<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Breaking News

ಶೌಚಾಲಯದ ಸ್ಥಿತಿ ಪ್ರಶ್ನಿಸಿದ್ದಕ್ಕೆ ರೈಲಿನಿಂದ ಹೊರಗೆ

ಶೌಚಾಲಯದ ಸ್ಥಿತಿ ಪ್ರಶ್ನಿಸಿದ್ದಕ್ಕೆ ರೈಲಿನಿಂದ ಹೊರಗೆ
Summary: ರೈಲಿನ ಶೌಚಾಲಯ ಕೊಳಕಾಗಿದೆ ಎಂದು ದೂರು ನೀಡಿದ ಪ್ರಯಾಣಿಕನನ್ನು ಟಿಟಿಇ ರೈಲಿನಿಂದ ಹೊರಹಾಕಿದ ಘಟನೆ ದುರೊಂತೋ ಎಕ್ಸ್ಪ್ರೆಸ್ ನಲ್ಲಿ ಇಂದು ಬೆಳಿಗ್ಗೆ ನಡೆದಿದೆ.

Belagavi news :

ದುರೊಂತೋ ಎಕ್ಸ್ಪ್ರೆಸ್ನಲ್ಲಿ ಪ್ರಯಾಣಿಸುತ್ತಿದ್ದ ಒಬ್ಬ ಪ್ರಯಾಣಿಕನು ರೈಲಿನ ಭೋಗಿಯಲ್ಲಿನ ಕೊಳಕಿನ ಬಗ್ಗೆ ದೂರು ನೀಡಿದ ಪ್ರಯಾಣಿಕನ ವಿರುದ್ಧ ಟಿಟಿಇ ತಂಡ ದೌರ್ಜನ್ಯವನ್ನು ಎಸಗಿದ್ದಾರೆ,ಜೊತೆಗೆ ಆ ಪ್ರಯಾಣಿಕನನ್ನು ರೈಲಿನಿಂದ ಕೆಳಗಿಳಿಸಿದ್ದಾರೆ.ಹಾಗಾದರೆ ಪ್ರಯಾಣಿಕರಿಗೆ ಇದರ ಬಗ್ಗೆ ಪ್ರಶ್ನಿಸುವ ಹಕ್ಕಿಲ್ಲವೇ? ಎಂಬುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಇಂದು ಬೆಳಗ್ಗೆ ಕೋಟಾದ ಸಮೀಪ ಇರುವ ಎರ್ನಾಕುಲಂ ನಿಜಾಮುದ್ದೀನ್ ದುರೊಂತೋ ಎಕ್ಸ್ಪ್ರೆಸ್ನಲ್ಲಿ ಕೊಳಕು ಶೌಚಾಲಯದ ಬಗ್ಗೆ ಪ್ರಶ್ನಿಸಿದ ಪ್ರಯಾಣಿಕನನ್ನು ರೈಲಿನಿಂದ ಕೆಳಗಿಳಿಸಿದ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು,ಆತನನ್ನು ರೈಲಿನಿಂದ ಕೆಳಗಿಳಿಸಿ ಆತನ ಮೇಲೆ ಹಲ್ಲಿಗೆ ಯತ್ನ ಮಾಡಿದ್ದಾರೆ ಎಂದು ಹಲವಾರು ಆರೋಪಗಳು ಕೇಳಿ ಬಂದಿವೆ.

ದುರೊಂತೋ ಎಕ್ಸ್ಪ್ರೆಸ್ನಲ್ಲಿ ಟಿಟಿಇ ತಂಡದಿಂದ ಪ್ರಯಾಣಿಕ ನಿಗೆ ಆಗಿರುವಂತಹ ತೊಂದರೆ ತೀವ್ರ ಟೀಕೆಗೆ ಕಾರಣವಾಗಿದೆ.ಈ ಘಟನೆಯು 12283 ಸಂಕಿಯ ಎರ್ನಾಕುಲಂ ನಿಜಾಮುದ್ದೀನ್ ದುರೊಂತೋ ಎಕ್ಸ್ಪ್ರೆಸ್ ರೈಲಿನಲ್ಲಿ ನಡೆದಿದೆ. ಟಿಟಿಇ ಇಂದ ದೌರ್ಜನ್ಯಕ್ಕೆ ಒಳಗಾದ ಪ್ರಯಾಣಿಕನನ್ನು ಮುಂಗೇಶ್ ತಿವಾರಿ ಎಂದು ಗುರುತಿಸಲಾಗಿದೆ.

Sponsored

ಈ ಘಟನೆಯ ಬಗ್ಗೆ ದೂರುದಾರು ಪ್ರಯಾಣಿಕ ಹೇಳಿದ್ದೇನೆ ? :

ದುರೊಂತೋ ಎಕ್ಸ್ಪ್ರೆಸ್ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಈ ರೀತಿಯಾಗಿ ಹೇಳಿದ್ದಾನೆ.ನಾನು ಪ್ರಯಾಣಿಸುತ್ತಿದ್ದ ಭೋಗಿಯ ಶೌಚಾಲಯವು ಕೊಳಕಿನಿಂದ ಕಟ್ಟಿಕೊಂಡಿತ್ತು,ಇದರ ಬಗ್ಗೆ ಟಿಟಿಇ ಗೆ ದೂರು ನೀಡಿ ವಿಡಿಯೋ ರೆಕಾರ್ಡ್ ಮಾಡಲು ಪ್ರಾರಂಭಿಸಿದೆ.ಅಧಿಕಾರಿ ಸ್ವಚ್ಛಗೊಳಿಸಲು ಆದೇಶದ ಬದಲು ನನ್ನ ಮೇಲೆ ಹಲ್ಲೆ ನಡೆಸಿ ಅಸಭ್ಯ ವರ್ತನೆಯನ್ನು ತೋರಿದರು ಎಂದು ಹೇಳಿದರು.

ಇದರ ನಂತರ ಟಿಟಿಇ ತಂಡ ನನ್ನನ್ನು ರೈಲಿನಿಂದ ಕೆಳಗಿಳಿಯುವಂತೆ ಒತ್ತಾಯಿಸಿದರು.ಇದು ಕೂಡ ವಿಡಿಯೋದಲ್ಲಿ ದಾಖಲಾಗಿದೆ.ಹಾಗಾದರೆ ನಾವು ರೈಲಿನ ಸ್ವಚ್ಛತೆಯ ಬಗ್ಗೆ ಪ್ರಶ್ನಿಸುವುದು ತಪ್ಪೇ? ಎಂದು ಪ್ರಯಾಣಿಕ ಮುಂಗೇಶ ತೀವ್ರವಾಗಿ ಆರೋಪಿಸಿದ್ದಾರೆ.

ಪ್ರಯಾಣಿಕನ ಮೇಲೆ ಟಿಟಿಇ ದಾಳಿ:

Sponsored

ಕೋಟಾದ ರೈಲು ವಿಭಾಗದ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಆಗಿರುವಂತಹ ಸೌರಭ ಜೈನ್ ಅವರು ಘಟನೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದು,ದೂರುದಾರ ಪ್ರಯಾಣಿಕ ದುರೊಂತೋ ಎಕ್ಸ್ಪ್ರೆಸ್ನಲ್ಲಿ ಎರಡನೇ ಎಸಿ ಕೋಚ್ ಡೀಲ್ 1ರಲ್ಲಿ ಪ್ರಯಾಣಿಸುತ್ತಿದ್ದ.

ಈ ವೇಳೆ ಶೌಚಾಲಯದ ಕೊಳಕಿನ ಬಗ್ಗೆ ಟಿಟಿಇ ಗೆ ದೂರು ನೀಡಿದರು.ಟಿಟಿಇ ಮುಕೇಶ್ ಕುಮಾರ್ ಅವರು ರೈಲ್ವೆ ಸಿಬ್ಬಂದಿಯನ್ನು ಕರೆದರು,ಸ್ವಚ್ಛಗೊಳಿಸಲಾಗಿಲ್ಲ.ಪ್ರಯಾಣಿಕರು ಮತ್ತೆ ಪಿಟಿಗೆ ದೂರು ನೀಡಿದ್ದಾರೆ.ಇದೇ ಕಾರಣಕ್ಕೆ ಕೋಪಗೊಂಡ ಅಧಿಕಾರಿ ಪ್ರಯಾಣಿಕನನ್ನು ರೈಲಿನಿಂದ ಕೆಳಗಿಳಿಸಿರುವ ಘಟನೆ ದುರೊಂತೋ ಎಕ್ಸ್ಪ್ರೆಸ್ನಲ್ಲಿ ನಡೆದಿದೆ.ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇದರಿಂದ ಕೇಳಿ ಬರುವುದೊಂದೇ ರೈಲಿನಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರು ರೈಲಿನ ಯಾವುದೇ ತಪ್ಪುಗಳ ಬಗ್ಗೆ ಪರಿಶೀಲನೆ ಮಾಡುವುದು ತಪ್ಪೇ? ರೈಲು ಪ್ರಯಾಣಿಕರು ಯಾವುದೇ ಪ್ರಶ್ನೆಯನ್ನು ಕೂಡ ಅಧಿಕಾರಿಗಳಿಗೆ ಮಾಡಬಾರದೇ? ಎಂಬುವುದು ತೀವ್ರ ಚರ್ಚೆಗೆ ಕಾರಣವಾಗಿದೆ.

ಇನ್ನಷ್ಟು ಓದಿರಿ:

ಅಮೇರಿಕ ಮಾರುಕಟ್ಟೆಯಲ್ಲಿ ಬಾಸ್ಮತಿ ಅಕ್ಕಿಗೆ ಭಾರಿ ಬೇಡಿಕೆ ಸಿಗಲಿದೆ : ಶಿವರಾಜ್ ಸಿಂಗ್ ಚೌಹಾಣ್

Sponsored
You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online