<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ಕರ್ನಾಟಕ ವಿಶ್ವಬ್ಯಾಂಕ್ ನ ಮೇಲ್ಮಧ್ಯಮ ಆದಾಯದ ಮಿತಿ ದಾಟಿದೆ: ಗ್ಯಾರಂಟಿ ಯೋಜನೆಗಳ ಬಗ್ಗೆ ಸಿಎಂ ಹೇಳಿದ್ದೇನು?

ಕರ್ನಾಟಕ ವಿಶ್ವಬ್ಯಾಂಕ್ ನ ಮೇಲ್ಮಧ್ಯಮ ಆದಾಯದ ಮಿತಿ ದಾಟಿದೆ: ಗ್ಯಾರಂಟಿ ಯೋಜನೆಗಳ ಬಗ್ಗೆ ಸಿಎಂ ಹೇಳಿದ್ದೇನು?
Summary: Chief Minister Siddaramaiah said that Karnataka has crossed the World Bank's upper middle income threshold. He claimed that guarantee schemes have made a major contribution to the state's economic progress and said that economic empowerment of the people is the foundation of development.

Belagavi News:

ಮುಖ್ಯಾಂಶಗಳು:

ವಿಶ್ವಬ್ಯಾಂಕ್ ಮೇಲ್ಮಧ್ಯಮ ವರ್ಗದ ಆದಾಯ ಮಿತಿ ದಾಟಿದ ಕರ್ನಾಟಕ

ಭಾರತ ರಾಜ್ಯದಲ್ಲಿ ಪೈಕಿ ದ್ವಿತೀಯ ಸ್ಥಾನ

ಗ್ಯಾರಂಟಿ ಯೋಜನೆಗಳಿಂದ ಗೃಹ ಆದಾಯ ಹೆಚ್ಚಳ ಎಂದ ಸಿಎಂ

ವಿಶ್ವಬ್ಯಾಂಕ್ ಆದಾಯ ಮಾನದಂಡದಲ್ಲಿ ಕರ್ನಾಟಕದ ಸಾಧನೆ: ಮೇಲ್ಮಧ್ಯಮ ಆದಾಯದ ಪಟ್ಟಿಗೆ ರಾಜ್ಯ, ಗ್ಯಾರಂಟಿ ಯೋಜನೆಗಳ ಕುರಿತು ಸಿಎಂ ಹೇಳಿಕೆ

ಬೆಂಗಳೂರು: ವಿಶ್ವಬ್ಯಾಂಕ್ ನ ಇತ್ತೀಚಿನ ವರದಿಯ ಪ್ರಕಾರ, ಭಾರತದ 5 ರಾಜ್ಯಗಳು ಮೇಲ್ಮಧ್ಯಮ ಆದಾಯದ (Upper Middle - Income) ಆರ್ಥಿಕತೆಗಳ ಮಿತಿಯನ್ನು ದಾಟಿದ್ದು, ಈ ಪಟ್ಟಿಯಲ್ಲಿ ಕರ್ನಾಟಕ ಪ್ರಮುಖ ಸ್ಥಾನ ಪಡೆದಿದೆ.

ವರದಿ ಪ್ರಕಾರ, ಕರ್ನಾಟಕವು 5,579 ಡಾಲರ್ ತಲಾ ಆದಾಯದೊಂದಿಗೆ ದೇಶದ ಮುಂಚೂಣಿ ರಾಜ್ಯಗಳ ಪೈಕಿ ಸ್ಥಾನ ಪಡೆದಿದೆ. ದೆಹಲಿ ಮೊದಲ ಸ್ಥಾನದಲ್ಲಿದ್ದಾರೆ, ಕರ್ನಾಟಕವು ದ್ವಿತೀಯ ಸ್ಥಾನದಲ್ಲಿದೆ ಎಂದು ತಿಳಿಸಲಾಗಿದೆ. ಸಾಧನೆ ರಾಜ್ಯದ ಆರ್ಥಿಕ ಬೆಳವಣಿಗೆಯಲ್ಲಿ ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಲಾಗಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ (X) ಮೂಲಕ ಸಂತಸ ಹಂಚಿಕೊಂಡಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಇದು ಪ್ರತಿಯೊಬ್ಬ ಕನ್ನಡಿಗ ಹೆಮ್ಮೆಪಡುವಂತಹ ಕ್ಷಣವಾಗಿದೆ ಎಂದು ಹೇಳಿದ್ದಾರೆ.

ಕರ್ನಾಟಕವು ವಿಶ್ವಬ್ಯಾಂಕ್ ನ ಮೇಲ್ಮಧ್ಯಮ ಆದಾಯದ ಮಿತಿ ( Upper Middle - Income Threshold) ದಾಟಿರುವುದಕ್ಕೆ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಹಾಗೂ ಒಳಗೊಳ್ಳುವಿಕೆಯ ಅಭಿವೃದ್ಧಿ ನೀತಿಗಳು ಪ್ರಮುಖ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ರಾಜ್ಯದ ಆರ್ಥಿಕ ಪ್ರಗತಿಯಲ್ಲಿ ಜನಕಲ್ಯಾಣ ಯೋಜನೆಗಳು, ಹೂಡಿಕೆ, ಕೈಗಾರಿಕಾ ಬೆಳವಣಿಗೆ ಹಾಗೂ ಸಾಮಾಜಿಕ ಅಭಿವೃದ್ಧಿಯ ಪಾತ್ರ ಮಹತ್ವದ್ದಾಗಿದೆ ಎಂದು ಸರ್ಕಾರ ತಿಳಿಸಿದೆ.

ಕನ್ನಡಿಗರ ಪರಿಶ್ರಮ, ಗ್ಯಾರಂಟಿ ಯೋಜನೆಗಳ ಕೊಡುಗೆ: ಕರ್ನಾಟಕದ ಆರ್ಥಿಕ ಸಾಧನೆಗೆ ಡಿಕೆಶಿ ಮೆಚ್ಚುಗೆ

ಕರ್ನಾಟಕವು ವಿಶ್ವಬ್ಯಾಂಕ್ ನ ಮೇಲ್ಮಧ್ಯಮ ಆದಾಯದ ( Upper Middle - Income) ಮಿತಿಯನ್ನು ದಾಟಿರುವ ಸಾಧನೆಗೆ ಕನ್ನಡಿಗರ ಪರಿಶ್ರಮವೇ ಪ್ರಮುಖ ಕಾರಣ ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ರಾಜ್ಯದ ಈ ಹೆಮ್ಮೆಯ ಸಾಧನೆಯ ಉದ್ಯಮಿಗಳು, ರೈತರು, ಕಾರ್ಮಿಕರು, ಮಹಿಳೆಯರು ಹಾಗೂ ಯುವಜನತೆಯ ಕಠಿಣ ಪರಿಶ್ರಮ, ಅನ್ವೇಷಣಾ ಮನೋಭಾವ ಮತ್ತು ಕ್ರಿಯಾಶೀಲತೆಗೆ ಸಂದ ಜಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಸಮರ್ಥಿಸಿಕೊಂಡಿರುವ ಡಿ.ಕೆ. ಶಿವಕುಮಾರ್, ಈ ಯೋಜನೆಗಳು ಕೇವಲ ಕಲ್ಯಾಣ ಕಾರ್ಯಕ್ರಮಗಳಲ್ಲ, ಜನರ ಮೇಲಿನ ಹೂಡಿಕೆಗಳಾಗಿವೆ ಎಂದು ಹೇಳಿದ್ದಾರೆ. ಕುಟುಂಬಗಳ ಆದಾಯ ಬಲಪಡಿಸುವುದು, ಜೀವನೋಪಾಯಕ್ಕೆ ಭದ್ರತೆ ಒದಗಿಸುವುದು ಹಾಗೂ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸುವ ಮೂಲಕ ಒಳಗೊಳ್ಳುವಿಕೆಯ ಬೆಳವಣಿಗೆ ಸುಸ್ಥಿರ ಆರ್ಥಿಕ ಪ್ರಗತಿಗೆ ಬುನಾದಿಯಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ವಿಶ್ವಬ್ಯಾಂಕ್ ಮಾನದಂಡಗಳ ಪ್ರಕಾರ, ತಲಾ ಆದಾಯವು 1,175 ಡಾಲರ್ ನಿಂದ 4,635 ಡಾಲರ್ ವರೆಗೆ ಇರುವ ಆರ್ಥಿಕತೆಗಳನ್ನು ಮಾಧ್ಯಮ ಆದಾಯದ ವರ್ಗ ಎಂದು ಪರಿಗಣಿಸಲಾಗುತ್ತದೆ. ಈ ಮಿತಿಯನ್ನು ಮೀರಿ ಮೇಲ್ಮಧ್ಯಮ ಆದಾಯದ ಜಾಗತಿಕ ಗುಣಮಟ್ಟ ತಲುಪಿದ ಭಾರತದ ರಾಜ್ಯಗಳ ಪೈಕಿ ದೆಹಲಿ 6,217 ಡಾಲರ್, ಕರ್ನಾಟಕ 5,579 ಡಾಲರ್, ತೆಲಂಗಾಣ 5,407, ತಮಿಳುನಾಡು 5,329 ಡಾಲರ್ ಮತ್ತು ಗುಜರಾತ್ 4,734 ಡಾಲರ್ ತಲಾ ಆದಾಯ ಹೊಂದಿವೆ ಎಂದು ವರದಿ ತಿಳಿಸಿದೆ.

ಮಹಾರಾಷ್ಟ್ರ, ಹರಿಯಾಣ ಮತ್ತು ಕೇರಳ ರಾಜ್ಯಗಳು ಈ ಮೈಲಿಗಲ್ಲನ್ನು ತಲುಪಲು ಅತ್ಯಲ್ಪ ಅಂತರದಲ್ಲಿ ಹಿಂದೆ ಉಳಿದಿವೆ.

ಮುಂದಿನ ದಿನಗಳಲ್ಲಿ ಕರ್ನಾಟಕವನ್ನು ಭಾರತದ ನಂಬರ್ ಒನ್ ರಾಜ್ಯವನ್ನಾಗಿ ಮಾಡುವ ಗುರಿ ಹೊಂದಲಾಗಿದ್ದು, ಬೆಳವಣಿಗೆಯ ಲಾಭಗಳು ಪ್ರತಿ ಮನೆಗೂ ತಲುಪುವಂತೆ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಸಂದೇಶದಲ್ಲಿ ತಿಳಿಸಿದ್ದಾರೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online