<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Politics

ಮೋದಿಗೆ ವಿಶೇಷ ಬೀಳ್ಕೊಡುಗೆ: ಮೋದಿ ಅವರನ್ನು ಹಿಂದಿಯಲ್ಲಿ ಬೀಳ್ಕೊಟ್ಟ ಪ್ರಾನ್ಸ್ ಪ್ರಧಾನಿ ಮ್ಯಾಕ್ರನ್

ಮೋದಿಗೆ ವಿಶೇಷ ಬೀಳ್ಕೊಡುಗೆ: ಮೋದಿ ಅವರನ್ನು ಹಿಂದಿಯಲ್ಲಿ ಬೀಳ್ಕೊಟ್ಟ ಪ್ರಾನ್ಸ್ ಪ್ರಧಾನಿ ಮ್ಯಾಕ್ರನ್
Summary: The special farewell given by French Prime Minister Emmanuel Macron to Prime Minister Narendra Modi in Hindi, addressing him as "Dear Friend Narendra", has drawn attention. The moment reflected the friendly relationship between the two leaders and the warmth of India-France bilateral ties. The conversation has led to widespread discussion at the international level.

Belagavi News:

ನವದೆಹಲಿ: ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆನ್ ಮ್ಯಾಕ್ರನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆತ್ಮೀಯ ಸ್ನೇಹಿತ ಎಂದು ಕರೆದಿದ್ದು, ಹಿಂದಿ ಭಾಷೆಯಲ್ಲಿ ವಿಡಿಯೋ ಸಂದೇಶದ ಮೂಲಕ ಬೀಳ್ಕೊಟ್ಟಿದ್ದಾರೆ. ಜೊತೆಗೆ " ಫ್ರಾನ್ಸ್ ನಿಮ್ಮನ್ನು ಪ್ರೀತಿಸುತ್ತದೆ" ಎಂದು ಹೇಳಿ ಗಮನ ಸೆಳೆದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ಮ್ಯಾಕ್ರನ್, " ಪ್ರಿಯ ಮಿತ್ರ ನರೇಂದ್ರ, ನಿಮ್ಮನ್ನು ಸ್ವಾಗತಿಸಿದ್ದು ನನಗೆ ಸಂತೋಷ ತಂದಿದೆ. ಭಾರತ - ಫ್ರಾನ್ಸ್ ಸ್ನೇಹ ಶಾಶ್ವತವಾಗಿ ಮುಂದುವರಿಯಲಿ ಎಂದು ಹಾರೈಸುತ್ತೇನೆ. ನಾನು ಹಿಂದಿಯನ್ನು ಸರಿಯಾಗಿ ಹೇಳಿದ್ದೇನೆ ಎಂದು ಭಾವಿಸುತ್ತೇನೆ" ಎಂದು ಹೇಳಿದ್ದಾರೆ.

ಈ ಆತ್ಮೀಯ ಸಂದೇಶವು ಭಾರತ ಮತ್ತು ಫ್ರಾನ್ಸ್ ನಡುವಿನ ದ್ವಿಪಕ್ಷೀಯ ಸಂಬಂಧದ ಉಷ್ಣತೆ ಯನ್ನು ಮತ್ತಷ್ಟು ಬಲಪಡಿಸುವಂತೆ ಕಂಡುಬಂದಿದೆ.

Sponsored

ಈ ಪ್ರವಾಸ ಅತ್ಯಂತ ಫಲಪ್ರದವಾಗಿರುವುದಾಗಿ ಹೇಳಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆನ್ ಮ್ಯಾಕ್ರನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಜೊತೆಗೆ ಮುಂದಿನ ಫೆಬ್ರವರಿಯಲ್ಲಿ ಮತ್ತೆ ಭೇಟಿ ಮಾಡುವ ಸಾಧ್ಯತೆ ಇರುವುದಾಗಿ ತಿಳಿಸಿದ್ದಾರೆ.

" ನಿಮ್ಮ ಭೇಟಿಗೆ ಧನ್ಯವಾದ. ನಿಮ್ಮ ಸ್ನೇಹಕ್ಕೆ ಧನ್ಯವಾದಗಳು. ಇದು ಫಲಪ್ರದ ಭೇಟಿಯಾಗಿದ್ದು, ಫ್ರಾನ್ಸ್ ನಿಮ್ಮನ್ನು ಪ್ರೀತಿಸುತ್ತದೆ. ಫೆಬ್ರುವರಿಯಲ್ಲಿ ನಿಮ್ಮನ್ನು ಮತ್ತೆ ಭೇಟಿಯಾಗಲು ಎದುರು ನೋಡುತ್ತೇನೆ. ಜೈ ಹಿಂದ್ " ಎಂದು ಮ್ಯಾಕ್ರನ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಜೂನ್ 13 ರಂದು ಮೆಡಿಟರೇನಿಯರ್ ನಗರ ನೈಸ್ ಗೆ ಆಗಮಿಸಿ, ಅಲ್ಲಿ ಮ್ಯಾಕ್ರನ್ ಜೊತೆ ಸೇರಿ ' ಭಾರತ್ ಇನ್ನೋವೇಟ್ಸ್ ' ಕಾರ್ಯಕ್ರಮವನ್ನು ಉದ್ಘಾಟಿಸಿದ್ದರು. ನಂತರ ಉಭಯ ನಾಯಕರು ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು.

ಜೂನ್ 14 ರಿಂದ 16 ರವರೆಗೆ ಮೋದಿ ಸ್ಲೋವಾಕಿಯಾ ದೇಶಕ್ಕೆ ಭೇಟಿ ನೀಡಿದ್ದು, ಬಳಿಕ ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು ಫ್ರೆಂಚ್ ಕಮ್ಯುನ್ ಎವಿಯನ್ - ಲೆಸ್ - ಬೈನ್ಸ್ ಗೆ ಆಗಮಿಸಿದ್ದರು. ಈ ಶೃಂಗಸಭೆಗೆ ಭಾರತವನ್ನು ಅತಿಥಿ ರಾಷ್ಟ್ರವಾಗಿ ಆಹ್ವಾನಿಸಲಾಗಿತ್ತು.

Sponsored

ಪ್ರವಾಸದ ಅಂತಿಮ ಹಂತದಲ್ಲಿ ಪ್ಯಾರಿಸ್ ನಲ್ಲಿ ಭಾರತೀಯ ವಲಸಿಗರನ್ನು ಭೇಟಿ ಮಾಡಿದ ಮೋದಿ, ಜೊತೆಗೆ ತಂತ್ರಜ್ಞಾನ ವೇದಿಕೆ ' ವಿವಾಟೆಕ್ 2026' ಉದ್ದೇಶಿಸಿ ಮಾತನಾಡಿದರು.

ಫ್ರೆಂಚ್ ಭಾಷೆಯಲ್ಲಿ ಎಕ್ಸ್ (X) ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ಫ್ರಾನ್ಸ್ ಭೇಟಿಯು ಅತ್ಯಂತ ಫಲಪ್ರದವಾಗಿದ್ದು, ಭಾರತ - ಫ್ರಾನ್ಸ್ ಸಂಬಂಧ ಇನ್ನಷ್ಟು ಬಲಗೊಂಡಿದೆ ಎಂದು ತಿಳಿಸಿದ್ದಾರೆ.

ನೈಸ್ ನಗರದಿಂದ ಆರಂಭವಾದ ಈ ಪ್ರವಾಸದಲ್ಲಿ ' ಭಾರತ್ ಇನ್ನೋವೇಟ್ಸ್ ' ಕಾರ್ಯಕ್ರಮ ನಡೆದಿದ್ದು, ಬಳಿಕ ಜಿ7 ಶೃಂಗಸಭೆಗಾಗಿ ಇವಿಯನ್ - ಲೆಸ್ - ಬೈನ್ಸ್ ಗೆ ಭೇಟಿ ನೀಡಲಾಯಿತು. ನಂತರ ಪ್ಯಾರಿಸ್ ನಲ್ಲಿ ' ವಿವಾಟೆಕ್ 2026' ಕಾರ್ಯಕ್ರಮದಲ್ಲಿ ಭಾಗವಹಿಸಿ ದೊಡ್ಡ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದುದಾಗಿ ಅವರು ತಿಳಿಸಿದ್ದಾರೆ. ಜೊತೆಗೆ ವಿವಿಧ ಸಿಇಒಗಳನ್ನೂ ಭೇಟಿಯಾದುದಾಗಿ ಹೇಳಿದ್ದಾರೆ.

ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆನ್ ಮ್ಯಾಕ್ರನ್, ಸರ್ಕಾರ ಹಾಗೂ ಜನರ ಆತ್ಮೀಯ ಸ್ವಾಗತಕ್ಕೆ ಧನ್ಯವಾದ ಸಲ್ಲಿಸಿದ ಮೋದಿ, " ನನ್ನ ಸ್ನೇಹಿತ ಮ್ಯಾಕ್ರನ್ ಮತ್ತು ಫ್ರಾನ್ಸ್ ಜನರ ಆತಿಥ್ಯಕ್ಕೆ ನಾನು ಕೃತಜ್ಞನಾಗಿದ್ದೇನೆ" ಎಂದು ಹೇಳಿದ್ದಾರೆ.

Sponsored

ಈ ಭೇಟಿಯ ಮೂಲಕ ಭಾರತ ಮತ್ತು ಫ್ರಾನ್ಸ್ ನಡುವಿನ ದ್ವಿಪಕ್ಷೀಯ ಸಹಕಾರ ಇನ್ನಷ್ಟು ಬಲಪಡಿಸಲಾಗಿದೆ ಎಂದು ಅವರು ತಮ್ಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

Also Read:

Air quality Update : ಬೆಂಗಳೂರು ಮತ್ತು ಕರಾವಳಿ ಪ್ರದೇಶದಲ್ಲಿ ಶುದ್ಧ ಗಾಳಿ, ಧಾರವಾಡದಲ್ಲಿ ಮಾಲಿನ್ಯ ಹೆಚ್ಚಳ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online