಅಗತ್ಯವಿದೆ ಎಂದು ಅವರು ಒತ್ತಾಯಿಸಿದ್ದಾರೆ.
ಪ್ರಧಾನಿ ಮೋದಿ ಅವರ ಇತ್ತೀಚೆಗೆ "ವರ್ಕ್ ಫ್ರಮ್ ಹೋಮ್ ಮಾಡಿ , ಚಿನ್ನ ಖರೀದಿಸಬೇಡಿ ವಿದೇಶ ಪ್ರಯಾಣ ಕಡಿಮೆ ಮಾಡಿ" ಸೇರಿದಂತೆ ವಿವಿಧ ಆರ್ಥಿಕ ಸಲಹೆಗಳನ್ನು ದೇಶದ ಜನರಿಗೆ ನೀಡಿದ್ದಾರೆ. ಇದೇ ಹಿನ್ನೆಲೆಯಲ್ಲಿ ಮಾತನಾಡಿದ ಕಮಲ್ ಹಾಸನ್, ಚಿತ್ರರಂಗದಲ್ಲೂ ಆರ್ಥಿಕ ಶಿಸ್ತಿನ ಅಗತ್ಯವಿದೆ ಎಂದು ಹೇಳಿದ್ದಾರೆ.
ಕಮಲ್ ಹಾಸನ್ ಅವರ ಪ್ರಕಾರ, ಸಿನಿಮಾ ನಿರ್ಮಾಪಕರು ಅತಿಯಾದ ಖರ್ಚುಗಳನ್ನು ಕಡಿಮೆ ಮಾಡಿ, ಬಜೆಟ್ ನಿಯಂತ್ರಣದ ಮೂಲಕ ಉತ್ತಮ ಗುಣಮಟ್ಟದ ಸಿನಿಮಾಗಳನ್ನು ನಿರ್ಮಿಸಬೇಕು. ಅನಗತ್ಯ ವೆಚ್ಚಗಳು ಚಿತ್ರೋದ್ಯಮದ ಸ್ಥಿರತೆಗೆ ಅಡ್ಡಿಯಾಗುತ್ತಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಚಿತ್ರರಂಗದ ಆರ್ಥಿಕ ಸಮತೋಲನ ಕಾಪಾಡಲು ಹೊಸ ಚಿಂತನೆ ಅಗತ್ಯವಿದ್ದು, ವೆಚ್ಚ ಕಡಿತದ ಮೂಲಕ ಉದ್ಯಮವನ್ನು ಇನ್ನಷ್ಟು ಬಲಪಡಿಸಬಹುದು ಎಂದು ಕಮಲ್ ಹಾಸನ್ ಸಲಹೆ ನೀಡಿದ್ದಾರೆ. ಅವರ ಈ ಹೇಳಿಕೆ ಸಿನಿಮಾ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಭಾರತೀಯ ಚಿತ್ರರಂಗದಲ್ಲಿ ದಿನೇ ದಿನೇ ಹಚ್ಚುತ್ತಿರುವ ನಿರ್ಮಾಣ ವೆಚ್ಚಗಳು ಹಾಗೂ ತಾರೆಯರ ಸಂಭಾವನೆಗಳ ಬಗ್ಗೆ ಹಿರಿಯ ನಟ ಕಮಲ್ ಹಾಸನ್ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಸಿನಿಮಾ ಉದ್ಯಮದ ಆರ್ಥಿಕ ಸ್ಥಿರತೆಯನ್ನು ಕಾಪಾಡಲು ನಿರ್ಮಾಣ ವೆಚ್ಚಗಳನ್ನು ನಿಯಂತ್ರಿಸುವುದು ಅತ್ಯಗತ್ಯ ಎಂದು ಅವರು ಹೇಳಿದ್ದಾರೆ.
ಇತ್ತೀಚಿಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಕಮಲ್ ಹಾಸನ್, ಚಿತ್ರರಂಗದಲ್ಲಿ ಅನಗತ್ಯ ಖರ್ಚುಗಳಿಗೆ ಕಡಿಯೋಣ ಹಾಕಬೇಕು ಎಂದು ಸಲಹೆ ನೀಡಿದ್ದಾರೆ. ಅನಗತ್ಯ ವೆಚ್ಚಗಳು ಹೆಚ್ಚುತ್ತಿರುವುದರಿಂದ ಸಿನಿಮಾ ಉದ್ಯಮದ ಮೇಲೂ ಅದರ ಪರಿಣಾಮ ಬೀರುತ್ತಿದೆ ಎಂದು ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ.
ವಿಶೇಷವಾಗಿ, ವಿದೇಶಗಳಲ್ಲಿ ಚಿತ್ರೀಕರಣ ಮಾಡುವ ಪ್ರವೃತ್ತಿಯನ್ನು ಕಡಿಮೆ ಮಾಡಬೇಕು ಎಂದು ಕಮಲ್ ಹಾಸನ್ ಅಭಿಪ್ರಾಯ ಪಟ್ಟಿದ್ದಾರೆ. "ಪ್ರತಿ ಲವ್ ಸ್ಟೋರಿಗೆ ಪ್ಯಾರಿಸ್, ಪ್ರತಿ ಹನಿಮೂನ್ ಸೀನ್ ಗೆ ಸ್ವಿಜರ್ಲ್ಯಾಂಡ್ ಹೋಗುವುದು ಅಗತ್ಯವಿಲ್ಲ" ಎಂದು ಅವರು ಉದಾಹರಣೆ ನೀಡಿದ್ದಾರೆ.
ಹೆಚ್ಚುತ್ತಿರುವ ಬೆಲೆಗಳು ಸಿನಿಮಾ ನಿರ್ಮಾಣದ ಜೊತೆಗೆ ಟಿಕೆಟ್ ದರಗಳ ಮೇಲು ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ, ನಟರು, ನಿರ್ಮಾಪಕರು ಹಾಗೂ ತಂತ್ರಜ್ಞರು ಚಿತ್ರರಂಗದ ಆರ್ಥಿಕ ಸಮತೋಲನ ಕಾಪಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಅವರಿಗೆ ಈ ಹೇಳಿಕೆ ಚಿತ್ರರಂಗದಲ್ಲಿ ಚರ್ಚೆಗೆ ಕಾರಣವಾಗಿದೆ.
ಹಿರಿಯ ನಟ ಕಮಲ್ ಹಾಸನ್ ಅವರ ಚಿತ್ರರಂಗದ ವೆಚ್ಚ ನಿಯಂತ್ರಣ ಕುರಿತ ಹೇಳಿಕೆ ಇದೀಗ ಉದ್ಯಮದ ಒಳಗೆ ಮತ್ತು ಹೊರಗೆ ಭಿನ್ನಾಭಿಪ್ರಾಯಗಳಿಗೆ ಕಾರಣವಾಗಿದೆ. ಸಿನಿಮಾ ನಿರ್ಮಾಣ ವೆಚ್ಚ ಹಾಗೂ ತಾರೆಯರ ಸಂಭಾವನೆ ಹೆಚ್ಚುತ್ತಿರುವ ಬಗ್ಗೆ ಅವರು ವ್ಯಕ್ತಪಡಿಸಿದ ಕಳವಳಕ್ಕೆ ಕೆಲವರು ಬೆಂಬಲ ಸೂಚಿಸಿದರೆ, ಇನ್ನು ಕೆಲವರು ಇಂದಿನ ಜಾಗತಿಕ ಸಿನಿಮಾ ರಂಗದ ಅಗತ್ಯತೆಗಳನ್ನು ಮುಂದಿಟ್ಟಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ 'ಕಲ್ಕಿ 2898 ಎಡಿ' ಚಿತ್ರದ ನಿರ್ಮಾಪಕ ಅಶ್ವಿನಿ ದತ್, ಕಮಲ್ ಹಾಸನ್ ಅವರ ಅಭಿಪ್ರಾಯವನ್ನು ಸಮರ್ಥಿಸಿದ್ದಾರೆ. "ಕಮಲ್ ಹಾಸನ್ ಅವರು ಹೇಳಿರುವುದು ನೂರಕ್ಕೆ ನೂರು ನಿಜ. ಉದ್ಯಮದ ಪಿತ ದೃಷ್ಟಿಯಿಂದ ಅದು ಅತ್ಯಂತ ಪ್ರಸ್ತುತವಾಗಿದೆ" ಎಂದು ಅವರು ಹೇಳಿದ್ದಾರೆ. ಆದರೆ ಇಂದಿನ ಮಾರುಕಟ್ಟೆಯಲ್ಲಿ ಜಾಗತಿಕ ಮಟ್ಟದ ಸಿನಿಮಾಗಳನ್ನು ನಿರ್ಮಿಸಲು ಭಾರಿ ಹೂಡಿಕೆ ಅಗತ್ಯವಿದೆ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ.
ಕಥೆಯ ಬೇಡಿಕೆಗೆ ತಕ್ಕಂತೆ ತಂತ್ರಜ್ಞಾನ, ಸೆಟ್ ಡಿಸೈನ್, ಹಾಗೂ ಸ್ಟಾರ್ ಕಾಸ್ಟ್ ಬಳಸುವಾಗ ಬಜೆಟ್ ಸ್ವಾಭಾವಿಕವಾಗಿ ಹೆಚ್ಚುತ್ತದೆ ಎಂದು ಅಶ್ವಿನಿ ದತ್ ಹೇಳಿದ್ದಾರೆ. ಅನಗತ್ಯ ವೆಚ್ಚಗಳನ್ನು ಕಡಿಮೆ ಮಾಡುವುದು ಮತ್ತು ಚಿತ್ರೀಕರಣದ ದಿನಗಳನ್ನು ಯೋಚಿತವಾಗಿ ನಿರ್ವಹಿಸುವುದು ನಿರ್ಮಾಪಕನ ಜವಾಬ್ದಾರಿ ಎಂದು ಅವರು ಸಲಹೆ ನೀಡಿದ್ದಾರೆ.
ಇದೆ ವೇಳೆ ಕಮಲ್ ಹಾಸನ್ ಅವರು ಪ್ರಸ್ತುತ 'ಕಲ್ಕಿ 2898 ಎಡಿ' ಸಿನಿಮಾದಲ್ಲೂ ನಡೆಸುತ್ತಿದ್ದಾರೆ. ಜೊತೆಗೆ ರಜನಿಕಾಂತ್ ಅವರೊಂದಿಗೆ ಹೊಸ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಅವರು, ರಜನಿಕಾಂತ್ ನಟನೆಯ ಮತ್ತೊಂದು ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅಲ್ಲದೆ, ನಟ ಶಿವ ಕಾರ್ತಿಕೇಯಾನ್ ಅಭಿನಯಿಸಿರುವ ಇನ್ನೊಂದು ಚಿತ್ರಕ್ಕೂ ಅವರು ನಿರ್ಮಾಪಕರಾಗಿದ್ದಾರೆ. ಅವರ ಹೇಳಿಕೆ ಮತ್ತು ಬಹುಮುಖ ಚಟುವಟಿಕೆಗಳು ಇದೀಗ ಚಿತ್ರರಂಗದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿವೆ.
Also Read: