ತಿರುವನಂತಪುರದ ಗ್ರೀಸ್ ಫೀಲ್ಡ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಭಾರತ vs ನ್ಯೂಜಿಲೆಂಡ್ ಐದನೇ t20 ಪಂದ್ಯದಲ್ಲಿ ಟೀಮ್ ಇಂಡಿಯ 46 ರನ್ ಗಳ ಭರ್ಜರಿ ಗೆಲುವು ಸಾಧಿಸಿತು. ಇಶಾನ್ ಕಿಶನ್ ಅವರ ಅಬ್ಬರದ ಶತಕ ಮತ್ತು ಅರ್ಶ್ದೀಪ್ ಸಿಂಗ್ ಅವರ ಐದು ವಿಕೆಟ್ಗಳ ಗೊಂಚಲು ಭಾರತಕ್ಕೆ ಗೆಲುವಿನ ದಾರಿಯನ್ನು ಸುಗಮಗೊಳಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ ಓವರ್ ಗಳಲ್ಲಿ ದೊಡ್ಡ ಮೊತ್ತ ಕಲೆ ಹಾಕಿತು. ಆರಂಭದಿಂದಲೇ ಅಕ್ರಮಣಕಾರಿ ಆಟವಾಡಿದ ಇಶಾನ್ ಕಿಶನ್, ನ್ಯೂಜಿಲೆಂಡ್ ಬೌಲರ್ಗಳ ಮೇಲೆ ದಾಳಿ ನಡೆಸಿ ಅದ್ಭುತ ಶತಕ ಸಿಡಿಸಿದರು.
ಇವರ ಇನಿಂಗ್ಸ್ನಲ್ಲಿ ಬೌಂಡರಿ ಮತ್ತು ಸಿಕ್ಸರ್ ಗಳ ಮಳೆ ಸುರಿಯಿತು. ಕ್ರಿಕೆಟ್ಗಳಲ್ಲಿ ಅವರ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಗೆಲುವಿನೊಂದಿಗೆ ಭಾರತ ಐದು ಪಂದ್ಯಗಳ ಟಿ 20 ಸರಣಿಯನ್ನು ೪-೧ ಅಂತರದಿಂದ ತನ್ನದಾಗಿಸಿಕೊಂಡಿತು. ಇದು ವಿಶ್ವಕಪ್ ಗೆ ಮೊದಲು ಟೀಮ್ ಇಂಡಿಯಾ ಆಡಿದ ಕೊನೆಯ ಟಿ-20 ಪಂದ್ಯವಾಗಿದ್ದು,ತಂಡದ ಆತ್ಮವಿಶ್ವಾಸವನ್ನು ಗಗನಕ್ಕೇರಿಸಿದೆ.ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡಕ್ಕೆ ಭಾರತೀಯ ಬೌಲರ್ಗಳು ಆಘಾತ ನೀಡಿದರು.
ಅರ್ಶ್ದೀಪ್ ಸಿಂಗ್ ಅವರ ಮಾರಕ ಬೌಲಿಂಗ್ ಪ್ರದರ್ಶನ ಗಮನ ಸೆಳೆಯಿತು. ಐದು ವಿಕೆಟ್ಗಳನ್ನು ಕಬಳಿಸುವ ಮೂಲಕ ಅವರು ಸಂಪೂರ್ಣವಾಗಿ ಕುಸಿದರು. ಪರಿಣಾಮ ನ್ಯೂಜಿಲ್ಯಾಂಡ್ ತಂಡ ಗುರಿ ತಲುಪಲು ವಿಫಲವಾಯಿತು. ಭಾರತೀಯ ಬ್ಯಾಟರಗಳ ಆರ್ಭಟ ಮತ್ತು ಬೌಲರ್ಗಳ ಶಿಸ್ತುಬದ್ಧ ಪ್ರದರ್ಶನವನ್ನು ನೋಡಿ, ಪಾಕಿಸ್ತಾನ್ ಸೇರಿ ವಿಶ್ವಕಪ್ ನಲ್ಲಿ ಭಾಗವಹಿಸುವ ತಂಡಗಳಿಗೆ ಆತಂಕ ಶುರುವಾಗಿದೆ. ಇಂತಹ ಫಾರಂ ಮುಂದುವರೆದರೆ ಟೀಮ್ ಇಂಡಿಯಾ ವಿಶ್ವಕಪ್ ನಲ್ಲಿ ಬಲಿಷ್ಠ ದಾವೇದಾರರಾಗುವಲ್ಲಿ ಯಾವುದೇ ಸಂದೇಹ ಇಲ್ಲ.
5ನೇ ಟಿ20 ಪಂದ್ಯಕ್ಕೆ ವಾಪಸ್ ಆದ ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿ ಕ್ರಿಕೆಟ್ ಪ್ರೇಮಿಗಳನ್ನು ಬೆರಗುಗೊಳಿಸಿದರು. ಕೇವಲ 42 ಎಸೆತಗಳಲ್ಲಿ ತಮ್ಮ ಚೊಚ್ಚಲ ಅಂತರಾಷ್ಟ್ರೀಯ t20 ಶತಕ ಪೂರೈಸಿದ ಕಿಶೋರ್. ಒಟ್ಟು 43 ಎಸೆತಗಳಲ್ಲಿ 103 ರನ್ ಕಲೆ ಹಾಕಿದರು. ಅವರ ಇನ್ನಿಂಗ್ಸ್ ನಲ್ಲಿ 10 ಸಿಕ್ಸರ್ ಹಾಗೂ ೬ ಬೌಂಡರಿಗಳಿದ್ದವು. ನಿಗದಿತ 20 ಓವರ್ ಗಳಲ್ಲಿ ಐದು ವಿಕೆಟ್ಗಳ ನಷ್ಟಕ್ಕೆ ಭಾರತ 271 ರನ್ ಗಳ ಬೃಹತ್ ಸ್ಕೋರ್ ದಾಖಲಿಸಿತು. ಈ ವೇಳೆ ಭಾರತೀಯ ಬ್ಯಾಟರಗಳು ಒಟ್ಟು 23 ಸಿಕ್ಸರ್ ಗಳನ್ನು ಬಾರಿಸುವ ಮೂಲಕ ಸರಿಗಟ್ಟಿದರು.
ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ತಿರುವನಂತಂಪುರದ ಗ್ರೀನ್ ಫಿಲ್ಡ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರಿಗೆ ಮನರಂಜನೆಯ ಭರ್ಜರಿ ಹಬ್ಬ ನೀಡಿತು. ಆರಂಭದಿಂದಲೇ ಅಕ್ರಮಣಕಾರಿ ಆಟವಾಡಿದ ಭಾರತೀಯ ಬ್ಯಾಟರಗಳು ನ್ಯೂಜಿಲ್ಯಾಂಡ್ ಬೌಲರ್ಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರು. ಕಿಶನ್ ಅವರ ಸಿಡಿಲಬ್ಬರ ದಶಕ ಟೀಮ್ ಇಂಡಿಯಾದ ಬ್ಯಾಟಿಂಗ್ ಆಳ ಮತ್ತು ಅಕ್ರಮಣ ಶಕ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿತು. ವಿಶ್ವಕಪ್ ಗೆ ಮುನ್ನ ಈ ರೀತಿಯ ಪ್ರದರ್ಶನ ಭಾರತನದ ಆತ್ಮವಿಶ್ವಾಸವನ್ನು ಶಿಖರಕ್ಕೇರಿಸಿದ್ದು,ಎದುರಾಳಿಗಳಿಗೆ ಆತಂಕ ಹುಟ್ಟಿಸಿದೆ.
ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ತಮ್ಮ ಅದ್ಭುತ ಫಾರ್ಮ್ ಅನ್ನು ಮುಂದುವರೆಸಿದರು. ಕೇವಲ 30 ಎಸೆತಗಳಲ್ಲಿ 63 ಬೌಂಡರಿ ಮತ್ತು 6 ಸಿಕ್ಸರ್ ಗಳ ಸಹಾಯದಿಂದ ನ್ಯೂಜಿಲ್ಯಾಂಡ್ ಬೌಲರ್ಗಳ ಮೇಲೆ ಪ್ರಾಬಲ್ಯ ಸಾಧಿಸಿದರು. ಅಂತರಾಷ್ಟ್ರೀಯ ಟಿ20ಯಲ್ಲಿ 3000 ರನ್ ಗಳ ಮೈಲುಗಲ್ಲು ತಲುಪಿದರು.
ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ ತಂಡವು ಉತ್ತಮ ಪ್ರತಿರೋಧ ತೋರಿಸಿತು. ಆರಂಭದಿಂದಲೇ ಟಿಮ್ ಸೈಫರ್ಟ್ ವಿಕೆಟ್ ಕಳೆದುಕೊಂಡರು,ಫಿನ್ ಅಲೇನ್ ತಂಡದ ಇನ್ನಿಂಗ್ಸ್ ಅನ್ನು ಸುಧಾರಿಸುವ ಪ್ರಯತ್ನ ನಡೆಸಿದರು.ಅಲೇನ್ ಕೇವಲ 38 ಎಸೆತಗಳಲ್ಲಿ 80 ಬಾರಿಸಿದ್ದು, ಇದರಲ್ಲಿ 8 ಬೌಂಡರಿ ಮತ್ತು 6 ಸಿಕ್ಸರ್ಗಳು ಸೇರಿದ್ದವು. ಇನಿಂಗ್ಸ್ ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಸ್ಪೋಟಕ ಆಟ ಪ್ರದರ್ಶಿಸಿದರು.ಹಾರ್ದಿಕ್ ಕೇವಲ 17 ಎಸೆತಗಳಲ್ಲಿ 42 ರನ್ ಕಲೆ ಹಾಕಿದರು.
ಅವರ ಬ್ಯಾಟಿಂಗ್ನಲ್ಲಿ ಮೂರು ಭರ್ಜರಿಗಳು ಸೇರಿದವು .ಇಶಾನ್ ಕಿಶನ್, ಸೂರ್ಯಕುಮಾರ ಯಾದವ್ ಹಾಗೂ ಹಾರ್ದಿಕ್ ಪಾಂಡೆಯವರ ಬಲಿಷ್ಠ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ 270 ರನ್ಗಳ ಗಡಿಯನ್ನು ದಾಟುವ ಐತಿಹಾಸಿಕ ಸಾಧನೆ ಮಾಡಿತು. ಅಲೇನ್ಗೆ ಬೆಂಬಲವಾಗಿ ರಚಿನ್ ರವೀಂದ್ರ 30 ರನ್ ಕಲೆ ಹಾಕಿದರು. ಈ ಜೋಡಿ ಎರಡನೇ ವಿಕೆಟ್ಗೆ 100 ರನ್ಗಳ ಭರ್ಜರಿ ಜೊತೆ ಆಟ ನಡೆಸಿ, ಪಂದ್ಯಕ್ಕೆ ರೋಮಾಂಚಕತೆ ತಂದಿತು. ಆದರೆ ಮಹತ್ವದ ಸಮಯದಲ್ಲಿ ಅರ್ಷದೀಪ್ ಸಿಂಗ್ ಎರಡು ವಿಕೆಟ್ಗಳನ್ನು ಪಡೆದು ನ್ಯೂಜಿಲ್ಯಾಂಡ್ ಗೆ ಬಾರಿ ಹಿನ್ನೆಡೆ ಉಂಟು ಮಾಡಿದರು.
ಇನ್ನಷ್ಟು ಓದಿರಿ:
ವಿಜಯನಗರ ಜಿಲ್ಲಾ ಪಂಚಾಯತ್ ಕನ್ಸಲ್ಟೆಂಟ್ ನೇಮಕಾತಿ 2026: ಅರ್ಜಿ ಸಲ್ಲಿಸಲು ಆಹ್ವಾನ