<?= $pageTitle ?>
Logo
ಮುಖಪುಟ ಓದುವುದು ಕೇಳು
Food

ಮಾವು ತಿನ್ನುವ ಮುನ್ನ ತಿಳಿಯಿರಿ : ಯಾರಿಗೆ ಒಳ್ಳೆಯದಲ್ಲ ಈ ಹಣ್ಣು ? ಸಂಪೂರ್ಣ ಮಾಹಿತಿ ತಿಳಿಯಿರಿ

ಮಾವು ತಿನ್ನುವ ಮುನ್ನ ತಿಳಿಯಿರಿ : ಯಾರಿಗೆ ಒಳ್ಳೆಯದಲ್ಲ ಈ ಹಣ್ಣು ? ಸಂಪೂರ್ಣ ಮಾಹಿತಿ ತಿಳಿಯಿರಿ
Summary: Although mango is a fruit rich in nutrients, people with certain health problems including diabetes should consume it in moderation. Here is important health information on who mango is not suitable for and why.

Belagavi News :

ಮಾವಿನ ಹಣ್ಣು ಎಂದರೆ ಬಹುತೇಕರಿಗೆ ಅಚ್ಚು ಮೆಚ್ಚು. ಅದರ ಸಿಹಿ ರುಚಿ, ಸುವಾಸನೆ ಮತ್ತು ಪೌಷ್ಟಿಕಾಂಶಗಳ ಕಾರಣದಿಂದ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಮಳೆಗಾಲ ಆರಂಭವಾದರೂ ಇನ್ನೂ ಕೆಲವೇಡೆ ಮಾವಿನಹಣ್ಣಿನ ಸೀಸನ್ ಮುಂದುವರೆದಿದೆ. ಆದರೆ, ಮಾವು ಆರೋಗ್ಯಕರ ಹಣ್ಣಾದರೂ ಎಲ್ಲರಿಗೂ ಸಮಾನವಾಗಿ ಸೂಕ್ತವಲ್ಲ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ.

ಮಾವಿನಲ್ಲಿ ವಿಟಮಿನ್ ಸಿ, ವಿಟಮಿನ್ ಎ, ಫೈಬರ್, ಪೊಟ್ಯಾಶಿಯಂ, ಪೊಲೆಟ್ ಹಾಗೂ ಹಲವು ಆ್ಯಂಟಿ ಆಕ್ಸಿಡೆಂಟ್ ಗಳು ಸಮೃದ್ಧವಾಗಿದ್ದು, ರೋಗನಿರೋಧಕ ಶಕ್ತಿ ಹೆಚ್ಚಿಸಲು ಕಣ್ಣಿನ ಆರೋಗ್ಯ ಕಾಪಾಡಲು ಹಾಗೂ ಜೀರ್ಣಕ್ರಿಯೆಗೆ ನೆರವಾಗುತ್ತದೆ. ಆದರೂ ಕೆಲವು ಆರೋಗ್ಯ ಸಮಸ್ಯೆಗಳಿರುವವರು ಇದನ್ನು ಮಿತವಾಗಿ ಅಥವಾ ವೈದ್ಯರ ಸಲಹೆಯೊಂದಿಗೆ ಸೇವಿಸುವುದು ಉತ್ತಮ.

ಸಾಮಾನ್ಯವಾಗಿ ಮಧುಮೇಹ ಇರುವವರು ಮಾವಿನಲ್ಲಿ ಇರುವ ನೈಸರ್ಗಿಕ ಸಕ್ಕರೆಯ ಪ್ರಮಾಣ ಹೆಚ್ಚಿರುವುದರಿಂದ ನಿಯಂತ್ರಿತ ಪ್ರಮಾಣದಲ್ಲೇ ಸೇವಿಸಬೇಕು ಎಂದು ಸಲಹೆ ನೀಡಲಾಗುತ್ತಿದೆ. ಆದರೆ ಮಧುಮೇಹಿಗಳಷ್ಟೇ ಅಲ್ಲ, ಕೆಲವು ಇತರ ಆರೋಗ್ಯ ಸಮಸ್ಯೆಗಳಿರುವವರು ಮಾವು ತಿನ್ನುವಾಗ ಎಚ್ಚರಿಕೆ ವಹಿಸಬೇಕಾಗುತ್ತದೆ.

ವಿಶೇಷವಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕಿರುವವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರು ಅಥವಾ ಕೆಲವು ಜೀರ್ಣಕ್ರಿಯೆ ಸಮಸ್ಯೆಗಳಿರುವವರು ತಮ್ಮ ಆಹಾರದಲ್ಲಿ ಮಾವಿನ ಪ್ರಮಾಣವನ್ನು ನಿಯಂತ್ರಿಸುವುದು ಉತ್ತಮ. ಯಾವ ಆರೋಗ್ಯ ಸ್ಥಿತಿಯಲ್ಲೂ ಸಂಪೂರ್ಣವಾಗಿ ಮಾವನ್ನು ತ್ಯಜಿಸಲು ಅಗತ್ಯವಿದೆಯೇ ಅಥವಾ ಮಿತವಾಗಿ ಸೇವಿಸಬಹುದೇ ಎಂಬುದು ವ್ಯಕ್ತಿಯ ಆರೋಗ್ಯ ಸ್ಥಿತಿಯನ್ನು ಅವಲಂಬಿಸಿರುತ್ತದೆ.

ನಾವು ಸೇವನೆ ಬಗ್ಗೆ ಯಾವುದೇ ಅನುಮಾನವಿದ್ದರೆ, ವಿಶೇಷವಾಗಿ ಈಗಾಗಲೇ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿರುವವರು ವೈದ್ಯರು ಅಥವಾ ಪೌಷ್ಟಿಕ ತಜ್ಞರ ಸಲಹೆ ಪಡೆಯುವುದು ಸೂಕ್ತ.

Mango health tips - ಈ ಆರೋಗ್ಯ ಸಮಸ್ಯೆಗಳಿದ್ದರೆ ಮಾವು ತಿನ್ನುವಾಗ ಎಚ್ಚರಿಕೆ ವಹಿಸಿ ; ಸರಿಯಾದ ಸೇವನೆ ವಿಧಾನ ಇಲ್ಲಿದೆ :

ಮಾವಿನ ಹಣ್ಣು ರುಚಿ ಮತ್ತು ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿದ್ದರೂ, ಕೆಲವು ಆರೋಗ್ಯ ಸಮಸ್ಯೆಗಳಿರುವವರು ಇದನ್ನು ಸೇವಿಸುವಾಗ ಎಚ್ಚರಿಕೆ ವಹಿಸುವುದು ಅಗತ್ಯ. ವಿಶೇಷವಾಗಿ ಮಧುಮೇಹ, ಫ್ರೀ ಡಯಾಬಿಟಿಸ್ , ಇನ್ಸುಲಿನ್ ರೆಸಿಸ್ಟೆನ್ಸ್ ಮತ್ತು ಮೆಟಬಾಲಿಕ್ ಸಿಂಡ್ರೋಮ್ ಇರುವವರು ಮಾವನ್ನು ಮಿತ ಪ್ರಮಾಣದಲ್ಲಿ ಸೇವಿಸಬೇಕು.

ಮದುವೆಯ ಇರುವವರು ಮಾವನ್ನು ಸಂಪೂರ್ಣವಾಗಿ ತ್ಯಜಿಸಬೇಕೆಂದೇನಿಲ್ಲ. ಆದರೆ ಒಂದೇ ಬಾರಿಗೆ ಹೆಚ್ಚಿನ ಪ್ರಮಾಣದಲ್ಲಿ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ವೈದ್ಯರು ಅಥವಾ ಪೌಷ್ಟಿಕ ತಜ್ಞರು ಸೂಚಿಸುವ ಪ್ರಮಾಣದಲ್ಲಿ ಸೇವಿಸುವುದು ಉತ್ತಮ.

ತೂಕ ಹೇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರೂ ಮಾವು ಸೇವಿಸುವಾಗ ಜಾಗರೂಕರ ಆಗಿರಬೇಕು. ಮಾವಿನಲ್ಲಿ ನೈಸರ್ಗಿಕ ಸಕ್ಕರೆ ಮತ್ತು ಕ್ಯಾಲೋರಿ ಇರುವುದರಿಂದ ಅತಿಯಾಗಿ ಸೇವಿಸಿದರೆ ತೂಕ ನಿಯಂತ್ರಣಕ್ಕೆ ತೊಂದರೆ ಆಗಬಹುದು. ಅದೇ ರೀತಿ ಫ್ಯಾಟಿ ಲಿವರ್ ಸಮಸ್ಯೆ ಇರುವವರು ಮಾವನ್ನು ಸಮತೋಲಿತ ಆಹಾರದ ಭಾಗವಾಗಿ ಸೀಮಿತ ಪ್ರಮಾಣದಲ್ಲಿ ಸೇವಿಸುವುದು ಸೂಕ್ತ .

ಮಾವ ಸರಿಯಾದ ವಿಧಾನ ಯಾವುದು ? :

ಮಾವಿನ ಜ್ಯೂಸ್, ಮಿಲ್ಕ್ ಶೇಕ್ ಅಥವಾ ಹೆಚ್ಚು ಸಕ್ಕರೆ ಸೇರಿಸಿದ ಮಾವಿನ ಸಿಹಿ ಪದಾರ್ಥಗಳಿಂದ ತಾಜಾ ಹಣ್ಣಿನ ರೂಪದಲ್ಲಿ ಮಾವು ಸೇವಿಸುವುದು ಆರೋಗ್ಯಕರ ಎಂದು ತಜ್ಞರು ಸಲಹೆ ನೀಡುತ್ತಾರೆ.

ಮಾವನ್ನು ಮೊಸರು ಅಥವಾ ಬಾದಾಮಿ, ಗೋಡಂಬಿ ಸೇರಿದಂತೆ ಇತರ ನಟ್ಸ್ ಗಳೊಂದಿಗೆ ಗಳೊಂದಿಗೆ ಸೇವಿಸಿದರೆ ದೇಹದಲ್ಲಿ ಸಕ್ಕರೆ ಹೀರಿಕೊಳ್ಳುವ ವೇಗವನ್ನು ನಿಯಂತ್ರಿಸಲು ಸಹಾಯವಾಗಬಹುದು. ಆದರೆ ಯಾವುದೇ ಆರೋಗ್ಯ ಸಮಸ್ಯೆ ಇರುವವರು ತಮ್ಮ ಆಹಾರ ಕ್ರಮಕ್ಕೆ ಅನುಗುಣವಾಗಿ ಪ್ರಮಾಣವನ್ನು ನಿರ್ಧರಿಸುವುದು ಮುಖ್ಯ.

ರುಚಿಕರವಾದ ಮಾವನ್ನು ಆರೋಗ್ಯಕರವಾಗಿ ಆನಂದಿಸಲು ಸರಿಯಾದ ಪ್ರಮಾಣ ಮತ್ತು ಸರಿಯಾದ ವಿಧಾನವನ್ನು ಪಾಲಿಸುವುದು ಅತ್ಯಗತ್ಯವಾಗಿದೆ.

Mango health tips - ಮಾವು ತಿನ್ನುವ ಮುನ್ನ ಈ ಸಲಹೆ ಪಾಲಿಸಿ ; ಆರೋಗ್ಯಕರವಾಗಿ ಮಾವಿನ ಸವಿಯನ್ನು ಆನಂದಿಸಿ :

ಮಾವಿನ ಹಣ್ಣು ರುಚಿಕರವಾಗಿರುವುದರ ಜೊತೆಗೆ ಹಲವು ಪೌಷ್ಟಿಕಾಂಶಗಳನ್ನು ಹೊಂದಿರುವ ಹಣ್ಣು. ಆದರೆ ಮಾವನ್ನು ಸರಿಯಾದ ರೀತಿಯಲ್ಲಿ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಮುಖ್ಯವಾಗಿದೆ. ತಜ್ಞರ ಪ್ರಕಾರ, ಮಾವು ತಿನ್ನುವ ಮೊದಲು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿದರೆ ಉತ್ತಮ.

ಮಾವನ್ನು ಸೇವಿಸುವ ಮೊದಲು ಚೆನ್ನಾಗಿ ತೊಳೆದು 20 ರಿಂದ 30 ನಿಮಿಷ ನೀರಿನಲ್ಲಿ ನೆನೆಸಿಡುವುದು ಉತ್ತಮ ಎಂದು ಕೆಲವು ತಜ್ಞರು ಸಲಹೆ ನೀಡುತ್ತಾರೆ. ಇದರಿಂದ ಹಣ್ಣಿನ ಮೇಲಿರುವ ಧೂಳು, ಕಲ್ಮಶಗಳು ಮತ್ತು ಕೆಲವು ಲ್ಯಾಟಿಕ್ಸ್ ಅಂಶಗಳು ಕಡಿಮೆಯಾಗಲು ಸಹಾಯವಾಗಬಹುದು. ಆದರೆ ನೆನೆಸುವುದರಿಂದ ಮಾವಿನಲ್ಲಿರುವ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.

ಅತಿಯಾಗಿ ಹಣ್ಣಾದ ಮಾವಿಗಿಂತ ಸಹಜವಾಗಿ ಹಣ್ಣಾದ ಮಾವನ್ನು ಆಯ್ಕೆ ಮಾಡುವುದು ಉತ್ತಮ. ಸಾಮಾನ್ಯವಾಗಿ ಒಂದು ದಿನಕ್ಕೆ ಒಂದು ಮಧ್ಯಮ ಗಾತ್ರದ ಮಾವು ಸಾಕಷ್ಟು ಎಂದು ಪರಿಗಣಿಸಲಾಗುತ್ತದೆ. ಆದರೆ ವ್ಯಕ್ತಿಯ ಆರೋಗ್ಯ ಸ್ಥಿತಿ, ಆಹಾರ ಕ್ರಮ ಮತ್ತು ದೈಹಿಕ ಚಟುವಟಿಕೆಯ ಆಧಾರದ ಮೇಲೆ ಪ್ರಮಾಣ ಬದಲಾಗಬಹುದು.

ಯಾವುದೇ ಆಹಾರವನ್ನು ಅತಿಯಾಗಿ ಸೇವಿಸುವುದು ಆರೋಗ್ಯಕ್ಕೆ ಸೂಕ್ತವಲ್ಲ. ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ ಮತ್ತು ಸರಿಯಾದ ಜೀವನ ಶೈಲಿಯೊಂದಿಗೆ ಮಾವನ್ನು ಸೇವಿಸಿದರೆ ಅದರ ಪೌಷ್ಟಿಕ ಲಾಭಗಳನ್ನು ಸುರಕ್ಷಿತವಾಗಿ ಪಡೆಯಬಹುದು.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online