BELAGAVI NEWS :
ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ 2026ರ ಮಹಿಳಾ ಟಿ-20 ವಿಶ್ವಕಪ್ ನಲ್ಲಿ ಭಾರತ ತಂಡಕ್ಕೆ ದೊಡ್ಡ ಹಿನ್ನಡೆ ಎದುರಾಗಿದೆ. ಸತತ ಎರಡು ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸದಲ್ಲಿ ಇದ್ದ ಭಾರತ ತಂಡಕ್ಕೆ ಸ್ಟಾರ್ ಆಲ್ ರೌಂಡರ್ ಶ್ರೇಯಾಂಕ ಪಾಟೀಲ್ ಗಾಯದಿಂದಾಗಿ ಇಡಿ ಟೂರ್ನಿಯಿಂದಲೇ ಹೊರಬಿದ್ದಿರುವುದು ಬಾರಿ ಆಘಾತವಾಗಿದೆ.
ನೆದರ್ಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಶ್ರೇಯಾಂಕ ಪಾಟೀಲ್ ಗಾಯಕ್ಕೆ ಒಳಗಾಗಿದ್ದು, ಆಟವನ್ನು ಮಧ್ಯದಲ್ಲಿ ನಿಲ್ಲಿಸಿ ಮೈದಾನ ತೊರೆದಿದ್ದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಾಯ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಅವರು ಟೂರ್ನಿಯಿಂದಲೇ ಹೊರಗಿಡಲಾಗಿದೆ.
ಬೌಲಿಂಗ್ ನಲ್ಲಿ ಪ್ರಮುಖ ಸ್ಪಿನ್ನರ್ ಆಗಿದ್ದ ಶ್ರೇಯಾಂಕ ಪಾಟೀಲ್, ಜೊತೆಗೆ ಕೆಳ ಕ್ರಮಾಂಕದಲ್ಲಿ ಅಮೂಲ್ಯ ಬ್ಯಾಟಿಂಗ್ ಸಹ ನೀಡುತ್ತಿದ್ದರಿಂದ ತಂಡದ ಸಂಯೋಜನೆಗೆ ಅವರ ಅಲಭ್ಯತೆ ದೊಡ್ಡ ಹೊಡೆತ ನೀಡಿದೆ. ಅವರ ಹೊರಗುಳುವಿಕೆ ಭಾರತದ ವಿಶ್ವಕಪ್ ಅಭಿಯಾನಕ್ಕೆ ಕರಿಛಾಯೇ ಮೂಡಿಸಿದೆ ಎಂದು ವಿಶ್ಲೇಷಣೆಗಳು ಹೇಳುತ್ತಿವೆ.
ಶ್ರೇಯಾಂಕ ಪಾಟೀಲ್ ಬದಲಿಗೆ ಅನ್ ಕ್ಯಾಪ್ಡ್ ಲೆಗ್ ಸ್ಪಿನ್ನರ್ ಪ್ರೇಮ ರಾವತ್ ಅವರನ್ನು ತಂಡಕ್ಕೆ ಸೇರಿಸಲಾಗಿದೆ. ಈಗ ಭಾರತ್ ತಂಡ ಈ ದೊಡ್ಡ ನಷ್ಟವನ್ನು ಹೇಗೆ ಸಮರ್ಥವಾಗಿ ನಿಭಾಯಿಸುತ್ತದೆ ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ.
ನೆದರ್ಲ್ಯಾಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತದ ಸ್ಟಾರ್ ಆಲ್ ರೌಂಡರ್ ಶ್ರೇಯಾಂಕ ಪಾಟೀಲ್ ಗಾಯಕೆ ತುತ್ತಾಗಿದ್ದು, ಇಡೀ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಬುದುವಾರ ನಡೆದ ಈ ಪಂದ್ಯದಲ್ಲಿ ಆರನೇ ಓವರ್ ನಲ್ಲಿ ಬೌಲಿಂಗ್ ಮಾಡಲು ಬಂದ ಶ್ರೇಯಾಂಕ ತಮ್ಮ ಮೊದಲ ಎಸೆತವನ್ನು ಮುಗಿಸಿದ ಬಳಿಕ ಫೀಲ್ಡಿಂಗ್ ಗೆ ಓಡಿದ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ.
ಸ್ಟ್ರೈಕ್ ನಲ್ಲಿದ್ದ ಬ್ಯಾಟಲ್ ಮಿಡ್-ಆನ್ ಕಡೆಗೆ ಹೊಡೆದ ಚಂಡನ್ನು ಹಿಂಬಾಲಿಸಿದ ಶ್ರೇಯಾಂಕ ಪಾಟೀಲ್, ಅದನ್ನು ತೆಗೆದುಕೊಳ್ಳಲು ಕೆಳಗೆ ಬಾಗಿದ್ದಾಗ ಸಮತೋಲನ ಕಳೆದುಕೊಂಡರು. ಈ ವೇಳೆ ಅವರ ಬಲಗಾಲು ಉಳಿಕಿದ್ದು, ತೀವ್ರ ನೋವಿನಿಂದ ಮೈದಾನದಲ್ಲೇ ಕುಸಿದು ಬಿದ್ದಿದ್ದಾರೆ.
ಸ್ಥಿತಿಯ ಗಂಭೀರತೆಯನ್ನು ಗಮನಿಸಿದ ಅಂಪೈರ್ ಗಳು ಮತ್ತು ತಂಡದ ಸಿಬ್ಬಂದಿ ತಕ್ಷಣವೇ ಫಿಸಿಯೋ ಅವರನ್ನು ಮೈದಾನಕ್ಕೆ ಕರೆಸಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಅವರನ್ನು ಡಗೌಟ್ ಗೆ ಕರೆದೊಯ್ಯಲು ಪ್ರಯತ್ನಿಸಿದರು, ಪ್ರಿಯಾಂಕ ಪಾಟೀಲ್ ಸರಿಯಾಗಿ ನಿಲ್ಲಲು ಸಾಧ್ಯವಾಗಲಿಲ್ಲ
ಈ ಹಿನ್ನೆಲೆಯಲ್ಲಿ ತಕ್ಷಣವೇ ಕಾರ್ಟ್ ಮತ್ತು ಸ್ಟ್ರೆಚರ್ ಅನು ಮೈದಾನಕ್ಕೆ ತರಲಾಗಿದ್ದು, ಶ್ರೇಯಾಂಕ ಅವರನ್ನು ಸ್ಟ್ರೆಚರ್ ಮೇಲೆ ಮಲಗಿಸಿ ಮೈದಾನದಿಂದ ಹೊರಗೆ ಕರೆದೊಯ್ಯಲಾಯಿತು. ಗಾಯದ ತೀವ್ರತೆಯಿಂದಾಗಿ ಅವರು ಟೂರ್ನಿಯಿಂದಲೇ ಹೊರ ಬಿದ್ದಿರುವುದು ಭಾರತ ತಂಡಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ.
ಭಾರತದ ಸ್ಟಾರ್ ಆಲ್ ರೌಂಡರ್ ಶ್ರೀಯಾಂಕ ಪಾಟೀಲ್ ಗಾಯದ ಸಮಸ್ಯೆಯಿಂದ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದು ಅವರ ವೃತ್ತಿ ಜೀವನದಲ್ಲಿ ಮೊದಲ ಘಟನೆ ಅಲ್ಲ ಎಂದು ಗಮನಾರ್ಹ.
ಹಿಂದಿನ ವರ್ಷದಲ್ಲಿಯೂ ಶ್ರೀಯಾಂಕ ಪಾಟೀಲ್ ಗಾಯಕಿ ತುತ್ತಾಗಿ ದೊಡ್ಡ ಬ್ರೇಕ್ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದ್ದರು. 2024ರ ಏಷ್ಯಾ ಕಪ್ ವೇಳೆ ಅವರು ಗಾಯಗೊಂಡು ಸುಮಾರು 14 ತಿಂಗಳ ಕಾಲ ಕ್ರಿಕೆಟ್ ನಿಂದ ದೂರವಾಗಿದ್ದರು. ಆ ಅವಧಿಯಲ್ಲಿ ಅವರ ಪುನರಾಗಮನಕ್ಕೆ ಸಾಕಷ್ಟು ಪುನಶ್ಚೇತನ ಪ್ರಕ್ರಿಯೆ ನಡೆಸಲಾಗಿತ್ತು.
ಅದೇ ರೀತಿಯಲ್ಲಿ ಐಪಿಎಲ್ ವೇಳೆ ಕೂಡ ಶ್ರೇಯಾಂಕ ಪಾಟೀಲ್ ಗಾಯದಿಂದಾಗಿ ಟೂರ್ನಿಯಿಂದಲೇ ಹೊರ ಬಿದ್ದಿದ್ದರು. ಇದೀಗ 2026ರ ಮಹಿಳಾ ಟಿ20 ವಿಶ್ವಕಪ್ ನಲ್ಲಿಯ ಗಾಯದಿಂದ ಹೊರ ಬಿದ್ದಿರುವುದು ಅವರ ಕ್ರಿಕೆಟ್ ವೃತ್ತಿ ಜೀವನಕ್ಕೆ ಮತ್ತೊಂದು ದೊಡ್ಡ ಹೊಡೆತವಾಗಿದೆ.
ಪುನಃಪುನಃ ಸಂಭವಿಸುತ್ತಿರುವ ಗಾಯಗಳು ಅವರ ಫಿಟ್‌ನೆಸ್ ಮತ್ತು ದೀರ್ಘಕಾಲಿನ ವೃತ್ತಿ ಜೀವನದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಕ್ರಿಕೆಟ್ ವಲಯದಲ್ಲಿ ಚರ್ಚೆ ನಡೆಸುತ್ತಿದೆ. ಅಭಿಮಾನಿಗಳು ಕೂಡ ಅವರು ಶೀಘ್ರ ಚೇತರಿಕೆಗೆ ಹಾರೈಸುತ್ತಿದ್ದಾರೆ.
Also Read:
ಮೋದಿಗೆ ವಿಶೇಷ ಬೀಳ್ಕೊಡುಗೆ: ಮೋದಿ ಅವರನ್ನು ಹಿಂದಿಯಲ್ಲಿ ಬೀಳ್ಕೊಟ್ಟ ಪ್ರಾನ್ಸ್ ಪ್ರಧಾನಿ ಮ್ಯಾಕ್ರನ್