<?= $pageTitle ?>
Logo
ಮುಖಪುಟ ಓದುವುದು ಕೇಳು
Politics

ರಾಜ್ಯಸಭೆಗೆ ಚುನಾವಣೆಯಲ್ಲಿ ಖರ್ಗೆ ಅವಿರೋಧ ಆಯ್ಕೆ: ಇದು ಬಹುಶಃ ನನ್ನ ಕೊನೆಯ ಪ್ರಮಾಣ ಪತ್ರ

ರಾಜ್ಯಸಭೆಗೆ ಚುನಾವಣೆಯಲ್ಲಿ ಖರ್ಗೆ ಅವಿರೋಧ ಆಯ್ಕೆ: ಇದು ಬಹುಶಃ ನನ್ನ ಕೊನೆಯ ಪ್ರಮಾಣ ಪತ್ರ
Summary: AICC President Mallikarjun Kharge, who was elected unopposed to the Rajya Sabha, reacted emotionally after the Speaker accepted his election certificate and said, "This may be my last certificate acceptance."

BELAGAVI NEWS :

ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದು, ವಿಧಾನಸೌಧದಲ್ಲಿ ಚುನಾವಣಾಧಿಕಾರಿಯಿಂದ ಆಯ್ಕೆ ಪ್ರಮಾಣ ಪತ್ರವನ್ನು ಸ್ವೀಕರಿಸಿದರು. ಈಗಲೇ ಮಾತನಾಡಿದ ಖರ್ಗೆ, "ಇದು ನನ್ನ ಕೊನೆಯ ಪ್ರಮಾಣ ಪತ್ರ ಸ್ವೀಕಾರವಾಗಬಹುದು" ಎಂದು ಹೇಳುವ ಮೂಲಕ ಗಮನ ಸೆಳೆದರು. ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಪ್ರಮಾಣ ಪತ್ರ ಸ್ವೀಕಾರದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಖರ್ಗೆ, ಮಧ್ಯಪ್ರದೇಶದ ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ತಿರಸ್ಕೃತಗೊಂಡ ವಿಚಾರದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. "ಇದು ವಿಶೇಷ ಪ್ರಕರಣ. ಈ ವಿಚಾರವನ್ನು ಎಳೆಯಲು ಉದ್ದೇಶಪೂರ್ವಕವಾಗಿ ಹೆಚ್ಚು ಸಮಯ ತೆಗೆದುಕೊಳ್ಳಲಾಗಿದೆ. ಸುಪ್ರೀಂ ಕೋರ್ಟ್ ಸೂಚಿಸಿರುವಂತೆ ನಾವು ಹೈಕೋರ್ಟ್ ಗೆ ಹೋಗುತ್ತೇವೆ" ಎಂದು ಹೇಳಿದರು.

ಮಧ್ಯಪ್ರದೇಶದಲ್ಲಿ ನಡೆದಿರುವ ಬೆಳವಣಿಗೆಗಳು ಕಾನೂನುಬಾಹಿರ ಹಾಗೂ ಪ್ರಜಾಪ್ರಭುತ್ವ ವಿರೋಧಿಯಾಗಿವೆ ಎಂದು ಆರೋಪಿಸಿದ ಖರ್ಗೆ, "ಇದು ಪ್ರಧಾನಿ ನರೇಂದ್ರ ಮೋದಿಯವರ ಬೆಂಬಲವಿಲ್ಲದೆ ನಡೆಯುತ್ತಿರಲಿಲ್ಲ. ಬಿಜೆಪಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಹಾಳು ಮಾಡುತ್ತಿದೆ" ಎಂದು ವಾಗ್ದಾಳಿ ನಡೆಸಿದರು.

ರಾಜ್ಯಸಭೆಗೆ ಮತ್ತೊಮ್ಮೆ ಆಯ್ಕೆಯಾಗಿರುವ ಖರ್ಗೆಯವರು ರಾಷ್ಟ್ರೀಯ ರಾಜಕೀಯದಲ್ಲಿ ತಮ್ಮ ಪಾತ್ರವನ್ನು ಮುಂದುವರಿಸಲಿದ್ದು, ಪ್ರಮಾಣ ಪತ್ರ ಸ್ವೀಕಾರದ ವೇಳೆ ನಡೆದ ಹೇಳಿಕೆ ಮತ್ತು ಬಿಜೆಪಿ ವಿರೋಧದ ಟೀಕೆಗಳು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಎಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಕುರಿತು ಕಳಗಳ ವ್ಯಕ್ತಪಡಿಸಿ ಬಿಜೆಪಿ ಮತ್ತು ಆರ್ ಎಸ್ ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. "ತಮ್ಮ ಜನರನ್ನು ಎಲ್ಲೆಡೆ ಕೂರಿಸಲಾಗಿದೆ. ಜಾರ್ಖಂಡ್ನಲ್ಲೂ ಅದೇ ರೀತಿಯ ಘಟನೆ ನಡೆದಿದೆ. ಮತ ಖರೀದಿ, ವಿಭಜನೆ ಮತ್ತು ಏಜೆಂಟರ ರನ್ನು ನಿಯೋಜಿಸುವ ಮೂಲಕ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಲಾಗುತ್ತಿದೆ. ಆರ್ ಎಸ್ ಎಸ್ ಏಜೆಂಟ್ಗಳನ್ನು ಎಲ್ಲೆಡೆ ಇರಿಸಲಾಗಿದ್ದು, ನಿಯಮಗಳನ್ನು ಯಾರು ಪರಿಶೀಲಿಸುತ್ತಿಲ್ಲ"ಎಂದು ಆರೋಪಿಸಿದರು.

ಇದೇ ವೇಳೆ ತಮ್ಮ ರಾಜಕೀಯ ಪಯಣದ ಬಗ್ಗೆ ಮಾತನಾಡಿದ ಖರ್ಗೆ, ಇದು ನನಗೆ 13ನೇ ಬಾರಿ ಜನಪ್ರತಿನಿಧಿಯಾಗುವ ಅವಕಾಶವಾಗಿದೆ. ಕಲ್ಬುರ್ಗಿ ಜನತೆಗೆ ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ನಾನು ಕೃತಜ್ಞನಾಗಿದ್ದೇನೆ. ಜೀವನದಲ್ಲಿ ನಿರಂತರವಾಗಿ ಜನಸೇವೆ ಮಾಡಲು ಸಿಕ್ಕಿರುವ ಅವಕಾಶ ಕಾಂಗ್ರೆಸ್ ಪಕ್ಷದ ಕೊಡುಗೆಯಾಗಿದೆ. ಇಂದಿರಾ ಗಾಂಧಿಯಿಂದ ಹಿಡಿದು ಸೋನಿಯಾ ಗಾಂಧಿಯವರಿಗೆ ಪಕ್ಷದ ನಾಯಕರು ನನ್ನ ಮೇಲೆ ವಿಶ್ವಾಸವಿತ್ತು ಜವಾಬ್ದಾರಿಗಳನ್ನೂ ನೀಡಿದ್ದಾರೆ" ಎಂದು ಹೇಳಿದರು.

ಸೋನಿಯಾ ಗಾಂಧಿ, ರಾಜ್ಯದ ಜನತೆ ಹಾಗೂ ವಿವಿಧ ಕ್ಷೇತ್ರಗಳಿಂದ ತಮ್ಮನ್ನು ಆಯ್ಕೆ ಮಾಡಿದ ಮತದಾರರಿಗೆ ಧನ್ಯವಾದ ಅರ್ಪಿಸಿದ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಬೆಂಬಲವನ್ನು ಸ್ಮರಿಸಿದರು. "ರಾಹುಲ್ ಗಾಂಧಿ ಸದಾ ನನ್ನೊಂದಿಗೆ ನಿಂತು ಪ್ರೋತ್ಸಾಹ ನೀಡಿದ್ದಾರೆ. ಅವರು ನನ್ನೊಂದಿಗೆ ಸೌಹಾರ್ದತೆಯಿಂದ ವರ್ತಿಸುತ್ತಾರೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ರಾಜ್ಯದ ಜನರು ನನಗೆ ಕೆಲಸ ಮಾಡಲು ಅವಕಾಶ ನೀಡಿದ್ದಾರೆ" ಎಂದರು.

ಮಾಧ್ಯಮಗಳ ಪಾತ್ರವನ್ನು ಶ್ಲಾಘಿಸಿದ ಖರ್ಗೆ, "ಯಾವುದೇ ವ್ಯಕ್ತಿ ಅಥವಾ ನಾಯಕ ಮಾಧ್ಯಮಗಳ ಬೆಂಬಲವಿಲ್ಲದೆ ಜನರಿಗೆ ಪರಿಚಿತರಾಗಲು ಸಾಧ್ಯವಿಲ್ಲ. ಸಮಾಜದಲ್ಲಿನ ಲೋಪದೋಷಗಳನ್ನು ಎತ್ತಿ ಹಿಡಿದು ಜನರಿಗೆ ತಿಳಿಸುವುದು ಮಾಧ್ಯಮಗಳ ಮಹತ್ವದ ಕರ್ತವ್ಯ" ಎಂದು ಅಭಿನಂದಿಸಿದರು. ಅವರ ಈ ಹೇಳಿಕೆಗಳು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿವೆ.

1972 ರಲ್ಲಿ ನಾನು ವಿಧಾನಸೌಧಕ್ಕೆ ಕಾಲಿಟ್ಟಿದ್ದೇನೆ. ಅನೇಕ ಏರುಪೇರು ನೋಡಿದ್ದೇನೆ. ಈಗ ಸ್ವಲ್ಪ ಬದಲಾವಣೆ ಆಗಿದೆ. ಮಾಧ್ಯಮಗಳು ಕಾರ್ಪೊರೇಟ್ ಸಂಸ್ಥೆಗಳ ನಿಯಂತ್ರಣದಲ್ಲಿದೆ. ಮುಂಚೆ ಪತ್ರಕರ್ತರು ಯಾವಾಗಲೂ ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿದ್ದರು. ಪ್ರಜಾಪ್ರಭುತ್ವ ನಿಕ್ಷಪಾತವಾಗಿ ಬೆಳೆಯಬೇಕಾದರೆ, ಮಾಧ್ಯಮದವರು ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು. ರಾಜಕೀಯ ವರ್ತನೆನೂ ಹಾಗೆ ಇರಬೇಕು. 60 ವರ್ಷದಲ್ಲಿ ಬಹಳ ಬದಲಾವಣೆ ಕಂಡಿದ್ದೇನೆ. ಸುಧಾರಾಣಿ ಆಗಬೇಕು ಎಂಬುವುದು ನನ್ನ ಅನಿಸಿಕೆ ಎಂದು ಸ್ವಲ್ಪ ಕಾರವಾಗಿಯೇ ಹೇಳಿದರು.

ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ ಬಳಿಗೆ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ದೇಶದ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. "ಎಲ್ಲಾ ಕ್ಷೇತ್ರಗಳಲ್ಲಿ, ಎಲ್ಲಾ ವರ್ಗಗಳಲ್ಲಿ ಬದಲಾವಣೆಯಾಗಿದೆ. ರಾಜಕೀಯ ನಾಯಕರು ಜನರ ಹಿತ ದೃಷ್ಟಿಯಿಂದ ಮತ್ತು ತಮ್ಮ ವಿಚಾರಧಾರೆಯ ಆಧಾರದ ಮೇಲೆ ಕೆಲಸ ಮಾಡಬೇಕು. ಹಾಗೆ ಮಾಡದಿದ್ದರೆ ಜನರು ಚುನಾವಣೆಯಲ್ಲಿ ಅವರನ್ನು ತಿರಸ್ಕರಿಸಿ ಬದಲಾವಣೆ ತರುತ್ತಾರೆ" ಎಂದು ಹೇಳಿದರು.

ಇದೇ ವೇಳೆ ಕಾರ್ಪೊರೇಟ್ ಸಂಸ್ಥೆಗಳ ಪ್ರಭಾವದ ಕುರಿತು ಪ್ರಶ್ನೆ ಎತ್ತಿದ ಖರ್ಗೆ, "ರಾಜಕೀಯ ನಾಯಕರನ್ನು ಜನರು ಪ್ರಶ್ನಿಸಬಹುದು, ಚುನಾವಣೆಯಲ್ಲಿ ಸೋಲಿಸಬಹುದು. ಆದರೆ ಕಾರ್ಪೊರೇಟ್ ಸಂಸ್ಥೆಗಳಿಗೆ ಯಾರು ಪಾಠ ಮಾಡುತ್ತಾರೆ? ಅವರನ್ನು ಯಾರು ಪ್ರಶ್ನಿಸುತ್ತಾರೆ? ಅಥವಾ ಬದಲಾಯಿಸುತ್ತಾರೆ?"ಎಂದು ಪ್ರಶ್ನಿಸಿದರು.

ಜಾರ್ಖಂಡ್ ಮತ್ತು ಮಧ್ಯಪ್ರದೇಶದ ರಾಜಕೀಯ ಬೆಳವಣಿಗೆಗಳನ್ನು ಉಲ್ಲೇಖಿಸಿದವರು, ಕೆಲವು ಸಂದರ್ಭಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಅನಗತ್ಯ ಪ್ರಭಾವ ಬೀರುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದರು. ಸಾರ್ವಜನಿಕ ಹಿತಾಸಕ್ತಿ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಖರ್ಗೆ ಅಭಿಪ್ರಾಯಪಟ್ಟರು.

Also Read:

ಆಪರೇಷನ್ ಫುಟ್ ಪಾತ್ ಯಶಸ್ವಿ: ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಗೆ ಸಾರ್ವಜನಿಕರ ಶ್ಲಾಘನೆ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online